ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ajay Devgn: ಅಜಯ್ ದೇವಗನ್ ಸ್ಟೈಲಿಶ್ ಲುಕ್ ಗೆ ಅಭಿಮಾನಿಗಳು ಫಿದಾ! ಫೋಟೋ ನೋಡಿ

ದಿಲ್ ವಾಲೆ, ಸುಹಾಗ್, ಜಖಂ, ಹಮ್ ದಿಲ್ ದೇ ಚುಕೇ ಸನಮ್, ಗಂಗೂಬಾಯಿ ಕಥಿಯಾವಾಡಿ, ದೃಶ್ಯಂ ಸೇರಿದಂತೆ ಇನ್ನು ಅನೇಕ ಹಿಟ್ ಸಿನಿಮಾ ನೀಡಿದ್ದ ನಟ ಅಜಯ್ ದೇವಗನ್ ಅವರು ಅಪಾರ ಅಭಿ ಮಾನಿಗಳ ಮನಗೆದ್ದ ನಟ ಎನಿಸಿಕೊಂಡಿದ್ದಾರೆ. ನಟ ಅಜಯ್ ದೇವಗನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆ್ಯಕ್ಟಿವ್ ಆಗಿದ್ದು ಆಗಾಗ ತಮ್ಮ ಫೋಟೊಗಳನ್ನು ಹಂಚಿಕೊಳ್ಳು ತ್ತಿರುತ್ತಾರೆ. ಈ ಬಾರಿ ಕೂಡ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೈಲಿಶ್ ಲುಕ್ ನ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಅವರ ಫೋಟೊಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ.

ನಟ ಅಜಯ್ ದೇವಗನ್ ಹ್ಯಾಂಡ್‌ಸಮ್ ಲುಕ್ ಫುಲ್ ವೈರಲ್!

Ajay Devgn

Profile Pushpa Kumari Jul 13, 2025 5:39 PM

ನವದೆಹಲಿ: ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಹಿಟ್ ಸಿನಿಮಾ ನೀಡಿದ್ದವರಲ್ಲಿ ನಟ ಅಜಯ್ ದೇವಗನ್ (Ajay Devgn) ಕೂಡ ಒಬ್ಬರು. ಜಿಗರ್ ,ದಿಲ್ ವಾಲೆ, ಸುಹಾಗ್, ಜಖಂ, ಹಮ್ ದಿಲ್ ದೇ ಚುಕೇ ಸನಮ್, ಗಂಗೂಬಾಯಿ ಕಥಿಯಾವಾಡಿ, ದೃಶ್ಯಂ ಸೇರಿದಂತೆ ಇನ್ನು ಅನೇಕ ಹಿಟ್ ಸಿನಿಮಾ ನೀಡಿದ್ದ ನಟ ಅಜಯ್ ದೇವಗನ್ ಅವರು ಅಪಾರ ಅಭಿಮಾನಿಗಳ ಮನಗೆದ್ದ ನಟ ಎನಿಸಿಕೊಂಡಿದ್ದಾರೆ. ನಟ ಅಜಯ್ ದೇವಗನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆ್ಯಕ್ಟಿವ್ ಆಗಿದ್ದು ಆಗಾಗ ತಮ್ಮ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿ ಕೂಡ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೈಲಿಶ್ ಲುಕ್ ನ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಅವರ ಫೋಟೊಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ.

ನಟ ಅಜಯ್ ದೇವಗನ್ ಅವರ ನಟನೆಯ ಸನ್ ಆಫ್ ಸರ್ದಾರ್ 2 ಚಿತ್ರದ ಪೆಹ್ಲಾ ತು ದುಜಾ ತು ಹಾಡು ಬಿಡುಗಡೆಯಾದ ನಂತರ ಸೋಶಿಯಲ್ ಮಿಡಿಯಾದಲ್ಲಿ ಈ ಹಾಡಿನ ಐಕಾನಿಕ್ ಸ್ಟೇಪ್ ಬಹಳ ವೈರಲ್ ಆಗಿತ್ತು. ಇದೇ ಹಾಡನ್ನು ಬಳಸಿ ಅನೇಕ ನೆಟ್ಟಿಗರು ರೀಲ್ಸ್ ಮೀಮ್ಸ್ ಗಳನ್ನು ಕೂಡ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ನಟ ಅಜಯ್ ದೇವಗನ್ ಅವರು ಕೂಡ ಈ ಹಾಡಿನ ಫೇಮಸ್ ಸಾಲನ್ನು ಬರೆದುಕೊಂಡು ಅದರ ಜೊತೆಗೆ ಫೋಟೊ ಹಂಚಿಕೊಂಡಿದ್ದಾರೆ.

ಪೆಹ್ಲಾ, ದುಜಾ, ತೀಜಾ ಯಾ ಚೌಥಾ? ಎಂಬ ಹಾಡಿನ ಸಾಲನ್ನು ಶೀರ್ಷಿಕೆಯಾಗಿ ನೀಡಿ ನಟ ಅಜಯ್ ದೇವಗನ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ವೈರಲ್ ಆದ ಫೋಟೊದಲ್ಲಿ ನಟ ಅಜಯ್ ತಿಳಿ ನೀಲಿ ಬಣ್ಣದ ಶರ್ಟ್ ಮತ್ತು ಮ್ಯಾಚಿಂಗ್ ಟೈ ಧರಿಸಿದ್ದು ಸ್ಟೈಲಿಶ್ ಆಗಿ ಕಂಡಿದ್ದಾರೆ. ಅದರ ಜೊತೆಗೆ ಅಜಯ್ ಸ್ಮಾರ್ಟ್ ಜಾಕೆಟ್‌ ನೊಂದಿಗೆ ಐಕಾನಿಕ್ ಸ್ಟಾರ್ ನಂತೆ ಕಂಗೊಳಿಸಿದ್ದಾರೆ.

ಜುಲೈ 7 ರಂದು ಸನ್ ಆಫ್ ಸರ್ದಾರ್ 2 ಸಿನಿಮಾದ ಪೆಹ್ಲೆ ತು ದುಜಾ ತು ಹಾಡು ಬಿಡುಗಡೆ ಯಾಗಿದೆ. ಸೀತಾರಾಮಮ್ ಸಿನಿಮಾ ಖ್ಯಾತಿಯ ನಟಿ ಮೃಣಾಲ್ ಠಾಕೂರ್ ಅವರು ನಟ ಅಜಯ್ ದೇವಗನ್ ಅವರ ಜೊತೆ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡನ್ನು ಸ್ಕಾಟ್ಲೆಂಡ್‌ ನಲ್ಲಿ ಚಿತ್ರೀಕರಿಸಿದ್ದು ಹಾಡು ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಕೂಡ ಹೆಚ್ಚಾಗಿದೆ.

ಇದನ್ನು ಓದಿ:Life Today Movie: ಕನ್ನಡದ ಲೈಫ್ ಟುಡೇ ಸಿನಿಮಾದ ವಿಶೇಷ ಹಾಡಿಗೆ ದನಿಯಾದ ತಮಿಳಿನ‌ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಜಿ.ವಿ ಪ್ರಕಾಶ್

ವಿಜಯ್ ಕುಮಾರ್ ಅರೋರಾ ನಿರ್ದೇಶನದ ಈ ಸಿನಿಮಾದಲ್ಲಿ ನಟ ಅಜಯ್ ದೇವಗನ್, ರವಿ ಕಿಶನ್, ಸಂಜಯ್ ಮಿಶ್ರಾ, ಮೃಣಾಲ್ ಠಾಕೂರ್, ನೀರು ಬಾಜ್ವಾ, ದೀಪಕ್ ಡೊಬ್ರಿಯಾಲ್, ವಿಂದು ದಾರಾ ಸಿಂಗ್, ರೋಶ್ನಿ ವಾಲಿಯಾ, ಶರತ್ ಸಕ್ಸೇನಾ, ಚುಂಕಿ ಪಾಂಡೆ, ಕುಬ್ರ ಸೇಟ್, ಸಾಹಿಲ್ ಮುಕ್ತಾ, ಮತ್ತು ದಿವಲತೆ ಸೇರಿದಂತೆ ಅನೇಕ ಫೇಮಸ್ ಸೆಲೆಬ್ರಿಟಿಗಳ ತಾರಾಗಣ ಇರಲಿದೆ. ಸನ್ ಆಫ್ ಸರ್ದಾರ್ 2 ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ಮತ್ತು ದೇವಗನ್ ಫಿಲ್ಮ್ಸ್ ಬ್ಯಾನರ್ ಅಡಿ ಯಲ್ಲಿ ಜುಲೈ 25ರಂದು ರಿಲೀಸ್ ಮಾಡಲಾಗುತ್ತಿದ್ದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.