Hannah Smith: ಲವ್ ಐಲ್ಯಾಂಡ್ ತಾರೆ ಹನ್ನಾ ಸ್ಮಿತ್ ವಿರುದ್ಧ ಭಯೋತ್ಪಾದಕ ಬೆದರಿಕೆಯ ಕ್ರಿಮಿನಲ್ ಕೇಸ್; ಏನಿದು ಪ್ರಕರಣ?
Hannah Smith: ಲವ್ ಐಲ್ಯಾಂಡ್ ಯುಎಸ್‌ಎ ರಿಯಾಲಿಟಿ ಶೋ ಖ್ಯಾತಿಯ ಹನ್ನಾ ಸ್ಮಿತ್ ಅವರನ್ನು ಕಳೆದ ವರ್ಷ ಸೆಪ್ಟೆಂಬರ್ 30ರಂದು ಅಟ್ಲಾಂಟಾದಲ್ಲಿ ಸಂಗೀತ ಕಛೇರಿ ಸ್ಥಳದಲ್ಲಿ ಬಂಧಿಸಲಾಗಿತ್ತು. ಕುಡಿದ ಅಮಲಿನಲ್ಲಿ ಅವರು ತೀವ್ರ ಉದ್ವೇಗ ಒಳಗಾಗಿದ್ದರು. ಈ ವೇಳೆ ಅವರು ಅಧಿಕಾರಿಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಮೂಲಗಳು ತಿಳಿಸಿವೆ.
Source : Hindustan Times
ವಾಷಿಂಗ್ಟನ್, ಜ. 17, 2025: ಲವ್ ಐಲ್ಯಾಂಡ್ ಯುಎಸ್‌ಎ ರಿಯಾಲಿಟಿ ಶೋ ಮೂಲಕ ಖ್ಯಾತಿ ಗಳಿಸಿದ್ದ ಹನ್ನಾಸ್ಮಿತ್ (Hannah Smith) ಪೊಲೀಸ್ ಸಿಬ್ಬಂದಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಹನ್ನಾ ಸ್ಮಿತ್ ಅವರನ್ನು ಕಳೆದ ವರ್ಷ ಸೆಪ್ಟೆಂಬರ್ 30ರಂದು ಸಂಗೀತ ಕಛೇರಿಯಲ್ಲಿ ಅಸಭ್ಯವಾಗಿ ವರ್ತಿಸಿದ್ದಕ್ಕಾಗಿ ಬಂಧಿಸಲಾಗಿತ್ತು.
ಈ ಬಂಧನದ ನಂತರ ಲವ್ ಐಲ್ಯಾಂಡ್ ಯುಎಸ್ಎ ಮುಖ್ಯಸ್ಥೆ ಹನ್ನಾ ಸ್ಮಿತ್ ವಿರುದ್ಧ ಭಯೋತ್ಪಾದಕ ಬೆದರಿಕೆಗಳ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಹನ್ನಾ ಸ್ಮಿತ್ ಪೊಲೀಸ್ ಅಧಿಕಾರಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ನಂತರ ಅಧಿಕೃತವಾಗಿ ಭಯೋತ್ಪಾದಕ ಬೆದರಿಕೆಗಳ ಆರೋಪ ಹೊರಿಸಲಾಗಿದೆ.
ಸೆಪ್ಟೆಂಬರ್ 30ರಂದು ಅಟ್ಲಾಂಟಾದಲ್ಲಿ ಸಂಗೀತ ಕಛೇರಿ ಸ್ಥಳದಲ್ಲಿ ಹನ್ನಾ ಸ್ಮಿತ್ ಅವರನ್ನು ಬಂಧಿಸುವಾಗ ಪೊಲೀಸರ ವಿರುದ್ದ ಹಲ್ಲೆ ನಡೆಸಿದ್ದಾರೆ. ಕುಡಿದ ಅಮಲಿನಲ್ಲಿ ಅವರು ತೀವ್ರ ಉದ್ವೇಗ ಒಳಗಾಗಿದ್ದರು. ಕಾರಾಗೃಹಕ್ಕೆ ಕರೆದೊಯ್ಯುವಾಗ ಅಲ್ಲಿನ ಸಿಬ್ಬಂದಿಯನ್ನು ಭಯಭೀತಗೊಳಿಸುವ ಉದ್ದೇಶದಿಂದ ಅನೇಕ ಬಾರಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಅಧಿಕೃತ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ಕಾನೂನು ದಾಖಲೆಗಳ ಮೂಲಕ ಕಾಬ್ ಕೌಂಟಿ ಪ್ರಾಸಿಕ್ಯೂಟರ್ ಔಪಚಾರಿಕವಾಗಿ ಎರಡು ಅಪರಾಧಗಳ ಆರೋಪವನ್ನು ಹೊರಿಸಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ.
ಇದನ್ನು ಓದಿ: Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ
ಸಂಗೀತ ಕಛೇರಿ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿದ ನಂತರ ಬಂಧನಕ್ಕೊಳಗಾದ ಅವರು ಒಂದು ದಿನ ಜೈಲಿನಲ್ಲಿ ಕಳೆದು ಜಾಮೀನಿನ ಮೇಲೆ ಹೊರ ಬಂದಿದ್ದರು. ಅದಾಗ್ಯೂ, ಬಂಧನದ ಹೊರತಾಗಿಯೂ ರಿಯಾಲಿಟಿ ಟಿವಿ ತಾರೆ ಹನ್ನಾ ಸ್ಮಿತ್ ಅಟ್ಲಾಂಟಾ ಬಾರ್‌ನಲ್ಲಿ ಯಾರ ಮೇಲೂ ಹಲ್ಲೆ ನಡೆಸಿಲ್ಲ ಎಂದು ಅವರ ಪ್ರತಿನಿಧಿ ಹೇಳಿದ್ದಾರೆ.
ಅವರ ವಕೀಲ ಮೈಕ್ ಹಾಕಿನ್ಸ್ ಮಾತನಾಡಿ ಸ್ಮಿತಾ ಹನ್ನಾಗೆ ಸಂಗೀತ ಕಛೇರಿ ಸಮಯದಲ್ಲಿ ಸಂಭವಿಸಿದ ಘಟನೆಗಳ ಬಗ್ಗೆ ಯಾವುದೇ ನೆನಪಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಘಟನೆಗಳಿಂದ ಹನ್ನಾ ತೀವ್ರವಾಗಿ ತೊಂದರೆ ಗೀಡಾಗಿದ್ದಾರೆ. ಅವರು ಸ್ನೇಹಿತರೊಂದಿಗೆ ರಾಕ್ಸಿ ಸಂಗೀತ ಸ್ಥಳದ ಬಾರ್‌ನಲ್ಲಿ ಮಧ್ಯ ಸೇವಿಸಿದ್ದನ್ನು ವಕೀಲರು ದೃಢಪಡಿಸಿದ್ದಾರೆ.