Kho Kho World Cup: ಚೊಚ್ಚಲ ಖೋ ಖೋ ವಿಶ್ವಕಪ್ ಮುಡಿಗೇರಿಸಿಕೊಂಡ ಭಾರತ ಮಹಿಳಾ ತಂಡ
Kho Kho World Cup: ಜ. 13ರಿಂದ ಆರಂಭಗೊಂಡಿದ್ದ ಈ ಟೂರ್ನಿಯಲ್ಲಿ ಒಟ್ಟು 23 ದೇಶಗಳಿಂದ 20 ಪುರುಷರ, 19 ಮಹಿಳಾ ತಂಡಗಳು ಪಾಲ್ಗೊಂಡಿದ್ದವು.

Kho Kho World Cup 2025

ನವದೆಹಲಿ: ಚೊಚ್ಚಲ ಆವೃತ್ತಿಯ ಖೋ ಖೋ ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಮಹಿಳಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ನೇಪಾಳ ವಿರುದ್ಧ ಪ್ರಿಯಾಂಕಾ ಇಂಗಲೆ ನೇತೃತ್ವದ ಭಾರತ ತಂಡ 78-40 ಅಂತರದಿಂದ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಚೇಸ್ ಮತ್ತು ಡಿಫೆನ್ಸ್ ಎರಡರಲ್ಲೂ ಪ್ರಾಬಲ್ಯ ಸಾಧಿಸಿದ ಭಾರತದ ಮಹಿಳೆಯರು ಭರ್ಜರಿ ಗೆಲುವು ಸಾಧಿಸಿದರು. ಅಜೇಯವಾಗಿ ಫೈನಲ್ ತಲುಪಿದ್ದ ಭಾರತೀಯ ಆಟಗಾರ್ತಿಯರು ಇದೇ ಪ್ರದರ್ಶನವನ್ನು ಫೈನಲ್‌ನಲ್ಲಿಯೂ ತೋರಿದರು.
ಜ. 13ರಿಂದ ಆರಂಭಗೊಂಡ ಈ ಟೂರ್ನಿಯಲ್ಲಿ ಒಟ್ಟು 23 ದೇಶಗಳಿಂದ 20 ಪುರುಷರ, 19 ಮಹಿಳಾ ತಂಡಗಳು ಪಾಲ್ಗೊಂಡಿದ್ದವು.
🏆 खो-खो वर्ल्ड कप 2025
— Doordarshan Sports (@ddsportschannel) January 19, 2025
भारतीय महिला टीम का शानदार प्रदर्शन! 🇮🇳💥
फाइनल मुकाबले में नेपाल🇳🇵को 78-40 से हराकर इतिहास रचते हुए पहला खो-खो वर्ल्ड कप खिताब अपने नाम किया।🏅🔥
जय हिंद! 🙌✨ #KhoKhoWorldCup #IndiaVsNepal #Finals #KhoKho #KhoKho2025 #TheWorldGoesKho #KKWC2025… pic.twitter.com/RJbnxXH7df
ಪಂದ್ಯದ ಸ್ವರೂಪ
ಪ್ರತೀ ತಂಡಗಳಿಂದ ತಲಾ 9 ಆಟಗಾರರು ಆಡಳಿಯುತ್ತಾರೆ. 9+9 ನಿಮಿಷಗಳ 2 ಹಂತದಲ್ಲಿ ಪಂದ್ಯ ಸಾಗುತ್ತವೆ. ಒಂದು ತಂಡ ಡೆಫೆಂಡಿಂಗ್‌ಗೆ ಇಳಿದರೆ, ಮತ್ತೊಂದು ತಂಡ ಚೇಸಿಂಗ್ ನಡೆಸುತ್ತದೆ. ಅಂಕಣಕ್ಕೆ ಆಗಮಿಸುವ ಡಿಫೆಂಡಿಂಗ್ ತಂಡದ ಮೂವರು ಆಟಗಾರರನ್ನು ಚೇಸಿಂಗ್ ತಂಡದ 9 ಆಟಗಾರರು ಬೆನ್ನಟ್ಟಿ ಮುಟ್ಟಬೇಕು. ಇದರಲ್ಲಿ ಚೇಸಿಂಗ್ ತಂಡದ 8 ಆಟಗಾರರಲ್ಲಿ ನಾಲ್ವರು ಒಂದು ದಿಕ್ಕಿಗೆ, ಮತ್ತೆ ನಾಲ್ವರು ಇನ್ನೊಂದು ದಿಕ್ಕಿಗೆ ತಿರುಗಿ ಸಮಾನ ದೂರದಲ್ಲಿ ಕುಳಿತುಕೊಳ್ಳುತ್ತಾರೆ. ಒಂಬತ್ತನೇ ಆಟಗಾರ ಎದುರಾಳಿ ತಂಡದ ಆಟಗಾರರನ್ನು ಬೆನ್ನಟ್ಟಬೇಕು. ಅಂತಿಮವಾಗಿ ಗರಿಷ್ಠ ಅಂಕ ಗಳಿಸಿದ ತಂಡವನ್ನು ಜಯಶಾಲಿ ಎಂದು ಘೋಷಿಸಲಾಗುತ್ತದೆ.