Champions Trophy ಟೂರ್ನಿಯಿಂದ ಪ್ಯಾಟ್ ಕಮಿನ್ಸ್ ಔಟ್! ಆಸ್ಟ್ರೇಲಿಯಾಗೆ ನಾಯಕ ಯಾರು?
Pat cummins likely to miss Champions Trophy: ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಇದೆ. ಇದು ಸುದ್ದಿ ಖಚಿತವಾದರೆ ಆಸ್ಟ್ರೇಲಿಯಾ ತಂಡವನ್ನು ಸ್ಟೀವನ್ ಸ್ಮಿತ ಅಥವಾ ಟ್ರಾವಿಸ್ ಹೆಡ್ ಮುನ್ನಡೆಸುವ ಸಾಧ್ಯತೆ ಇದೆ.
ನವದೆಹಲಿ: ಪಾದದ ಗಾಯದಿಂದ ಬಳಲುತ್ತಿರುವ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಮುಂಬರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಇದೆ. ಒಂದು ವೇಳೆ ಕಮಿನ್ಸ್ ಟೂರ್ನಿಯಿಂದ ಹೊರ ಬಿದ್ದರೆ, ಆಸ್ಟ್ರೇಲಿಯಾ ತಂಡವನ್ನು ಟ್ರಾವಿಸ್ ಹೆಡ್ ಅಥವಾ ಸ್ಟೀವನ್ ಸ್ಮಿತ್ ಅವರಲ್ಲಿ ಒಬ್ಬರು ಮುನ್ನಡೆಸುವ ಸಾಧ್ಯತೆ ಇದೆ ಎಂದು ಆಸೀಸ್ ಕೋಚ್ ಆಂಡ್ರೆ ಮೆಕ್‌ಡೊನಾಲ್ಡ್ ತಿಳಿಸಿದ್ದಾರೆ.
ಭಾರತ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಬಳಿಕ ಪ್ಯಾಟ್ ಕಮಿನ್ಸ್ ಅವರ ಪಾದದ ಗಾಯ ಇನ್ನಷ್ಟು ಗಂಭೀರತೆಯನ್ನು ಪಡೆದುಕೊಂಡಿತ್ತು ಹಾಗೂ ಎರಡನೇ ಮಗುವಿನ ಕಾರಣ ಅವರು ಶ್ರೀಲಂಕಾ ವಿರುದ್ದದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಪ್ರವಾಸದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸ್ಟೀವನ್ ಸ್ಮಿತ್ ಮುನ್ನಡೆಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಆಸ್ಟ್ರೇಲಿಯಾ ಕೋಚ್ ಆಂಡ್ರೆ ಮೆಕ್‌ಡೊನಾಲ್ಡ್, "ಸದ್ಯದ ಸ್ಥಿತಿಯಲ್ಲಿ ಪ್ಯಾಟ್ ಕಮಿನ್ಸ್ ಅವರು ಬೌಲಿಂಗ್‌ಗೆ ಮರಳುವ ಲಕ್ಷಣಗಳು ಕಾಣುತ್ತಿಲ್ಲ. ಏಕೆಂದರೆ ಅವರ ಗಾಯದ ಸ್ಥಿತಿ ತುಂಬಾ ಕಠಿಣವಾಗಿದೆ. ಹಾಗಾಗಿ ನಮಗೆ ನಾಯಕನ ಅಗತ್ಯವಿದೆ," ಎಂದು ಹೇಳಿದ ಅವರು, "ಆಸ್ಟ್ರೇಲಿಯಾ ತಂಡ ತವರಿಗೆ ಮರಳಿದ ಬಳಿಕ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡವನ್ನು ಮುನ್ನಡೆಸುವ ಬಗ್ಗೆ ಸ್ಟೀವನ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್ ಅವರನ್ನು ಮಾತನಾಡಿಸುತ್ತೇವೆ ಹಾಗೂ ಈ ವೇಳೆ ಪ್ಯಾಟ್ ಕಮಿನ್ಸ್ ಅವರ ಬಳಿಯೂ ಸಂವಹನ ನಡೆಸುತ್ತೇವೆ," ಎಂದು ತಿಳಿಸಿದ್ದಾರೆ.
Champions Trophyಯಲ್ಲಿ ಮಿಂಚಬಲ್ಲ ಇಬ್ಬರು ಆಟಗಾರರನ್ನು ಹೆಸರಿಸಿದ ಸೌರವ್ ಗಂಗೂಲಿ!
ಸ್ಟೀವನ್ ಸ್ಮಿತ್ ನಾಯಕತ್ವವನ್ನು ಶ್ಲಾಘಿಸಿದ ಮೆಕ್‌ಡೊನಾಲ್ಡ್
ಸ್ಟೀವನ್ ಸ್ಮಿತ್ ಅವರ ನಾಯಕತ್ವದ ಸಾಮರ್ಥ್ಯ ಹಾಗೂ ಟೆಸ್ಟ್ ಹಾಗೂ ಒಡಿಐ ಕ್ರಿಕೆಟ್‌ನಲ್ಲಿನ ಅವರ ಅನುಭವವನ್ನು ಆಂಡ್ರೆ ಮೆಕ್‌ಡೊನಾಲ್ಡ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
"ನಮಗೆ ನಾಯಕತ್ವಕ್ಕೆ ಎರಡು ಆಯ್ಕೆಗಳು ಇವೆ. ಮೊದಲನೇ ಟೆಸ್ಟ್ ಪಂದ್ಯದಲ್ಲಿ ಸ್ಟೀವನ್ ಸ್ಮಿತ್ ಶ್ರೇಷ್ಠ ಕಾರ್ಯವನ್ನು ನಿರ್ವಹಿಸಿದ್ದಾರೆ. ಏಕದಿನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅವರು ಅದ್ಭುತ ಕಾರ್ಯವನ್ನು ಮಾಡಿದ್ದಾರೆ. ಈ ಎರಡೂ ಅಂಶಗಳ ಆಧಾರದ ಮೇಲೆ ನಾವು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ," ಎಂದು ಮೆಕ್‌ಡೊನಾಲ್ಡ್ ತಿಳಿಸಿದ್ದಾರೆ.
Pat Cummins is 'heavily unlikely' to lead Australia in their first major 50-over event since lifting the World Cup, continuing an ODI captaincy merry-go-round ahead of the #ChampionsTrophyhttps://t.co/A0xSFAatBP
— cricket.com.au (@cricketcomau) February 5, 2025
"ದೀರ್ಘಾವಧಿಯಿಂದ ಗಾಯದ ಸಮಸ್ಯೆಗಳನ್ನು ಎದುರಿಸುತ್ತಿದ್ದ ಜಾಶ್ ಹೇಝಲ್‌ವುಡ್ ಅವರು ಬಹುತೇಕ ಲಭ್ಯರಾಗಿದ್ದಾರೆ ಹಾಗೂ ಮುಂದಿನ ಎರಡು ದಿನಗಳಲ್ಲಿ ಅವರ ವೈದ್ಯಕೀಯ ವರದಿ ಲಭ್ಯವಾಗಲಿದೆ. ಇದಾದ ಬಳಿಕ ನಾವು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದ್ದೇವೆ," ಎಂದು ಆಸ್ಟ್ರೇಲಿಯಾ ಹೆಡ್ ಕೋಚ್ ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಯಾವಾಗ?
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಫೆಬ್ರವರಿ 19 ರಂದು ಪಾಕಿಸ್ತಾನದ ಆತಿಥ್ಯದಲ್ಲಿ ಆರಂಭವಾಗಲಿದೆ. ಈ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯು ನಡೆಯಲಿದ್ದು, ಭಾರತದ ಪಂದ್ಯಗಳು ಯುಎಇ ದುಬೈನಲ್ಲಿ ನಡೆಯಲಿವೆ. 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಆಗಿತ್ತು.