Gold Rate: ಚಿನ್ನದ ದರ ಭಾರಿ ಜಿಗಿತ; ಮೊದಲ ಬಾರಿಗೆ 10 ಗ್ರಾಮ್‌ಗೆ 85,000 ರೂ.: ಕಾರಣವೇನು?

ಬಂಗಾರದ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಫೆಬ್ರವರಿ 4ರಂದು 24 ಕ್ಯಾರಟ್‌ ಚಿನ್ನದ ದರ ಪ್ರತಿ 10 ಗ್ರಾಮ್‌ಗೆ 85,200 ಅಂಕಗಳಿಗೆ ಏರಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್‌ ಚಿನ್ನದ ದರ ಪ್ರತಿ 10 ಗ್ರಾಮ್‌ಗೆ 78,100 ರೂ.ಗೆ ಹೆಚ್ಚಳವಾಗಿದೆ. ಬಜೆಟ್‌ ದಿನ ಬಂಗಾರದ ದರ 84,500 ರೂ. ಆಗಿತ್ತು. ಆದರೆ 3 ದಿನದಲ್ಲಿ 85,500 ರೂ. ಮಟ್ಟಕ್ಕೆ ಜಿಗಿದಿದೆ. ಇದಕ್ಕೇನು ಕಾರಣ ಎನ್ನವ ವಿವರ ಇಲ್ಲಿದೆ.

Gold Rate (2)
Profile Ramesh B Feb 5, 2025 6:30 PM

ಹೊಸದಿಲ್ಲಿ: ಬಂಗಾರದ ದರ (Gold Rate) ದಿನೇ ದಿನೆ ಏರುತ್ತಿದೆ. ಮೊಟ್ಟ ಮೊದಲ ಬಾರಿಗೆ ಚಿನ್ನದ ದರ 10 ಗ್ರಾಮ್‌ಗೆ 85,000 ರೂ. ಗಡಿ ದಾಟಿದೆ. ಹೀಗಾಗಿ ಚಿನ್ನ ಖರೀದಿಸುವವರು ಸಾಕಷ್ಟು ಆಲೋಚನೆ ಮಾಡುವಂತಾಗಿದೆ. ಹಾಗಾದರೆ ಇದಕ್ಕೆ ಕಾರಣವೇನು? ಇಲ್ಲಿದೆ ವಿವರ.‌ ಫೆಬ್ರವರಿ 4ರಂದು 24 ಕ್ಯಾರಟ್‌ ಚಿನ್ನದ ದರ ಪ್ರತಿ 10 ಗ್ರಾಮ್‌ಗೆ 85,200 ಅಂಕಗಳಿಗೆ ಏರಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್‌ ಚಿನ್ನದ ದರ ಪ್ರತಿ 10 ಗ್ರಾಮ್‌ಗೆ 78,100 ರೂ.ಗೆ ಹೆಚ್ಚಳವಾಗಿದೆ. ಬಜೆಟ್‌ ದಿನ ಬಂಗಾರದ ದರ 84,500 ರೂ. ಆಗಿತ್ತು. ಆದರೆ 3 ದಿನದಲ್ಲಿ 85,500 ರೂ. ಮಟ್ಟಕ್ಕೆ ಜಿಗಿದಿದೆ.

ಹಾಗಾದರೆ ಬಂಗಾರದ ಈ ಮಟ್ಟದ ದರ ಸ್ಫೋಟಕ್ಕೆ ಕಾರಣವೇನು ಎಂಬುದನ್ನು ಈಗ ನೋಡೋಣ.

ಸಾಮಾನ್ಯವಾಗಿ ಜಾಗತಿಕ ಮಟ್ಟದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾದಾಗ ಬಂಗಾರದ ದರ ಹಠಾತ್‌ ಏರುತ್ತದೆ. ಈಗ ಆಗಿರುವುದೂ ಅದೇ. ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಕೆನಡಾ, ಮೆಕ್ಸಿಕೊ ಮತ್ತು ಚೀನಾ ವಿರುದ್ಧ ಆಮದು ತೆರಿಗೆಯನ್ನು ವಿಧಿಸುವ ಮೂಲಕ ವಾಣಿಜ್ಯ ಸಮರವನ್ನು ಘೋಷಿಸಿದ್ದಾರೆ. ಟ್ರಂಪ್‌ ಅವರು ದಿನಕ್ಕೊಮ್ಮೆ ತಮ್ಮ ಹೇಳಿಕೆಗಳನ್ನು ಬದಲಾಯಿಸುತ್ತಿದ್ದರೂ, ಅವರ ಧೋರಣೆ ಇದೀಗ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವನ್ನು ಉಂಟು ಮಾಡಿರುವುದಂತೂ ನಿಜ. ಇದರ ಪರಿಣಾಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯ ಸಾಧನ ಎಂದು ಕರೆಯಿಸಿಕೊಂಡಿರುವ ಬಂಗಾರದಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ಬಂಗಾರಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ದರ ಕೂಡ ದಿಢೀರ್ ಗಗನಕ್ಕೇರಿದೆ.

ಅಮೆರಿಕ ಸರಕಾರ ಸದ್ಯಕ್ಕೆ ಮೆಕ್ಸಿಕೊ ಮತ್ತು ಕೆನಡಾ ವಿರುದ್ಧ ತೆರಿಗೆ ಏರಿಕೆ ಪ್ರಸ್ತಾವವನ್ನು ತಡೆ ಹಿಡಿದಿದ್ದರೂ, ಇದು ತಾತ್ಕಾಲಿಕವಾಗಿರಬಹುದು ಎಂಬ ಚರ್ಚೆ ನಡೆಯುತ್ತಿದೆ. ಮುಂದಿನ ಕೆಲ ವಾರಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಯೂ ಇದೆ.

ಅಮೆರಿಕವು ಕೆನಡಾ ಮತ್ತು ಮೆಕ್ಸಿದ ಉತ್ಪನ್ನಗಳ ಆಮದಿನ ಮೇಲೆ 25% ಆಮದು ತೆರಿಗೆಯನ್ನು ವಿಧಿಸಿದರೆ ಏನಾಗುತ್ತದೆ? ಅಮೆರಿಕದಲ್ಲಿ ಈ ಎರಡು ದೇಶಗಳ ಕಂಪನಿಗಳು ಮಾರುವ ಉತ್ಪನ್ನಗಳು ಮತ್ತು ಸೇವೆಗಳ ದರ ಏರಿಕೆಯಾಗುತ್ತದೆ. ಇದರಿಂದ ಅಮೆರಿಕದಲ್ಲಿ ಬೆಲೆ ಏರಿಕೆಯಾಗಬಹುದು. ಜನರು ಈ ಎರಡು ದೇಶಗಳ ಉತ್ಪನ್ನಗಳ ಖರೀದಿಯನ್ನು ಕೈ ಬಿಡುವ ಸಾದ್ಯತೆಯೂ ಇರುತ್ತದೆ. ಆದರೆ ಕೊಳ್ಳಲು ಬಯಸುವವರು ದುಬಾರಿ ದರವನ್ನು ಕೊಡಬೇಕಾಗುತ್ತದೆ. ಇದರಿಂದ ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಬಹುದು.

ಇಂಥ ಸಂದರ್ಭದಲ್ಲಿ ಹೂಡಿಕೆದಾರರು ಚಿನ್ನ, ಬೆಳ್ಳಿಯಂತಹ ಲೋಹಗಳಲ್ಲಿ ಇನ್ವೆಸ್ಟ್‌ ಮಾಡೋದು ಸ್ವಾಭಾವಿಕ. ಆಗ ಈ ಲೋಹಗಳ ಬೆಲೆಯೂ ಏರುತ್ತದೆ.



ಅಮೆರಿಕ-ಚೀನಾ ನಡುವಣ ಟ್ರೇಡ್‌ ವಾರ್‌ ಕೂಡ ಬಂಗಾರದ ದರ ಏರಿಕೆಗೆ ಕಾರಣವಾಗಿದೆ. ಚೀನಾ ಅಮೆರಿಕ ವಿರುದ್ಧ 15% ಆಮದು ತೆರಿಗೆಯನ್ನು ವಿಧಿಸಿದೆ. ಅಮೆರಿಕದಿಂದ ಎಲ್‌ಎನ್‌ಜಿ ಮತ್ತು ಕಲ್ಲಿದ್ದಲು ಆಮದು ತುಟ್ಟಿಯಾಗಲಿದೆ. ಅಮೆರಿಕದಿಂದ ಚೀನಾಕ್ಕೆ ಆಮದಾಗುವ ಕಚ್ಚಾ ತೈಲ, ವಾಹನ, ಪಿಕಪ್‌ ಟ್ರಕ್‌ ಗಳ ಮೇಲೆಯೂ 10% ತೆರಿಗೆ ಏರಿಕೆಯಾಗುವ ಸಾಧ್ಯತೆ ಇದೆ.

ಅಮೆರಿಕದಲ್ಲಿ ಅಲ್ಲಿನ ಫೆಡರಲ್‌ ರಿಸರ್ವ್‌ ಬಡ್ಡಿ ದರ ಇಳಿಕೆಯನ್ನು ನಿರೀಕ್ಷಿತ ಮಟ್ಟದಲ್ಲಿ ಮಾಡುತ್ತಿಲ್ಲ. ಇದು ಕೂಡ ಬಂಗಾರದ ದರ ಏರಿಕೆಗೆ ಕಾರಣವಾಗಿದೆ. ಈ ಸಲದ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಂಗಾರದ ಆಭರಣಗಳ ಮೇಲಿನ ಕಸ್ಟಮ್ಸ್‌ ದರವನ್ನು 25%ರಿಂದ 20%ಕ್ಕೆ ಇಳಿಸಿದ್ದಾರೆ. ಇದರ ಪರಿಣಾಮ ಬಂಗಾರದ ಆಭರಣಗಳಿಗೆ ಬೇಡಿಕೆ ಹೆಚ್ಚಳವಾಗಿ ದರವೂ ಮತ್ತಷ್ಟು ಏರುವ ನಿರೀಕ್ಷೆ ಇದೆ.

ಇನ್ನು, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರುಪಾಯಿ ಮೌಲ್ಯವು 87 ರೂಪಾಯಿ 35 ಪೈಸೆಗೆ ಇಳಿದಿದೆ. ಹೀಗಾಗಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಈ ವಾರ ಬಡ್ಡಿ ದರ ಕಡಿತ ಮಾಡುವ ನಿರೀಕ್ಷೆಯೂ ಉಂಟಾಗಿದೆ. ಬಡ್ಡಿ ದರ ಇಳಿದರೆ, ಗೃಹ ಸಾಲದ ಬಡ್ಡಿಯೂ ಇಳಿಯುವ ಸಾಧ್ಯತೆ ಇದೆ. ಇತ್ತೀಚೆಗೆ ಬಜೆಟ್‌ನಲ್ಲಿಯೂ ಮಧ್ಯಮ ವರ್ಗದ ಜನತೆಗೆ ಟ್ಯಾಕ್ಸ್‌ ರಿಬೇಟ್‌ ಮೂಲಕ ವಾರ್ಷಿಕ 12 ಲಕ್ಷ ರುಪಾಯಿ ತನಕ ತೆರಿಗೆ ಮುಕ್ತಗೊಳಿಸಲಾಗಿದೆ. ಹೀಗಾಗಿ ಉಳಿತಾಯವಾಗುವ ಹಣದಲ್ಲಿ ಒಂದು ಪಾಲನ್ನು ಬಂಗಾರದಲ್ಲೂ ಇನ್ವೆಸ್ಟ್‌ ಮಾಡಬಹುದು.

ಬಂಗಾರ ಮತ್ತು ಬೆಳ್ಳಿಯಲ್ಲಿ ಏಕೆ ಹೂಡಿಕೆ ಮಾಡಬೇಕು ಎಂದು ಕೆಲವರು ಕೇಳಬಹುದು. ಇದಕ್ಕೆ ಕಾರಣವಿದೆ. ಹಣದುಬ್ಬರ ಅಥವಾ ಬೆಲೆ ಏರಿಕೆ ಸಂದರ್ಭದಲ್ಲಿ ಬಣಗಾರದ ದರ ಏರುತ್ತದೆ. ಇದರದಿಂದ ನಿಮ್ಮ ಸಂಪತ್ತಿನ ಮೌಲ್ಯವನ್ನು ಉಳಿಸಿಕೊಳ್ಳಲು ಬಂಗಾರದಲ್ಲಿನ ಹೂಡಿಕೆ ಉಪಯುಕ್ತವಾಗುತ್ತದೆ.

ಈ ಸುದ್ದಿಯನ್ನೂ ಓದಿ: RBI: ಜನರ ಬಳಿ ಇನ್ನೂ ಇವೆ 6,577 ಕೋಟಿ ರೂ. ಮೌಲ್ಯದ 2,000 ರೂ. ಮುಖಬೆಲೆಯ ನೋಟುಗಳು

ನಿಮ್ಮ ಹೂಡಿಕೆಯನ್ನು ಬಂಗಾರವು ವೈವಿಧ್ಯಗೊಳಿಸುತ್ತದೆ. ಬೇಕಾದಾಗ ಚಿನ್ನವನ್ನು ಮಾರಿ ಮಾನಿಟೈಸ್‌ ಮಾಡಬಹುದು. ಇದರ ಲಿಕ್ವಿಡಿಟಿ ಹೆಚ್ಚು. ಚಿನ್ನವನ್ನು ಅಡವಿಟ್ಟು ಸಾಲವನ್ನೂ ಪಡೆಯಬಹುದು. ಭೌತಿಕ ಬಂಗಾರದ ಜತೆಗೆ ಇಟಿಎಫ್‌, ಜ್ಯುವೆಲ್ಲರಿ, ಚಿನ್ನದ ಗಟ್ಟಿ, ನಾಣ್ಯ, ಮ್ಯೂಚುವಲ್‌ ಫಂಡ್‌, ಇ-ಗೋಲ್ಡ್ ಹೀಗೆ ಬೇರೆ ಬೇರೆ ರೂಪಗಳಲ್ಲಿ ಹೂಡಿಕೆ ಮಾಡಬಹುದು.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?