#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Nora Fatehi: ಸಾಹಸ ಕ್ರೀಡೆಯಲ್ಲಿ ಪಾಲ್ಗೊಂಡಿದ್ದ ನೋರಾ ಫತೇಹಿ ಸಾವು? ವಿಡಿಯೊ ವೈರಲ್‌

ಸಾಹಸ ಕ್ರೀಡೆಯೊಂದರಲ್ಲಿ ಪಾಲ್ಗೊಂಡಿದ್ದ ಬಾಲಿವುಡ್‌ ಖ್ಯಾತ ನಟಿ, ಐಟಂ ಸಾಂಗ್‌ ಮೂಲಕವೇ ಪ್ರೇಕ್ಷಕರ ನಿದ್ದೆ ಕದ್ದ ಹಾಟ್‌ ಬೆಡಗಿ ನೋರಾ ಫತೇಹಿ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್‌ ಆಗಿದೆ. ಬಂಗಿ ಜಂಪಿಂಗ್‌ನಲ್ಲಿ ಪಾಲ್ಗೊಂಡಿದ್ದ ಅವರು ಅಲ್ಲಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬರೆದ ವಿಡಿಯೊ ಹರಿದಾಡುತ್ತಿದೆ. ಅದಾಗ್ಯೂ ಇದೊಂದು ಫೇಕ್‌ ವಿಡಿಯೊ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ನೋರಾ ಫತೇಹಿ ಸಾವು? ವೈರಲ್‌ ವಿಡಿಯೊ ಇಲ್ಲಿದೆ

ನೋರಾ ಫತೇಹಿ.

Profile Ramesh B Feb 5, 2025 4:23 PM

ಮುಂಬೈ: ಬಾಲಿವುಡ್‌ ಖ್ಯಾತ ನಟಿ, ಐಟಂ ಸಾಂಗ್‌ ಮೂಲಕವೇ ಪ್ರೇಕ್ಷಕರ ನಿದ್ದೆ ಕದ್ದ ಹಾಟ್‌ ಬೆಡಗಿ ನೋರಾ ಫತೇಹಿ (Nora Fatehi) ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ದೇಶಾದ್ಯಂತ ಸಂಚಲನ ಮೂಡಿಸಿದೆ. ಸಾಹಸ ಕ್ರೀಡೆಯೊಂದರಲ್ಲಿ ಪಾಲ್ಗೊಂಡಿದ್ದ ಅವರು ಪ್ರತಾಪಕ್ಕೆ ಉರುಳಿ ಅಸುನೀಗಿದ್ದಾರೆ ಎನ್ನುವ ವಿಡಿಯೊ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ (Viral Video). ಬಂಗಿ ಜಂಪಿಂಗ್‌ನಲ್ಲಿ ಪಾಲ್ಗೊಂಡಿದ್ದ ಅವರು ಅಲ್ಲಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬರೆದ ವಿಡಿಯೊ ಹರಿದಾಡುತ್ತಿದೆ. ಅದಾಗ್ಯೂ ಇದೊಂದು ಫೇಕ್‌ ವಿಡಿಯೊ ಎಂದು ಮೂಲಗಳು ಸ್ಪಷ್ಟಪಡಿಸಿವೆ.

''ಬಾಲಿವುಡ್‌ ಪಾಲಿಗೆ ಬ್ಯಾಡ್‌ ನ್ಯೂಸ್‌. ಜನಪ್ರಿಯ ಬಾಲಿವುಡ್‌ ಕಲಾವಿದೆ ನೋರಾ ಫತೇಹಿ ಆಕಸ್ಮಿಕವಾಗಿ ಮೃತಪಟ್ಟಿದ್ದಾರೆ'' ಎಂದು ಕ್ಯಾಪ್ಶನ್‌ನಲ್ಲಿ ಬರೆಯಲಾಗಿದೆ. ವಿಡಿಯೊ ವೈರಲ್‌ ಆದ ಬೆನ್ನಲ್ಲೇ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ''ಸುಳ್ಳು ಸುದ್ದಿ ಹಬ್ಬಿಸುತ್ತೀರಿ. ದಯವಿಟ್ಟು ಯಾರೂ ವದಂತಿಯನ್ನು ನಂಬಬೇಡಿ'' ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ನೋರಾ ಈ ಬಗ್ಗೆ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ. ಯಾರೋ ಒಬ್ಬರು ಪ್ರವಾಸಿ ತಾಣದಲ್ಲಿ ಪಾಲ್ಗೊಂಡಿರುವ ವಿಡಿಯೊವನ್ನು ಶೇರ್‌ ಮಾಡಿ ನೋರಾ ಎನ್ನುವ ಹೆಸರಿನಲ್ಲಿ ಪೋಸ್ಟ್‌ ಹಂಚಿಕೊಳ್ಳುತ್ತಿರುವವರ ಬಗ್ಗೆ ಹಲವರು ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.

ಇದು ಮೊದಲ ಸಲವೇನಲ್ಲ

ಬಾಲಿವುಡ್‌ ಸೆಲೆಬ್ರಿಟಿಗಳು ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಹಬ್ಬುತ್ತಿರುವುದು ಇದು ಮೊದಲ ಸಲವೇನಲ್ಲ. ಈ ಹಿಂದೆಯೂ ಹಲವು ಕಲಾವಿದರು ನಿಧನ ಹೊಂದಿದ್ದಾರೆ ಎನ್ನುವ ವದಂತಿ ಹರಡಿದ್ದವು. ಅಮಿತಾಭ್‌ ಬಚ್ಚನ್‌, ಮಾಧುರಿ ದೀಕ್ಷಿತ್‌, ಶ್ರೇಯಸ್‌ ತಲ್ಪಾಡೆ ಮತ್ತಿತರರು ಈ ವದಂತಿಗೆ ಬಲಿಯಾಗಿದ್ದರು. ಕೊನೆಗೆ ಇವೆಲ್ಲ ಗಾಳಿಸುದ್ದಿ ಎನ್ನುವುದು ಸಾಬೀತಾಗಿ ಅಭಿಮಾನಿಗಳು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದರು.

ಕೆಲವು ದಿನಗಳ ಹಿಂದೆ ಅಮೆರಿಕದ ಲಾಸ್ ಏಂಜಲಿಸ್‌ನಲ್ಲಿ ಕಾಣಿಸಿಕೊಂಡಿದ್ದ ಕಾಡ್ಗಚ್ಚಿನ ಮಧ್ಯೆ ಸಿಕ್ಕಿ ಬಿದ್ದು ನೋರಾ ಪಾರಾಗಿ ಬಂದಿದ್ದರು. ಅದಾದ ಬಳಿಕ ಅವರು ವಿಡಿಯೊ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದರು. ʼʼನಾನು ಲಾಸ್ ಏಂಜಲಿಸ್‌ನಲ್ಲಿದ್ದೇನೆ. ಇಲ್ಲಿ ಭೀಕರ ಕಾಡ್ಗಿಚ್ಚು ವ್ಯಾಪಿಸಿದೆ. ನಾನು ನನ್ನ ಜೀವನದಲ್ಲಿ ಈ ರೀತಿಯ ಬೆಂಕಿಯ ಕೆನ್ನಾಲೆಗಳನ್ನು ಕಂಡಿರಲಿಲ್ಲ. 5 ನಿಮಿಷದ ಹಿಂದೆ ಸ್ಥಳಾಂತರದ ಕರೆ ಬಂದ ಹಿನ್ನೆಲೆ ತ್ವರಿತಗತಿಯಲ್ಲಿ ನಾನು ನನ್ನ ಎಲ್ಲ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ಇಲ್ಲಿಂದ ತೆರಳುತ್ತಿದ್ದೇನೆ. ನಾನು ಸುರಕ್ಷಿತವಾಗಿದ್ದೇನೆʼʼ ಎಂದು ಅವರು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Game Changer OTT Release: ʼಗೇಮ್‌ ಚೇಂಜರ್‌ʼ ಒಟಿಟಿ ರಿಲೀಸ್‌ ಡೇಟ್‌ ಫಿಕ್ಸ್‌; ಬಾಕ್ಸ್‌ ಆಫೀಸ್‌ನಲ್ಲಿ ಸೋತ ರಾಮ್‌ ಚರಣ್‌ ಚಿತ್ರ ಇಲ್ಲಿ ಕಮಾಲ್‌ ಮಾಡುತ್ತಾ?

ಕೆನಡಾ ಮೂಲದ ಡ್ಯಾನ್ಸರ್‌ ನೋರಾ 2014ರಲ್ಲಿ ʼರೋರ್‌: ಟೈಗರ್ಸ್‌ ಆಫ್‌ ದಿ ಸುಂದರ್‌ಬನ್ಸ್‌ʼ ಚಿತ್ರದ ಮೂಲ ಬಾಲಿವುಡ್‌ಗೆ ಪ್ರವೇಶಿಸಿದರು. ಅದಾದ ಬಳಿಕ ತೆಲುಗು, ಮಲಯಾಳಂ, ತಮಿಳು ಮುಂತಾದ ಚಿತ್ರರಂಗದಲ್ಲಿ ಕಾಣಿಸಿಕೊಂಡ ಅವರು ಇದೀಗ ಸ್ಯಾಂಡಲವುಡ್‌ಗೂ ಕಾಲಿಟ್ಟಿದ್ದಾರೆ. ಪ್ರೇಂ ನಿರ್ದೇಶನದಲ್ಲಿ, ಧ್ರುವ ಸರ್ಜಾ ನಟನೆಯ ಕನ್ನಡ ಚಿತ್ರ ʼಕೆಡಿ-ದಿ ಡೆವಿಲ್‌ʼನಲ್ಲಿಯೂ ನಟಿಸುತ್ತಿದ್ದಾರೆ. ಸದ್ಯದಲ್ಲೇ ಈ ಚಿತ್ರ ತೆರೆ ಕಾಣಲಿದೆ. ಬಾಲಿವುಡ್‌ ಸೂಪರ್‌ ಸ್ಟಾರ್‌ಗಳಾದ ಸಂಜಯ್‌ ದತ್‌, ಶಿಲ್ಪಾ ಶೆಟ್ಟಿ ಜತೆಗೆ ವಿ. ರವಿಚಂದ್ರನ್‌, ರಮೇಶ್‌ ಅರವಿಂದ್‌, ರೀಷ್ಮಾ ನಾಣಯ್ಯ ಮತ್ತಿತರರು ನಟಿಸುತ್ತಿದ್ದಾರೆ.