Virat Kohli: ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊಹ್ಲಿಯನ್ನು ಬಡಿದೆಬ್ಬಿಸಲಿದೆ ಕಾಂತಾರದ ಪಂಜುರ್ಲಿ
ಭೂತಾರಾಧನೆ ತುಳುನಾಡಿನ ಆರಾಧನೆಗಳಲ್ಲಿ ಪ್ರಮುಖವಾದದ್ದು, ಇದನ್ನು 'ದೈವಾರಾಧನೆ' ಎಂದೂ ಕರೆಯುತ್ತಾರೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಿಶೇಷವಾಗಿ ಕಂಡುಬರುವ ಒಂದು ರೀತಿಯ ಆರಾಧಾನೆ. ತುಳುನಾಡಿನ ನಂಬಿಕೆ ಎಂದೇ ಪರಿಗಣಿಸಲ್ಪಟ್ಟಿರುವ ದೈವಾರಾಧನೆಯನ್ನು ಚಿತ್ರವಿಚಿತ್ರ ರೀತಿಯಲ್ಲಿ ಬಿಂಬಿಸಿ, ಎಡಿಟ್ ಮಾಡಿ ಅಸಂಖ್ಯಾತ ದೈವ ಭಕ್ತರ ಧಾರ್ಮಿಕ ನಂಬಿಕೆಗಳಿಗೆ ನೋವು ಉಂಟು ಮಾಡುತ್ತಿರುವ ನೆಟ್ಟಿಗರ ಬಗ್ಗೆ ಕರಾವಳಿ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಮುಂಬಯಿ: ಕನ್ನಡದ 'ಕಾಂತಾರ' ಸಿನಿಮಾ (Kantara Movie) ಮಾಡಿದ ಮೋಡಿ ಅಷ್ಟಿಷ್ಟಲ್ಲ. ಅದರಲ್ಲೂ ಸಿನಿಮಾದ ಕ್ಲೈಮ್ಯಾಕ್ಸ್ ವೇಳೆಗೆ ಕಥಾನಾಯಕ ಶಿವನನ್ನು ಪಂಜುರ್ಲಿ ದೈವ ಬಡಿದೆಬ್ಬಿಸುವ ಒಂದು ಸನ್ನಿವೇಶ ಈಗಲೂ ಪ್ರೇಕ್ಷಕನ ಕಣ್ಣಿಗೆ ಕಟ್ಟಿದಂತಿದೆ. ಇದೀಗ ಕಳಪೆ ಬ್ಯಾಟಿಂಗ್ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿಯನ್ನು ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೂ ಮುನ್ನ ಪಂಜುರ್ಲಿ ದೈವ ಬಡಿದೆಬ್ಬಿಸುವಂತೆ ಎಡಿಟ್ ಮಾಡಿರುವ ವಿಡಿಯೊವೊಂದು ವೈರಲ್ ಆಗಿದೆ. ಕೊಹ್ಲಿ ದ್ವಿಪಕ್ಷೀಯ ಸರಣಿಯಲ್ಲಿ ವಿಫಲವಾದರೂ ಐಸಿಸಿ ಟೂರ್ನಿಯಲ್ಲಿ ಉತ್ತಮವಾಗಿ ಆಡುತ್ತಾರೆ. ಇದಕ್ಕೆ ಕಾರಣ ಪಂಜುರ್ಲಿ ದೈವದ ಆಶೀರ್ವಾದ ಎನ್ನುವ ರೀತಿಯಲ್ಲಿ ಅವರ ಅಭಿಮಾನಿಯೊಬ್ಬರು ಈ ವಿಡಿಯೊವನ್ನು ಎಡಿಟ್ ಮಾಡಿ ಟ್ವಿಟರ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ಭೂತಾರಾಧನೆ ತುಳುನಾಡಿನ ಆರಾಧನೆಗಳಲ್ಲಿ ಪ್ರಮುಖವಾದದ್ದು, ಇದನ್ನು 'ದೈವಾರಾಧನೆ' ಎಂದೂ ಕರೆಯುತ್ತಾರೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಿಶೇಷವಾಗಿ ಕಂಡುಬರುವ ಒಂದು ರೀತಿಯ ಆರಾಧಾನೆ. ತುಳುನಾಡಿನ ನಂಬಿಕೆ ಎಂದೇ ಪರಿಗಣಿಸಲ್ಪಟ್ಟಿರುವ ದೈವಾರಾಧನೆಯನ್ನು ಚಿತ್ರವಿಚಿತ್ರ ರೀತಿಯಲ್ಲಿ ಬಿಂಬಿಸಿ, ಎಡಿಟ್ ಮಾಡಿ ಅಸಂಖ್ಯಾತ ದೈವ ಭಕ್ತರ ಧಾರ್ಮಿಕ ನಂಬಿಕೆಗಳಿಗೆ ನೋವು ಉಂಟು ಮಾಡುತ್ತಿರುವ ಬಗ್ಗೆ ಕರಾವಳಿ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
It's time for conquer the ict..@imVkohli #ViratKohli𓃵 #IndvsBan #ChampionsTrophy2025 pic.twitter.com/UTaUc1NLga
— లోలాకులు (@Tweetskottu__) February 20, 2025
ವಿರಾಟ್ ಕೊಹ್ಲಿ(Virat Kohli) ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ(Champions Trophy) ವಿಶೇಷ ಮೈಲುಗಲ್ಲು ನಿರ್ಮಿಸುವ ಸನಿಹದಲ್ಲಿದ್ದಾರೆ. ಟೂರ್ನಿಯಲ್ಲಿ ಒಟ್ಟಾರೆ 263 ಕಲೆ ಹಾಕಿದರೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯಧಿಕ ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಸದ್ಯ ದಾಖಲೆ ವಿಂಡೀಸ್‌ನ ಮಾಜಿ ಆಟಗಾರ ಕ್ರಿಸ್ ಗೇಲ್ ಹೆಸರಿನಲ್ಲಿದೆ.
ಗೇಲ್ 2002-2013ರ ಅವಧಿಯಲ್ಲಿ 17 ಪಂದ್ಯಗಳನ್ನಾಡಿ 791 ರನ್ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 13 ಪಂದ್ಯಗಳಿಂದ 529* ರನ್ ಬಾರಿಸಿ ಸದ್ಯ 11ನೇ ಸ್ಥಾನದಲ್ಲಿದ್ದಾರೆ. ಭಾರತೀಯ ದಾಖಲೆ ಸದ್ಯ ಮಾಜಿ ಬ್ಯಾಟರ್ ಶಿಖರ್ ಧವನ್ ಹೆಸರಿನಲ್ಲಿದೆ. ಧವನ್ 10 ಪಂದ್ಯಗಳಿಂದ 701 ಗಳಿಸಿದ್ದಾರೆ. ಕೊಹ್ಲಿ 2017ರ ಆವೃತ್ತಿಯ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಅಜೇಯ 96 ರನ್ ಬಾರಿಸಿದ್ದರು.