Children and Pets: ಮನೆಯಲ್ಲಿರುವ ಶ್ವಾನದಿಂದಾಗಿ ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚುತ್ತಾ?
ಮಕ್ಕಳ ದೇಹ ಬಹಳ ಸೂಕ್ಷ್ಮವಾಗಿದ್ದು ಅಲರ್ಜಿಯಂತಹ ಸಮಸ್ಯೆ ಹೆಚ್ಚಾಗಿ ಕಾಡಲಿದೆ. ಹಾಗಾಗಿ ನಾಯಿಗಳಿಂದ ಬ್ಯಾಕ್ಟೀರಿಯಾ, ಫಂಗಸ್ ಇತ್ಯಾದಿ ಮಕ್ಕಳಿಗೆ ಹರಡಬಹುದು ಎಂಬ ಭಯ ಪೋಷಕರಿಗೆ ಸದಾ ಕಾಲ ಇದ್ದೇ ಇರಲಿದೆ. ಆದರೆ ಅಧ್ಯಯನ ಒಂದರಲ್ಲಿ ಮಕ್ಕಳ ಆರೋಗ್ಯ ಸುಧಾರಿಸುವ ನೆಲೆಯಲ್ಲಿ, ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಾಕು ನಾಯಿಗಳು ಪ್ರಧಾನ ಪಾತ್ರ ವಹಿಸಲಿದೆ ಎಂಬ ಆಶ್ಚರ್ಯಕರ ಮಾಹಿತಿ ತಿಳಿದು ಬಂದಿದೆ.

Dogs Help

ನವದೆಹಲಿ: ಇತ್ತೀಚಿನ ದಿನದಲ್ಲಿ ಸಾಕು ನಾಯಿಗಳನ್ನು ಮನೆ ಮಕ್ಕಳಂತೆ ಸಾಕುವವರ ಸಂಖ್ಯೆ ಹೆಚ್ಚಾಗಿದೆ. ಮನೆಯನ್ನು ವಾಚ್ ಮ್ಯಾನ್ ಎಂಬಂತೆ ಕಾಯಲು ಅಪಾಯದಿಂದ ರಕ್ಷಣೆ ಮಾಡುವ ಸಲುವಾಗಿ ಸಾಕುನಾಯಿಗಳ ಮೇಲೆ ಮಾನವನ ಅವಲಂಬನೆ ಭಾವನಾತ್ಮಕವಾಗಿ ಬೆಸೆದು ಹೋಗಿದೆ. ಅದರಲ್ಲಿಯೂ ಮಕ್ಕಳ ಜೊತೆ ಸಮಯ ಕಳೆಯಲು ಸಾಕು ನಾಯಿಗಳನ್ನು ಅತೀ ಹೆಚ್ಚು ಆಧುನಿಕ ಸಮಾಜ ಅವಲಂಬಿಸಿದೆ. ಆದರೆ ನಾಯಿಗಳು ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರಬಹುದೇ ಎಂಬ ಯೋಚನೆ ಅನೇಕರನ್ನು ಆಗಾಗ ಕಾಡುತ್ತದೆ. ನಾಯಿ ಮೇಲೆ ಅದೆಷ್ಟೇ ಪ್ರೀತಿ ಇದ್ದರೂ ಮಕ್ಕಳ ಆರೋಗ್ಯಕ್ಕೆ ಸಮಸ್ಯೆಯಾಗಲಿದೆ ಎಂದು ಪೋಷಕರು ನಾಯಿ ಸಾಕಲು ಹಿಂದೇಟು ಹಾಕುವವರು ಇದ್ದಾರೆ. ಹಾಗಾದರೆ ಮಕ್ಕಳ ಆರೋಗ್ಯದ ಮೇಲೆ ಸಾಕು ನಾಯಿ ಪ್ರಭಾವ ಬೀರಬಹುದೇ?(Health tips) ಈ ಗೊಂದಲಗಳಿಗೆ ಉತ್ತರ ಇಲ್ಲಿದೆ.
ಮಕ್ಕಳ ದೇಹ ಬಹಳ ಸೂಕ್ಷ್ಮವಾಗಿದ್ದು ಅಲರ್ಜಿಯಂತಹ ಸಮಸ್ಯೆ ಹೆಚ್ಚಾಗಿ ಕಾಡಲಿದೆ. ಹಾಗಾಗಿ ನಾಯಿಗಳಿಂದ ಬ್ಯಾಕ್ಟೀರಿಯಾ, ಫಂಗಸ್ ಇತ್ಯಾದಿ ಮಕ್ಕಳಿಗೆ ಹರಡಬಹುದು ಎಂಬ ಭಯ ಪೋಷಕರಿಗೆ ಸದಾ ಕಾಲ ಇದ್ದೇ ಇರಲಿದೆ. ಆದರೆ ಅಧ್ಯಯನ ಒಂದರಲ್ಲಿ ಮಕ್ಕಳ ಆರೋಗ್ಯ ಸುಧಾರಿಸುವ ನೆಲೆಯಲ್ಲಿ, ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಾಕು ನಾಯಿಗಳು ಪ್ರಧಾನ ಪಾತ್ರ ವಹಿಸಲಿದೆ ಎಂಬ ಆಶ್ಚರ್ಯಕರ ಮಾಹಿತಿ ತಿಳಿದು ಬಂದಿದೆ.
ಅಮೇರಿಕನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್ (AAP) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಅಧ್ಯಯನ (NH) ಪ್ರಕಾರ ಸಾಕು ಪ್ರಾಣಿಗಳ ಆರೈಕೆ ಮಾಡುವ ಕುಟುಂಬದಲ್ಲಿ ಮಕ್ಕಳಿದ್ದರೆ ಅಂತಹ ಮಕ್ಕಳು ಉಳಿದ ಮಕ್ಕಳಿಗಿಂತ ಹೆಚ್ಚು ಆರೋಗ್ಯಯುತ ಇರುತ್ತಾರೆ ಎಂದು ತಿಳಿದು ಬಂದಿದೆ. ಯಾಕೆಂದರೆ ಸಾಕು ನಾಯಿಗಳ ಜೊತೆ ಬೆರೆಯುವ ಮಕ್ಕಳಿಗೆ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಾಣು ಜೀವಿಗಳ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಹಾಗಾಗಿ ಮಕ್ಕಳ ಆರೋಗ್ಯ ಸಾಕು ನಾಯಿಗಳ ಆರೈಕೆಯಿಂದ ಯಾವುದೇ ಹಾನಿ ಆಗವುದಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.
ನಾಯಿಯ ದೇಹದಲ್ಲಿರುವ ತುಪ್ಪಳ (ರೋಮ) ಮತ್ತು ಕಾಲಿನ ಪಂಜದಿಂದಾಗಿ ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಷ್ಮಾಣು ಜೀವಿಗಳನ್ನು ತೊಡೆದುಹಾಕುವ ಸಾಮರ್ಥ್ಯವಿದೆ. ಹಾಗಾಗಿ ಮಕ್ಕಳ ದೇಹ ಸೂಕ್ಷ್ಮಾಣು ಜೀವಿಗಳನ್ನು ಪ್ರವೇಶಿಸದಂತೆ ತಡೆಹಿಡಿಯಲು ಸಹಕಾರಿಯಾಗಲಿದೆ. ಸಾಕು ನಾಯಿಯ ಆರೈಕೆ ಮಾಡುವ ಮಕ್ಕಳಲ್ಲಿ ಅಸ್ತಮಾ, ಜ್ವರ,ಅಲರ್ಜಿ , ಕರುಳಿನ ಇನ್ ಫೆಕ್ಷನ್ ಇತರ ಸಮಸ್ಯೆಗಳು ಹೇರಳವಾಗಿ ಕಾಡಲಾರದು ಎಂದು ಅಮೇರಿಕನ್ ಅಕಾಡೆನಿಕ್ ಆಫ್ ಪೀಡಿಯಾಟ್ರಿಕ್ಸ್, ಜರ್ನಲ್ ಆಫ್ ಅಲರ್ಜಿ ಮತ್ತು ಕ್ಲಿನಿಕಲ್ ಇಮ್ಯುನಾಲಜಿ ಸಂಶೋಧನೆಯಿಂದ ತಿಳಿದು ಬಂದಿದೆ.
ಈ ಎಲ್ಲ ಆರೋಗ್ಯ ಪ್ರಯೋಜನ ದೊರೆಯಲಿದೆ:
- ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಾಕು ನಾಯಿಗಳ ಆರೈಕೆ ಪ್ರಧಾನ ಪಾತ್ರವಹಿಸುತ್ತಿದ್ದು ಉಸಿರಾಟ ಸಂಬಂಧಿತ ಸಮಸ್ಯೆ ಮಕ್ಕಳನ್ನು ಬಾಧಿಸದಂತೆ ತಡೆಹಿಡಿಯುವಲ್ಲಿ ಪ್ರಧಾನ ಪಾತ್ರ ನಿರ್ವಹಿಸಲಿದೆ.
- ಮಕ್ಕಳಲ್ಲಿ ಕಾಡುವ ಆತ್ಮವಿಶ್ವಾಸದ ಸಮಸ್ಯೆ ನಿವಾರಣೆಗೂ ಸಾಕು ನಾಯಿಗಳು ಪ್ರಧಾನ ಪಾತ್ರ ನಿರ್ವಹಿಸಲಿವೆ.
- ಕಿವಿ ನೋವು, ಶೀತ,ಇತರ ಸೂಕ್ಷ್ಮಾಣು ಜೀವಿಗಳಿಂದ ಹರಡುವ ಸೋಂಕು ಬರದಂತೆ ತಡೆಹಿಡಿಯಬಹುದು.
- ಇತ್ತೀಚಿನ ದಿನದಲ್ಲಿ ಅನೇಕ ಜನರಿಗೆ ಖಿನ್ನತೆ ಸಮಸ್ಯೆ ಇದೆ. ಅಂತವರಿಗೆ ಸಾಕು ನಾಯಿ ಆರೈಕೆ ಅದರೊಂದಿಗೆ ಸಮಯ ಕಳೆ ಯುವುದು ಒಳ್ಳೆ ಮೆಡಿಸಿನ್ ಆಗಲಿದೆ. ಏಕಾಂಗಿ ಆಗಿರುವವರಿಗೂ ಸಾಕು ನಾಯಿಗಳು ಭಾವನಾತ್ಮಕವಾಗಿ ಕನೆಕ್ಟ್ ಆಗಲಿವೆ.
- ಚರ್ಮದ ಸೋಂಕು ಬರದಂತೆ ಮಕ್ಕಳ ಆರೈಕೆ ಮಾಡುವ ನೆಲೆಯಲ್ಲಿ ಸಾಕು ನಾಯಿ ಬಹುಮುಖ್ಯ ಪಾತ್ರ ನಿರ್ವಹಿಸುತ್ತದೆ.
- ಮಕ್ಕಳ ಜೊತೆ ನಾಯಿ ಆಟದಲ್ಲಿ ತೊಡಗಿಕೊಂಡಾಗ ಸಹಜವಾಗಿ ಮಕ್ಕಳು ಕ್ರಿಯಾ ಶೀಲರಾಗುತ್ತಾರೆ.
- ನಾಯಿಗಳು ಮನುಷ್ಯನ ಜೊತೆ ಸನ್ನೆಯುಕ್ತ ಸಂವಹನದಲ್ಲಿ ಬಹಳ ನಿಸ್ಸಿಮ ಎಂದರೂ ತಪ್ಪಾಗದು. ಒತ್ತಡ, ಡಿಪ್ರೆಶನ್ ಇತ್ಯಾದಿ ಸಮಸ್ಯೆಗಳು ಕಾಡುವಾಗ ಸಾಕು ನಾಯಿ ಜೊತೆ ಒಂದಿಷ್ಟು ಕಾಲ ಕಳೆದರೆ ಇದು ನಮ್ಮ ಆರೋಗ್ಯ ಸುಧಾರಿಸುವ ನೆಲೆಯಲ್ಲಿ ಉತ್ತಮ ಹವ್ಯಾಸವಾಗಲಿದೆ.