ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

2025 Asia Cup: ಸೆಪ್ಟೆಂಬರ್‌ನಲ್ಲಿ ಏಷ್ಯಾಕಪ್‌; ಭಾರತ ಪಾಕ್‌ ಮತ್ತೆ ಕಾದಾಟ

ಸದ್ಯದ ಮಾಹಿತಿ ಪ್ರಕಾರ ಟೂರ್ನಿ ಯುಎಇ ಅಥವಾ ಶ್ರೀಲಂಕಾದಲ್ಲಿ ನಡೆಯುವ ಸಾಧ್ಯತೆ ಇದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫಘಾನಿಸ್ತಾನ, ಯುಎಇ, ಓಮನ್‌ ಮತ್ತು ಹಾಂಕಾಂಗ್‌ ತಂಡಗಳು ಈ ಬಾರಿ ಆಡಲಿದೆ. 2026ರಲ್ಲಿ ಟಿ20 ವಿಶ್ವಕಪ್‌ ನಡೆಯುವ ಕಾರಣದಿಂದ ಈ ಬಾರಿ ಟಿ20 ಮಾದರಿಯಲ್ಲಿ ಏಷ್ಯಾಕಪ್‌ ನಡೆಯಲಿದೆ.

ಪಾಕ್‌ ಕಾರಣದಿಂದ ದುಬೈನಲ್ಲಿ ಪಂದ್ಯ ನಡೆಸಲು ಬಿಸಿಸಿಐ ಚಿಂತನೆ

Profile Abhilash BC Feb 28, 2025 2:25 PM

ನವದೆಹಲಿ: ಭಾರತ ಮತ್ತು ಪಾಕಿಸ್ತಾನ(IND vs PAK) ತಂಡಗಳು ಮತ್ತೆ ಮುಖಾಮುಖಿಯಾಗಲಿವೆ. ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆಯುವ ಏಷ್ಯಾಕಪ್‌(2025 Asia Cup) ಟೂರ್ನಿಯಲ್ಲಿ. ಭಾರತ ಟೂರ್ನಿಯ ಆತಿಥ್ಯ ಹಕ್ಕು ಹೊಂದಿದ್ದರೂ ಕೂಡ, ಭಾರತದಲ್ಲಿ ಪಂದ್ಯಾವಳಿ ನಡೆಯುವುದು ಅನುಮಾನ. ಇದಕ್ಕೆ ಕಾರಣ ಪಾಕಿಸ್ತಾನ. 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನವು ನಿಯೋಜಿತ ಆತಿಥೇಯರಾಗಿದ್ದರೂ, ಬಿಸಿಸಿಐ ತನ್ನ ತಂಡವನ್ನು ಪಾಕ್‌ಗೆ ಕಳುಹಿಸಲು ನಿರಾಕರಿಸಿತ್ತು. ಹೀಗಾಗಿ ಭಾರತದ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸಲಾಗಿದೆ. ಹೀಗಾಗಿ ಭಾರತದಲ್ಲಿ ನಡೆಯುವ ಮುಂದಿನ ಕೂಟಗಳಿಗೂ ಇದು ಪರಿಣಾಮ ಬೀರುತ್ತಿದೆ. ಪಾಕ್‌ ತನ್ನ ಪಂದ್ಯಗಳನ್ನು ತಟಸ್ಥ ತಾಣದಲ್ಲಿ ಆಡಲಿದೆ.

ಸದ್ಯದ ಮಾಹಿತಿ ಪ್ರಕಾರ ಟೂರ್ನಿ ಯುಎಇ ಅಥವಾ ಶ್ರೀಲಂಕಾದಲ್ಲಿ ನಡೆಯುವ ಸಾಧ್ಯತೆ ಇದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫಘಾನಿಸ್ತಾನ, ಯುಎಇ, ಓಮನ್‌ ಮತ್ತು ಹಾಂಕಾಂಗ್‌ ತಂಡಗಳು ಈ ಬಾರಿ ಆಡಲಿದೆ. 2026ರಲ್ಲಿ ಟಿ20 ವಿಶ್ವಕಪ್‌ ನಡೆಯುವ ಕಾರಣದಿಂದ ಈ ಬಾರಿ ಟಿ20 ಮಾದರಿಯಲ್ಲಿ ಏಷ್ಯಾಕಪ್‌ ನಡೆಯಲಿದೆ. 19 ಪಂದ್ಯಗಳನ್ನು ಒಳಗೊಂಡಿದ್ದು, ಸೆಪ್ಟೆಂಬರ್ ಎರಡನೇ ಮತ್ತು ನಾಲ್ಕನೇ ವಾರದ ನಡುವೆ ನಡೆಯುವ ಸಾಧ್ಯತೆಯಿದೆ ಎಂದು ಕ್ರಿಕ್‌ಬಜ್‌ನ ವರದಿಯೊಂದು ತಿಳಿಸಿದೆ.

ಇದನ್ನೂ ಓದಿ IPL 2025: ಏಳು ವರ್ಷಗಳ ಬಳಿಕ ಗುರು-ಶಿಷ್ಯರ ಸಮಾಗಮ

ಪ್ರಸಕ್ತ ಸಾಗುತ್ತಿರುವ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಪಾಕಿಸ್ತಾನ ಒಂದೇ ಒಂದು ಪಂದ್ಯ ಗೆಲ್ಲದೆ ಹೊರಬಿದ್ದಿದೆ. ಭಾರತ ತಂಡ ಸೆಮಿಫೈನಲ್‌ ಪ್ರವೇಶಿಸಿದೆ. ತನ್ನ ಕೊನೆಯ ಲೀಗ್‌ ಪಂದ್ಯವನ್ನು ಮಾ.2 ರಂದು ನ್ಯೂಜಿಲ್ಯಾಂಡ್‌ ವಿರುದ್ಧ ಆಡಲಿದೆ. ಈ ಪಂದ್ಯಕ್ಕೆ ನಾಯಕ ರೋಹಿತ್‌ ಶರ್ಮ(Rohit Sharma) ಮತ್ತು ವೇಗಿ ಮೊಹಮ್ಮದ್‌ ಶಮಿ(mohammed shami)ಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಇವರಿಬ್ಬರ ಬದಲಿಗೆ ರಿಷಭ್‌ ಪಂತ್‌ ಮತ್ತು ಎಡಗೈ ವೇಗಿ ಅರ್ಶ್‌ದೀಪ್‌ ಸಿಂಗ್‌ಗೆ ಅವಕಾಶ ನೀಡಲಾಗುವುದು ಎಂದು ತಿಳಿದುಬಂದಿದೆ. ರೋಹಿತ್‌ ಅಲಭ್ಯರಾದರೆ ಕನ್ನಡಿಗ ಕೆ.ಎಲ್‌. ರಾಹುಲ್‌(KL Rahul) ಆರಂಭಿಕನಾಗಿ ಗಿಲ್‌ ಜತೆ ಇನಿಂಗ್ಸ್‌ ಆರಂಭಿಸಲಿದ್ದಾರೆ ಎನ್ನಲಾಗಿದೆ.

ಶಮಿ ಕಳೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೊಣಕಾಲಿ ಗಾಯದಿಂದ ಬಳಲಿದ್ದು ಕಂಡು ಬಂದಿತ್ತು. ನೋವಿನ ಮಧ್ಯೆಯೂ ಅವರು ಬೌಲಿಂಗ್‌ ಮುಂದುವರಿಸಿದ್ದರು. ರೋಹಿತ್‌ ಸ್ನಾಯು ಸೆಳೆತದಿಂದ ಬಳಲುತ್ತಿದ್ದು ಸ್ಪಲ್ಪ ಮಟ್ಟಿನ ಫಿಟ್ನೆಸ್‌ ಸಮಸ್ಯೆ ಹೊಂದಿದ್ದಾರೆ ಎನ್ನಲಾಗಿದೆ. ಸೆಮಿಫೈನಲ್‌ಗೆ ಇವರಿಬ್ಬರ ಲಭ್ಯತೆ ಮುಖ್ಯ. ಹೀಗಾಗಿ ಅವರಿಗೆ ಸೆಮಿ ಪಂದ್ಯಕ್ಕೂ ಮುನ್ನ ಟೀಮ್‌ ಮ್ಯಾನೇಜ್‌ಮೆಂಟ್‌ ಒಂದು ಪಂದ್ಯ ವಿಶ್ರಾಂತಿ ನೀಡಲು ಬಯಸಿದೆ ಎಂದು ಹೇಳಲಾಗಿದೆ.