ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Will Smith: ಸ್ಟೇಜ್‌ನಲ್ಲೇ ಖ್ಯಾತ ನಟ-ಫೇಮಸ್‌ ಸಿಂಗರ್‌ ಲಿಪ್‌ಲಾಕ್‌; ವಿಡಿಯೊ ಫುಲ್‌ ವೈರಲ್‌

ಸೆಲೆಬ್ರೆಟಿಗಳು ಏನೇ ಮಾಡಿದ್ರು ಅದು ಸುದ್ದಿಯಾಗುತ್ತೆ. ಅದರಲ್ಲೂ ಇಬ್ಬರು ಸಾರ್ವಜನಿಕವಾಗಿ ಚುಂಬಿಸಿಕೊಂಡರೆ ಅದು ಹೈಪ್ ಆಗದೇ ಇರುತ್ತಾ? ಹೌದು, ಇದೀಗ ಹಾಲಿವುಡ್ ನಟ ವಿಲ್ ಸ್ಮಿತ್ ಮತ್ತು ಫೇಮಸ್ ಸಿಂಗರ್ ಇಂಡಿಯಾ ಮಾರ್ಟಿನೆಝ್ ವೇದಿಕೆಯಲ್ಲೇ ಲಿಪ್ ಲಾಕ್ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

ಸ್ಟೇಜ್‌ನಲ್ಲೇ ಸಿಂಗರ್‌ ಜತೆ ನಟ ವಿಲ್ ಸ್ಮಿತ್ ಲಿಪ್‌ಲಾಕ್‌!

ಸ್ಟೇಜ್ ನಲ್ಲೇ ಸಿಂಗರ್ ಗೆ ಚುಂಬಿಸಿದ ನಟ ವಿಲ್ ಸ್ಮಿತ್.

Profile Sushmitha Jain Feb 28, 2025 10:05 AM

ನವದೆಹಲಿ: ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಏನು ಮಾಡಿದ್ರು ಅದು ಸುದ್ದಿಯಾಗುತ್ತದೆ ಮತ್ತು ಏನಾದ್ರೂ ವಿಚಿತ್ರ ಮಾಡಿದ್ರೆ ಅದು ವಿವಾದವೂ ಆಗೊದಿದೆ. ಇತ್ತೀಚೆಗಷ್ಟೇ ಖ್ಯಾತ ಗಾಯಕ ಉದಿತ್ ನಾರಾಯಣ್ ಸಂಗೀತ ಕಾರ್ಯಕ್ರಮಮೊಂದರಲ್ಲಿ ಮಹಿಳಾ ಅಭಿಮಾನಿಗೆ ಕಿಸ್ ಕೊಟ್ಟು ಸುದ್ದಿಯಾಗಿದ್ದರು. ಅಂತಹುದ್ದೇ ಒಂದು ಘಟನೆ ಮಿಯಾಮಿಯಲ್ಲಿ ನಡೆದಿದ್ದು, ಅಲ್ಲಿ ನಡೆದ ಪ್ರಿಮಿಯೋ ಲೋ ನ್ಯೂಯೆಸ್ಟ್ರೋ ಪ್ರಶಸ್ತಿ ಪ್ರದಾನ ಸಮಾರಂಭದ ಸಂಗೀತ ಕಾರ್ಯಕ್ರಮವೊಂದರಲ್ಲಿ ಖ್ಯಾತ ನಟ ವಿಲ್ ಸ್ಮಿತ್(Will Smith) ಸಹ ಗಾಯಕಿ ಇಂಡಿಯಾ ಮಾರ್ಟಿನೆಝ್ ಅವರಿಗೆ ವೇದಿಕೆಯಲ್ಲೇ ‘ಕಿಸ್’ ಮಾಡಿ ಸುದ್ದಿಯಾಗಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಇದಕ್ಕೆ ನೆಟ್ಟಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಇವರಿಬ್ಬರೂ ಜೊತೆಯಲ್ಲಿ ಪರ್ ಫಾರ್ಮೆನ್ಸ್ ಮಾಡುತ್ತಿದ್ದ ಸಂದರ್ಭದಲ್ಲಿ ‘ಫರ್ಸ್ಟ್ ಲವ್’ ಹಾಡಿನ ಸಂದರ್ಭದಲ್ಲಿ ಇವರಿಬ್ಬರೂ ತುಂಬಾ ಆಪ್ತವಾಗಿ ತಬ್ಬಿಕೊಂಡು ಸ್ಟೇಜ್ ಮೇಲೆಯೇ ‘ಕಿಸ್’ ಮಾಡಿಕೊಂಡಿದ್ದಾರೆ.

ಸ್ಮಿತ್ ಮತ್ತು ಮಾರ್ಟಿನೆಝ್ ಹೈ ವೊಲ್ಟೇಜ್ ಫರ್ ಫಾರ್ಮೆನ್ಸ್ ಕೊಡುತ್ತಿದ್ದ ಸಂದರ್ಭದಲ್ಲಿ ಸಿಂಗರ್ ಇಂಡಿಯಾ ತನ್ನ ತೋಳುಗಳನ್ನು ಸ್ಮಿತ್ ಅವರ ಕುತ್ತಿಗೆ ಸುತ್ತ ಬಳಸಿ, ಆತನನ್ನು ತನ್ನತ್ತ ಬರಸೆಳೆದುಕೊಂಡು ಇಬ್ಬರೂ ಒಂದರೆಕ್ಷಣ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತಾರೆ. ಟೆನ್ಷನ್ ಏರುತ್ತಿದ್ದಂತೆ 56 ವರ್ಷದ ಸ್ಮಿತ್ ತನ್ನ ತುಟಿಗಳನ್ನು ಇಂಡಿಯಾಳ ತುಟಿಯ ಹತ್ತಿರ ತಂದು ಲಿಪ್ ಲಾಕ್ ಮಾಡಿಕೊಳ್ಳುತ್ತಾರೆ. ಹೀಗೆ ಲಿಪ್ ಲಾಕ್ ಮಾಡುತ್ತಿದ್ದಂತೆ ತಕ್ಷಣವೇ ಪರಸ್ಪರ ಬೇರೆಯಾಗುತ್ತಾರೆ.

ಇದನ್ನೂ ಓದಿ: Air India: ʼʼಕೆಟ್ಟ ಏರ್‌ಲೈನ್ಸ್‌ಗಾಗಿ ಯಾವುದೇ ಪ್ರಶಸ್ತಿ ನೀಡೋದಿದ್ರೆ ಏರ್ ಇಂಡಿಯಾಗೆ ನೀಡಿʼʼ: ಜೈವೀರ್ ಶೆರ್ಗಿಲ್ ಕಿಡಿ

ನಾವೆಷ್ಟು ಹೇಳಿದ್ರೂ ಅಷ್ಟೇ..! ಈ ಹಾಟ್ ಹಾಟ್ ವಿಡಿಯೋವನ್ನು ನೀವೇ ಒಮ್ಮೆ ನೋಡಿಬಿಡಿ!

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇವರ ಅಭಿಮಾನಿಗಳು ಕಮೆಂಟ್ ಮೇಲೆ ಕಮೆಂಟ್ ಮಾಡುತ್ತಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಕಮೆಂಟ್ ಗಳ ಸುರಿಮಳೆಯಾಗುತ್ತಿದೆ. ‘ಈ ಪೂರ್ತಿ ಘಟನೆ ನಾಚಿಕೆಗೇಡಿನದ್ದಾಗಿದೆ’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ‘ಇದು ಮನರಂಜನೆಯಾಗಿದ್ದರೂ, ಇದು ಸರಿಯಲ್ಲ’ ಎಂದು ಕಮೆಂಟ್ ಮಾಡಿದ್ದಾರೆ. ‘ಆತ ತುಂಬಾ ನಾಚಿಕೊಂಡಂತೆ ಕಾಣಿಸುತ್ತಾನೆ’ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

ವಿಲ್ ಸ್ಮಿತ್ ಮತ್ತು ಆತನ ಪತ್ನಿ ಜಡಾ ಪಿಂಕೆಟ್ ಸ್ಮಿತ್ ಜೊತೆಗಿನ ವೈವಾಹಿಕ ಸಂಬಂಧದಲ್ಲಿ ಬಿರುಕು ಮೂಡಿರುವ ಸುದ್ದಿಗಳು ಹರಿದಾಡುತ್ತಿರುವ ನಡುವೆಯೇ ಈ ಘಟನೆ ಇನ್ನಷ್ಟು ಹೈಪ್ ಪಡೆದುಕೊಂಡಿದೆ. ಈ ಜೋಡಿ 2016ರಲ್ಲೇ ಬೇರೆ ಬೇರೆಯಾಗಿದ್ದರೂ, ಇವರಿಬ್ಬರೂ ಅಧಿಕೃತವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿಲ್ಲ ಎಂಬ ವಿಚಾರ 2023ರಲ್ಲಿ ಬೆಳಕಿಗೆ ಬಂದಿತ್ತು.

ಸ್ಮಿತ್ ಮತ್ತು ಜಡಾ 1997ರಲ್ಲಿ ವಿವಾಹವಾಗಿದ್ದರು. ತಮ್ಮಿಬ್ಬರ ಸಂಬಂಧದ ಬಗ್ಗೆ ಎದ್ದಿದ್ದ ಊಹಾಪೋಹಗಳ ಕುರಿತಾಗಿ ಪ್ರತಿಕ್ರಿಯಿಸಿದ್ದ ಜಡಾ, ನಾವಿನ್ನೂ ಈ ವಿಚಾರವನ್ನು ಬಗೆಹರಿಸಿಕೊಳ್ಳುವ ಪ್ರಯತ್ನದಲ್ಲಿದ್ದೇವೆ. ‘ನಾವಿಬ್ಬರೂ ಜೊತೆಯಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮಿಬ್ಬರ ನಡುವೆ ಗಾಢವಾದ ಪ್ರೀತಿಯಿದೆ, ಮತ್ತು ನಮಗೆ ಏನಿಷ್ಟವೋ ಅದನ್ನು ನಾವು ಪರಸ್ಪರ ಚರ್ಚಿಸಿ ಮಾಡಲಿದ್ದೇವೆ’ ಎಂದು ಅವರು ಪ್ರತಿಕ್ರಿಯಿಸಿದ್ದರು.

ಸ್ಮಿತ್ ಮತ್ತು ಜಡಾ ದಂಪತಿಗೆ ಇಬ್ಬರು ಮಕ್ಕಳಿದ್ದು, 24 ವರ್ಷದ ವಿಲ್ಲೋ ಮತ್ತು 26 ವರ್ಷದ ಜೇಡೆನ್ ಇಬ್ಬರು ಮಕ್ಕಳು. ವಿಲ್ ಗೆ ತನ್ನ ಹಿಂದಿನ ಪತ್ನಿ ಶಿರೀ ಝ್ಯಾಂಪಿನೋ ಅವರಲ್ಲಿ ಟ್ರೇ ಎಂಬ ಪುತ್ರನಿದ್ದು, ಆತನಿಗೀಗ 32 ವರ್ಷ.

ಸ್ಟೇಜ್ ನಲ್ಲೇ ಸಿಂಗರ್ ಗೆ ಚುಂಬಿಸಿದ ನಟ ವಿಲ್ ಸ್ಮಿತ್