Grey Divorce: ಹೆಚ್ಚುತ್ತಿದೆ ʻಗ್ರೇ ಡಿವೋರ್ಸ್ʼ..! ಇಳಿ ವಯಸ್ಸಿನ ಜೋಡಿಗಳ ಈ ನಿರ್ಧಾರಕ್ಕೆ ಕಾರಣವೇನು?
ತಮ್ಮ ಸಂಗಾತಿಯ ಜೊತೆಗೆ ಜೀವನ ಸಾಗಿಸುವುದು ಅಸಾಧ್ಯವೆನಿಸಿದಾಗ ಗ್ರೇ ವಿಚ್ಛೇದನದ ಮೊರೆ ಹೋಗುವವರು ಅನೇಕರಿದ್ದಾರೆ. ತಮ್ಮ ಸಂಗಾತಿಯಿಂದ ಪ್ರತ್ಯೇಕವಾಗಿರಲು ಬಯಸುವ ಕೆಲವು ದಂಪತಿಗಳು ಗ್ರೇ ವಿಚ್ಛೇ ದನ ಪಡೆಯುತ್ತಿದ್ದಾರೆ. ಈ ಹೆಸರು ಕೇಳಲು ವಿಭಿನ್ನ ಎನಿಸಿದರು ಗ್ರೇ ವಿಚ್ಛೇದನ ಎನ್ನುವುದು ಅನೇಕ ವರ್ಷಗಳಿಂದಲೂ ಚಾಲ್ತಿಯಲ್ಲೇ ಇದೆ. ಹಾಗಾದರೆ ಗ್ರೇ ವಿಚ್ಛೇದನ ಎಂದರೇನು? ಅದರ ಮಾನದಂಡಗಳೇನು? ಯಾರು ಈ ಗ್ರೇ ವಿಚ್ಛೇದನ ಪಡೆಯುತ್ತಾರೆ? ಇತ್ಯಾದಿ ಬಗ್ಗೆ ಮಾಹಿತಿ ಇಲ್ಲಿದೆ.


ನವದೆಹಲಿ: ಮದುವೆ ಎನ್ನುವುದು ಎರಡು ಜೀವಗಳನ್ನು ಒಂದಾಗುವ ಬೆಸುಗೆಯಾಗಿದೆ. ಸುಖ - ದುಃಖ,ನೋವು -ನಲಿವಿನಲ್ಲಿ ಜೊತೆಯಾಗಿ ಸಮನಾಗಿ ಜೀವನ ಸಾಗಿಸುತ್ತೇವೆ ಎಂಬ ಜೀವನ ಧ್ಯೇಯವನ್ನು ಪಾಲಿಸಲು ಹೊರಡುವ ಅದೆಷ್ಟೊ ದಂಪತಿಗಳು ಈ ಧ್ಯೇಯವನ್ನು ಬದಿಗಿಟ್ಟು ವಿಚ್ಛೇದನದ ಮೊರೆ ಹೋಗುತ್ತಿದ್ದಾರೆ. ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿದ್ದ ವಿಚ್ಛೇದನ ಈಗ ಪ್ರತಿ ಕುಟುಂಬದ ಸಮಸ್ಯೆಯೂ ಆಗುತ್ತಿದೆ. ಪರಸ್ಪರ ಅಸಹನೆ, ಅಪ ನಂಬಿಕೆಗಳೇ ವಿಚ್ಛೇದನಕ್ಕೆ ಮೂಲ ಕಾರಣಗಳಾಗುತ್ತಿವೆ. ಈಗ ಮದುವೆಯಾಗಿ ಮಕ್ಕಳಾಗಿ ರಿಟೈರ್‌ಮೆಂಟ್ ವಯಸ್ಸಿನಲ್ಲಿರುವ ದಂಪತಿ ಸಹ ವಿಚ್ಛೇದನದತ್ತ ಮುಖ ಮಾಡುತ್ತಿದ್ದು ಇದೊಂದು ಟ್ರೆಂಡ್ ಆಗಿ ಬಿಟ್ಟಿದೆ. ಇದನ್ನೇ ಗ್ರೇ ಡಿವೋರ್ಸ್(Grey Divorce)’ಎಂದು ಕರೆಯಲಾಗುತ್ತಿದೆ.
ತಮ್ಮ ಸಂಗಾತಿಯ ಜೊತೆಗೆ ಜೀವನ ಸಾಗಿಸುವುದು ಅಸಾಧ್ಯ ವೆನಿಸಿದಾಗ ಗ್ರೇ ವಿಚ್ಛೇದನದ ಮೊರೆ ಹೋಗುವವರು ಅನೇಕ ರಿದ್ದಾರೆ. ತಮ್ಮ ಸಂಗಾತಿಯಿಂದ ಪ್ರತ್ಯೇಕ ವಾಗಿರಲು ಬಯಸುವ ಕೆಲವು ದಂಪತಿಗಳು ಗ್ರೇ ವಿಚ್ಛೇದನ ಪಡೆಯುತ್ತಿದ್ದಾರೆ. ಈ ಹೆಸರು ಕೇಳಲು ವಿಭಿನ್ನ ಎನಿಸಿದರು ಗ್ರೇ ವಿಚ್ಛೇದನ ಎನ್ನುವುದು ಅನೇಕ ವರ್ಷಗಳಿಂದಲೂ ಚಾಲ್ತಿಯಲ್ಲೇ ಇದೆ. ಹಾಗಾದರೆ ಗ್ರೇ ವಿಚ್ಛೇದನ ಎಂದರೇನು? ಅದರ ಮಾನದಂಡಗಳೇನು?, ಯಾರು ಈ ಗ್ರೇ ವಿಚ್ಛೇದನ ಪಡೆಯುತ್ತಾರೆ? ಇತ್ಯಾದಿ ಬಗ್ಗೆ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಗ್ರೇ ವಿಚ್ಛೇದನ ನೀಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಗ್ರೇ ವಿಚ್ಛೇದನ ಎನ್ನುವುದು ಹೆಚ್ಚಾಗಿ ಸೆಲೆಬ್ರಿಟಿ ಸಾಲಿನಲ್ಲಿ ಕೇಳಿ ಬರುತ್ತಿದೆ. ಬಾಲಿವುಡ್ ನಟ ಹೃತಿಕ್ ರೋಶನ್ ಅವರು ತಮ್ಮ ಪತ್ನಿ ಸುಸೇನ್ ಖಾನ್ ಜೊತೆಗಿನ 14 ವರ್ಷದ ದಾಂಪತ್ಯ ಜೀವನವನ್ನು ಗ್ರೇ ವಿಚ್ಛೇದನ ಮೂಲಕ ಪಡೆದು ಬಳಿಕ ಸಂಪೂರ್ಣ ವಿಚ್ಛೇದನ ಪಡೆದಿದ್ದರು. ಖ್ಯಾತ ಸಂಗೀತ ನಿರ್ದೇಶಕ, ಸಂಗೀತಗಾರ ಎ. ಆರ್. ರೆಹೆಮಾನ್ ಅವರು ಪತ್ನಿ ಸೈರಾ ಬಾನು ಜೊತೆಗೆ ವೈಮನಸ್ಸು ಮೂಡಿ 29 ವರ್ಷಗಳ ದಾಂಪತ್ಯ ಜೀವನ ದಿಂದ ಬೇರ್ಪಡಲು ಗ್ರೇ ವಿಚ್ಛೇದನಕ್ಕೆ ಮೊರೆ ಹೋದ ವಿಚಾರ ನಮಗೆಲ್ಲ ತಿಳಿದೆ ಇದೆ. ಬಾಲಿವುಡ್ ನಟಿ ಮಲೈಕಾ ಅರೋರ ಅವರು ತಮ್ಮ ಪತಿ ಅರ್ಜುನ್ ಜೊತೆ ವೈವಾಹಿಕ ಸಂಬಂಧದಿಂದ ಬೇರ್ಪ ಟ್ಟಿದ್ದು ಸಹ ಗ್ರೇ ವಿಚ್ಛೇದನ ವಿಧಾನದಿಂದ. ಇದರ ಬೆನ್ನಲ್ಲೆ ಖ್ಯಾತ ಕ್ರಿಕೆಟ್ ತಾರೆ ವೀರೇಂದ್ರ ಸೆಹ್ವಾಗ್ ಅವರು ತಮ್ಮ ಪತ್ನಿ ಆರತಿಗೆ ಗ್ರೇ ವಿಚ್ಛೇದನ ನೀಡಲು ಮುಂದಾಗಿದ್ದರು. ಹೀಗಾಗಿ ಗ್ರೆ ವಿಚ್ಛೇದನ ಸಾಮಾನ್ಯ ಜನರು ಪಾಲನೆ ಮಾಡಿದರು ಕೂಡ ಸೆಲೆಬ್ರಿಟಿಗಳು ಅನುಸರಿಸುವಾಗ ಅದು ವಿಶೇಷ ಎನಿಸಿಬಿಡುವುದು ಸಹಜ.
ಗ್ರೇ ವಿಚ್ಚೇದನ ಎಂದರೇನು?
ಗ್ರೇ ವಿಚ್ಛೇದನವು 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ದಂಪತಿಗಳು ವಿಚ್ಛೇದನಕ್ಕೆ ನಿರ್ಧರಿಸುವ ವಿದ್ಯಮಾನವನ್ನು ಸೂಚಿಸುತ್ತದೆ. ಅಂದರೆ ಸುದೀರ್ಘ ಕಾಲದ ಸಂಸಾರ ಬೇರ್ಪಡುವುದು ಎಂದು ನಾವು ಅರ್ಥೈಸಿಕೊಳ್ಳಬಹುದು. ದಂಪತಿಗಳು 40ರಿಂದ 50 ವರ್ಷಗಳ ಕಾಲ ಜೊತೆಗಿದ್ದು ಬಳಿಕ ಬೇರ್ಪಡಲು ನಿರ್ಧರಿಸುವುದೇ ಗ್ರೇ ಡಿವೊರ್ಸ್. ಹೆಚ್ಚಾಗಿ ಮಧ್ಯ ವಯಸ್ಕರು ಹಾಗೂ ಹಿರಿಯ ವಯಸ್ಕರ ನಡುವೆ ಆಗುವ ವಿಚ್ಛೇದನ ಗ್ರೇ ವಿಚ್ಛೇದನ ಎಂದು ಕರೆಯಲಾಗುತ್ತದೆ. ಗ್ರೇ ವಿಚ್ಛೇದನ ಕೆಲವೊಬ್ಬರು ಬಹಿರಂಗವಾಗಿ ಡಿವೋರ್ಸ್ ಪಡೆಯದೇ ಇರಬಹುದು ಆದರೆ ಒಟ್ಟಿಗೆ ಜೀವಿಸದೇ ಇಬ್ಬರು ಪ್ರತ್ಯೇಕವಾಗಿ ತಮ್ಮ ಮಕ್ಕಳ ಜೊತೆ ಜೀವಿಸಲು ಇಷ್ಟ ಪಡುತ್ತಾರೆ.
ಹೆಚ್ಚಾಗಿ ಗ್ರೇ ವಿಚ್ಛೇದನ ಪಡೆದ ಜೋಡಿಗಳು ಮತ್ತೆ ಪುನಃ ಒಂದಾ ಗುವ ಸಾಧ್ಯತೆ ಸಹ ಇರಲಿದೆ. ಆದರೆ ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸುವವರು,ಸಂಗಾತಿಯ ಅಗತ್ಯ ತನಗಿಲ್ಲ ಎನ್ನುವವರು ಈ ಗ್ರೇ ವಿಚ್ಛೇದನ ಮೂಲಕ ಶಾಶ್ವತವಾಗಿ ದೂರಾಗುತ್ತಿರುವುದು ಸಹ ಕಾಣಬಹುದು. ದಂಪತಿಗಳಿಬ್ಬರಿಗೂ ವೃದ್ಧಾಪ್ಯದಲ್ಲಿ ಜಗಳ ಉಂಟಾಗಬಾರದು ಎಂದು ಪರಸ್ಪರ ಸಮ್ಮತಿಯಿಂದ ಗ್ರೇ ವಿಚ್ಛೇದನ ಪಡೆದು ಪ್ರತ್ಯೇಕ ಜೀವನ ನಡೆಸುತ್ತಿರುವವರ ಸಂಖ್ಯೆ ಬಹಳ ಹೆಚ್ಚಿದೆ ಎನ್ನಬಹುದು. ಪರಸ್ಪರ ಹೊಂದಾಣಿಕೆ ಸಾಧ್ಯವಿಲ್ಲದೆ ಅನೇಕ ವರ್ಷದ ದಾಂಪತ್ಯ ಗ್ರೇ ವಿಚ್ಛೇದನ ಹೆಸರಿನಲ್ಲಿ ಬೇರ್ಪಟ್ಟಾಗ ಇನ್ನು ಕೆಲವರು ಕಾನೂನಾತ್ಮಕವಾಗಿ ಕೂಡ ಸಂಪೂರ್ಣ ದೂರವಿರಲು ವಿಚ್ಛೇದನ ಪಡೆಯುತ್ತಿದ್ದಾರೆ. ವಿಚ್ಛೇದನ ಪಡೆದ ಬಳಿಕ ಜೀವನಾಂಶ ಕೂಡ ನೀಡಬೇಕಾಗುವುದು ಕಾನೂನು ಪ್ರಕಾರ ಸಮ್ಮತಿ ಇರುವ ವಿಚಾರವೇ ಆಗಿದ್ದರೂ ಪತಿ ಪತ್ನಿ ಇಬ್ಬರು ಉದ್ಯೋಗಸ್ಥರಾಗಿದ್ದಾಗ, ಪತಿ ಮೇಲೆ ಪತ್ನಿಯ ಅವಲಂಬನೆ, ಮಕ್ಕಳ ಭವಿಷ್ಯ, ಆಸ್ತಿ, ಆರೋಗ್ಯ, ಇಬ್ಬರ ವಯಸ್ಸು ಎಲ್ಲವನ್ನು ಕೂಡ ಕೂಲಂಕಷವಾಗಿ ಪರಿಗಣಿಸಲಾಗುತ್ತದೆ.
ಇದನ್ನು ಓದಿ: Life Insurance: ಜೀವ ವಿಮೆಯ ಕವರೇಜ್ ಎಷ್ಟಿರಬೇಕು ಗೊತ್ತಾ?
ಒಟ್ಟಿನಲ್ಲಿ ದೀರ್ಘಕಾಲದ ದಾಂಪತ್ಯ ಗ್ರೇ ವಿಚ್ಛೇದನ ಹೆಸರಲ್ಲಿ ಮುರಿದು ಬೀಳುತ್ತಿರುವುದು ವಿಷಾದನೀಯವಾದ ವಿಚಾರ. ಹಾಗಾಗಿ ಎಷ್ಟೇ ಸಮಸ್ಯೆ ಬಂದರೂ, ವೈಮನಸ್ಸು ಬಂದರೂ ಜೊತೆಯಲ್ಲಿ ಇದ್ದು ಜಯಿಸುವ ಮನೋಭಾವನೆ ರೂಢಿಸಿಕೊಂಡರೆ ಸಂಸಾರ ಎಂಬ ಸಾಗರವನ್ನು ದಾಟುತ್ತಾ ಸಾಗುವಲ್ಲಿ ಯಾವ ಅಡೆ ತಡೆಯಬರಲಾರದು.