Basavaraj M Yaraguppi Column: ಸರ್ ಸಿ.ವಿ.ರಾಮನ್ ನೆನಪಿನಲ್ಲಿ ವಿಜ್ಞಾನ ದಿನದ ಆಚರಣೆ
ಇಂಥವರಲ್ಲಿ ಎದ್ದು ಕಾಣುವ ಹೆಸರು ಭಾರತದ ಹೆಮ್ಮೆಯ ಸರ್ ಸಿ.ವಿ.ರಾಮನ್ ಅವ ರದ್ದು. ಅವರ ಅಪೂರ್ವ, ಅಸಾಮಾನ್ಯ ಮತ್ತು ಅಸಾಧಾರಣ ಸಾಧನೆಯ ನೆನಪಿನಲ್ಲಿ ಈ ದಿನವನ್ನು ‘ರಾಷ್ಟ್ರೀಯ ವಿಜ್ಞಾನ ದಿನ’ ಎಂಬುದಾಗಿ ಆಚರಿಸಲಾಗುತ್ತದೆ. ರಾಮನ್ ಅವರು 1928ರ ಫೆಬ್ರವರಿ 28ರಂದು ‘ರಾಮನ್ ಎಫೆಕ್ಟ್’ ಎಂದೇ ಪ್ರಸಿದ್ಧವಾದ ತಮ್ಮ ಅಧ್ಯ ಯನದ ವಿವರ ಗಳನ್ನು ಜಗತ್ತಿಗೆ ತಿಳಿಸಿಕೊಟ್ಟರು. ಹೀಗಾಗಿ ಈ ಮಹತ್ವದ ದಿನವನ್ನು ಎಂದೂ ಮರೆಯಲಾಗದು

ಅಂಕಣಕಾರ ಬಸವರಾಜ ಎಂ.ಯರಗುಪ್ಪಿ

ಇಂದಿನ ವಿಜ್ಞಾನವೇ ನಾಳಿನ ತಂತ್ರಜ್ಞಾನ’ ಎಂದು ಎಡ್ವರ್ಡ್ ಟೆಲ್ಲರ್ ಹೇಳಿದ್ದಾರೆ. ಇದು ವಿಜ್ಞಾನದೊಂದಿಗೆ ಭವಿಷ್ಯದ ಮಹತ್ವವನ್ನೂ ಸಾರುವ ಮಾತು. ವಿಜ್ಞಾನವು ಅನುಭವದ ವ್ಯವಸ್ಥಿತ ವರ್ಗೀಕರಣದ ಅಧ್ಯಯನವಾಗಿದೆ. ಭಾರತದಲ್ಲಿ ಪ್ರತಿವರ್ಷದ ಫೆಬ್ರವರಿ 28 ರಂದು ‘ರಾಷ್ಟ್ರೀಯ ವಿಜ್ಞಾನ ದಿನ’ವನ್ನಾಗಿ ಆಚರಿಸಲಾಗುತ್ತದೆ. ವಿಜ್ಞಾನದ ಬಗ್ಗೆ ಹಾಗೂ ನಮ್ಮ ಜೀವನದಲ್ಲಿ ಅದಕ್ಕಿರುವ ಮಹತ್ವದ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸು ವುದು ಈ ಆಚರಣೆಯ ಮುಖ್ಯ ಉದ್ದೇಶವಾಗಿದೆ. ಜ್ಞಾನದ ಅನ್ವೇಷಣೆ ಎಂಬ ತಪಸ್ಸಿನಲ್ಲಿ ಆವಿಷ್ಕಾರದ ಜ್ಯೋತಿಯನ್ನು ಬೆಳಗಿಸುವ ವಿಜ್ಞಾನಿಗಳ ಪಾತ್ರ ಮಹತ್ತರವಾದುದು.
ಇಂಥವರಲ್ಲಿ ಎದ್ದು ಕಾಣುವ ಹೆಸರು ಭಾರತದ ಹೆಮ್ಮೆಯ ಸರ್ ಸಿ.ವಿ.ರಾಮನ್ ಅವ ರದ್ದು. ಅವರ ಅಪೂರ್ವ, ಅಸಾಮಾನ್ಯ ಮತ್ತು ಅಸಾಧಾರಣ ಸಾಧನೆಯ ನೆನಪಿನಲ್ಲಿ ಈ ದಿನವನ್ನು ‘ರಾಷ್ಟ್ರೀಯ ವಿಜ್ಞಾನ ದಿನ’ ಎಂಬುದಾಗಿ ಆಚರಿಸಲಾಗುತ್ತದೆ. ರಾಮನ್ ಅವರು 1928ರ ಫೆಬ್ರವರಿ 28ರಂದು ‘ರಾಮನ್ ಎಫೆಕ್ಟ್’ ಎಂದೇ ಪ್ರಸಿದ್ಧವಾದ ತಮ್ಮ ಅಧ್ಯ ಯನದ ವಿವರಗಳನ್ನು ಜಗತ್ತಿಗೆ ತಿಳಿಸಿಕೊಟ್ಟರು. ಹೀಗಾಗಿ ಈ ಮಹತ್ವದ ದಿನವನ್ನು ಎಂದೂ ಮರೆಯಲಾಗದು.
ಇದನ್ನೂ ಓದಿ: Roopa Gururaj Column: ಶಿವರಾತ್ರಿಯ ಅಪರೂಪದ ಕಥೆ
ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊಟ್ಟಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಸಿ.ವಿ.ರಾಮನ್. ಚಂದ್ರಶೇಖರ ವೆಂಕಟರಾಮನ್ ಎಂಬುದು ಅವರ ಪೂರ್ಣ ಹೆಸರು. ರಾಮನ್ ಜನಿಸಿದ್ದು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ, 1888ರ ನವೆಂಬರ್ 7ರಂದು. ಅವರ ತಂದೆ ಚಂದ್ರಶೇಖರ ಅಯ್ಯರ್ ಗಣಿತ ಹಾಗೂ ಭೌತ ವಿಜ್ಞಾನದ ಶಿಕ್ಷಕರಾಗಿದ್ದರು. ಅಂದಿನ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದ ರಾಮನ್, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಸ್ಥಾನ ಗಳಿಸುವ ಮೂಲಕ, ಕಲ್ಕತ್ತಾದಲ್ಲಿ ಅಸಿಸ್ಟೆಂಟ್ ಅಕೌಂಟೆಂಟ್ ಜನರಲ್ ಆಗಿ ನೇಮಕಗೊಂಡರು.
ಸರಕಾರದಲ್ಲಿ ಉನ್ನತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ, ವಿಜ್ಞಾನ ಕ್ಷೇತ್ರ ದೆಡೆಗಿನ ಅವರ ತುಡಿತ ಹಾಗೆಯೇ ಉಳಿದಿತ್ತು. ಅದರ ಪರಿಣಾಮವಾಗಿ ತಮ್ಮ ಹುದ್ದೆ ಯನ್ನು ತ್ಯಜಿಸಿ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದ ಅವರು ಮುಂದೆ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್‌ನ ನಿರ್ದೇಶಕರಾಗಿ ಬೆಂಗಳೂರಿಗೆ ಬಂದರು. ಹಾಗೆ ಬಂದವರು ತಮ್ಮ ಕೊನೆಯ ಉಸಿರಿನ ತನಕ ವಿವಿಧ ಸಂಶೋಧನೆಗಳಲ್ಲಿ ಮಗ್ನ ರಾಗಿದ್ದರು.
ಪ್ರತಿಯೊಬ್ಬ ಸಂಶೋಧಕನೂ ವಿಜ್ಞಾನಿಯಾಗಲಾರ, ಹಾಗೆಯೇ ಪ್ರತಿಯೊಂದು ಸಂಶೋ ಧನೆ ಅಥವಾ ಅಧ್ಯಯನವು ಒಂದು ಹೊಸ ವಸ್ತುವನ್ನು ಸೃಷ್ಟಿಸುತ್ತದೆ ಎನ್ನಲಾಗದು. 19 ಮತ್ತು 20ನೇ ಶತಮಾನಗಳಲ್ಲಿ ವಿಜ್ಞಾನಿಗಳಿಗೆ ತಮ್ಮ ಸಂಶೋಧನೆಯ ಸಂದರ್ಭದಲ್ಲಿ ಎಷ್ಟೋ ಸಂಗತಿಗಳು ಗೋಚರವಾದದ್ದು ಆಕಸ್ಮಿಕವಾಗಿ. ನಾವು ನಮ್ಮ ಮಕ್ಕಳಲ್ಲಿ ಸೃಜನ ಶೀಲ ಮತ್ತು ವೈಜ್ಞಾನಿಕ ಚಿಂತನೆಯನ್ನು ಬೆಳೆಸಬೇಕಾದ್ದು ಅವರು ವಿಜ್ಞಾನಿಗಳಾಗಬೇಕು ಎಂಬ ಉದ್ದೇಶವನ್ನಿಟ್ಟುಕೊಂಡಲ್ಲ.
ವಿಜ್ಞಾನವನ್ನು ಕಲಿಯಬೇಕಾದ್ದು ಕೂಡ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗಗಳನ್ನು ಪಡೆಯಬೇಕೆಂಬ ಉದ್ದೇಶದಿಂದಲ್ಲ. ಒಂದೊಮ್ಮೆ ಹಾಗೆ ಪಡೆದರೂ ತಪ್ಪೇನಿಲ್ಲ. ಆದರೆ ವಿಜ್ಞಾನದ ಕಲಿಕೆಯ ಹಿಂದೆ ಬೇರೆ ಉದ್ದೇಶಗಳೂ ಇರಬೇಕು. ಮೂಢ ನಂಬಿಕೆಗಳನ್ನು ಪ್ರಶ್ನಿಸುವುದಕ್ಕೆ, ಕಂದಾಚಾರಗಳನ್ನು ಕಿತ್ತೊಗೆಯುವುದಕ್ಕೆ ವಿಜ್ಞಾನ ವನ್ನು ಕಲಿಯಬೇಕೆಂದರೂ ಪ್ರಾಯಶಃ ಅದು ಸರಿಯೆನಿಸಲಾರದು. ಏಕೆಂದರೆ, ವಿಜ್ಞಾನ ವನ್ನು ಓದಿದವರಲ್ಲಿ ಗಣನೀಯ ಸಂಖ್ಯೆಯ ಮಂದಿ ಅವುಗಳನ್ನು ಬಿಟ್ಟಿಲ್ಲ ಮತ್ತು ‘ಬಿಡ ದೇನೇ ಹೆಚ್ಚು ಆರಾಮವಾಗಿದ್ದೇವೆ’ ಎಂಬ ಮನೋಭಾವವನ್ನು ವಾಸ್ತವದಲ್ಲಿ ಹೊಂದಿ ದ್ದಾರೆ.
ಭಾರತದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆಗೆ ದೊಡ್ಡ ಇತಿಹಾಸವೇ ಇದೆ. ಇದು ಪ್ರಾಚೀನ ಕಾಲದಿಂದಲೂ ಭಾರತೀಯರಿಗೆ ಪರಿಚಿತವಾಗಿದ್ದ ಕ್ಷೇತ್ರವೇ ಆಗಿದೆ. ಪಾಶ್ಚಾತ್ಯರ ಸಂಪರ್ಕದಿಂದಾಗಿ ಅದರ ಹೆಸರು, ವಿಮರ್ಶೆ ಇತ್ಯಾದಿಗಳು ಬೇರೆ ಬೇರೆ ದೃಷ್ಟಿಕೋನಗಳಲ್ಲಿ ಬೆಳಕಿಗೆ ಬಂದಿರಬಹುದು.
ಆದರೆ, ಪ್ರಾಚೀನ ಭಾರತದ ಋಷಿಮುನಿಗಳ ಕಾಲದಿಂದಲೂ ನಮ್ಮಲ್ಲಿ ವಿಜ್ಞಾನವು ಮಹ ತ್ವದ ಸ್ಥಾನದಲ್ಲಿದೆ ಎಂದು ಹೇಳಬಹುದು. ಆ ಕೀರ್ತಿಯು ಈಗಲೂ ವಿಜ್ಞಾನ ಮತ್ತು ತಂತ್ರ ಜ್ಞಾನ ಸಂಬಂಧಿತ ವಿವಿಧ ಉಪಕ್ಷೇತ್ರಗಳಲ್ಲಿ ಉಳಿದುಕೊಂಡಿದೆ, ಮುಂದುವರಿದಿದೆ. ಕಳೆದ ಕೆಲವು ದಶಕಗಳಿಂದ ಭಾರತದ ವಿಜ್ಞಾನ ಕ್ಷೇತ್ರವು ಅಪಾರ ವೇಗದಿಂದ ಔನ್ನತ್ಯ ದೆಡೆಗೆ ಸಾಗುತ್ತಿದೆ. ಇದಕ್ಕೆ ಕಾರಣ, ನಮ್ಮಲ್ಲಿ ಯಥೇಚ್ಛವಾಗಿ ಲಭ್ಯವಿರುವ ಪ್ರತಿಭೆ ಮತ್ತು ಮೂಲ ಭೂತ ಸೌಕರ್ಯ.
ಖಗೋಳಶಾಸ್ತ್ರದಿಂದ ಮೊದಲ್ಗೊಂಡು ಜೀವಶಾಸ್ತ್ರ, ರಸಾಯನಶಾಸ್ತ್ರ ಹೀಗೆ ಹಲವು ವಲಯಗಳಿಗೆ ಸಂಬಂಧಿಸಿದಂತೆ ಹಲವಾರು ಸಾಧನೆಗಳು ಹೊಮ್ಮಿರುವುದು, ಅದಕ್ಕೆ ಕಾರಣೀಭೂತರಾದ ವಿಜ್ಞಾನಿಗಳು ನಮ್ಮಲ್ಲಿರುವುದು ಖರೆ. ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಆಂಡ್ ಟೆಕ್ನಾಲಜಿ ಕಮಿಷನ್ (ಎನ್‌ಸಿಎಸ್‌ಟಿಸಿ) ಫೆಬ್ರವರಿ 28ರ ದಿನವನ್ನು ರಾಷ್ಟ್ರೀ ಯ ವಿಜ್ಞಾನ ದಿನವನ್ನಾಗಿ ಆಚರಿಸಲು 1986ರಲ್ಲಿ ಮನವಿಯನ್ನು ಸಲ್ಲಿಸಿತ್ತು.
ಈ ಮನವಿಯನ್ನು ಒಪ್ಪಿದ ಅಂದಿನ ಸರಕಾರವು ಪ್ರತಿವರ್ಷದ ಫೆ.28ನ್ನು ರಾಷ್ಟ್ರೀಯ ವಿಜ್ಞಾನ ದಿನವಾಗಿ ದೇಶಾದ್ಯಂತ ಆಚರಿಸುವಂತೆ ಘೋಷಿತು. ಇದು ಮೊದಲ ಬಾರಿಗೆ ಆಚರಿಸಲ್ಪಟ್ಟಿದ್ದು 1987ರಲ್ಲಿ. ತದನಂತರ ಇಲ್ಲಿಯವರೆಗೂ ಈ ದಿನವನ್ನು ಏಕಪ್ರಕಾರ ವಾಗಿ ಆಚರಿಸಿಕೊಂಡು ಬರಲಾಗಿದೆ. ಕಲ್ಕತ್ತಾದ ‘ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್’ ಸಂಸ್ಥೆಯಲ್ಲಿ ರಾಮನ್ ಅವರು ತಮ್ಮ ಸಹೋದ್ಯೋಗಿ ಗಳೊಂದಿಗೆ ನಡೆಸಿದ ಅಧ್ಯಯನಗಳ ಫಲಶ್ರುತಿಯೇ ‘ರಾಮನ್ ಪರಿಣಾಮ’ದ ಶೋಧ.
ಇದೇ ಸಾಧನೆಗಾಗಿ ಅವರಿಗೆ 1930ನೇ ಇಸವಿಯಲ್ಲಿ ನೊಬೆಲ್ ಪುರಸ್ಕಾರ ನೀಡಿ ಗೌರವಿಸ ಲಾಯಿತು. ಇದು ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊರೆತ ಮೊದಲ ನೊಬೆಲ್ ಪುರಸ್ಕಾರ ವೂ ಹೌದು. ರಾಮನ್ ಅವರು ಒಮ್ಮೆ ಹಡಗಿನಲ್ಲಿ ಪಯಣಿಸುವಾಗ, ‘ಸಮುದ್ರ ಯಾವಾ ಗಲೂ ನೀಲಿಯಾಗಿಯೇ ಕಾಣುವುದೇಕೆ?’ ಎಂಬ ಪ್ರಶ್ನೆ ಅವರನ್ನು ಕಾಡಿತಂತೆ. ಅದು ಆಕಾಶದ ಬಣ್ಣದ ಪ್ರತಿಫಲನವೋ ಅಥವಾ ಈ ನೀಲಿಬಣ್ಣದ ಹಿಂದೆ ಬೇರೇ ನಾದರೂ ಗುಟ್ಟು ಅಡಗಿದೆಯೋ ಎಂಬುದನ್ನು ಪತ್ತೆಮಾಡಲು ಹೊರಟ ರಾಮನ್, ‘ಸೂರ್ಯನ ಬೆಳಕು ನೀರಿನಲ್ಲಿ ಚದುರಿಹೋಗುವುದೇ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ’ ಎಂಬ ವಿಷಯವನ್ನು ಕಂಡುಹಿಡಿದರು.
ತಮ್ಮ ಅಧ್ಯಯನವನ್ನು ಮುಂದುವರಿಸಲು ಇದೇ ಅಂಶವು ಮುಂದೆ ಅವರಿಗೆ ಪ್ರೇರಣೆ ಯಾಯಿತು. ಯಾವುದೇ ಪಾರದರ್ಶಕ ರಾಸಾಯನಿಕ ವಸ್ತುವಿನ ಮೂಲಕ ಬೆಳಕನ್ನು ಹಾಯಿಸಿದಾಗ, ಅದರಿಂದ ಹೊರಬರುವ ಕಿರಣಗಳು, ಅದರ ಒಳಬರುವ ಕಿರಣಗಳಿಗಿಂತ ಭಿನ್ನವಾದ ದಿಕ್ಕಿನತ್ತ ಹೊರಳಿರುವುದನ್ನು ನಾವು ನೋಡಬಹುದು. ಹೀಗೆ ಚದುರಿದ ಬಹುಪಾಲು ಕಿರಣಗಳ ಸ್ವರೂಪವು ಮೂಲಕಿರಣದಂತೆಯೇ ಇರುತ್ತದೆಯಾದರೂ, ಒಂದ ಷ್ಟು ಭಾಗದ ಕಿರಣಗಳ ತರಂಗಾಂತರವು ಮೂಲಕ್ಕಿಂತ ಬದಲಾಗಿರುತ್ತದೆ.
ಇದನ್ನು ‘ರಾಮನ್ ಪರಿಣಾಮ’ ಎಂದು ಕರೆಯಲಾಗುತ್ತದೆ. ‘ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ’ ( Science for Sustainable Future) ಎಂಬ ವಿಷಯವು ಸುಸ್ಥಿರತೆಯ ಗುರಿ ಗಳನ್ನು ಸಾಧಿಸುವಲ್ಲಿ, ಪರಿಸರದ ಸವಾಲುಗಳನ್ನು ಎದುರಿಸುವಲ್ಲಿ ಮತ್ತು ಉತ್ತಮ ಭವಿಷ್ಯಕ್ಕಾಗಿ ನಾವೀನ್ಯವನ್ನು ಬೆಳೆಸುವಲ್ಲಿ ವಿಜ್ಞಾನವು ವಹಿಸುವ ಪಾತ್ರವನ್ನು ಒತ್ತಿ ಹೇಳುತ್ತದೆ.
ಒಟ್ಟಾರೆಯಾಗಿ ಈ ಆಚರಣೆಯು ಭವಿಷ್ಯದ ಪೀಳಿಗೆಗೆ ಅವರ ಕನಸುಗಳನ್ನು ಮುಂದು ವರಿಸಲು ಭರವಸೆ ಮತ್ತು ಸೂರ್ತಿಯನ್ನು ನೀಡುತ್ತದೆ. ತನ್ಮೂಲಕ, ಸಂಶೋಧನೆ ಮತ್ತು ಆವಿಷ್ಕಾರದ ಕ್ಷೇತ್ರಕ್ಕೆ ಸಿ.ವಿ.ರಾಮನ್ ಅವರು ನೀಡಿದ ಅಸಾಧಾರಣ ಕೊಡುಗೆಯನ್ನೂ ಗೌರವಿಸಿದಂತಾಗುತ್ತದೆ. ಯಾವುದೇ ಕ್ಷೇತ್ರದ ಚಟುವಟಿಕೆಯು ಕೇವಲ ಒಂದು ಆವಿಷ್ಕಾರ ದೊಂದಿಗೆ ನಿಲ್ಲುವುದಿಲ್ಲ; ರಾಷ್ಟ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರವು ಎಲ್ಲಾ ರೀತಿ ಯಲ್ಲಿ ಪ್ರಗತಿ ಸಾಧಿಸಬೇಕೆಂದರೆ ಹಲವು ಬಗೆಯ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಕೈ ವಶ ಮಾಡಿಕೊಳ್ಳಬೇಕು. ಸಾಮಾನ್ಯ ಜನರ ಜೀವನವನ್ನು ಹಸನು ಮಾಡುವುದೇ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಯಾವುದೇ ಉಪಕ್ಷೇತ್ರದ ಮೂಲ ಉದ್ದೇಶ ವಾಗಿದೆ. ಎಲ್ಲಾ ರಾಷ್ಟ್ರಗಳೂ ಇದನ್ನು ಮನಗಂಡಾಗ ಪ್ರಪಂಚದಲ್ಲಿ ಶಾಂತಿ-ನೆಮ್ಮದಿ ನೆಲೆಸಿ ಯಾವು.
(ಲೇಖಕರು ಶಿಕ್ಷಕರು)