India Vs Pakistan: FATFನ ಗ್ರೇ ಪಟ್ಟಿಗೆ ಸೇರುತ್ತಾ ಪಾಕ್? ಆರ್ಥಿಕತೆಗೆ ದೊಡ್ಡ ಪೆಟ್ಟು ಕೊಡೋಕೆ ಮುಂದಾದ ಭಾರತ!
India Vs Pakistan: ಜಾಗತಿಕ ಆರ್ಥಿಕ ಅಪರಾಧ ತಡೆ ಸಂಸ್ಥೆಯಾದ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಮುಂದೆ ಪಾಕಿಸ್ತಾನವನ್ನು ಮತ್ತೆ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತ ತೀವ್ರ ಪ್ರಯತ್ನ ನಡೆಸಲಿದೆ ಎಂದು ನವದೆಹಲಿಯ ಉನ್ನತ ಸರ್ಕಾರಿ ಮೂಲವೊಂದು ಶುಕ್ರವಾರ ತಿಳಿಸಿದೆ. 2018ರಲ್ಲಿ ಮೊದಲ ಬಾರಿಗೆ FATFನ ಗ್ರೇ ಲಿಸ್ಟ್‌ಗೆ ಸೇರಿದ್ದ ಪಾಕಿಸ್ತಾನವು 2022ರಲ್ಲಿ ಈ ಪಟ್ಟಿಯಿಂದ ತೆಗೆಯಲ್ಪಟ್ಟಿತು. ಹೀಗಾಗಿ ಸಾಲದಾತರೊಂದಿಗೆ ತನ್ನ ಸ್ಥಿತಿ ಸುಧಾರಿಸಿತು. ಇದು ಬಿಕ್ಕಟ್ಟಿನಿಂದ ಬಳಲುತ್ತಿರುವ ಪಾಕಿಸ್ತಾನ ಆರ್ಥಿಕತೆಗೆ ನಿರ್ಣಾಯಕವಾಗಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಜಾಗತಿಕ ಆರ್ಥಿಕ ಅಪರಾಧ ತಡೆ ಸಂಸ್ಥೆಯಾದ (Global Financial Crime Watchdog) ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF) ಮುಂದೆ ಪಾಕಿಸ್ತಾನವನ್ನು (Pakistan) ಮತ್ತೆ ‘ಗ್ರೇ ಲಿಸ್ಟ್’ಗೆ (Grey List) ಸೇರಿಸಲು ಭಾರತ (India) ತೀವ್ರ ಪ್ರಯತ್ನ ನಡೆಸಲಿದೆ ಎಂದು ನವದೆಹಲಿಯ ಉನ್ನತ ಸರ್ಕಾರಿ ಮೂಲವೊಂದು ಶುಕ್ರವಾರ ತಿಳಿಸಿದೆ. 2018ರಲ್ಲಿ ಮೊದಲ ಬಾರಿಗೆ FATFನ ಗ್ರೇ ಲಿಸ್ಟ್‌ಗೆ ಸೇರಿದ್ದ ಪಾಕಿಸ್ತಾನವು 2022ರಲ್ಲಿ ಈ ಪಟ್ಟಿಯಿಂದ ತೆಗೆಯಲ್ಪಟ್ಟಿತು. ಹೀಗಾಗಿ ಸಾಲದಾತರೊಂದಿಗೆ ತನ್ನ ಸ್ಥಿತಿ ಸುಧಾರಿಸಿತು. ಇದು ಬಿಕ್ಕಟ್ಟಿನಿಂದ ಬಳಲುತ್ತಿರುವ ಪಾಕಿಸ್ತಾನ ಆರ್ಥಿಕತೆಗೆ ನಿರ್ಣಾಯಕವಾಗಿದೆ.
ಈ ಸುದ್ದಿಯನ್ನು ಓದಿ: Pahalgam Terror attack: ಭಯೋತ್ಪಾದನೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಭಾರತಕ್ಕಿದೆ ಎಂದ ಜರ್ಮನಿ
“ನಾವು ಈ ವಿಷಯವನ್ನು FATF ಮುಂದೆ ಪ್ರಸ್ತಾಪ ಮಾಡಲಿದ್ದೇವೆʼʼ ಎಂದು ಪಾಕಿಸ್ತಾನವನ್ನು ಗ್ರೇ ಲಿಸ್ಟ್‌ಗೆ ಸೇರಿಸಲು ಭಾರತ ಪಯತ್ನ ಮಾಡುತ್ತದೆಯೇ ಎಂದು ಕೇಳಿದಾಗ ಮೂಲವೊಂದು ತಿಳಿಸಿದೆ ಎಂದು ವರದಿಯಾಗಿದೆ. ಎರಡು ಪರಮಾಣು ಶಕ್ತಿ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯ ಮಧ್ಯೆ, ಭಾರತವು ಪಾಕಿಸ್ತಾನಕ್ಕೆ ವಿಶ್ವಬ್ಯಾಂಕ್‌ನಿಂದ ಮುಂಬರುವ ಧನಸಹಾಯವನ್ನು ವಿರೋಧಿಸಲಿದೆ ಎಂದು ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಗಗನಕ್ಕೇರಿದೆ. ಪಾಕಿಸ್ತಾನವು ತನ್ನ ದೇಶದಲ್ಲಿ ಆರಂಭವಾದ ಭಯೋತ್ಪಾದನೆ ವಿರುದ್ಧ ಸಾಕಷ್ಟು ಕ್ರಮ ಕೈಗೊಂಡಿಲ್ಲ ಮತ್ತು ಬಹುಪಕ್ಷೀಯ ಸಂಸ್ಥೆಗಳಿಂದ ಬಂದ ಹಣವನ್ನು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಖರೀದಿಗೆ ದುರ್ಬಳಕೆ ಮಾಡುತ್ತಿದೆ ಎಂದು ಸಾಬೀತುಪಡಿಸಲು ಭಾರತವು ವಿಶ್ವಾಸಾರ್ಹ ಸಾಕ್ಷ್ಯಗಳನ್ನು ಸಂಗ್ರಹಿಸಿದೆ ಎಂದು ಮೂಲಗಳು ತಿಳಿಸಿವೆ.
ಹಣ ವರ್ಗಾವಣೆ, ಭಯೋತ್ಪಾದಕ ಹಣಕಾಸು ಮತ್ತು ಪ್ರಸರಣ ಹಣಕಾಸು ನಿಯಂತ್ರಿಸುವಲ್ಲಿ ತಮ್ಮ ನ್ಯೂನತೆಗಳನ್ನು ಪರಿಹರಿಸಲು ವಿಫಲವಾದ ಮತ್ತು ಹೆಚ್ಚಿದ ಮೇಲ್ವಿಚಾರಣೆಯಲ್ಲಿರುವ ದೇಶಗಳನ್ನು FATF ನ ಗ್ರೇ ಲಿಸ್ಟ್‌ಗೆ ಸೇರಿಸುತ್ತದೆ. ಇದರಿಂದ ಆ ದೇಶವು ಒಪ್ಪಿಗೆಯ ಸಮಯದೊಳಗೆ ಕೊರತೆಗಳನ್ನು ಸರಿಪಡಿಸಲು ಬದ್ಧವಾಗಿರುತ್ತದೆ ಮತ್ತು ಹೆಚ್ಚಿನ ಮೇಲ್ವಿಚಾರಣೆಗೆ ಒಳಗಾಗುತ್ತದೆ.
FATF ವರ್ಷಕ್ಕೆ ಮೂರು ಬಾರಿ ಅಂದರೆ ಫೆಬ್ರವರಿ, ಜೂನ್, ಮತ್ತು ಅಕ್ಟೋಬರ್‌ನಲ್ಲಿ ಸಭೆ ಸೇರುತ್ತದೆ. ಇತ್ತೀಚೆಗೆ, ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್ (IMF) ಕಾರ್ಯಕಾರಿ ಮಂಡಳಿಯು ಮೇ 9ರಂದು ಪಾಕಿಸ್ತಾನಕ್ಕೆ 1 ಬಿಲಿಯನ್ ಡಾಲರ್ ಸಾಲವನ್ನು ಅನುಮೋದಿಸಿತು. ಈ ಸಮಯದಲ್ಲಿ ಪಾಕಿಸ್ತಾನ, ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿ ನಡೆಸಿದ ಆಪರೇಷನ್ ಸಿಂಧೂರ್ ಎಂಬ ಸೈನಿಕ ಕಾರ್ಯಾಚರಣೆಯ ನಂತರ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಲ್ಲಿ ತೊಡಗಿತ್ತು.