Viral News: ಸೋಂಕಿಗೆ ಚಿಕಿತ್ಸೆ ತೆಗೆದುಕೊಳ್ಳಲು ಆಸ್ಪತ್ರೆಗೆ ಬಂದ ವ್ಯಕ್ತಿ; ಜನನಾಂಗವನ್ನೇ ಕತ್ತರಿಸಿ ತೆಗೆದ ವೈದ್ಯ!
ವೈದ್ಯೋ ನಾರಾಯಣಃ ಹರಿ ಎನ್ನುವ ಮಾತಿದೆ. ವೈದ್ಯರನ್ನು ದೇವರು ಎಂದು ಹೇಳಲಾಗುತ್ತದೆ. ಆದರೆ ಇಲ್ಲೊಬ್ಬ ವೈದ್ಯ ಮಾಡಿದ ಯಡವಟ್ಟಿಗೆ ವ್ಯಕ್ತಿಯೊಬ್ಬ ಜೀವನ ಪರ್ಯಂತ ವ್ಯಥೆ ಪಡಬೇಕಾಗಿದೆ. ಅಸ್ಸಾಂನ ಕ್ಯಾಚರ್ ಜಿಲ್ಲೆಯ ಆಸ್ಪತ್ರೆಯಲ್ಲಿ 28 ವರ್ಷದ ವ್ಯಕ್ತಿಯ ಜನನಾಂಗಗಳನ್ನು ವೈದ್ಯರು ರೋಗಿಯ ಒಪ್ಪಿಗೆಯಿಲ್ಲದೆ ಬಯಾಪ್ಸಿ ಪರೀಕ್ಷೆಯ ಸಮಯದಲ್ಲಿ ತೆಗೆದುಹಾಕಿದ್ದಾರೆ.


ದಿಸ್ಪುರ್: ವೈದ್ಯೋ ನಾರಾಯಣಃ ಹರಿ ಎನ್ನುವ ಮಾತಿದೆ. ವೈದ್ಯರನ್ನು ದೇವರು ಎಂದು ಹೇಳಲಾಗುತ್ತದೆ. ಆದರೆ ಇಲ್ಲೊಬ್ಬ ವೈದ್ಯ ಮಾಡಿದ ಯಡವಟ್ಟಿಗೆ ವ್ಯಕ್ತಿಯೊಬ್ಬ ಜೀವನ ಪರ್ಯಂತ ವ್ಯಥೆ ಪಡಬೇಕಾಗಿದೆ. ಅಸ್ಸಾಂನ ಕ್ಯಾಚರ್ ಜಿಲ್ಲೆಯ ಆಸ್ಪತ್ರೆಯಲ್ಲಿ 28 ವರ್ಷದ ವ್ಯಕ್ತಿಯ ಜನನಾಂಗಗಳನ್ನು ವೈದ್ಯರು ರೋಗಿಯ ಒಪ್ಪಿಗೆಯಿಲ್ಲದೆ ಬಯಾಪ್ಸಿ ಪರೀಕ್ಷೆಯ ಸಮಯದಲ್ಲಿ ತೆಗೆದುಹಾಕಿದ್ದಾರೆ ಎಂದು ಆರೋಪಿಸಲಾಗಿದೆ. (Viral News) ರೋಗಿಯು ಆರಂಭದಲ್ಲಿ ಜನನಾಂಗದ ಸೋಂಕಿನ ದೂರುಗಳೊಂದಿಗೆ ಆಸ್ಪತ್ರೆಗೆ ಬಂದಿದ್ದರು.
ಮಣಿಪುರದ ಜಿರಿಬಮ್ ಜಿಲ್ಲೆಯ ಅತಿಕುರ್ ರೆಹಮಾನ್ ಎಂದು ಗುರುತಿಸಲಾದ ಈ ವ್ಯಕ್ತಿಯು ಸಿಲ್ಚಾರ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬಂದಿದ್ದರು, ಮತ್ತು ಬಯಾಪ್ಸಿ ಪರೀಕ್ಷೆಯ ನಂತರ, ವೈದ್ಯರು ತಮ್ಮ ಒಪ್ಪಿಗೆಯಿಲ್ಲದೆ ಅವರ ಜನನಾಂಗಗಳನ್ನು ತೆಗೆದುಹಾಕಿದ್ದಾರೆ. ಖಾಸಗಿ ಆಸ್ಪತ್ರೆಯ ವೈದ್ಯರು ನಿಯಮಿತ ಬಯಾಪ್ಸಿ ಸಮಯದಲ್ಲಿ ತಮ್ಮ ಒಪ್ಪಿಗೆಯಿಲ್ಲದೆ ತಮ್ಮ ಜನನಾಂಗಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದಿದ್ದಾರೆ ಎಂದು ಆರೋಪಿಸಿ ಆ ವ್ಯಕ್ತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಘಟನೆಯ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ಇದುವೆರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಂಬಂಧಪಟ್ಟ ವೈದ್ಯರು ಸಹ ಕಾಣೆಯಾಗಿದ್ದಾರೆ ಮತ್ತು ಕರೆಗಳು ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸುತ್ತಿಲ್ಲ. ಜೂನ್ 19 ರಂದು, ನನ್ನ ಜನನಾಂಗದಲ್ಲಿ ಸೋಂಕಿನ ನಂತರ ನಾನು ಸಿಲ್ಚಾರ್‌ನ ಖಾಸಗಿ ಆಸ್ಪತ್ರೆಗೆ ಹೋಗಿದ್ದೆ. ವೈದ್ಯರು ಬಯಾಪ್ಸಿ ಪರೀಕ್ಷೆಗೆ ಹೋಗುವಂತೆ ಸಲಹೆ ನೀಡಿದರು. ನನ್ನ ಬಯಾಪ್ಸಿ ಪರೀಕ್ಷೆಯ ಸಮಯದಲ್ಲಿ, ಅವರು ನನ್ನ ಒಪ್ಪಿಗೆಯಿಲ್ಲದೆ ಶಸ್ತ್ರಚಿಕಿತ್ಸೆಯ ಮೂಲಕ ನನ್ನ ಜನನಾಂಗಗಳನ್ನು ತೆಗೆದುಹಾಕಿದರು. ಶಸ್ತ್ರಚಿಕಿತ್ಸೆಯ ನಂತರ ನಾನು ಎಚ್ಚರವಾದಾಗ, ನನ್ನ ಜನನಾಂಗಗಳನ್ನು ತೆಗೆದುಹಾಕಲಾಗಿದೆ ಎಂದು ನಾನು ಕಂಡುಕೊಂಡೆ. ನಾನು ವೈದ್ಯರನ್ನು ಕೇಳಿದಾಗ, ಅವರು ಏನನ್ನೂ ಹೇಳಲಿಲ್ಲ ಎಂದು ಅತಿಕುರ್ ರೆಹಮಾನ್ ಆರೋಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Heavy Rain: ನೋಡ ನೋಡ್ತಿದ್ದಂತೆ ನದಿ ತೀರದಲ್ಲಿದ್ದ 5 ಅಂತಸ್ತಿನ ಕಟ್ಟಡ ಧರಾಶಾಹಿ- ಶಾಕಿಂಗ್ ವಿಡಿಯೊ ವೈರಲ್
ಈಗ, ನಾನು ಅಸಹಾಯಕನಾಗಿದ್ದೇನೆ ಮತ್ತು ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ನನ್ನ ಜೀವನ ಮುಗಿದಿದೆ. ನಾನು ವೈದ್ಯರನ್ನು ಸಂಪರ್ಕಿಸಲು ಹಲವಾರು ಬಾರಿ ಪ್ರಯತ್ನಿಸಿದೆ, ಆದರೆ ಅವರು ನನ್ನ ಕರೆಗಳಿಗೆ ಪ್ರತಿಕ್ರಿಯಿಸಲಿಲ್ಲ. ನಾನು ಮಾನಸಿಕ ತೊಂದರೆಯಲ್ಲಿದ್ದೇನೆ ಮತ್ತು ಶಸ್ತ್ರಚಿಕಿತ್ಸೆಯಿಂದಾಗಿ ಸಮಸ್ಯೆ ಇದೆ" ಎಂದು ವ್ಯಕ್ತಿ ತನ್ನ ಅಳಲನ್ನು ತೋಡಿಕೊಂಡಿದ್ದಾನೆ. ಈ ಪ್ರಕರಣದಲ್ಲಿ ತುರ್ತಾಗಿ ಮಧ್ಯಪ್ರವೇಶಿಸಿ ತನಗೆ ನ್ಯಾಯಕೊಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.