ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PNB Scam: ಶೀಘ್ರದಲ್ಲೇ ನೀರವ್ ಮೋದಿಯ ಸಹೋದರ ನೇಹಾಲ್ ದೀಪಕ್ ಮೋದಿ ಭಾರತಕ್ಕೆ ಹಸ್ತಾಂತರ?

ಬೆಲ್ಜಿಯಂ ಪ್ರಜೆಯಾಗಿರುವ ( Belgian national ) ನೇಹಾಲ್ ದೀಪಕ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ನಲ್ಲಿ ತನ್ನ ಹಿರಿಯ ಸಹೋದರ ಮಾಡಿದ ವಂಚನೆ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (CBI) ಕ್ಕೆ ಬೇಕಾಗಿರುವ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ. ಭಾರತೀಯ ಅಧಿಕಾರಿಗಳ ಹಸ್ತಾಂತರ ಕೋರಿಕೆಯ ಮೇರೆಗೆ ನೇಹಲ್ ದೀಪಕ್ ಮೋದಿಯನ್ನು ಬಂಧಿಸಲಾಗಿದೆ.

ನೀರವ್ ಮೋದಿಯ ಸಹೋದರ ಅಮೆರಿಕದಲ್ಲಿ ಬಂಧನ

ನವದೆಹಲಿ: ಭಾರತದಿಂದ ಹಸ್ತಾಂತರ ಕೋರಿಕೆಯ ಮೇರೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank scam) ಹಗರಣದ ಆರೋಪಿ ನೀರವ್ ಮೋದಿಯ (Nirav Modi) ಸಹೋದರ ನೇಹಲ್ ದೀಪಕ್ ಮೋದಿಯನ್ನು ( Nehal Deepak Modi) ಅಮೆರಿಕದಲ್ಲಿ (America) ಬಂಧಿಸಲಾಗಿದೆ. ಬೆಲ್ಜಿಯಂ ಪ್ರಜೆಯಾಗಿರುವ ( Belgian national ) ನೇಹಾಲ್ ದೀಪಕ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)ನಲ್ಲಿ ತನ್ನ ಹಿರಿಯ ಸಹೋದರ ಮಾಡಿದ ವಂಚನೆ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (CBI)ಕ್ಕೆ ಬೇಕಾಗಿರುವ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ. ಭಾರತೀಯ ಅಧಿಕಾರಿಗಳ ಹಸ್ತಾಂತರ ಕೋರಿಕೆಯ ಮೇರೆಗೆ ನೇಹಲ್ ದೀಪಕ್ ಮೋದಿಯನ್ನು ಬಂಧಿಸಲಾಗಿದೆ.

ಸಿಬಿಐ ಮತ್ತು ಇಡಿ ಕೋರಿಕೆಯ ಮೇರೆಗೆ ಇಂಟರ್‌ಪೋಲ್ ಹೊರಡಿಸಿದ ರೆಡ್ ಕಾರ್ನರ್ ನೋಟಿಸ್‌ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳು ದೀರ್ಘಕಾಲದ ಕಾನೂನು ಮತ್ತು ರಾಜತಾಂತ್ರಿಕ ಪ್ರಕ್ರಿಯೆಯ ಅನಂತರ ಜುಲೈ 4ರಂದು ಅಮೆರಿಕದಲ್ಲಿ ನೇಹಲ್ ಮೋದಿಯನ್ನು ಬಂಧಿಸಿದರು.

ಬಹು ಶತಕೋಟಿ ಡಾಲರ್ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಹಗರಣದಲ್ಲಿ ನೇಹಲ್ ಮೋದಿ ಭಾಗಿಯಾಗಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. 2018ರ ಆರಂಭದಲ್ಲಿ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಇದರಲ್ಲಿ ಅವರ ಹಿರಿಯ ಸಹೋದರ ನೀರವ್ ಮೋದಿ ಪ್ರಮುಖ ಆರೋಪಿಯಾಗಿದ್ದಾರೆ. ಈ ಹಗರಣದ ಬಳಿಕ ನೀರವ್ ಮೋದಿಗೆ ಪ್ರಮುಖ ಸಾಕ್ಷ್ಯಗಳನ್ನು ನಾಶಮಾಡಲು, ಸಾಕ್ಷಿಗಳನ್ನು ಬೆದರಿಸಲು ಮತ್ತು ತನಿಖೆಗೆ ಅಡ್ಡಿಪಡಿಸಲು ಸಹಾಯ ಮಾಡುವಲ್ಲಿ ನೇಹಲ್ ಮೋದಿ ಪಾತ್ರ ವಹಿಸಿದ್ದಾರೆ ಎಂದು ಭಾರತೀಯ ಅಧಿಕಾರಿಗಳು ಆರೋಪಿಸಿದ್ದಾರೆ.

ಸಹೋದರನ ಸಹಾಯದಿಂದ ಗಳಿಸಿದ ಹಣವನ್ನು ಅಕ್ರಮವಾಗಿ ವರ್ಗಾಯಿಸಿರುವ ಆರೋಪವೂ ನೇಹಲ್ ಮೋದಿ ಮೇಲಿದ್ದು, ಅವರು ಈ ಹಣವನ್ನು ನೇಹಲ್ ಶೆಲ್ ಕಂಪನಿಗಳು ಮತ್ತು ವಿದೇಶಗಳಲ್ಲಿ ನಡೆಸಲಾದ ವಹಿವಾಟುಗಳ ಮೂಲಕ ವಿತರಿಸಿದ್ದಾರೆ ಎನ್ನಲಾಗಿದೆ.

ನೇಹಲ್ ಮೋದಿ ಅವರ ಹಸ್ತಾಂತರ ಪ್ರಕರಣದ ಮುಂದಿನ ವಿಚಾರಣೆ ಜುಲೈ 17ರಂದು ನಡೆಯಲಿದೆ. ಈ ವೇಳೆ ನೆಹಾಲ್ ಮೋದಿ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದ್ದು, ಇದನ್ನು ವಿರೋಧಿಸುವುದಾಗಿ ಅಮೆರಿಕದ ಪ್ರಾಸಿಕ್ಯೂಷನ್ ಈಗಾಗಲೇ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಸುರಂಗಮಾರ್ಗ ಯೋಜನೆಯ ಸಾಧಕ-ಬಾಧಕಗಳು

ಪಿಎನ್‌ಬಿ ಹಗರಣದ ಬಳಿಕ ಏನಾಗಿದೆ?

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಸುಮಾರು 13,500 ಕೋಟಿ ರೂ.ಗಳಿಗೂ ಹೆಚ್ಚು ನಷ್ಟವನ್ನುಂಟು ಮಾಡಿರುವ ಪಿಎನ್ ಬಿ ಹಗರಣದಲ್ಲಿ ನೀರವ್ ಮೋದಿ 6,498.20 ಕೋಟಿ ರೂ.ಗಳನ್ನು ವಂಚಿಸಿದ್ದಾರೆ. ಇದರಲ್ಲಿ ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ 7,080.86 ಕೋಟಿ ರೂ. ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

2018ರ ಜನವರಿಯಲ್ಲಿ ಇವರಿಬ್ಬರು ಭಾರತದಿಂದ ಪರಾರಿಯಾಗಿದ್ದಾರೆ. 2019ರ ಮಾರ್ಚ್‌ನಲ್ಲಿ ನೀರವ್ ಮೋದಿಯನ್ನು ಇಂಲೆಂಡ್‌ನಲ್ಲಿ ಬಂಧಿಸಲಾಗಿತ್ತು. ಸದ್ಯ ಲಂಡನ್ ಜೈಲಿನಲ್ಲಿರುವ ಅವರ ಹಸ್ತಾಂತರ ಪ್ರಕ್ರಿಯೆ ಬಾಕಿ ಇದೆ. ಇನ್ನು ಮೆಹುಲ್ ಚೋಕ್ಸಿ ಆಂಟಿಗುವಾದಲ್ಲಿದ್ದು ಪೌರತ್ವಕ್ಕೆ ಸಂಬಂಧಿಸಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.