ಐಪಿಎಲ್ ಫೈನಲ್ ಗೆದ್ದ ತಂಡ, ಆಟಗಾರರಿಗೆ ಸಿಗುವ ಬಹುಮಾನ ಮೊತ್ತವೆಷ್ಟು?
IPL 2025 Prize Money: ಪ್ರತಿ ಐಪಿಎಲ್ ಸೀಸನ್ಗೆ 200 ಕೋಟಿ ರೂ. ಖರ್ಚಾಗುತ್ತದೆ. ಇದರಲ್ಲಿ ವಿಜೇತ ತಂಡಕ್ಕೆ ಸಿಗುವ ಬಹುಮಾನದ ಮೊತ್ತ 20 ಕೋಟಿ ರೂ. ರನ್ನರ್ ಅಪ್ಗೆ 13 ಕೋಟಿ, ಕ್ವಾಲಿಫೈಯರ್ 2ರಲ್ಲಿ ವಿಜೇತ ತಂಡಕ್ಕೆ 7 ಕೋಟಿ ಮತ್ತು ಎಲಿಮಿನೇಟರ್ನಲ್ಲಿ ಸೋತ ತಂಡಕ್ಕೆ 6.5 ಕೋಟಿ ನೀಡಲಾಗುತ್ತದೆ.


ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (IPL 2025 Prize Money) ಕಳೆದ 18 ವರ್ಷಗಳಿಂದ ಕ್ರಿಕೆಟ್ ಲೋಕದ ಅತ್ಯಂತ ಜನಪ್ರಿಯ ಲೀಗ್ ಎನಿಸಿಕೊಂಡಿದೆ. ಬಿಸಿಸಿಐ ನಡೆಸುತ್ತಿರುವ ಈ ಇಂಡಿಯನ್ ಪ್ರೀಮಿಯರ್ ಲೀಗ್(IPL 2025) ಪ್ರಪಂಚದಾದ್ಯಂತ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದೆ. ಸರಿ ಸುಮಾರು ಮೂರು ತಿಂಗಳ ಕಾಲ ನಡೆಯುವ ಈ ಸೀಸಸ್ಗಾಗಿ ಕ್ರಿಕೆಟ್ ಪ್ರೇಮಿಗಳು ವರ್ಷವಿಡೀ ಕಾದು ಕುಳಿತಿರುತ್ತಾರೆ. ಇದೀಗ 18ನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಮಂಗಳವಾರ ಐಕಾನಿಕ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ(Narendra Modi Stadium) ಪಂಜಾಬ್ ಕಿಂಗ್ಸ್ ಮತ್ತು ಆರ್‌ಸಿಬಿ(RCB vs PBKS) ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ವಿಜೇತರು ಎಷ್ಟು ಹಣ ಪಡೆಯುತ್ತಾರೆ ಎನ್ನುವ ಕುತೂಲಕಾರಿ ಪ್ರಶ್ನೆಗೆ ಉತ್ತರ ಇಲ್ಲಿದೆ.
ಬಹುಮಾನಕ್ಕೆ 200 ಕೋಟಿ ಖರ್ಚು
ಪ್ರತಿ ಸೀಸನ್ಗೆ 200 ಕೋಟಿ ರೂ. ಖರ್ಚಾಗುತ್ತದೆ. ಇದರಲ್ಲಿ ವಿಜೇತ ತಂಡಕ್ಕೆ ಸಿಗುವ ಬಹುಮಾನದ ಮೊತ್ತ 20 ಕೋಟಿ ರೂ. ರನ್ನರ್ ಅಪ್ಗೆ 13 ಕೋಟಿ, ಕ್ವಾಲಿಫೈಯರ್ 2ರಲ್ಲಿ ವಿಜೇತ ತಂಡಕ್ಕೆ 7 ಕೋಟಿ ಮತ್ತು ಎಲಿಮಿನೇಟರ್ನಲ್ಲಿ ಸೋತ ತಂಡಕ್ಕೆ 6.5 ಕೋಟಿ ನೀಡಲಾಗುತ್ತದೆ.
𝐖𝐄 𝐖𝐈𝐋𝐋 𝐇𝐀𝐕𝐄 𝐀 𝐍𝐄𝐖 𝐖𝐈𝐍𝐍𝐄𝐑 🏆
— IndianPremierLeague (@IPL) June 1, 2025
A Battle of Reds awaits... ❤#TATAIPL | #RCBvPBKS | #Final | #TheLastMile | @RCBTweets | @PunjabKingsIPL pic.twitter.com/SIm1llAcvm
ಇದನ್ನೂ ಓದಿ IPL 2025 Final: ಫೈನಲ್ ಪಂದ್ಯಕ್ಕೆ ಮಳೆ ಬಂದರೆ ಏನು ಗತಿ? ನಿಯಮ ಏನು ಹೇಳುತ್ತದೆ?
ತಂಡದ ಮಾಲೀಕರು ಕೂಡ ಬಹುಮಾನದ ರೂಪದಲ್ಲಿ ಆದಾಯವನ್ನೂ ಪಡೆಯುತ್ತಾರೆ. ಬಹುಮಾನದ ಅರ್ಧದಷ್ಟು ಮೊತ್ತವು ತಂಡದ ಮಾಲೀಕರಿಗೆ ಹೋಗುತ್ತದೆ. ಉಳಿದ ಅರ್ಧವನ್ನು ತಂಡದ ಸದಸ್ಯರು ಮತ್ತು ಆಟಗಾರರ ನಡುವೆ ಸಮಾನವಾಗಿ ವಿಂಗಡಿಸಲಾಗುತ್ತೆ. ಕಳೆದ ಹರಾಜಿನಲ್ಲಿ ಶ್ರೇಯಸ್ ಅಯ್ಯರ್(₹26.75) ರಿಷಭ್ ಪಂತ್(₹27) ಹಣ ಪಡೆದಿದ್ದರು. ಆದರೆ ಈ ಮತ್ತು ಐಪಿಎಲ್ ವಿಜೇತರಿಗೆ ಸಿಗುದಕ್ಕಿಂತ ಅಧಿಕ ಎನ್ನುವಾಗ ಅಚ್ಚರಿ ಮೂಡುವುದು ಸಹಜ.