'ಇದು ನನ್ನ ಮನೆ'; ಆರ್‌ಸಿಬಿ ಫ್ರಾಂಚೈಸಿಗೆ ಕೆ.ಎಲ್ ರಾಹುಲ್ ತಿರುಗೇಟು
ಚೇಸಿಂಗ್ ವೇಳೆ ಬಿರುಸಿನ ಬ್ಯಾಟಿಂಗ್ ನಡೆಸಿದ ರಾಹುಲ್ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೈದು ತವರಿನ ಅಭಿಮಾನಿಗಳನ್ನು ರಂಜಿಸಿದರು. ಆರಂಭದಲ್ಲಿ ತಾಳ್ಮೆಯುತ ಬ್ಯಾಟಿಂಗ್ ಮೂಲಕ ಇನಿಂಗ್ಸ್ ಕಟ್ಟಿದ ರಾಹುಲ್ ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ರನ್ ಪೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 53 ಎಸೆತಗಳಿಂದ ಅಜೇಯ 93 ರನ್ ಬಾರಿಸಿದರು. ಅವರ ಈ ಸೊಗಸಾದ ಬ್ಯಾಟಿಂಗ್‌ನಲ್ಲಿ 6 ಸಿಕ್ಸರ್ ಮತ್ತು 7 ಬೌಂಡರಿ ಸಿಡಿಯಿತು.

ಬೆಂಗಳೂರು: ಕೆ.ಎಲ್ ರಾಹುಲ್(KL Rahul ) ಕ್ರಿಕೆಟ್ ಮೈದಾನದಲ್ಲಿ ಶಾಂತಿಯಿಂದ ವರ್ತಿಸುತ್ತಾರೆ. ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಅಥವಾ ನಾಯಕನಾಗೇ ಇರಲಿ ಶಾಂತಚಿತ್ತ ಅವರ ಮುಖ್ಯ ಗುಣ. ಅತ್ಯಂತ ಶಾಂತ ಸ್ವಭಾವದ ಆಟಗಾರ. ಆದರೆ ಗುರುವಾರ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ(RCB vs DC) ತಂಡ ಗೆಲುವು ಸಾಧಿಸುತ್ತಿದ್ದಂತೆ ರಾಹುಲ್ ಅಚ್ಚರಿ ಎಂಬಂತೆ ತಾಳ್ಮೆ ಕಳೆದುಕೊಂಡು ಸಂಭ್ರಮಾಚರಣೆ ಮಾಡಿದರು. ಈ ಮೂಲಕ ಆರ್‌ಸಿಬಿ(RCB) ಫ್ರಾಂಚೈಸಿಗೆ ತಕ್ಕ ತಿರುಗೇಟು ನೀಡಿದರು.
ಹೌದು, ಐಪಿಎಲ್ 18ನೇ ಆವೃತ್ತಿಗು ಮುನ್ನವೇ ಕೆ.ಎಲ್. ರಾಹುಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಸೇರಲಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳಿಬಂದಿತ್ತು. ಮೂಲತಃ ಕನ್ನಡಿಗರಾಗಿರುವ ರಾಹುಲ್ಗೆ ಆರ್‌ಸಿಬಿ ಪರ ಆಡುವ ಆಸೆ ಇದೆ ಎಂದು ಸ್ವತಃ ರಾಹುಲ್ ಕೂಡ ಹೇಳಿದ್ದರು. ಆದರೆ ಹರಾಜಿನಲ್ಲಿ ಆರ್‌ಸಿಬಿ ಅವರನ್ನು ಖರೀದಿ ಮಾಡಲಿಲ್ಲ.
ತವರಿನ ತಂಡ ಕಡೆಗಣಿಸಿದ ನೋವಿನಲ್ಲಿದ್ದ ರಾಹುಲ್, ಆರ್‌ಸಿಬಿ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ತಮ್ಮ ಸೇಡನ್ನು ತೀರಿಸಿಕೊಂಡಿದ್ದಾರೆ. ಡೆಲ್ಲಿಗೆ ಗೆಲುವಿನ ರನ್ ಬಾರಿಸುತ್ತಿದ್ದಂತೆ, ಇದು ನನ್ನ ಮನೆ. ಇಲ್ಲಿ ನಾನೇ ಕಿಂಗ್. ಎದುರಾಳಿ ಯಾರೇ ಇದ್ದರೂ ಕೂಡ ಬಿಡಲಾರೆ ಎನ್ನುವಂತೆ ಸನ್ನೆ ಮಾಡಿ ಸಂಭ್ರಮಾಚರಣೆ ಮಾಡುವ ಮೂಲಕ ಆರ್‌ಸಿಬಿ ಫ್ರಾಂಚೈಸಿ ವಿರುದ್ಧ ಸೇಡು ತೀರಿಸಿಕೊಂಡರು. ರಾಹುಲ್ ಸಂಭ್ರಮಾಚರಣೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
KL Rahul said, "Chinnaswamy Stadium is still my home"#KLRahul pic.twitter.com/gSTkBtszY8
— SteveNani49✨🤸 (@_eyesonTalkie_) April 10, 2025
ಚೇಸಿಂಗ್ ವೇಳೆ ಬಿರುಸಿನ ಬ್ಯಾಟಿಂಗ್ ನಡೆಸಿದ ರಾಹುಲ್ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೈದು ತವರಿನ ಅಭಿಮಾನಿಗಳನ್ನು ರಂಜಿಸಿದರು. ಆರಂಭದಲ್ಲಿ ತಾಳ್ಮೆಯುತ ಬ್ಯಾಟಿಂಗ್ ಮೂಲಕ ಇನಿಂಗ್ಸ್ ಕಟ್ಟಿದ ರಾಹುಲ್ ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ರನ್ ಪೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 53 ಎಸೆತಗಳಿಂದ ಅಜೇಯ 93 ರನ್ ಬಾರಿಸಿದರು. ಅವರ ಈ ಸೊಗಸಾದ ಬ್ಯಾಟಿಂಗ್‌ನಲ್ಲಿ 6 ಸಿಕ್ಸರ್ ಮತ್ತು 7 ಬೌಂಡರಿ ಸಿಡಿಯಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ಉತ್ತಮ ಆರಂಭದ ಬಳಿಕ ನಾಟಕೀಯ ಕುಸಿತ ಕಂಡು 7 ವಿಕೆಟ್‌ಗೆ 163 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ 17.5 ಓವರ್‌ಗಳಲ್ಲಿ 4 ವಿಕೆಟ್‌ಗೆ 169 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.
ಇದನ್ನೂ ಓದಿ IPL 2025: ಐಪಿಎಲ್ನಲ್ಲಿ ಅನಪೇಕ್ಷಿತ ದಾಖಲೆ ಬರೆದ ಆರ್‌ಸಿಬಿ
ರಾಹುಲ್ ಈ ಬಾರಿ ಆಡಿದ ಮೂರು ಪಂದ್ಯಗಳಲ್ಲಿಯೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಡೆಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.