ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮುಂಬೈ ಇಂಡಿಯನ್ಸ್ ಆಟಗಾರನಿಗೆ ಒಂದು ವರ್ಷ ನಿಷೇಧ ಹೇರಿದ ಪಾಕ್‌ ಕ್ರಿಕೆಟ್ ಮಂಡಳಿ!

Corbin Bosch: ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಕೆಲ ದಿನಗಳ ಹಿಂದೆ ಕಾರ್ಬಿನ್ ಬಾಷ್‌ಗೆ ಲೀಗಲ್‌ ನೋಟಿಸ್ ನೀಡಿತ್ತು. ಆದರೆ ಕಾರ್ಬಿನ್ ಬಾಷ್ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.

ಐಪಿಎಲ್‌ ಆಡಿದ ಆಟಗಾರನಿಗೆ ಒಂದು ವರ್ಷ ನಿಷೇಧ ಹೇರಿದ ಪಾಕ್‌!

Profile Abhilash BC Apr 11, 2025 12:14 PM

ಕರಾಚಿ: ಪಾಕಿಸ್ತಾನ ಸೂಪರ್ ಲೀಗ್ (PSL) ಟೂರ್ನಿಯಿಂದ ಹಿಂದೆ ಸರಿದು ಐಪಿಎಲ್ ಆಡಲು ಭಾರತಕ್ಕೆ ಬಂದ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕಾರ್ಬಿನ್ ಬಾಷ್(Corbin Bosch) ಅವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಒಂದು ವರ್ಷದ ನಿಷೇಧ ಹೇರಿದೆ. ಕಾರ್ಬಿನ್ ಬಾಷ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಆಟಗಾರನಾಗಿದ್ದಾರೆ. ಪಿಎಸ್‌ನಲ್ಲಿ ಅವರು ಪೇಶಾವರ ಝಾಲ್ಮಿ ತಂಡದ ಆಟಗಾರನಾಗಿದ್ದರು. ಗಾಯಗೊಂಡು ಐಪಿಎಲ್‌ನಿಂದ ಹೊರಬಿದ್ದಿದ್ದ ಲಿಜಾಡ್‌ ವಿಲಿಯಮ್ಸ್‌ ಸ್ಥಾನಕ್ಕೆ ಬದಲಿ ಆಟಗಾರನಾಗಿ ಮುಂಬೈ ಇಂಡಿಯನ್ಸ್‌(Mumbai Indians) ತಂಡ ಸೇರಿದ್ದರು.

ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಕೆಲ ದಿನಗಳ ಹಿಂದೆ ಕಾರ್ಬಿನ್ ಬಾಷ್‌ಗೆ ಲೀಗಲ್‌ ನೋಟಿಸ್ ನೀಡಿತ್ತು. ಇದೀಗ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಪಿಸಿಬಿಯ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಹೇಳಿಕೆಯಲ್ಲಿ, ಬಾಷ್ ಪಿಎಸ್‌ಎಲ್‌ನಿಂದ ಹಿಂದೆ ಸರಿದಿದ್ದಕ್ಕಾಗಿ 2026ರ 11ನೇ ಆವೃತ್ತಿಯಲ್ಲಿ ಭಾಗವಹಿಸದಂತೆ ಅವರಿಗೆ ನಿಷೇಧ ಹೇರಲಾಗುವುದು ಎಂದು ಹೇಳಲಾಗಿದೆ.

ಇದನ್ನೂ ಓದಿ IPL 2025: ಐಪಿಎಲ್​ನಲ್ಲಿ ಅನಪೇಕ್ಷಿತ ದಾಖಲೆ ಬರೆದ ಆರ್‌ಸಿಬಿ

'ಪೇಶಾವರ್ ಝಲ್ಮಿಯ ನಿಷ್ಠಾವಂತ ಅಭಿಮಾನಿಗಳಿಗೆ, ನಿಮ್ಮನ್ನು ನಿರಾಸೆಗೊಳಿಸಿದ್ದಕ್ಕಾಗಿ ನಾನು ನಿಜವಾಗಿಯೂ ವಿಷಾದಿಸುತ್ತೇನೆ. ನನ್ನ ನಡೆಗೆ ನಾನು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ದಂಡ ಮತ್ತು ಪಿಎಸ್ಎಲ್‌ನಿಂದ ಒಂದು ವರ್ಷದ ನಿಷೇಧ ಸೇರಿದಂತೆ ಎಲ್ಲ ರೀತಿಯ ಪರಿಣಾಮಗಳನ್ನು ಸ್ವೀಕರಿಸುತ್ತೇನೆ. ಭವಿಷ್ಯದಲ್ಲಿ ಪಿಎಸ್ಎಲ್‌ಗೆ ಮರಳಲು ಆಶಿಸುತ್ತೇನೆ' ಎಂದು ಬಾಷ್ ಪಿಸಿಬಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.



30 ವರ್ಷದ ಕಾರ್ಬಿನ್‌ ಬಾಶ್‌ ದಕ್ಷಿಣ ಆಫ್ರಿಕಾದ ಟಿ20 ಲೀಗ್‌ನಲ್ಲಿ ಮುಂಬೈ ಫ್ರಾಂಚೈಸಿಯ ಎಂಐ ಕೇಪ್​ಟೌನ್ ತಂಡದ ಆಟಗಾರನಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅವರು ಇದುವರೆಗೆ 59 ವಿಕೆಟ್‌ ಕಿತ್ತಿದ್ದಾರೆ.