ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮದುವೆ ಮನೆಯಲ್ಲಿ ರೊಟ್ಟಿ ತಯಾರಿಸಿ ಎಂಜಲು ಉಗಿದ ನೀಚ; ವಿಡಿಯೊ ವೈರಲ್

ಉತ್ತರಪ್ರದೇಶದ ಗಾಜಿಯಾಬಾದ್‍ ನಗರದ ಭೋಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಿಂದೂ ಮದುವೆಯಲ್ಲಿ ಅಡುಗೆ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿ ರೊಟ್ಟಿ ಮೇಲೆ ಉಗುಳುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಈ ಘಟನೆ ಪೊಲೀಸರ ಗಮನಕ್ಕೆ ಬಂದಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮದುವೆ ಮನೆ ಊಟ ತಯಾರಿಸುವಾಗ ಈತ ಮಾಡಿದ್ದೇನು?

Profile pavithra Mar 6, 2025 3:57 PM

ಲಖನೌ: ಉತ್ತರಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದ ಮದುವೆಯಲ್ಲಿ ಅಡುಗೆಯವನೊಬ್ಬ ರೊಟ್ಟಿ ಮೇಲೆ ಉಗುಳುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಂಡಿದೆ. ನಗರದ ಭೋಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆದ ಈ ವಿಡಿಯೊ ನೋಡಿ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಸಮಾರಂಭವೊಂದರಲ್ಲಿ ಒಬ್ಬ ವ್ಯಕ್ತಿಯು ರೋಟಿಯ ಮೇಲೆ ಎಂಜಲು ಉಗುಳುವುದು ಸೆರೆಯಾಗಿದೆ. ಇದನ್ನು ಅಲ್ಲಿದ್ದವರು ತಮ್ಮ ಮೊಬೈಲ್‍ನಲ್ಲಿ ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೊ ವೈರಲ್ ಆದ ನಂತರ, ಈ ಘಟನೆ ಪೊಲೀಸರ ಗಮನಕ್ಕೆ ಬಂದಿದೆ.



ಈ ಘಟನೆಯ ದೃಶ್ಯವನ್ನು ಕೂಲಂಕುಷವಾಗಿ ಪರಿಶೀಲಿಸಿದ ಪೊಲೀಸರು ಗಾಜಿಯಾಬಾದ್‍ ನಗರದ ಭೋಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ಖಚಿತಪಡಿಸಿದ್ದಾರೆ. ಅಧಿಕಾರಿಗಳು ತಕ್ಷಣ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಫರ್ಮಾನ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ವಿವರವಾದ ತನಿಖೆಯನ್ನು ಶುರುಮಾಡಿದ್ದಾರೆ. ಸಾಮಾನ್ಯವಾಗಿ ಮುಸ್ಲಿಂ ಧರ್ಮದಲ್ಲಿ ನಡೆಯುವ ಸಮಾರಂಭಗಳಲ್ಲಿ ತಯಾರಿಸುವ ಊಟಕ್ಕೆ ಅವರ ಧರ್ಮಗುರುಗಳು ಎಂಜಲು ಉಗುಳುವ ಸಂಪ್ರದಾಯವಿದೆ. ನಂತರ ಅದನ್ನು ಅವರು ದೇವರ ಪ್ರಸಾದವೆಂದು ಅಸಹ್ಯಪಟ್ಟುಕೊಳ್ಳದೇ ಸೇವಿಸುತ್ತಾರೆ ಎನ್ನಲಾಗಿದೆ. ಆದರೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದ ಈ ಸಮಾರಂಭವು ಹಿಂದೂ ಕುಟುಂಬದ ಮದುವೆಯ ಸಮಾರಂಭವಾಗಿದ್ದು, ವಧುವಿನ ತಂದೆ ಮದುವೆಗೆ ಅಡುಗೆ ಮಾಡಲು ಮುಸ್ಲಿಂ ಅಡುಗೆಯವನನ್ನು ನೇಮಿಸಿಕೊಂಡಿದ್ದರು.

ಆಹಾರದ ಮೇಲೆ ಎಂಜಲು ಉಗುಳುವ ಇಂತಹ ಘಟನೆ ನಡೆದಿದ್ದು ಇದೇ ಮೊದಲಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಬಾರಾಬಂಕಿಯ ರಸ್ತೆಬದಿಯ ಡಾಬಾದಲ್ಲಿ ರೊಟ್ಟಿಗಳನ್ನು ತಯಾರಿಸುವಾಗ ವ್ಯಕ್ತಿಯೊಬ್ಬ ರೊಟ್ಟಿಗಳ ಮೇಲೆ ಉಗುಳುತ್ತಿದ್ದ ಘಟನೆ ಬೆಳಕಿಗೆ ಬಂದಿತ್ತು. ಅಲ್ಲಿಗೆ ಬಂದಿದ್ದ ಗ್ರಾಹಕನೊಬ್ಬ ಅದನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಇದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿತ್ತು.

ವೈರಲ್ ಆದ ವಿಡಿಯೊದಲ್ಲಿ ಆತ ಅಡುಗೆ ಮಾಡಲು ತಂದೂರಿ ಒಲೆಯಲ್ಲಿ ರೊಟ್ಟಿ ಇಡುವ ಮೊದಲು ಪ್ರತಿ ಬಾರಿಯೂ ಉಗುಳುತ್ತಿರುವುದು ಸೆರೆಯಾಗಿತ್ತು. ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಕೂಡಲೇ, ಅಧಿಕಾರಿಗಳು ತ್ವರಿತ ಕ್ರಮ ಕೈಗೊಂಡು ಡಾಬಾವನ್ನು ಸೀಲ್ ಮಾಡಿದ್ದರು ಮತ್ತು ರೊಟ್ಟಿಗಳಿಗೆ ಎಂಜಲು ಉಗಿದು ತಯಾರಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.

ಈ ಸುದ್ದಿಯನ್ನೂ ಓದಿ:Viral News: ರೋಟಿ ನೀಡುವುದು ತಡವಾಯಿತೆಂದು ಮದುವೆ ಮುರಿದುಕೊಂಡ ವರ; ಠಾಣೆ ಮೆಟ್ಟಿಲೇರಿದ ವಧು!

ಉತ್ತರಪ್ರದೇಶದ ಚಂದೌಲಿ ಜಿಲ್ಲೆಯಲ್ಲಿರುವ ಹಮಿದ್‌ಪುರ್ ಗ್ರಾಮದಲ್ಲಿ ತನ್ನ ಕಡೆಯವರಿಗೆ ಮದುವೆ ಊಟ ಹಾಕುವುದು ತಡವಾಯಿತೆಂದು ಆರೋಪಿಸಿ ವರ ಮದುವೆ ಮನೆಯಿಂದಲೇ ಹೊರ ನಡೆದು ಮದುವೆಯನ್ನೇ ಮುರಿದುಕೊಂಡ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇದೀಗ ವಧು ಪೊಲೀಸ್ ಠಾಣೆಯಲ್ಲಿ ವರನ ವಿರುದ್ಧ ದೂರು ದಾಖಲಿಸಿದ್ದಾಳೆ. ರೊಟ್ಟಿ ಬಡಿಸುವುದು ತಡವಾಯಿತೆಂದು ವರನ ಕಡೆಯವರು ಗಲಾಟೆ ಎಬ್ಬಿಸಿದ್ದಾರೆ.