Viral Video: ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ವಿಕೃತ ಕಾಮಿ ಅರೆಸ್ಟ್- ಸಿಸಿಟಿವಿಯಲ್ಲಿ ಕೃತ್ಯದ ದೃಶ್ಯಾವಳಿ ಸೆರೆ!
ವಿಕೃತ ಕಾಮಿಯೋರ್ವ ಮನೆಯೊಂದರ ಮುಂದೆ ಒಣಗಲು ಹಾಕಿದ್ದ ಒಳ ಉಡುಪುಗಳನ್ನು ಕಳ್ಳತನ ಮಾಡಲು ಯತ್ನಿಸಿದ್ದಾನೆ. ಮನೆಯ ಮುಂದೆ ಒಗೆದು ಹಾಕಿದ್ದ ಮಹಿಳೆಯ ಒಳ ಉಡುಪನ್ನು ತನ್ನ ಪ್ಯಾಂಟ್ನ ಒಳಗೆ ಹಾಕಿ ಕೊಂಡಿದ್ದಾನೆ. ಬಳಿಕ ಸಿಸಿ ಕ್ಯಾಮರಾ ಅಳವಡಿಸಿದ್ದನ್ನು ಕಂಡು ಒಳ ಉಡುಪನ್ನು ಇದ್ದ ಜಾಗದಲ್ಲೇ ಇರಿಸುತ್ತಾನೆ. ಸದ್ಯ ಈ ದೃಶ್ಯ ನೋಡಿದ ನೆಟ್ಟಿಗರು ಈತನ ಅಸಹ್ಯಕರ ವರ್ತನೆಗೆ ಗರಂ ಆಗಿದ್ದಾರೆ.
ನವದೆಹಲಿ: ಮನೆಗಳಿಗೆ ನುಗ್ಗಿ ಹಣ, ಚಿನ್ನ ಹಾಗೂ ಇತರ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡುವ ಖದೀಮರನ್ನು ನೀವು ನೋಡಿರ್ತೀರಿ, ಆದರೆ ಇಲ್ಲೊಬ್ಬ ಖದೀಮ, ಮನೆಯೊಂದರಲ್ಲಿ ಒಣಹಾಕಿದ್ದ ಮಹಿಳೆಯ ಒಳ ಉಡುಪನ್ನು ಕಳ್ಳತನ ಮಾಡುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಮಹಿಳೆಯ ಒಳ ಉಡುಪುಗಳನ್ನು ಕದ್ದ 27 ವರ್ಷದ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಈ ಅಸಹ್ಯಕರ ದೃಶ್ಯ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗುತ್ತಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಕೃತಕಾಮಿಯೋರ್ವ ಮನೆಯೊಂದರ ಮುಂದೆ ಒಣಗಲು ಹಾಕಿದ್ದ ಒಳ ಉಡುಪುಗಳನ್ನು ಕಳ್ಳತನ ಮಾಡಲು ಯತ್ನಿಸಿದ್ದಾನೆ. ಮನೆಯ ಮುಂದೆ ಒಗೆದು ಹಾಕಿದ್ದ ಮಹಿಳೆಯ ಒಳ ಉಡುಪನ್ನು ತನ್ನ ಪ್ಯಾಂಟ್ನ ಒಳಗೆ ಹಾಕಿಕೊಂಡಿದ್ದಾನೆ. ಬಳಿಕ ಸಿಸಿ ಕ್ಯಾಮರಾ ಅಳವಡಿಸಿದ್ದನ್ನು ಕಂಡು ಒಳ ಉಡುಪನ್ನು ಇದ್ದ ಜಾಗದಲ್ಲೇ ಇರಿಸುತ್ತಾನೆ. ಸದ್ಯ ಈ ದೃಶ್ಯ ನೋಡಿದ ನೆಟ್ಟಿಗರು ಈತನ ಅಸಹ್ಯಕರ ವರ್ತನೆಗೆ ಗರಂ ಆಗಿದ್ದಾರೆ.
ವಿಡಿಯೊದಲ್ಲಿ ಯುವಕನು ಒಣಗಿಸಿದ ಒಳ ಉಡುಪನ್ನು ಪ್ಯಾಂಟ್ ಒಳಗೆ ಇಟ್ಟುಕೊಂಡು ತೆರಳುತ್ತಿರುವುದು ವಿಡಿಯೊದಲ್ಲಿ ನೋಡಬಹುದು. ಹಿಂತಿರುಗಿ ಹೋಗುವಾಗ, ಆತ ಸಿಸಿ ಕ್ಯಾಮರಾವನ್ನು ಗಮನಿಸುತ್ತಾನೆ. ಆ ಬಳಿಕ ಒಳ ಉಡುಪನ್ನು ಅಲ್ಲೇ ಹಾಕಿಬರುವ ದೃಶ್ಯವನ್ನು ಕಾಣಬಹುದು. ಕೆಲವು ದಿನಗಳಿಂದ ಮಹಿಳೆಯ ಒಳ ಉಡುಪು ಕಳ್ಳತನವಾಗುತ್ತಿತ್ತು. ಇದರಿಂದ ರೋಸಿ ಹೋಗಿದ್ದ ಮಹಿಳೆ ತಮ್ಮ ಮನೆಗಳಿಗೆ ಸಿಸಿ ಕ್ಯಾಮರಾ ಅಳವಡಿಸಿದ್ದರು. ಈ ಮೊದಲು ಕ್ಯಾಮರಾ ಇರುವುದನ್ನು ಗಮನಿಸಿದ ವ್ಯಕ್ತಿ ಒಣಗಲು ಹಾಕಿದ್ದ ಒಳ ಉಡುಪುಗಳನ್ನು ಕಳ್ಳತನ ಮಾಡಲು ಮುಂದಾಗಿದ್ದಾನೆ. ಬಳಿಕ ಸಿಸಿ ಕ್ಯಾಮರಾ ಗಮನಿಸಿ ಒಳ ಉಡುಪುಗಳನ್ನು ಅಲ್ಲೇ ಇಡುವ ದೃಶ್ಯ ಸೆರೆಯಾಗಿದೆ.
ಸಿಂಗಾಪುರದ ಫೇಸ್‌ಬುಕ್ ಬಳಕೆದಾರ ಎಲಿವಿಲಿಮ್ ಈ ವಿಡಿಯೊ ಹಂಚಿಕೊಂಡಿದ್ದು ಈ ಘಟನೆಯು ತನಗೆ ಅಸಹ್ಯ ತಂದಿದೆ ಎಂದು ಬರೆದುಕೊಂಡಿದ್ದಾರೆ. ವಿಡಿಯೊದಲ್ಲಿ ಕದ್ದ ಒಳ ಉಡುಪುಗಳೊಂದಿಗೆ ಕಾಮುಕ ತೆರಳುತ್ತಿರುವ ದೃಶ್ಯ ಸೆರೆ ಆಗಿದ್ದು ವಿಡಿಯೊ ನೋಡಿದ ನೆಟ್ಟಿಗರು ನಾನಾ ಬಗೆಯಲ್ಲಿ ಪ್ರತಿಕ್ರಿಯೆ ನೀಡಿದ್ದು ಇಂತಹ ಅಸಹ್ಯಕರ ಕೃತ್ಯ ಮಾಡಿದ ಕಾಮುಕನಿಗೆ ಸರಿಯಾದ ಶಿಕ್ಷೆ ಯಾಗಬೇಕೆಂದು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನು ಓದಿ: Viral News: ಸರ್ಪೈಸ್ ಪ್ರೊಪೋಸ್‌ಗಾಗಿ ಪ್ರಿಯತಮ ಕೇಕ್ನೊಳಗೆ ಇಟ್ಟಿದ್ದ ಉಂಗುರವನ್ನೂ ತಿಂದ ಪ್ರೇಯಸಿ
ಈ ಸಂಬಂಧ ಪೊಲೀಸರು ಯುವಕನನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ. ಇದೇ ರೀತಿಯ ಪ್ರಕರಣವು ಈ ಹಿಂದೆ ಮೀರತ್‌ನಲ್ಲಿ ಬೆಳಕಿಗೆ ಬಂದಿತ್ತು. ಒಣಗಲು ಹಾಕಲಾಗಿದ್ದ ಮಹಿಳೆಯರ ಒಳ ಉಡುಪು ಗಳನ್ನು ಇಬ್ಬರು ಯುವಕರು ಕದಿಯುತ್ತಿದ್ದ ದೃಶ್ಯ ವೈರಲ್ ಆಗಿತ್ತು. ಅದೇ ರೀತಿ ಬೆಂಗಳೂರಿನ ಲಗ್ಗೆರೆ ಬಳಿಯ ವಿಧಾನಸೌಧ ಲೇಔಟ್ ಬಳಿ ಇಂತಹದ್ದೇ ಘಟನೆ ನಡೆದಿದ್ದು ಅಪರಿಚಿತ ವ್ಯಕ್ತಿಯೋರ್ವ ಟೆರೇಸ್ ಮೇಲೆ ಒಣ ಹಾಕಿದ್ದ ಮಹಿಳೆಯರ ಒಳ ಉಡುಪು ಕದ್ದ ಘಟನೆಯು ಸುದ್ದಿಯಾಗಿತ್ತು.