ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಮದುವೆಯಾಗಿ ಐದೇ ದಿನಕ್ಕೆ ಹಣ ಒಡವೆ ದೋಚಿ ಖತರ್ನಾಕ್‌ ವಧು ಎಸ್ಕೇಪ್‌

ಉತ್ತರ ಪ್ರದೇಶದ ಗೊಂಡಾದ ಬಸೋಲಿ ಗ್ರಾಮದಲ್ಲಿ ನವವಿವಾಹಿತ ಮಹಿಳೆಯೊಬ್ಬಳು ಮದುವೆಯಾಗಿ ಐದೇ ದಿನಗಳಲ್ಲಿ ತನ್ನ ಗಂಡನ ಮನೆಯಿಂದ 3.15 ಲಕ್ಷ ರೂ. ನಗದು ಮತ್ತು ಆಭರಣಗಳೊಂದಿಗೆ ಪರಾರಿಯಾಗಿದ್ದಾಳೆ. ಈ ಘಟನೆಯ ಬಗ್ಗೆ ವರನ ಕುಟುಂಬವು ಪೊಲೀಸರಿಗೆ ಲಿಖಿತ ದೂರು ನೀಡಿದ್ದು, ಅಧಿಕಾರಿಗಳು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮದುವೆಯಾಗಿ ಐದೇ ದಿನಕ್ಕೆ ಹಣ ಒಡವೆ ದೋಚಿ ವಧು ಎಸ್ಕೇಪ್‌

ಸಾಂದರ್ಭಿಕ ಚಿತ್ರ.

Profile pavithra Mar 5, 2025 6:45 PM

ಲಖನೌ: ಕಳ್ಳತನ ಮಾಡಲು ಕೆಲವರು ನಾನಾ ರೀತಿಯ ದಾರಿ ಹುಡುಕುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಕಳ್ಳತನಕ್ಕಾಗಿ ಮದುವೆಯನ್ನೇ ದಾಳವನ್ನಾಗಿಸಿಕೊಂಡಿದ್ದಾಳೆ. ಉತ್ತರ ಪ್ರದೇಶದ ಗೊಂಡಾದಲ್ಲಿ ನವವಿವಾಹಿತ ಮಹಿಳೆಯೊಬ್ಬಳು ಮದುವೆಯಾಗಿ ಐದು ದಿನಗಳ ನಂತರ ಗಂಡನ ಮನೆಯಿಂದ ನಗದು ಮತ್ತು ಆಭರಣಗಳೊಂದಿಗೆ ಪರಾರಿಯಾಗಿದ್ದಾಳೆ. ಇದೀಗ ಈ ಸುದ್ದಿ ಎಲ್ಲೆಡೆ ವೈರಲ್‌ (Viral News) ಆಗಿದೆ. ಬಸೋಲಿ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ, ದರೋಡೆ ನಡೆದ ರಾತ್ರಿ ಮಹಿಳೆ ತನ್ನ ಅತ್ತೆ ಮಾವನಿಗೆ ಚಹಾ ನೀಡಿದ್ದಾಳೆ. ಮರುದಿನ ಬೆಳಗ್ಗೆ, ಮನೆಯಿಂದ 3.15 ಲಕ್ಷ ರೂ. ನಗದು ಮತ್ತು ಚಿನ್ನ ಮತ್ತು ಬೆಳ್ಳಿ ಆಭರಣಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಅದೂ ಅಲ್ಲದೇ ಯಾವುದೇ ಕಾರಣ ಇಲ್ಲದೆ ಮನೆಯಿಂದ ಎಸ್ಕೇಪ್‌ ಆಗಿದ್ದ ವಧುವಿನ ಮೇಲೆ ಮನೆಯವರಿಗೆ ಅನುಮಾನ ಮೂಡಿದೆ. ಹೀಗಾಗಿ ವರನ ಕುಟುಂಬವು ಪೊಲೀಸರಿಗೆ ಲಿಖಿತ ದೂರು ನೀಡಿದ್ದು, ಮದುವೆಯ ಸೋಗಿನಲ್ಲಿ ಮಹಿಳೆ ಕಳ್ಳತನ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ.

ಅಧಿಕಾರಿಗಳು ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಓಡಿ ಹೋದ ವಧು ಮತ್ತು ಅವಳಿಗೆ ಸಹಾಯ ಮಾಡಿದ್ದ ಸಹಚರರನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿವಾಹ ವಂಚನೆ ಮತ್ತು ವಧುವಿನಿಂದ ಪೂರ್ವಯೋಜಿತ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿವೆ. ಅಪರಾಧಿಗಳು ಚಿನ್ನ, ಹಣವನ್ನು ಕೊಳ್ಳೆ ಹೊಡೆಯಲು ವಿವಾಹವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಪೊಲಿಸರು ತಿಳಿಸಿದ್ದಾರೆ.

ಈ ರೀತಿಯ ಕಳ್ಳತನದ ಪ್ರಕರಣಗಳು ವರದಿಯಾಗಿದ್ದು ಇದೇ ಮೊದಲಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮದುವೆಯಾದ ನಂತರ ಶ್ರೀಮಂತರಿಂದ ಹಣ ಸುಲಿಗೆ ಮಾಡುತ್ತಿದ್ದ ಕುಖ್ಯಾತ 'ಕಳ್ಳ ವಧು'ವನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದರು. ಮ್ಯಾರೇಜ್‍ ಅಪ್ಲಿಕೇಶನ್‍ಗಳಲ್ಲಿ ಆದರ್ಶ ಸಂಗಾತಿಯಂತೆ ನಟಿಸಿದ ಮಹಿಳೆ, ತನ್ನ ಗುರಿಗಳು ಮತ್ತು ಅವರ ಕುಟುಂಬಗಳ ವಿಶ್ವಾಸವನ್ನು ಗಳಿಸಿದ ನಂತರ ಲಕ್ಷಾಂತರ ಮೌಲ್ಯದ ಆಭರಣಗಳು ಮತ್ತು ಹಣವನ್ನು ಕದಿಯುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಮ್ಯಾರೇಜ್‍ ಅಪ್ಲಿಕೇಶನ್‌ನಲ್ಲಿ ಸಂಪರ್ಕ ಹೊಂದಿದ ನಂತರ ಜೈಪುರದ ಪ್ರತಿಷ್ಠಿತ ಆಭರಣ ವ್ಯಾಪಾರಿಯನ್ನು ಆಕೆ ಮದುವೆಯಾಗಿ ವಂಚಿಸಿದ್ದಳು ಎನ್ನಲಾಗಿದೆ. ಅತ್ತೆ-ಮಾವನ ವಿಶ್ವಾಸ ಗಳಿಸಿದ್ದ ಆಕೆ 36.5 ಲಕ್ಷ ರೂ. ಮೌಲ್ಯದ ಆಭರಣ ಮತ್ತು ನಗದು ದೋಚಿ ಪರಾರಿಯಾಗಿದ್ದಳು. ಇದಲ್ಲದೆ, ಮಹಿಳೆ ಡೆಹ್ರಾಡೂನ್‍ನಲ್ಲಿ ತನ್ನ ಪತಿ ಮತ್ತು ಅವರ ಕುಟುಂಬದ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಳು. ಕಾನೂನು ವ್ಯವಸ್ಥೆಯನ್ನು ಬಳಸಿಕೊಂಡು ಅವರನ್ನು ಮತ್ತಷ್ಟು ಬ್ಲ್ಯಾಕ್‌ಮೇಲ್‌ ಮಾಡಿದ್ದಾಳೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Marriage fraud: ನಕಲಿ ವಧು; ಮದುವೆಯಾದ ತಿಂಗಳಿಗೆ ಹೆಂಡ್ತಿನೂ ಇಲ್ಲ, ಕೊಟ್ಟ 4 ಲಕ್ಷವೂ ಇಲ್ಲ!

ಮದುವೆಯಾಗಿ ಹಣ ಪಡೆದುಕೊಡು ಒಂದು ತಿಂಗಳಲ್ಲೇ ಬ್ರೋಕರ್‌ ಟೀಂ ಜತೆ ʼನಕಲಿ ವಧುʼ ಪರಾರಿಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆದಿದೆ. ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿಯಾಗಿದ್ದರಿಂದ ವ್ಯಕ್ತಿ ನ್ಯಾಯಕ್ಕಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾನೆ. ಈಗಾಗಲೇ ಎರಡು ಮದುವೆಯಾಗಿದ್ದ ಶಿವಮೊಗ್ಗದ ಮಹಿಳೆ ಮಂಜುಳಾ ಎಂಬಾಕೆಯನ್ನು ಬ್ರೋಕರ್ ಟೀಂ ಕರೆತಂದು ಸೋಮಶೇಖರ್‌ ಜತೆ ಮದುವೆ ಮಾಡಿಸಿತ್ತು. ನಂತರ 4 ಲಕ್ಷ ರೂ. ಹಣ ಪಡೆದು ಮ್ಯಾರೆಜ್‌ ಬ್ರೋಕರ್‌ ಟೀಂ ಎಸ್ಕೇಪ್ ಆಗಿತ್ತು.