Viral Video: ಗೂಗಲ್ ಮ್ಯಾಪ್ ಎಡವಟ್ಟು! ಕಾರು ಸಮೇತ ಚರಂಡಿಗೆ ಬಿದ್ದು ಪ್ರಾಣ ಕಳ್ಕೊಂಡ ದುರ್ದೈವಿ- ವಿಡಿಯೊ ವೈರಲ್
ಗ್ರೇಟರ್ ನೋಯ್ಡಾದಲ್ಲಿ ಜಿಪಿಎಸ್ ಉಪಕರಣವನ್ನು ಬಳಸಿಕೊಂಡು ಕಾರನ್ನು ಚಲಾಯಿಸುತ್ತಿದ್ದ ದೆಹಲಿ ನಿವಾಸಿ ಮತ್ತು ಸ್ಟೇಷನ್ ಮಾಸ್ಟರ್ ಭರತ್ ಭಾಟಿ ಎಂಬಾತ ಕಾರನ್ನು ಆಳವಾದ ಚರಂಡಿಗೆ ಬೀಳಿಸಿ ದುರಂತವಾಗಿ ಸಾವನ್ನಪ್ಪಿದ್ದಾನೆ. ಈ ಘಟನೆಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಲಖನೌ: ಗೂಗಲ್ ಮ್ಯಾಪ್ ನಂಬಿಕೊಂಡು ಜರ್ನಿ ಮಾಡೋಕ್ಕೆ ಹೋಗಿ ಯಾಮಾತ್ತಿರುವ ಘಟನೆಗಳು ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ನಡೆಯುತ್ತಲೇ ಇವೆ. ದಾರಿ ತೋರಿಸಬೇಕಾದ ಗೂಗಲ್ ಮ್ಯಾಪ್ ನಂಬಿ ಕೊನೆಗೆ ದಿಕ್ಕೆಟ್ಟು ಅನಾಹುತಕ್ಕೀಡಾಗಿರುವ ಅದೆಷ್ಟೋ ಜನರಿದ್ದಾರೆ. ಇದೀಗ ಗೂಗಲ್ ಮ್ಯಾಪ್ ಬಳಸಿ ದುರಂತಕ್ಕೀಡಾದ ಮತ್ತೊಂದು ಘಟನೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ. ಗ್ರೇಟರ್ ನೋಯ್ಡಾದಲ್ಲಿ ಜಿಪಿಎಸ್ ಉಪಕರಣವನ್ನು ಬಳಸಿಕೊಂಡು ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ತನ್ನ ಕಾರನ್ನು ಆಳವಾದ ಚರಂಡಿಗೆ ಬೀಳಿಸಿ ದುರಂತವಾಗಿ ಸಾವನ್ನಪ್ಪಿದ್ದಾನೆ. ಈ ಘಟನೆಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೊದಲ್ಲಿ ಹಾಡಹಗಲೇ ಕಾರು ಚರಂಡಿಗೆ ಬಿದ್ದಿರುವುದು ಸೆರೆಯಾಗಿದೆ ಮೃತನನ್ನು ದೆಹಲಿ ನಿವಾಸಿ ಮತ್ತು ಸ್ಟೇಷನ್ ಮಾಸ್ಟರ್ ಭರತ್ ಭಾಟಿ ಎಂದು ಗುರುತಿಸಲಾಗಿದೆ. ಭಾಟಿ ತನ್ನ ಮಾರುತಿ ಸುಜುಕಿ ಸ್ವಿಫ್ಟ್ ಡೆಜೈರ್ ಕಾರಿನಲ್ಲಿ ಗ್ರೇಟರ್ ನೋಯ್ಡಾದ ಉಪನಗರವಾದ ಕಸ್ನಾಗೆ ತೆರಳುತ್ತಿದ್ದಾಗ ಅವನ ಕಾರು ಚರಂಡಿಗೆ ಬಿದ್ದಿದೆ. ಗೂಗಲ್ ಮ್ಯಾಪ್ ಅನ್ನು ಬಳಸಿ ಗಾಡಿ ಓಡಿಸುವಾಗ ಈ ಘಟನೆ ನಡೆದಿದೆಯಂತೆ.
ग्रेटर नोएडा: गूगल मैप की वजह से 30 फीट गहरे नाले में गिरी कार#GreaterNoida | Greater Noida | #viral | Google Map pic.twitter.com/dMsnbTnE0T
— News24 (@news24tvchannel) March 4, 2025
ಈ ಘಟನೆಯಲ್ಲಿ ಕಾರನ್ನು ಸ್ಥಳದಿಂದ ಸುರಕ್ಷಿತವಾಗಿ ಮೇಲೆತ್ತಲಾಗಿದೆ. ಶನಿವಾರ (ಮಾರ್ಚ್ 1) ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಡೆಲಿವರಿ ಏಜೆಂಟ್ ಸೌರವ್ ನಡೆದ ಅಪಘಾತವನ್ನು ಕಣ್ಣಾರೆ ನೋಡಿ ಭಾಟಿಯನ್ನು ಉಳಿಸಲು ಪ್ರಯತ್ನಿಸಿದ್ದಾನೆ. ಆದರೆ ಆತ ವೇಗವಾಗಿ ಕಾರು ಚಲಾಯಿಸಿದ್ದ ಕಾರಣ ಕಾರನ್ನು ತಡೆಯಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ವರದಿಗಳ ಪ್ರಕಾರ, ಸೌರವ್ ಮತ್ತು ಅವನೊಂದಿಗಿದ್ದ ಇತರ ಡೆಲಿವರಿ ಬಾಯ್ ಚಾಲಕನನ್ನು ಹೊರಗೆಳೆಯಲು ಕಾರಿನ ಬಳಿ ಓಡಿದ್ದಾರೆ. ಕಾರಿನ ಬಾಗಿಲುಗಳನ್ನು ಒಳಗಿನಿಂದ ಲಾಕ್ ಮಾಡಿರುವುದನ್ನು ಗಮನಿಸಿದ ನಂತರ ಅವರು ಕಾರಿನ ಕಿಟಕಿಗಳನ್ನು ಒಡೆದು ನಂತರ ಭಾಟಿಯನ್ನು ಹೊರಗೆಳೆದು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆತ ಸಾವನ್ನಪ್ಪಿದ್ದಾನಂತೆ. ಪೊಲೀಸರು ಈ ವಿಷಯವನ್ನು ಪರಿಶೀಲಿಸಿ ಭಾಟಿ ಸಾವಿನ ಬಗ್ಗೆ ಅವನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.
ಈ ಘಟನೆ ನಡೆದ ನಂತರ ಈ ಸ್ಥಳದಲ್ಲಿ ಹೆಚ್ಚಿನ ಅಪಘಾತವನ್ನು ತಡೆಗಟ್ಟಲು ಎಚ್ಚರಿಕೆ ಫಲಕವನ್ನು ಅಳವಡಿಸುವುದು ಅಗತ್ಯ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಹಾಗೇ ಅಪಾಯವನ್ನು ತಿಳಿಸುವ ಬ್ಯಾರಿಕೇಡ್‍ಗಳು ಅಥವಾ ಸೈನ್ ಬೋರ್ಡ್‍ಗಳನ್ನು ಇರಿಸುವಂತೆ ಅವರು ಅಧಿಕಾರಿಗಳನ್ನು ವಿನಂತಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Road Accident: ಗೂಗಲ್ ಮ್ಯಾಪ್ ನೋಡುತ್ತಾ ಕಾರು ಚಲಾಯಿಸಿದ ಚಾಲಕ, ಕ್ಯಾಂಟರ್‌ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ವೈದ್ಯ ಮೃತ್ಯು
ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಗೂಗಲ್ ಮ್ಯಾಪ್‌ನಲ್ಲಿ ಮಗ್ನನಾಗಿ ಚಾಲಕ ವೇಗವಾಗಿ ಕಾರು ಚಾಲನೆ ಮಾಡುತ್ತ ರಸ್ತೆ ಬದಿಯಲ್ಲಿ ನಿಂತಿದ್ದ ಕ್ಯಾಂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ವೈದ್ಯರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ವೈದ್ಯರನ್ನು ಹೈದ್ರಾಬಾದ್ ಮೂಲದ ಅಮರ್ ಪ್ರಸಾದ ಎಂದು ಗುರುತಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಬಳಿಯ ರಾಷ್ಟ್ರೀಯ ಹೆದ್ದಾರಿ 648ರಲ್ಲಿ ಭೀಕರ ಅಪಘಾತ ಸಂಭವಿಸಿದೆ.