ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರೈಲಿನಲ್ಲಿ ಯುವಕನಿಗೆ ಬಲವಂತವಾಗಿ ಕಿಸ್ ಮಾಡಿದ ವ್ಯಕ್ತಿಗೆ ಬಿತ್ತು ಗೂಸಾ! ವಿಡಿಯೊ ವೈರಲ್

ರೈಲಿನಲ್ಲಿ ಮಲಗಿದ್ದ ಯುವಕನೊಬ್ಬನಿಗೆ ವ್ಯಕ್ತಿಯೊಬ್ಬ ಬಲವಂತವಾಗಿ ಕಿಸ್ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ. ಇದರಿಂದ ಕೋಪಗೊಂಡ ಯುವಕ ಆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಹಾಗೂ ಈ ಘಟನೆಯನ್ನು ಯುವಕ ರೆಕಾರ್ಡ್ ಮಾಡಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.

ರೈಲಿನಲ್ಲಿ ಮಲಗಿದ್ದ ಯುವಕನಿಗೆ ಕಿಸ್ ಕೊಟ್ಟ ವ್ಯಕ್ತಿಗೆ ಕೊನೆಗೆ ಆಗಿದ್ದೇನು?

Profile pavithra Mar 5, 2025 3:01 PM

ಮುಂಬೈ: ಪ್ರಯಾಣಿಕರು ತುಂಬಿ ತುಳುಕುತ್ತಿದ್ದ ರೈಲಿನಲ್ಲಿ ಮಲಗಿದ್ದ ಯುವಕನೊಬ್ಬನಿಗೆ ಬಲವಂತವಾಗಿ ಕಿಸ್ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ರೈಲಿನೊಳಗೆ ಕ್ರೂರವಾಗಿ ಥಳಿಸಿದ ವಿಚಿತ್ರ ಘಟನೆ ಮುಂಬೈನಲ್ಲಿ ನಡೆದಿದೆ. ಈ ಘಟನೆಯನ್ನು ಯುವಕ ರೆಕಾರ್ಡ್ ಮಾಡಿದ್ದು, ಈ ವಿಡಿಯೊ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ವೈರಲ್ ಆದ ವಿಡಿಯೊದಲ್ಲಿ ರೈಲಿನೊಳಗೆ ಕಿಸ್ ಮಾಡಿದ ವ್ಯಕ್ತಿಯನ್ನು ಯುವಕ ಸೀಟಿನಿಂದ ಎಳೆದು ಹೊಡೆಯುವುದು ಸೆರೆಯಾಗಿದೆ. ತಾನು ಮಲಗಿದ್ದಾಗ ಈ ವ್ಯಕ್ತಿ ತನಗೆ ಬಲವಂತವಾಗಿ ಕಿಸ್‌ ಮಾಡಿದ್ದಾನೆ ಎಂದು ರೈಲಿನಲ್ಲಿದ್ದ ಜನರ ಮುಂದೆ ಯುವಕ ಆರೋಪಿಸಿದ್ದಾನೆ. ಯಾಕೆ ಕಿಸ್ ಮಾಡಿದೆ ಎಂದು ಉಳಿದವರು ಕೇಳಿದಾಗ ಅದಕ್ಕೆ ಉತ್ತರಿಸಿದ ಆತ “ಅವನು ನನಗೆ ಇಷ್ಟ ಆದ ಅದಕ್ಕೆ ಕಿಸ್ ಕೊಟ್ಟೆ” ಎಂದಿದ್ದಾನೆ. ಈ ನಡುವೆ ಆರೋಪಿ ವ್ಯಕ್ತಿಯ ಪತ್ನಿ ಆತನ ರಕ್ಷಣೆಗಾಗಿ ಮುಂದೆ ಬಂದು ಅವನನ್ನು ಬಿಟ್ಟು ಬಿಡುವಂತೆ ಕೇಳಿಕೊಂಡಿದ್ದಾಳೆ. ಆದರೆ ಆ ಯುವಕ ಮಾತ್ರ ಎಷ್ಟೇ ಹೇಳಿದ್ರೂ ಕೇಳದೆ ಯುವಕ ಆ ವ್ಯಕ್ತಿಗೆ ಪದೇ ಪದೇ ಕಪಾಳಮೋಕ್ಷ ಮಾಡಿದ್ದಾನಂತೆ.



ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ಕ್ರಮದ ಬಗ್ಗೆ ವರದಿಯಾಗಿಲ್ಲ. ಘಟನೆಯ ನಿಖರವಾದ ದಿನಾಂಕ ಮತ್ತು ಸಮಯ ಸಹ ತಿಳಿದಿಲ್ಲ, ಆದರೆ ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಈ ಸುದ್ದಿಯನ್ನೂ ಓದಿ:Viral News: ಮನೆಗೆ ಕನ್ನ ಹಾಕಲು ಬಂದವನು ಏನೂ ಸಿಗದೇ ಸಿಟ್ಟಿನಲ್ಲಿ ಮಹಿಳೆಗೆ ಕಿಸ್‌ ಮಾಡಿಬಿಟ್ಟ!

ಇತ್ತೀಚೆಗೆ ಮನೆಯೊಂದಕ್ಕೆ ನುಗ್ಗಿದ ಕಳ್ಳನೊಬ್ಬ ಮನೆಯಲ್ಲಿದ್ದ ಮಹಿಳೆಗೆ ಚುಂಬಿಸಿ ಪರಾರಿಯಾಗಿರುವ ವಿಚಿತ್ರ ಘಟನೆ ಮುಂಬೈನ ಮಲಾಡ್ ಉಪನಗರದಲ್ಲಿ ನಡೆದಿದೆ. ಈ ಘಟನೆ ಮಲಾಡ್‍ನ ಕುರಾರ್ ಪ್ರದೇಶದಲ್ಲಿ ನಡೆದಿದೆ. ದರೋಡೆ ಮಾಡುವ ಉದ್ದೇಶದಿಂದ ಮನೆಗೆ ಹೊಕ್ಕ ಕಳ್ಳನಿಗೆ ಮನೆಯಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳು ಸಿಗದಿದ್ದಾಗ ಆತ ಈ ಕೃತ್ಯ ಎಸಗಿದ್ದಾನೆ. ಕಳ್ಳ ಚುಂಬಿಸಿದ್ದರಿಂದ ಆಘಾತಗೊಂಡ ಮಹಿಳೆ ತಕ್ಷಣ ಪೊಲೀಸರನ್ನು ಸಂಪರ್ಕಿಸಿ ಆರೋಪಿಯ ವಿರುದ್ಧ ದೂರು ನೀಡಿದ್ದಾರೆ. ಅಧಿಕಾರಿಗಳು ತಕ್ಷಣ ಪ್ರತಿಕ್ರಿಯಿಸಿ ಮಹಿಳೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ಮತ್ತು ಪುರಾವೆಗಳ ಸಂಗ್ರಹಿಸಿ ನಂತರ ಪೊಲೀಸರು ಶೀಘ್ರದಲ್ಲಿಯೇ ಆರೋಪಿಯನ್ನು ಗುರುತಿಸಿ ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಆರೋಪಿ ಮಲಾಡ್‌ನ ಕುರಾರ್‌ ನಿವಾಸಿಯಾಗಿದ್ದು, ಯಾವುದೇ ಕೆಲಸವಿಲ್ಲದೆ ನಿರುದ್ಯೋಗಿದ್ದಾನೆ ಮತ್ತು ಆರೋಪಿಯ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿ ಪ್ರಕಾರ, ಮಹಿಳೆ  ಮನೆಯಲ್ಲಿ ಒಬ್ಬಂಟಿಯಾಗಿರುವುದನ್ನು ತಿಳಿದ ಆರೋಪಿ ಮನೆಗೆ ನುಗ್ಗಿ ಬಾಗಿಲು ಲಾಕ್ ಮಾಡಿ ಮಹಿಳೆಯ ಬಾಯಿ ಮುಚ್ಚಿ ಬೆಲೆ ಬಾಳುವ ವಸ್ತುಗಳನ್ನು ನೀಡುವಂತೆ ಕೇಳಿದ್ದಾನೆ. ಆದರೆ ಮಹಿಳೆ ಮನೆಯಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳಿಲ್ಲ,ಚಿನ್ನಾಭರಣಗಳಿಲ್ಲ ಎಂದು ಹೇಳಿದ್ದಕ್ಕೆ ಕೋಪಗೊಂಡ ಆರೋಪಿ ಆಕೆಗೆ ಮುತ್ತಿಟ್ಟು ಅಲ್ಲಿಂದ ಪರಾರಿಯಾಗಿದ್ದಾನಂತೆ.