Viral Video: ಎಸಿ ಆಫ್ ಮಾಡಿದ್ದೂ ಅಲ್ಲದೇ, ಪ್ರಯಾಣಿಕನ ಕೆನ್ನೆಗೆ ಬಾರಿಸಿದ ಓಲಾ ಚಾಲಕ; ಏನಿದು ಘಟನೆ?
ಮುಂಬೈನಿಂದ ಪುಣೆಗೆ ಪ್ರಯಾಣಿಸುತ್ತಿದ್ದ 50 ವರ್ಷದ ಪ್ರಯಾಣಿಕನಿಗೆ ಓಲಾ ಕ್ಯಾಬ್ ಚಾಲಕನೊಬ್ಬ ಪ್ರಯಾಣದ ವೇಳೆ ಕಪಾಳಮೋಕ್ಷ ಮಾಡಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಯಾಣಿಕನ ಮಗ ಸೋಶಿಯಲ್ ಮೀಡಿಯಾದಲ್ಲಿ ತನ್ನ ತಂದೆ ಮೇಲಾದ ದೌರ್ಜನ್ಯವನ್ನು ಹಂಚಿಕೊಂಡಿದ್ದಾನೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.


ಮುಂಬೈ: ಮುಂಬೈನಿಂದ ಪುಣೆಗೆ ಪ್ರಯಾಣಿಸುತ್ತಿದ್ದ ಓಲಾ ಕ್ಯಾಬ್ ಚಾಲಕನೊಬ್ಬ 50 ವರ್ಷದ ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಪ್ರಯಾಣಿಕನ ಮಗ ಸೋಶಿಯಲ್ ಮೀಡಿಯಾದಲ್ಲಿ ತನ್ನ ತಂದೆ ಮೇಲಾದ ದೌರ್ಜನ್ಯವನ್ನು ಹಂಚಿಕೊಂಡಿದ್ದಾನೆ ಮತ್ತು ತನ್ನ ತಂದೆ ಕ್ಯಾಬ್‍ನಲ್ಲಿ ಏಕಾಂಗಿಯಾಗಿ ಪ್ರಯಾಣಿಸಿದ್ದರು ಎಂಬುದಾಗಿ ತಿಳಿಸಿದ ಆತ ಇಂಟರ್‌ಸಿಟಿ ಸೇವೆಗಳಲ್ಲಿ ಗ್ರಾಹಕರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾನೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.
ಪ್ರಯಾಣದ ವೇಳೆ ಕ್ಯಾಬ್ ಚಾಲಕ ಎಸಿಯನ್ನು ಆಫ್ ಮಾಡಿದ್ದಾನೆ. ಅಲ್ಲದೇ ಮಾರ್ಗವನ್ನು ಕೂಡ ಬದಲಾಯಿಸಿದ್ದಾನಂತೆ. ಅದೂ ಅಲ್ಲದೇ, ಗ್ಯಾಸ್ ಖಾಲಿಯಾಗಿದೆ ಎಂದು ಹೇಳಿ ವಾಹನವನ್ನು ಮಧ್ಯದಲ್ಲಿ ನಿಲ್ಲಿಸಿದ್ದಾನೆ ಎಂದು ಸಂತ್ರಸ್ತನ ಮಗ ರೆಡ್ಡಿಟ್‍ನಲ್ಲಿ ಹಂಚಿಕೊಂಡಿದ್ದಾನೆ. "ನನ್ನ ತಂದೆ ಒಬ್ಬರೇ ಪ್ರಯಾಣಿಸುತ್ತಿದ್ದರು. ಅವರಿಗೆ 50 ವರ್ಷ ವಯಸ್ಸಾಗಿದೆ. ಅವರು ಓಲಾದ ಮೂಲಕ ಮುಂಬೈನಿಂದ ಪುಣೆಗೆ ಹೋಗುವಾಗ ಈ ಘಟನೆ ನಡೆದಿದೆಯಂತೆ. ತನ್ನ ತಂದೆಯವರು ತಿಳಿಸಿದ ದಾರಿಯಲ್ಲಿ ಹೋಗದೇ ಆತ ಬೇರೆ ದಾರಿಯಿಂದ ಹೋಗಲು ಯತ್ನಿಸಿದ್ದಾನೆ ಜೊತೆಗೆ ತಂದೆಯ ಜೊತೆಗೆ ಜಗಳ ಕೂಡ ಮಾಡಿ ಎಸಿ ಸ್ವಿಚ್ ಆಫ್ ಮಾಡಿದ್ದಾನೆ" ಎಂದು ಮಗ ಪೋಸ್ಟ್‌ನಲ್ಲಿ ಬರೆದಿದ್ದಾನೆ.
ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದು ಚಾಲಕ 50 ವರ್ಷದ ತನ್ನ ತಂದೆಯ ಮೇಲೆ ಹಲ್ಲೆ ನಡೆಸಿ ಕಪಾಳಮೋಕ್ಷ ಮಾಡಿದ್ದಾನೆ. ಇದರ ಪರಿಣಾಮ ಅವರ ಮುಖದ ಮೇಲೆ ಗಾಯದ ಗುರುತುಗಳಿವೆ ಎಂದು ಮಗ ಹೇಳಿದ್ದಾನೆ. ಅಲ್ಲದೇ ತನ್ನ ತಂದೆ ಚಾಲಕನ ಬೆನ್ನಿಗೆ ಗುದ್ದುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದಾರೆ ಎಂಬುದಾಗಿ ತಿಳಿಸಿದ್ದಾನೆ. ಈ ಪ್ರಕರಣವು ಪೊಲೀಸ್ ಠಾಣೆಯ ಮೇಟ್ಟಿಲೇರಿದೆ. ಚಾಲಕನ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲು ದೂರು ದಾಖಲಿಸುವಂತೆ ಪೊಲೀಸರು ಪ್ರಯಾಣಿಕನನ್ನು ಕೇಳಿದ್ದಾರೆ. ಆದರೆ ಇದು ಚಾಲಕನ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ದೂರು ದಾಖಲಿಸಲಿಲ್ಲ ಎನ್ನಲಾಗಿದೆ. ಹಾಗೇ ನನ್ನ ತಂದೆ ಓಲಾ ಅಪ್ಲಿಕೇಶನ್ ಹೇಳಿದ ಹೆಚ್ಚುವರಿ ಬಾಕಿಯನ್ನು ಸಹ ಪಾವತಿಸಿದ್ದಾರೆ ಎಂದು ಮಗ ತಿಳಿಸಿದ್ದಾನೆ. ಅದೂ ಅಲ್ಲದೇ ಕೊನೆಗೆ ತಂದೆ ಓಲಾ ಬಿಟ್ಟು ಆಟೋದಲ್ಲಿ ಪುಣೆಗೆ ಹೋಗಿದ್ದಾರೆ ಎಂದು ಮಗ ಹೇಳಿದ್ದಾನೆ.
ಈ ಸುದ್ದಿಯನ್ನೂ ಓದಿ:Viral Video: ಮೊಬೈಲ್‍ನಲ್ಲಿ ಆಮ್ಲೆಟ್ ವಿಡಿಯೊ ನೋಡಿ ಪಚೀತಿಗೆ ಸಿಲುಕಿದ ಓಲಾ ಕ್ಯಾಬ್ ಡ್ರೈವರ್!
ಜನನಿಬಿಡ ರಸ್ತೆಯಲ್ಲಿ ಕ್ಯಾಬ್ ಚಾಲನೆ ಮಾಡುವಾಗ ಕ್ಯಾಬ್ ಚಾಲಕನೊಬ್ಬ ಮೊಬೈಲ್‍ನಲ್ಲಿ ಆಮ್ಲೆಟ್ ತಯಾರಿಸುವ ಪಾಕವಿಧಾನದ ವಿಡಿಯೊಗಳನ್ನು ನೋಡಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗ್ರಾಹಕರು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೊವನ್ನು ನೋಡಿ ಚಾಲಕನ ವರ್ತನೆಗಾಗಿ ಓಲಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ಈ ವೈರಲ್ ವೀಡಿಯೊಗೆ ಸಂಬಂಧಿಸಿದಂತೆ ಓಲಾ ಕ್ಯಾಬ್‍ನ ಗ್ರಾಹಕರಿಗೆ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.