Viral Video: ಗಂಡನ ಮನೆಗೆ ನವವಧುವಿನ ಗ್ರ್ಯಾಂಡ್ ಎಂಟ್ರಿಗೆ ನೆಂಟರಿಸ್ಟರು ಸುಸ್ತೋ ಸುಸ್ತು! ವಿಡಿಯೊ ಇದೆ
ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದ ಮದುವೆಯಲ್ಲಿ ವರನ ಕಡೆಯವರು ವಧುವಿನ ಕುಟುಂಬಕ್ಕೆ ವಿಶಿಷ್ಟ ರೀತಿಯಲ್ಲಿ ವಿದಾಯ ಹೇಳಿದ್ದಾರೆ. ವಧುವನ್ನು ಐಷರಾಮಿ ಕಾರಿನಲ್ಲಿ ಕರೆದುಕೊಂಡು ಹೋಗುವ ಬದಲು ತಮ್ಮ ಕುಟುಂಬದ ಜೆಸಿಬಿಯಲ್ಲಿ ಕರೆದುಕೊಂಡು ಹೋಗಿದ್ದಾರೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಲಖನೌ: ಮದುವೆ ಮಂಟಪದಲ್ಲಿ ನಡೆಯುವ ಕೆಲವೊಂದು ಕ್ರೇಜಿ ವಿಚಾರಗಳು, ತಕರಾರು, ಫೈಟಿಂಗ್ ಹೀಗೆ ಹತ್ತು ಹಲವು ಸಂಗತಿಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಉತ್ತರ ಪ್ರದೇಶದ ಝಾನ್ಸಿಯಲ್ಲಿ ವರನ ಮದುವೆ ಮೆರವಣಿಗೆಯಲ್ಲಿ ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಮದುವೆಯಲ್ಲಿ ಐಷಾರಾಮಿ ಕಾರು, ಬೈಕ್‌ಗಳಲ್ಲಿ ವಧು-ವರರ ಮೆರವಣಿಗೆ ನಡೆಯುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಂದು ಮದುವೆಯಲ್ಲಿ ಬುಲ್ಡೋಜರ್‌ನಲ್ಲೇ ವಧುವೊಬ್ಬರು ತನ್ನ ಗಂಡನ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ. ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್(Viral Video) ಆಗುತ್ತಿದ್ದು, ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ರಾಹುಲ್ ಯಾದವ್ ಅವನನ್ನು ವರಿಸಿದ ವಧು ಕರಿಷ್ಮಾ ಯಾದವ್ ತನ್ನ ಕುಟುಂಬಕ್ಕೆ ವಿದಾಯ ಹೇಳಿ ಗಂಡನ ಮನೆಗೆ ಹೋಗಲು ಇನ್ನೇನು ಕಾರು ಹತ್ತಬೇಕು ಅನ್ನುವಾಗ ಆಶ್ಚರ್ಯಕರವಾದ ಘಟನೆಯೊಂದು ನಡೆದಿದೆ. ಸಾಮಾನ್ಯವಾಗಿ ವಧುವನ್ನು ಕಾರಿನಲ್ಲಿ ಕರೆದುಕೊಂಡು ಹೋಗಲಾಗುತ್ತದೆ. ಆದರೆ ಇಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ ಒಂದು ಡಜನ್ ಬುಲ್ಡೋಜರ್ ಬಂದು ನಿಂತಿದೆಯಂತೆ. ವಧು-ವರರು ಬುಲ್ಡೋಜರ್ ಮೂಲಕ ಮನೆಗೆ ಹೋದರಂತೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರು ಇದಕ್ಕೆ "ಬುಲ್ಡೋಜರ್ ವಿವಾಹ" ಎಂಬ ಹೆಸರನ್ನು ನೀಡಿದ್ದಾರೆ.
यह भी खूब रही…बुलडोजर की बारात........!!
— Krishna Kumar Yadav (@kkyadava) February 23, 2025
तेज आवाज में DJ पर बजता म्यूजिक, पीछे-पीछे कार में दुल्हा-दूल्हन और उनके पीछे बुलडोजर की लंबी लाइन। #buldozer #wedding #Jhansi #UttarPradesh pic.twitter.com/dK3aoQ23lj
ವರನ ಚಿಕ್ಕಪ್ಪ ರಾಮ್ ಕುಮಾರ್ ಬಳಿ ಇದರ ಬಗ್ಗೆ ಕೇಳಿದಾಗ,"ಇವು ನಮ್ಮ ಕುಟುಂಬದ ಬುಲ್ಡೋಜರ್ ಇವುಗಳ ಮೂಲಕ ವಧು-ವರರನ್ನು ಕರೆದುಕೊಂಡು ಹೋಗಬೇಕು ಎಂಬ ಫ್ಲ್ಯಾನ್ ಮಾಡಿದ್ದೆವು ಎಂದು ಹೇಳಿದ್ದಾರೆ. ಜನರು ಸಾಂಪ್ರದಾಯಿಕವಾಗಿ ಕಾರುಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಬಳಸುತ್ತಾರೆ, ಆದರೆ ನಾವು ಬುಲ್ಡೋಜರ್‌ಗಳನ್ನು ಬಳಸಿದ್ದೇವೆ ಎಂದು ತಿಳಿಸಿದ್ದಾರೆ.ವರ ರಾಹುಲ್ ಯಾದವ್ ಹಾಗೂ ವಧು ಕರಿಷ್ಮಾ ಕೂಡ ಇದರಿಂದ ಸಿಕ್ಕಾಪಟ್ಟೆ ಖುಷಿಯಾಗಿದ್ದಾರಂತೆ.
ಈ ಸುದ್ದಿಯನ್ನೂ ಓದಿ:Viral Video: ದುಬಾರಿ ಮದುವೆ; ವಧುವಿನ ಮನೆ ಮೇಲೆ ವಿಮಾನದಿಂದ ಹಣದ ಸುರಿಮಳೆ: ವಿಡಿಯೊ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ಹಲವು ವಿಚಿತ್ರಗಳನ್ನು ನೋಡುತ್ತಿರುತ್ತೇವೆ. ದುಬಾರಿ ಮದುವೆ, ತೀರಾ ಸರಳ ಮದುವೆ ಹೀಗೆ ಇನ್ನಿತರ ಪೋಸ್ಟ್ ಮತ್ತು ವಿಡಿಯೊಗಳು ನಮ್ಮ ಗಮನ ಸೆಳೆಯುತ್ತಿರುತ್ತವೆ. ಇದೀಗ ದುಬಾರಿ ಮದುವೆಯ ವಿಡಿಯೊವೊಂದು ಸಖತ್ ವೈರಲ್ ಆಗಿದೆ. ಪಾಕಿಸ್ತಾನದಲ್ಲಿ(Pakistan) ವರನ ತಂದೆಯೊಬ್ಬ ತನ್ನ ಮಗನ ಮದುವೆಗೆ ವಿಮಾನವನ್ನು ಬಾಡಿಗೆಗೆ ತೆಗೆದುಕೊಂಡು ವಧುವಿನ ಮನೆಯ ಮೇಲೆ ಲಕ್ಷಾಂತರ ರೂಪಾಯಿ ನೋಟುಗಳ ಮಳೆಗೈದಿದ್ದಾರೆ. ಈ ವಿಡಿಯೊ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮದುವೆ ಎಂಬುದು ಪ್ರತಿಯೊಬ್ಬರ ಬದುಕಿನ ಅಮೂಲ್ಯ ಕ್ಷಣ. ಹೊಸ ಬದುಕಿನತ್ತ ಹತ್ತಾರು ಆಸೆ ಮತ್ತು ಕನಸುಗಳೊಂದಿಗೆ ಹೆಜ್ಜೆಯಿಡುತ್ತಾರೆ. ಕೆಲವರು ತಮ್ಮ ಮದುವೆ ಸಮಾರಂಭವನ್ನು ಅದ್ಧೂರಿ ಆಗಿ ಆಚರಿಸುವ ಮೂಲಕ ಸುದ್ದಿಯಾಗುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೊದಲ್ಲಿ ವರನ ತಂದೆ ತನ್ನ ಮಗನ ಮದುವೆಗೆ ವಿಮಾನವನ್ನು ಬಾಡಿಗೆಗೆ ಪಡೆದು ವಧುವಿನ ಮನೆಯ ಮೇಲೆ ನೋಟುಗಳನ್ನು ಸುರಿಸಿದ್ದಾರೆ. ಆಕಾಶದಲ್ಲಿ ಹಾರಾಡುತ್ತಿರುವ ವಿಮಾನದಿಂದ ನೋಟನ್ನು ಬೀಳಿಸುತ್ತಿರುವ ದೃಶ್ಯವು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡಿದೆ. ಈ ಘಟನೆಯು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ ಎನ್ನಲಾಗಿದೆ.
ಈ ವಿಡಿಯೊವನ್ನು Amalqa ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ವರನ ತಂದೆ ತನ್ನ ಮಗನ ಮದುವೆಗೆ ವಿಮಾನವನ್ನು ಬಾಡಿಗೆಗೆ ತೆಗೆದುಕೊಂಡು ವಧುವಿನ ಮನೆಯ ಮೇಲೆ ನೋಟಿನ ಮಳೆಗೈದಿದ್ದಾರೆ. ವರನು ತನ್ನ ತಂದೆಯ ಋಣವನ್ನು ತನ್ನ ಜೀವನದುದ್ದಕ್ಕೂ ತೀರಿಸುತ್ತಾನೆ ಎಂದು ಕ್ಯಾಪ್ಶನ್ ನೀಡಲಾಗಿದೆ.