Viral News: ಮುಖೇಶ್ ಅಂಬಾನಿಯ ʼಆಂಟಿಲಿಯಾʼ ಬಂಗಲೆಯ ಕರೆಂಟ್ ಬಿಲ್ ನೋಡಿದ್ರೆ ಶಾಕ್ ಆಗುತ್ತೆ!
ಬ್ಯುಸಿನೆಸ್ ಟೈಕೂನ್, ರಿಲಯನ್ಸ್ ಇಂಡಸ್ಟ್ರೀಸ್ ಮಾಲಕ ಮುಖೇಶ್ ಅಂಬಾನಿಯವರ ಕುಟುಂಬ ವಾಸವಾಗಿರುವ 27 ಅಂತಸ್ತಿನ ಭವ್ಯ ಬಂಗಲೆ ಆಂಟಿಲಿಯಾ ಎಲ್ಲರಿಗೂ ಒಂದು ಬೆರಗು. ಹಲವಾರು ವಿಶೇಷತೆಗಳನ್ನು ತನ್ನೊಳಗೆ ಹುದುಗಿಸಿಟ್ಟುಕೊಂಡಿರುವ ಈ ಐಶಾರಾಮಿ ಬಂಗಲೆಯ ತಿಂಗಳ ವಿದ್ಯುತ್ ಬಿಲ್ ‘ಶಾಕ್’ ಹೊಡೆಯುವಂತಿದೆ.
![ಐಶಾರಾಮಿ ಬಂಗಲೆ ಆಂಟಿಲಿಯಾದ ವಿದ್ಯುತ್ ಬಿಲ್ ಕೇಳಿದ್ರೆ ನಿಮ್ಗೆ ‘ಶಾಕ್’ ಆಗುತ್ತೆ!](https://cdn-vishwavani-prod.hindverse.com/media/images/Antilia.max-1280x720.jpg)
![Profile](https://vishwavani.news/static/img/user.5c7ca8245eec.png)
ಮುಂಬೈ: ಏಷ್ಯಾದ (Asia) ಶ್ರೀಮಂತ ವ್ಯಕ್ತಿ ಮತ್ತು ಭಾರತದ ಪ್ರತಿಷ್ಠಿತ ಉದ್ಯಮಿ ಮುಖೇಶ್ ಅಂಬಾನಿ (Mukesh Ambani) ಅವರ ಬಂಗಲೆ ಆಂಟಿಲ್ಲಾ (Antillia) ವಿಶ್ವದ ಅತ್ಯಂತ ದುಬಾರಿ ಮತ್ತು ಐಷಾರಾಮಿ ವಸತಿ ಕಟ್ಟಡಗಳಲ್ಲಿ ಒಂದಾಗಿದೆ. ಮುಂಬೈನಲ್ಲಿರುವ (Mumbai) ಈ 27 ಅಂತಸ್ತಿನ ಭವ್ಯ ಬಂಗಲೆ 50 ಆಸನಗಳ ಥಿಯೇಟರ್, ಒಂಬತ್ತು ಹೈ-ಸ್ಪೀಡ್ ಎಲಿವೇಟರ್‌ಗಳು, ಈಜುಕೊಳ, ಮೂರು ಹೆಲಿಪ್ಯಾಡ್‌ಗಳು ಮತ್ತು 160 ಕಾರುಗಳು ನಿಲ್ಲಲು ವ್ಯವಸ್ಥೆಯಿರುವ ಹವಾನಿಯಂತ್ರಿತ ಗ್ಯಾರೇಜ್ ಸೇರಿದಂತೆ ಅನೇಕ ಐಷಾರಾಮಿ ಸೌಲಭ್ಯಗಳನ್ನು ಈ ಬಂಗಲೆ ಹೊಂದಿದೆ. ಈ ಕಟ್ಟಡದ ದಿನನಿತ್ಯದ ಕೆಲಸ ಕಾರ್ಯಗಳನ್ನು ನಿರ್ವಹಿಸಲು ತೋಟಗಾರರು, ಅಡುಗೆಯವರು, ಕೊಳಾಯಿಗಾರರು ಮತ್ತು ಎಲೆಕ್ಟ್ರಿಷಿಯನ್‌ಗಳು ಸೇರಿದಂತೆ 600 ಕ್ಕೂ ಹೆಚ್ಚು ಸಿಬ್ಬಂದಿ ಇಲ್ಲಿ ಪ್ರತಿನಿತ್ಯ ಕೆಲಸ ಮಾಡುತ್ತಿದ್ದಾರೆ.
ಇಷ್ಟೆಲ್ಲಾ ಐಶಾರಾಮಿ ವ್ಯವಸ್ಥೆಗಳನ್ನು ಅತ್ಯಾಧುನಿಕ ತಂತ್ರಜ್ಞಾನಗಳ ಸಮ್ಮಿಳಿತವಾಗಿರುವ ಈ ಭವ್ಯ ಬಂಗಲೆಯ ವಿದ್ಯುತ್ ದೀಪಾಲಂಕಾರವೂ ಸಹ ನೋಡುಗರನ್ನು ಬೆರಗುಗೊಳಿಸುವಂತಿದೆ. ಆಂಟಿಲಿಯಾದ ದಿನ ಬಳಕೆಗೆ ಅಗತ್ಯವಿರುವ ವಿದ್ಯುತ್ ಮುಂಬೈನ ಸುಮಾರು 7,000 ಮಧ್ಯಮ ವರ್ಗದ ಕುಟುಂಬಗಳ ಒಟ್ಟು ವಿದ್ಯುತ್ ಬಳಕೆಗೆ ಸಮನಾಗಿದೆ.
ಒಂದು ತಿಂಗಳಲ್ಲಿ, ಆಂಟಿಲಿಯಾ ಸುಮಾರು 637,240 ಯೂನಿಟ್ ವಿದ್ಯುತ್ ಬಳಸಿದ್ದು, ಸುಮಾರು 70 ಲಕ್ಷ ರೂಪಾಯಿ ಕರೆಂಟ್ ಬಿಲ್ ಬಂದಿದೆ. ಕರ್ನಾಟಕದ ವಿದ್ಯುತ್ ಬಳಕೆದಾರರಿಗೆ ಗೃಹ ಜ್ಯೋತಿ ಸೌಲಭ್ಯವಿದ್ದಂತೆ ಅಂಬಾನಿಯ ಈ ಆಂಟಿಲಿಯಾದ ವಿದ್ಯುತ್ ಬಿಲ್ ಗೆ ಅಲ್ಲಿ ವಿದ್ಯುತ್ ಇಲಾಖೆ ಭರ್ಜರಿ ರಿಯಾಯಿತಿಯನ್ನು ನೀಡಿದೆ. ಆಂಟಿಲಿಯಾದ ಒಂದು ತಿಂಗಳ 70 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಗೆ ವಿದ್ಯುತ್ ಇಲಾಖೆ ರೂ. 48,354 ರಿಯಾಯಿತಿ ನೀಡಿದೆ. ಕಟ್ಟಡದ ಬಹು ಹಂತದ ಪಾರ್ಕಿಂಗ್ ವ್ಯವಸ್ಥೆಗಳು ಮತ್ತು ಬೃಹತ್ ಹವಾನಿಯಂತ್ರಣ ವ್ಯವಸ್ಥೆಗಳು ಇಷ್ಟು ದುಬಾರಿ ವಿದ್ಯುತ್ ಬಿಲ್ ಗೆ ಕಾರಣವಾಗಿದೆ.
ಇದನ್ನೂ ಓದಿ: Viral Video: ಆಮೆಯನ್ನು ಬೇಟೆಯಾಡಿದ ವ್ಯಾಘ್ರ! ಅದ್ಭುತ ದೃಶ್ಯಕ್ಕೆ ಮನಸೋತ ಪ್ರವಾಸಿಗರು
ಈ ಭವ್ಯ ಬಂಗಲೆಯ ನಿರ್ಮಾಣ ಕಾರ್ಯ 2004 ರಲ್ಲಿ ಪ್ರಾರಂಭವಾಗಿ 2010 ರಲ್ಲಿ ಪೂರ್ಣಗೊಂಡಿದ್ದು, ಇದು ಪೂರ್ಣಗೊಳ್ಳಲು ಆರು ವರ್ಷಗಳಷ್ಟು ಸುದೀರ್ಘ ಅವಧಿ ಬೇಕಾಯಿತು. 400,000 ಚದರ ಅಡಿಗಳಲ್ಲಿ ನಿರ್ಮಾಣಗೊಂಡಿರುವ ಈ ಭವ್ಯ ಬಂಗಲೆಯ ನಿರ್ಮಾಣಕ್ಕೆ15,000 ಕೋಟಿ ರೂಪಾಯಿಗಳಷ್ಟು ವೆಚ್ಚವಾಗಿದೆ. ಈ ಭವ್ಯ ಬಂಗಲೆಯಲ್ಲಿ ಏಳು-ಸ್ಟಾರ್ ಹೋಟೆಲ್‌ಗಳಿಗೆ ಸಮಾನವಾದ ಸೌಲಭ್ಯಗಳಿವೆ.
ಇನ್ನು ಆಂಟಿಲಿಯಾದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಸಹ ಆಕರ್ಷಕ ವೇತನವನ್ನು ಪಡೆಯುತ್ತಿದ್ದಾರೆ. ಇಲ್ಲಿ ಕೆಲಸ ಮಾಡುವ ಕೊಳಾಯಿಗಾರರು ಸಹ ತಿಂಗಳಿಗೆ 1.5 ಲಕ್ಷದಿಂದ 2 ಲಕ್ಷದವರೆಗೆ ಸಂಬಳ ಪಡೆದುಕೊಳ್ಳುತ್ತಿದ್ದಾರೆ. ಇಷ್ಟು ಮಾತ್ರವಲ್ಲದೇ, ಇಲ್ಲಿನ ಉದ್ಯೋಗಿಗಳಿಗೆ ವೈದ್ಯಕೀಯ ಭತ್ಯೆ ಮತ್ತು ತಮ್ಮ ಮಕ್ಕಳಿಗೆ ಶಿಕ್ಷಣ ಭತ್ಯೆಯಂತಹ ಸವಲತ್ತುಗಳನ್ನೂ ಸಹ ಪಡೆಯುತ್ತಿದ್ದಾರೆ.