Viral Video: ಚಿಕಿತ್ಸೆಗಾಗಿ ಮೆಡಿಕಲ್ ಶಾಪ್‍ಗೆ ಬಂದ ಕೋತಿ; ವಿಸ್ಮಯಕಾರಿ ವಿಡಿಯೊ ನೋಡಿ
Viral Video: ಬಾಂಗ್ಲಾದೇಶದ ಮೆಹರ್ಪುರ್ ಪಟ್ಟಣದಲ್ಲಿ ಗಾಯಗೊಂಡ ಕೋತಿಯೊಂದು ಆರೈಕೆಗಾಗಿ ಮೆಡಿಕಲ್ ಶಾಪ್‍ಗೆ ನುಗ್ಗಿದೆ. ಬಳಿಕ ಸಿಬ್ಬಂದಿಯಿಂದ ಚಿಕಿತ್ಸೆ ಪಡೆದಿದೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಕೋತಿಯ ಜಾಣ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಢಾಕಾ: ಇತ್ತೀಚೆಗೆ ಬಾಂಗ್ಲಾದೇಶದ ಮೆಹರ್ಪುರ್ ಪಟ್ಟಣದಲ್ಲಿ ಗಾಯಗೊಂಡ ಕೋತಿಯೊಂದು ಅಗತ್ಯ ಆರೈಕೆಗಾಗಿ ಮೆಡಿಕಲ್ ಶಾಪ್‍ಗೆ ನುಗ್ಗಿದೆ. ಸದ್ಯ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಈ ಪ್ರದೇಶದ ಅಲ್ಹೆರಾ ಫಾರ್ಮಸಿಯಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡ ಕೋತಿ ಅಲ್ಲಿಗೆ ಬಂದಾಗ ಅಲ್ಲಿದ್ದವರು ಕೋತಿಗೆ ಆರೈಕೆ ಮಾಡಿದ್ದಾರೆ. ಗಾಯಗೊಂಡ ಕೋತಿ, ಜನರು ತನಗೆ ಸಹಾಯ ಮಾಡಬಹುದು ಎಂದು ತಿಳಿದು ತಾನಾಗಿಯೇ ಮೆಡಿಕಲ್ ಶಾಪ್‍ಗೆ ಬಂದಿದೆ. ಕೋತಿಗೆ ಹೇಗೆ ಗಾಯವಾಯಿತು ಅಥವಾ ಅಂಗಡಿಗೆ ಪ್ರವೇಶಿಸುವ ಮೊದಲು ಅದು ಎಲ್ಲಿತ್ತು ಎಂಬ ವಿಚಾರ ತಿಳಿದಿಲ್ಲವಾದರೂ ಗಾಯಕ್ಕೆ ಅಲ್ಲಿದ್ದವರು ಔಷಧ ಹಚ್ಚಿ ಅದು ಚೇತರಿಸಿಕೊಳ್ಳಲು ಹೇಗೆ ಸಹಾಯ ಮಾಡಿದರು ಎಂಬುದು ವಿಡಿಯೊದಲ್ಲಿ ಸೆರೆಯಾಗಿದೆ.
ಮೆಡಿಕಲ್ ಶಾಪ್ ಸಿಬ್ಬಂದಿ ಮತ್ತು ಜನರ ಅದರ ಸಹಾಯಕ್ಕೆ ಬಂದಾಗ ಕೋತಿ ಶಾಂತವಾಗಿ ಕೌಂಟರ್‌ನಲ್ಲಿ ಕುಳಿತಿತ್ತು. ಅದರಲ್ಲಿ ಒಬ್ಬ ವ್ಯಕ್ತಿಯು ಅದರ ಗಾಯಕ್ಕೆ ಮುಲಾಮು ಹಚ್ಚಿದ್ದಾನೆ. ನಂತರ, ಜನರು ಗಾಯಗೊಂಡ ಭಾಗದ ಸುತ್ತಲೂ ಎಚ್ಚರಿಕೆಯಿಂದ ಬ್ಯಾಂಡೇಜ್ ಸುತ್ತಲಾಗಿದೆ. ಈ ಸಮಯದಲ್ಲಿ ಕೋತಿ ಶಾಂತವಾಗಿಯೇ ಇತ್ತು. ಇದನ್ನು ನೋಡಿ ಸೋಶಿಯಲ್ ಮೀಡಿಯಾದ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ.
ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಕೋತಿಯ ವಿಡಿಯೊ ಇಲ್ಲಿದೆ ನೋಡಿ
ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತನ್ನ ಗಾಯದ ಚಿಕಿತ್ಸೆಗಾಗಿ ಮೆಡಿಕಲ್ ಶಾಪ್ ಅನ್ನು ಸಂಪರ್ಕಿಸಿದ ಕೋತಿಗೆ ಫಾರ್ಮಸಿ ಸಿಬ್ಬಂದಿಯು ನೀಡಿದ ಆರೈಕೆಯನ್ನು ಕಂಡು ನೆಟ್ಟಿಗರು ಹೊಗಳಿದ್ದಾರೆ. "ಕೋತಿ ತುಂಬಾ ಮುದ್ದಾದ ಪ್ರಾಣಿ. ಜನರು ಪ್ರಾಣಿಗಳನ್ನು ಆರೈಕೆ ಮಾಡುವುದನ್ನು ನೋಡಲು ತುಂಬಾ ಖುಷಿಯಾಗುತ್ತದೆ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ಮಾನವೀಯತೆ ಇನ್ನೂ ಜೀವಂತವಾಗಿದೆ" ಎಂದು ಇನ್ನೊಬ್ಬರು ಹೇಳಿದ್ದಾರೆ.
ಕೋತಿಗಳು ಈ ರೀತಿಯ ವರ್ತನೆ ತೋರಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಕೋತಿಯೊಂದು ಚಿಕಿತ್ಸೆ ಪಡೆಯಲು ಸ್ವತಃ ಆಸ್ಪತ್ರೆಗೆ ಭೇಟಿ ನೀಡಿತ್ತು. ವರದಿಗಳ ಪ್ರಕಾರ, ಕೋತಿ ತನ್ನ ಗಾಯಗಳಿಗೆ ಚಿಕಿತ್ಸೆ ಪಡೆಯಲು ಮೂರು ಬಾರಿ ಆಸ್ಪತ್ರೆಗೆ ಭೇಟಿ ನೀಡಿತ್ತು. ಇದು ಕೂಡ ಬಾಂಗ್ಲಾದೇಶಲ್ಲಿ ನಡೆದಿತ್ತು ಎನ್ನುವುದು ವಿಶೇಷ. ಚಿತ್ತಗಾಂಗ್‍ನ ಸೀತಾಕುಂಡ ಉಪಜಿಲಾ ಆರೋಗ್ಯ ಸಂಕೀರ್ಣದಲ್ಲಿ ಈ ಘಟನೆ ವರದಿಯಾಗಿತ್ತು. ಕೋತಿ ಆಸ್ಪತ್ರೆಗೆ ಭೇಟಿ ನೀಡಿದಾಗ, ವೈದ್ಯರು ಶಾಕ್‌ಗೆ ಒಳಗಾಗಿದ್ದರು. ಕೊನೆಗೆ ಅವರು ಅದಕ್ಕೆ ಚಿಕಿತ್ಸೆ ನೀಡಿ ಅದರ ಗಾಯಗಳಿಗೆ ಔಷಧ ಹಚ್ಚಿ ಬ್ಯಾಂಡೇಜ್ ಕಟ್ಟಿದ್ದರು. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ಮನುಷ್ಯರಿಗಿಂತ ತಾನೇನು ಕಮ್ಮಿ ಇಲ್ಲ... ಕೋತಿ ಟ್ಯಾಲೆಂಟ್ ನೋಡಿದ್ರೆ ಶಾಕ್ ಆಗುತ್ತೆ!
ಇತ್ತೀಚೆಗೆ ಕೋತಿಯೊಂದು ಗಾಳಿಪಟ ಹಾರಿಸಿದ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೊದಲ್ಲಿ ಕೋತಿ ಟೆರೇಸ್‍ನಲ್ಲಿ ಕುಳಿತು ಮನುಷ್ಯರಂತೆಯೇ ಗಾಳಿಪಟ ಹಾರಿಸಿದೆ. ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ವಿಡಿಯೊ ಈಗಾಗಲೇ 30,000 ವ್ಯೂವ್ಸ್ ಮತ್ತು ಹಲವಾರು ಕಾಮೆಂಟ್‍ಗಳನ್ನು ಗಳಿಸಿದೆ.