ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಹಾವಿನೊಂದಿಗೆ ಆಟವಾಡಿದ ಪುಟ್ಟ ಮಗು; ಬೆಚ್ಚಿಬೀಳಿಸುವ ವಿಡಿಯೊ ಇಲ್ಲಿದೆ

Viral Video: ಪುಟ್ಟ ಮಗುವೊಂದು ಹಾವಿನೊಂದಿಗೆ ನಿರ್ಭೀತಿಯಿಂದ ಆಟವಾಡಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲವರು ಮಗುವಿನ ಧೈರ್ಯಕ್ಕೆ ಆಶ್ಚರ್ಯಚಕಿತರಾದರೆ, ಇತರರು ಹಾವಿನಿಂದಾಗುವ ಅಪಾಯಗಳ ಬಗ್ಗೆಕಳವಳ ವ್ಯಕ್ತಪಡಿಸಿದ್ದಾರೆ. ಜತೆಗೆ ಈ ಘಟನೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.

ಅಪಾಯಕಾರಿ ಹಾವಿನ ಜತೆ ಆಟವಾಡಿದ ಮಗು

Profile pavithra Mar 15, 2025 1:58 PM

ಹೊಸದಿಲ್ಲಿ: ಹಾವೆಂದರೆ ಎಲ್ಲರೂ ಒಂದು ಮೈಲಾಚೆ ಓಡುತ್ತಾರೆ. ವಿಷವಿರಲಿ, ಇಲ್ಲದೇ ಇರಲಿ ಹಾವನ್ನು ನೋಡಿದ್ರೆ ಮೈ ನಡುಗುತ್ತೆ. ಇತ್ತೀಚೆಗಷ್ಟೇ ಸೆಕೆಯೆಂದು ಎಸಿ ಆನ್‌ ಮಾಡಲು ಹೋದ ವ್ಯಕ್ತಿ ಎಸಿಯಲ್ಲಿ ಹಾವಿನ ಜತೆ ಏಳೆಂಟು ಮರಿಗಳನ್ನು ಕಂಡು ಶಾಕ್‌ ಆಗಿದ್ದಾರೆ. ಆದರೆ ಇಲ್ಲೊಂದು ಪುಟ್ಟ ಮಗು ಅಪಾಯಕಾರಿ, ವಿಷಕಾರಿ ಹಾವಿನೊಂದಿಗೆ ನಿರ್ಭೀತಿಯಿಂದ ಆಟವಾಡಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral Video) ಆಗಿದೆ. ಮಗು ಹಾವಿನೊಂದಿಗೆ ಯಾವುದೇ ಭಯವಿಲ್ಲದೇ ಆಟವಾಡುವುದನ್ನು ಕಂಡು ಕೆಲವು ನೆಟ್ಟಿಗರು ಆಶ್ಚರ್ಯಚಕಿತರಾದರೆ, ಇದರಿಂದಾಗುವ ಅಪಾಯಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿರುವ ಈ ವಿಡಿಯೊದಲ್ಲಿ ಮಗು ಕುರ್ಚಿಯ ಮೇಲೆ ಕುಳಿತಿದ್ದು, ಅದರ ಪಕ್ಕದಲ್ಲಿ ಹಾವು ವಿಶ್ರಾಂತಿ ಪಡೆಯುತ್ತಿರುವುದು ಸೆರೆಯಾಗಿದೆ. ಆರಂಭದಲ್ಲಿ, ಮಗು ಹಾವು ಆಟಿಕೆ ಎಂದು ಭಾವಿಸಿ ಅದರೊಂದಿಗೆ ಆಟವಾಡಿದೆ. ಆದರೆ ಹಾವು ಚಲಿಸುವುನ್ನು ಕಂಡು ಮಗುವಿನ ಮುಖದಲ್ಲಿ ಭಯ ಕಾಣಿಸಿಕೊಂಡಿದೆ. ಆದರೆ ಮಗು ಅಲ್ಲಿಂದ ಓಡಿಹೋಗಲಿಲ್ಲ. ಬದಲಾಗಿ ಮಗು ಕುರ್ಚಿಯಿಂದ ಕೆಳಗಿಳಿದು ಅದಕ್ಕೆ ಹೋಗಲು ಸಹಾಯ ಮಾಡಿದೆ ಎನ್ನುವುದನ್ನು ವಿಡಿಯೊದಲ್ಲಿ ಕಂಡುಬಂದಿದೆ.

ಹಾವಿನೊಂದಿಗೆ ಮಗು ಆಟವಾಡಿದ ದೃಶ್ಯ ಇಲ್ಲಿದೆ ನೋಡಿ

ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲವು ನೆಟ್ಟಿಗರು ಮಗುವಿನ ಧೈರ್ಯ ನೋಡಿ ಆಶ್ಚರ್ಯಚಕಿತರಾದರೆ, ಇತರರು ಹಾವಿನಿಂದಾಗುವ ಅಪಾಯಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

ಒಬ್ಬರು ಕಾಮೆಂಟ್ ಮಾಡಿ, "ಮಗುವಿಗೆ ತಾನು ಯಾವುದರ ಜತೆಗೆ ಆಟವಾಡುತ್ತಿದ್ದೆ ಎಂದು ತಿಳಿದಿಲ್ಲ. ಆ ಹಾವು ಅವನನ್ನು ಕಚ್ಚಿದ್ದರೆ, ಅವನ ಜೀವಕ್ಕೆ ಅಪಾಯವಾಗುತ್ತಿತ್ತು” ಎಂದು ಹೇಳಿದ್ದಾರೆ. ಇನ್ನೊಬ್ಬರು, "ಅಂತಹ ಅಪಾಯಕಾರಿ ವಿಡಿಯೊಗಳನ್ನು ಮಾಡಬೇಡಿ. ನೀವು ಲೈಕ್ ಮತ್ತು ವ್ಯೂವ್ಸ್‌ಗಾಗಿ ಮಕ್ಕಳ ಜೀವನದೊಂದಿಗೆ ಆಟವಾಡುತ್ತಿದ್ದೀರಿ” ಎಂದು ಕಿಡಿಕಾರಿದ್ದಾರೆ. ವಿಡಿಯೊದಲ್ಲಿರುವ ಹಾವು ಅದರ ವಿಷವನ್ನು ತೆಗೆದುಹಾಕಿದ್ದರಿಂದ ಅದು ನಿರುಪದ್ರವಿಯಾಗಿದೆ ಎಂದು ಇತರರು ತಿಳಿಸಿದರೆ, ಮಗುವಿನ ಧೈರ್ಯದ ಬಗ್ಗೆ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಹಾವನ್ನು ಮನೆಯೊಳಗೆ ತಂದ ಮಗು

ಹಾವುಗಳನ್ನು ಒಳಗೊಂಡ ಅನೇಕ ವೈರಲ್ ವಿಡಿಯೊಗಳು ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಮಗುವು ಹಾವಿನೊಂದಿಗೆ ಆಡುವ ವಿಡಿಯೊಗಳು ಕಂಡುಬಂದಿದ್ದು ಇದೇ ಮೊದಲಲ್ಲ. ಇತ್ತೀಚೆಗೆ ಮಗುವೊಂದು ನಿರ್ಭೀತಿಯಿಂದ ಹಾವಿನ ಬಾಲವನ್ನು ಹಿಡಿದು ತನ್ನ ಮನೆಯೊಳಗೆ ತಂದಿರುವ ವಿಡಿಯೊ ವೈರಲ್ ಆಗಿತ್ತು. ಮಗು ಹಾವನ್ನು ಹಗ್ಗದಂತೆ ಎಳೆದುಕೊಂಡು ಬಂದು ಕುಟುಂಬದ ಇತರ ಸದಸ್ಯರು ಪೂಜೆಯಲ್ಲಿ ತೊಡಗಿರುವ ಕೋಣೆಗೆ ತಂದಿದೆ. ಮನೆಯೊಳಗಿನ ಜನರು ಹಾವನ್ನು ಕಂಡು ಭಯದಿಂದ ಕೋಣೆಯ ಸುತ್ತಲೂ ಓಡಾಡಿದ್ದಾರೆ. ಆದರೆ ಮಗು ಮಾತ್ರ ಭಯಪಡದೆ ಹಾಗೇ ನಿಂತಿದೆ. ಅದೃಷ್ಟವಶಾತ್, ಈ ಘಟನೆಯಲ್ಲಿ ಮಗುವಿಗೆ ಹಾಗೂ ಮನೆಯವರಿಗೆ ಯಾವುದೇ ಅಪಾಯವಾಗಲಿಲ್ಲ.

ಈ ಸುದ್ದಿಯನ್ನೂ ಓದಿ:Child Death: ಅಂಗನವಾಡಿಯಲ್ಲಿ ಹಾವು ಕಚ್ಚಿ 4 ವರ್ಷದ ಬಾಲಕಿ ಸಾವು

ಇತ್ತೀಚೆಗೆ ಅಂಗನವಾಡಿಯಲ್ಲಿ ಶೌಚಾಲಯಕ್ಕೆ ಹೋಗಿದ್ದ ವೇಳೆ ಹಾವು ಕಚ್ಚಿ 4 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಮಾರಿಕಾಂಬಾ ನಗರದ ಅಂಗನವಾಡಿ ಕೇಂದ್ರದಲ್ಲಿ ನಡೆದಿತ್ತು. ಶೌಚಾಲಯಕ್ಕೆ ಮೂತ್ರ ವಿಸರ್ಜನೆಗೆ ತೆರಳುವ ಮಾರ್ಗದಲ್ಲಿ ಮಗುವಿನ ಕಾಲಿಗೆ ಹಾವು ಕಚ್ಚಿತ್ತು. ನಂತರ ಮಗುವನ್ನು ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್‌ನಲ್ಲಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯವೇ ಮಗು ಸಾವನ್ನಪ್ಪಿತ್ತು.