ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಡೋದರಾ ಕಾರು ಅಪಘಾತ: ತಾನು ಕುಡಿದೇ ಇಲ್ಲ, ಎಲ್ಲ ತಪ್ಪು ರಸ್ತೆ ಗುಂಡಿಗಳದ್ದು; ಆರೋಪಿ ವಾದಕ್ಕೆ ಪೊಲೀಸರು ಸುಸ್ತು

ಗುಜರಾತ್‌ನ ವಡೋದರಾದಲ್ಲಿ ಕಾರು ಚಲಾಯಿಸಿ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದು, ಓರ್ವ ಮಹಿಳೆಯನ್ನು ಕೊಂದು, ಇತರ ನಾಲ್ವರನ್ನು ಗಾಯಗೊಳಿಸಿದ ಪ್ರಕರಣದ 23 ವರ್ಷದ ಆರೋಪಿ ರಕ್ಷಿತ್ ಚೌರಾಸಿಯಾ ಇದೀಗ ತನ್ನದೇನೂ ತಪ್ಪಿಲ್ಲ ಎಂದಿದ್ದಾನೆ. ರಸ್ತೆ ಹೊಂಡದಿಂದಾಗಿ ಅವಘಡ ಸಂಭವಿಸಿದ್ದಾಗಿ ಹೇಳಿದ್ದಾರೆ.

ವಡೋದರಾ ಕಾರು ಅಪಘಾತ: ತಾನು ಕುಡಿದೇ ಇಲ್ಲ ಎಂದ ಆರೋಪಿ

ಆರೋಪಿ ರಕ್ಷಿತ್‌ನೊಂದೊಿಗೆ ಪೊಲೀಸರು.

Profile Sushmitha Jain Mar 15, 2025 5:25 PM

ಗಾಂಧಿನಗರ: ಗುಜರಾತ್‌ನ ವಡೋದರಾದಲ್ಲಿ ಕಾರು ಚಲಾಯಿಸಿ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದು, ಓರ್ವ ಮಹಿಳೆಯನ್ನು ಕೊಂದು, ಇತರ ನಾಲ್ವರನ್ನು ಗಾಯಗೊಳಿಸಿದ ಪ್ರಕರಣದ 23 ವರ್ಷದ ಆರೋಪಿ ರಕ್ಷಿತ್ ಚೌರಾಸಿಯಾ (Rakshit Chaurasia), ಗುರುವಾರ ತಡರಾತ್ರಿ ಘಟನೆ ನಡೆದಾಗ ತಾನು ಕುಡಿದೇ ಇರಲಿಲ್ಲ ಎಂದು ಹೇಳಿಕೊಂಡಿದ್ದಾನೆ (Vadodara car crash). ಕರೇಲಿಬಾಗ್ ಪ್ರದೇಶದ ಮುಕ್ತಾನಂದ್ ಕ್ರಾಸ್ ರಸ್ತೆಯ ಬಳಿ ಬೆಳಗಿನ ಜಾವ 12.30ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಚಾಲಕ ರಕ್ಷಿತ್ ಚೌರಾಸಿಯಾನನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಪನ್ನಾ ಮೊಮಯಾ ತಿಳಿಸಿದ್ದಾರೆ.

ರಕ್ಷಿತ್ ಚೌರಾಸಿಯಾನನ್ನು ಹಿಡಿದ ಪ್ರತ್ಯಕ್ಷದರ್ಶಿಗಳು, ಆತ ಕುಡಿದು ವಾಹನ ಚಲಾಯಿಸಿದ್ದಾಗಿ ಪೊಲೀಸರಿಗೆ ತಿಳಿಸಿದ್ದರು. ರಕ್ಷಿತ್‌ ಕಾರಿನಿಂದ ಹೊರಬಂದ ನಂತರ "ಅನದರ್‌ ರೌಂಡ್‌, ಅನದರ್‌ ರೌಂಡ್‌" ಎಂದು‌ ಜೋರಾಗಿ ಕಿರುಚುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯ ವಿಡಿಯೊಗಳು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು. ಸ್ಥಳೀಯರು ಆರೋಪಿಯನ್ನು ಹಿಡಿದು ಚೆನ್ನಾಗಿ ಥಳಿಸಿದ ಬಳಿಕ ಪೊಲೀಸರಿಗೆ ಒಪ್ಪಿಸಿದ್ದರು.



ಇದರ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಕ್ಷಿತ್‌, “ತಾನು 50 ಕಿ.ಮೀ. ವೇಗದಲ್ಲಿ ಕಾರನ್ನು ಚಲಾಯಿಸುತ್ತಿದ್ದೆ. ರಸ್ತೆ ಗುಂಡಿಗಳಿಂದಾಗಿ ವಾಹನದ ನಿಯಂತ್ರಣ ತಪ್ಪಿ ಅಪಘಾತವಾಗಿದೆ” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Drink & Drive Case: ಕುಡಿದು ಕಾರು ಚಲಾಯಿಸಿದ ವ್ಯಕ್ತಿ; ಅಪಘಾತದಲ್ಲಿ ಓರ್ವ ಮಹಿಳೆ ಬಲಿ, ಹಲವರಿಗೆ ಗಾಯ

"ಮೃತರ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ನಾನು ಬಯಸುತ್ತೇನೆ. ಏಕೆಂದರೆ ಅವರ ಸಾವು ನನ್ನಿಂದಾದ ತಪ್ಪು. ಅವರು ಏನು ಬಯಸುತ್ತಾರೋ ಅದು ಆಗಬೇಕು. ಅವರ ಬಳಿ ಕ್ಷಮೆ ಕೇಳಲು ಬಯಸುತ್ತೇನೆ. ಆದರೆ ಕ್ಷಮೆ ಎನ್ನುವುದು ತುಂಬಾ ಸಣ್ಣ ಪದ” ಎಂದು ರಕ್ಷಿತ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

"ನಾನು ಯಾವುದೇ ಪಾರ್ಟಿ ಮಾಡಲಿಲ್ಲ, ನಾನು ಹೋಲಿಕಾ ದಹನ್‌ಗೆ ಹೋಗಿದ್ದೆ ಮತ್ತು ಕುಡಿದಿರಲಿಲ್ಲ" ಎಂದು ಅವನು ಪದೇ ಪದೆ ಒತ್ತಿ ಹೇಳುತ್ತಿದ್ದ. ಚಾಲನೆ ಮಾಡುವಾಗ ನಿಯಂತ್ರಣ ಕಳೆದುಕೊಂಡ ಬಗ್ಗೆ ವಿವರಿಸುತ್ತಾ, "ಕಾರು ಆಟೋಮ್ಯಾಟಿಕ್‌ ಆಗಿತ್ತು. ಏರ್‌ಬ್ಯಾಗ್‌ಗಳು ತೆರೆದಾಗ, ನಾನು ಗಾಬರಿಗೊಂಡು ಬ್ರೇಕ್‌ಗಳ ಬದಲಿಗೆ ಆಕ್ಸಿಲರೇಟರ್ ಒತ್ತಿದೆ" ಎಂದು ವಿವರಿಸಿದ್ದಾನೆ.

ಖಾರವಾಗಿ ಪ್ರತಿಕ್ರಿಯಿಸಿದ ನೆಟ್ಟಿಗರು

ರಕ್ಷಿತ್ ಚೌರಾಸಿಯಾ ತನ್ನನ್ನು ತಾನು ಅಮಾಯಕ ಎಂದು ಹೇಳಿಕೊಂಡಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. "ಈ ವ್ಯಕ್ತಿ ಈಗ ಪೊಲೀಸ್ ಕಸ್ಟಡಿಯಿಂದ ಬಿಡುಗಡೆಯಾಗಿದ್ದಾನೆಯೇ? ಕ್ರೂರ ಅಪರಾಧದ ಆರೋಪಿಯೊಬ್ಬ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾನೆ. ಅವನನ್ನು ಬಿಡುಗಡೆ ಮಾಡದಿದ್ದರೂ, ಅದೇ ಪ್ರಶ್ನೆ ಉಳಿದಿದೆ. ಆರೋಪಿಗೆ ಪತ್ರಿಕಾಗೋಷ್ಠಿ ನಡೆಸಲು ಯಾರು ಅನುಮತಿ ನೀಡಿದರು?" ಎಂದು ತನ್ಮಯ್ ಎಂಬ ಬಳಕೆದಾರರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.