ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪತ್ನಿಯ ಜತೆ ಹೋಳಿ ಹಬ್ಬ ಆಚರಿಸಿದ ಬಾಂಗ್ಲಾ ಕ್ರಿಕೆಟಿಗ

ಲಿಟ್ಟನ್‌ ದಾಸ್‌ ಇದುವರೆಗೆ ಬಾಂಗ್ಲಾ ಪರ 48 ಟೆಸ್ಟ್‌ ಪಂದ್ಯಗಳಿಂದ 2788(4 ಶತಕ, 17 ಅರ್ಧಶತಕ), ಏಕದಿನದಲ್ಲಿ 94 ಪಂದ್ಯ, 2569 ರನ್‌(5 ಶತಕ, 12 ಅರ್ಧಶತಕ), ಟಿ20ಯಲ್ಲಿ 95 ಪಂದ್ಯ, 2021 ರನ್‌(11 ಅರ್ಧಶತಕ) ಬಾರಿಸಿದ್ದಾರೆ. ಹಿಂದೂ ಎನ್ನುವ ಕಾರಣಕ್ಕೆ ಅವರನ್ನು ಚಾಂಪಿಯನ್ಸ್‌ ಟ್ರೋಫಿ ತಂಡಕ್ಕೂ ಆಯ್ಕೆ ಮಾಡಿಲ್ಲ ಎಂಬ ಮಾತುಗಳು ಕೂಡ ಕೇಳಿ ಬಂದಿತ್ತು.

ಪತ್ನಿಯ ಜತೆ ಹೋಳಿ ಹಬ್ಬ ಆಚರಿಸಿದ ಬಾಂಗ್ಲಾ ಕ್ರಿಕೆಟಿಗ

Profile Abhilash BC Mar 15, 2025 5:36 PM

ಢಾಕಾ: ಬಣ್ಣಗಳ ಹಬ್ಬ, ಪ್ರೀತಿಯ ಹಬ್ಬ ಎಂದು ಹಲವು ಹೆಸರಿನಿಂದ ಕರೆಯಿಸಿಕೊಳ್ಳುವ ಹೋಳಿ ಹಬ್ಬವನ್ನು ಶುಕ್ರವಾರ ಭಾರತದಾದ್ಯಂತ ವಿವಿಧ ಭಾಗಗಳಲ್ಲಿ ಶಾಂತಿ ಮತ್ತು ಸಂಭ್ರಮದಿಂದ ಆಚರಿಸಲಾಗಿತ್ತು(holi festival 2025). ಬಾಂಗ್ಲಾದೇಶದ ಹಿಂದೂ ಕ್ರಿಕೆಟಿಗ ಲಿಟ್ಟನ್ ದಾಸ್(Litton Das) ತಮ್ಮ ಪತ್ನಿ ಮತ್ತು ಕುಟುಂಬದೊಂದಿಗೆ ಹೋಳಿ ಹಬ್ಬವನ್ನು ಆಚರಿಸಿದ್ದಾರೆ(Litton Das celebrating Holi). ಪತ್ನಿಯ ಮುಖಕ್ಕೆ ಬಣ್ಣ ಹಚ್ಚುವ ಫೋಟೊವನ್ನು ಲಿಟ್ಟನ್ ದಾಸ್ ತಮ್ಮ ಸಾಮಾಜಿಕ ಜಾಲತಾಣದ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಹೋಳಿ ಹಬ್ಬ ಎಲ್ಲರ ಬದುಕಿನಲ್ಲೂ ರಂಗು ತರಲಿ ಎಂದು ಹಾರೈಸಿದ್ದಾರೆ. ಲಿಟನ್ ಕುಮಾರ್ ದಾಸ್ ಅವರು ಬಾಂಗ್ಲಾದೇಶದ ದಿನಜ್‌ಪುರ ಜಿಲ್ಲೆಯ ಬಂಗಾಳಿ ಹಿಂದೂ ಕುಟುಂಬದಲ್ಲಿ ಜನಿಸಿದರು.

ಇತ್ತೀಚೆಗೆ ಶ್ರದ್ಧಾ ಭಕ್ತಿಯಿಂದ ಶಿವಲಿಂಗಗಳಿಗೆ ವಿಶೇಷ ಅಭಿಷೇಕ, ಪೂಜೆ ಪುನಸ್ಕಾರ ಮಾಡಿ ಮಹಾಶಿವರಾತ್ರಿಯನ್ನು ಕೂಡ ಆಚರಿಸಿದ್ದರು. ಯಾವುದೇ ಹಿಂದೂ ಹಬ್ಬ ಇದ್ದರೂ ಕೂಡ ಅವರು ಆಚರಣೆ ಮಾಡುತ್ತಾರೆ. ಕಳೆದ ವರ್ಷ ಬಾಂಗ್ಲಾದೇಶದಲ್ಲಿ ನಡೆದಿದ್ದ ದಂಗೆಯ ವೇಳೆ ಲಿಟನ್‌ ದಾಸ್ ಕೂಡ ಹಲವು ಸಮಸ್ಯೆ ಎದುರಿಸಿದ್ದರು. ಅವರ ಮನೆಗೆ ಬೆಂಕಿ ಹಚ್ಚಲು ಕೂಡ ಮುಂದಾಗಿದ್ದರು. ಹಿಂದೂ ಎನ್ನುವ ಕಾರಣಕ್ಕೆ ಅವರನ್ನು ಚಾಂಪಿಯನ್ಸ್‌ ಟ್ರೋಫಿ ತಂಡಕ್ಕೂ ಆಯ್ಕೆ ಮಾಡಿಲ್ಲ ಎಂಬ ಮಾತುಗಳು ಕೂಡ ಕೇಳಿ ಬಂದಿತ್ತು.



30 ವರ್ಷದ ಲಿಟ್ಟನ್‌ ದಾಸ್‌ ಇದುವರೆಗೆ ಬಾಂಗ್ಲಾ ಪರ 48 ಟೆಸ್ಟ್‌ ಪಂದ್ಯಗಳಿಂದ 2788(4 ಶತಕ, 17 ಅರ್ಧಶತಕ), ಏಕದಿನದಲ್ಲಿ 94 ಪಂದ್ಯ, 2569 ರನ್‌(5 ಶತಕ, 12 ಅರ್ಧಶತಕ), ಟಿ20ಯಲ್ಲಿ 95 ಪಂದ್ಯ, 2021 ರನ್‌(11 ಅರ್ಧಶತಕ) ಬಾರಿಸಿದ್ದಾರೆ.

ಬಣ್ಣದಾಟದಲ್ಲಿ ಮಿಂದೆದ್ದ ರಾಜಸ್ಥಾನ್‌ ತಂಡದ ಆಟಗಾರರು

ರಾಜಸ್ಥಾನ್‌ ರಾಯಲ್ಸ್‌(Rajasthan Royals) ತಂಡದ ಆಟಗಾರರು ಮತ್ತು ಕೋಚಿಂಗ್‌ ಸಿಬ್ಬಂದಿಗಳು ಪಿಂಕ್‌ ಸಿಟಿ ಜೈಪುರದಲ್ಲಿ ಕಲರ್‌ ಫುಲ್‌ ಆಗಿ ಹೋಳಿ(Holi celebration) ಹಬ್ಬವನ್ನು ಆಚರಿಸಿದ್ದಾರೆ. ಪರಸ್ಪರ ಬಣ್ಣ ಹಚ್ಚಿಕೊಂಡು ಆಟಗಾರರು ಹೋಳಿ ಸಂಭ್ರಮಿಸಿದ ವಿಡಿಯೊವನ್ನು ಪ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್‌ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಯಶಸ್ವಿ ಜೈಸ್ವಾಲ್‌, ರಿಯಾನ್‌ ಪರಾಗ್‌, ಜುರೇಲ್‌ ಸೇರಿ ಹಲವು ಆಟಗಾರರು ಮುಖ್ಯ ಕೋಚ್‌ ದ್ರಾವಿಡ್‌ಗೆ ಬಣ್ಣ ಹಚ್ಚಿ ಸಂಭ್ರಮಿಸಿದರು. ಸಂಜು ಸ್ಯಾಮ್ಸನ್‌ ನಾಯಕತ್ವದ ರಾಜಸ್ಥಾನ್‌ ರಾಯಲ್ಸ್‌ ತಂಡ ಮಾರ್ಚ್‌ 23 ರಂದು ನಡೆಯುವ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.