ಖುಷಿಗಳೆಲ್ಲವೂ ನಮ್ಮದಾಗಬೇಕು !

ಖುಷಿಗಳೆಲ್ಲವೂ ನಮ್ಮದಾಗಬೇಕು !

image-4ff98f94-31a2-44f7-ac91-2bf140dda4e7.jpg
Profile Vishwavani News December 18, 2022
image-e5e02d73-7b29-4a3a-be37-907286d72e08.jpg
ವಿನಯ್‌ ಖಾನ್‌ ಕೆಲವೊಮ್ಮೆ ನೋವು, ದುಃಖ, ದುಮ್ಮಾನ, ಸಂಕಟ, ನಿರಾಶೆ, ಸೋಲು, ಅಭದ್ರತೆಗಳೆಲ್ಲ ಜೀವನದಲ್ಲಿ ಆಗುವುದೇ, ಆದರೆ ಅದರ ಬಗ್ಗಯೇ ಚಿಂತಿಸುತ್ತಾ ಕುಳಿತರೆ, ಬದುಕುವುದಾದರೂ ಹೇಗೆ? ನನ್ನ ಸುತ್ತಲಿರುವರೆಲ್ಲರೂ ಖುಷಿಯಾಗಿ ಆರಾಮವಾಗಿ ಇದ್ದಾರೆ ಯೇ, ಇದ್ದರೂ ಅದು ಹೇಗೆ? ನನ್ನ ಕಷ್ಟ ಬರೀ ನನ್ನದಷ್ಟೇನಾ? ಅನಿಶ್ಚಿತತೆಯ ಹೋರಾಟ ದಲ್ಲಿ ಬದುಕುವುದಾದರೂ ಹೇಗೆ? ಬದುಕೆಂದರೆ ಸವಾಲು, ಅದನ್ನು ಎದುರಿಸುವುದಾದರೂ ಹೇಗೆ? ಬದುಕಿಗೆ ಖುಷಿಯಿರಬೇಕು ಆದರೆ ಅದು ಸಿಗುವುದೆಲ್ಲಿ? ಇಂತಹ ಹಲವಾರು ಮನೋಸಾಮಾನ್ಯ ಪ್ರಶ್ನೆಗಳಿಗೆ ಸಹಜವಾದ, ಮಾಡಲು ಸಾಧ್ಯವಾಗುವ, ಅತೀ ಈಸಿಯಾದ ಥರದಲ್ಲಿ ಉತ್ತರ ಹೇಳುವ ಪ್ರಯತನ್ವನ್ನು ‘ವಿಶ್ವವಾಣಿ’ಯ ‘ಶ್ವೇತಪತ್ರದ’ ಅಂಕಣಕಾರ್ತಿ ಡಾ.ಶ್ವೇತಾ ಗೌರಿಬಿದನೂರು (ಡಾ.ಶ್ವೇತಾ ಬಿ ಸಿ) ಅವರು ಮಾಡಿ ದ್ದಾರೆ. ಖುಷಿಯಾಗಿರಲು ದಿನವೂ ಧ್ಯಾನಮಾಡಿ, ಯಾವುದಕ್ಕೂ ಚಿಂತಿಸಬೇಡಿ, ಸಿಟ್ಟಾಗಬೇಡಿ, ಮನೆಯವರೊಟ್ಟಿಗೆ ಸಮಯ ಕಳೆಯಿರಿ, ಕೆಟ್ಟದನ್ನು ನೆನೆಸಿಕೊಳ್ಳಬೇಡಿ, ದೂರ ಆದವರ ಬಗ್ಗೆ ಯೋಚಿಸಬೇಡಿ, ನಿರಾಳರಾಗಿರಿ ಎಂದೇ ಎಷ್ಟೋ ಜನ ಹೇಳುವು ದುಂಟು. ಆದರೆ ಮಾಡುವುದ್ಹೇಗೆ? ದುಃಖ, ಭಯ, ದುಗುಡಗಳೆಲ್ಲವೂ ಮಾನವನ ಸಹಜ ಪ್ರತಿಕ್ರಿಯೆಗಳು ಅದನ್ನೇ ಮಾಡಿ ಕೊಳ್ಳಬೇಡಿ ಅಂದರೆ, ಹಾಗಾಗುವುದ್ಹೇಗೆ? ಮೋಟಿವೇಷನ್ ಸ್ಪೀಕರ್‌ಗಳು ಮಾತನಾಡವಾಗ, ಆಧ್ಯಾತ್ಮಿಕ ಗುರುಗಳು ಮಾತನಾಡು ವಾಗ ಅದನ್ನೆಲ್ಲ ಕೇಳಲು ಇಂಪಾಗೇ ಇರುತ್ತೆ ಆದರೆ, ಅದನ್ನೆಲ್ಲ ಜೀವನದಲ್ಲಿ ಜಾರಿ ಮಾಡುವುದಾದರೂ ಹೇಗೆ? ಎಲ್ಲರೂ ಯಾವುದರ ಹಿಂದೆನೇ ಓಡುತ್ತಿರುತ್ತೇವೆ, ದುಡ್ಡು, ಹೆಸರು, ಕೆಲಸ, ಪ್ರೀತಿ, ಸಾಧನೆ ಇನ್ನೇನೊ ಆದರೆ ಅವುಗಳ ಹಿಂದೆ ಓಡ್ತಾ ಓಡ್ತಾ ನಮ್ಮ ಖುಷಿಗಳನ್ನೇ ಕಳೆದುಕೊಳ್ಳುತ್ತಿರುತ್ತೇವೆ. ತುಂಬಾ ಮೂಡಿ ಆಗಿರುತ್ತೇವೆ, ಯಾವಾಗಲೂ ಯಾವುದೋ ಚಿಂತೆಯಲ್ಲೇ ತೊಡಗಿರುತ್ತೇವೆ, ನಮ್ಮನ್ನು ಇನ್ನೊಬ್ಬರ ಜತೆ ಕಂಪೇರ್ ಅನ್ನೂ ಮಾಡುತ್ತರುತ್ತೇವೆ, ಹಾಗಿದ್ದಲ್ಲಿ ಖುಷಿಯನ್ನು ಬಿಟ್ಟು ಕೊಟ್ಟು ಮಂಕಾಗಿರಬೇಕಾ? ಅನ್ನುವ ಯೋಚನೆಗಳಲ್ಲಿ ನೀವೂ ತೊಡಗಿದ್ದರೆ ಅದಕ್ಕೆಲ್ಲ ಸರಳವಾದ ಪರಿಹಾರಗಳನ್ನು ಈ ಪುಸ್ತಕಗಳಲ್ಲಿ ಹೇಳಿಕೊಟ್ಟಿದ್ದಾರೆ. Happiness starts with you- not with your relationships, job or money ಅಂತ ಸದ್ಗುರು ಜಗ್ಗಿ ವಾಸುದೇವ್ ಅವರು ಹೇಳಿ ದ್ದಾರೆ. ಆದರೆ, ಹಲವು ತೊಂದರೆಗಳಿಗೆ ಸಿಲುಕಿರುವ ಮನುಷ್ಯನಿಗೆ ಖುಷಿಯಾದರೂ ಬರುವುದು ಹೇಗೆ? ನಾವಿರುವ ಪ್ರತೀ ಸಂದರ್ಭದಲ್ಲೂ ಒಳ್ಳೆಯದನ್ನು ಹುಡುಕಿಕೊಂಡು ಅದರಲ್ಲೇ ಖುಷಿಯಾಗುವುದು, ಮನಸ್ಸಿಗೆ ಹಿತವೆನಿಸುವ ಕೆಲಸಗಳಿಂದ ಖುಷಿಯನ್ನು ಅನುಭವಿಸಿಕೊಂಡು ಬದುಕನ್ನು ಖುಷಿಯಾಗಿರಿಸುವ ನಮ್ಮಲ್ಲರ ಅತಿ ಸಣ್ಣ ಕನಸಿಗೆ ರೆಕ್ಕೆ ಪುಕ್ಕಗಳನ್ನು ಕೊಟ್ಟು ಹಾರಲು ಬಿಡುವಲ್ಲಿ ಈ ಪುಸ್ತಕ ಸಹಾಯಕಾರಿ. ೨೫ ಅಧ್ಯಾಯಗಳಿಂದ ಕೂಡಿದ ಪುಸ್ತಕದಲ್ಲಿ, ಪ್ರತಿಯೊಂದೂ ಅಧ್ಯಾಯವು ನಮಗೆಲ್ಲ ಕನೆಕ್ಟ್ ಆಗುವುದೇ. ಪ್ರತಿ ಅಧ್ಯಾಯದಲ್ಲಿ ಬರುವ ಇನಸ್ಪಿರೇಷನಲ್ ಕೋಟ್ಸ್, ಕಥೆಗಳು, ಶ್ವೇತಾ ಅವರು ನೋಡಿರುವಂತ ಕೌನ್ಸಲಿಂಗ್‌ಗಳಲ್ಲಿ ನಡೆದ ಕಥೆಗಳು, ಅಧ್ಯಾತ ಮುಗಿದ ಮೇಲೆ ಬರುವ ಪಾಯಿಂಟ್ಸ್‌ಗಳನ್ನು ಅತ್ಯಂತ ಚೆನ್ನಾಗಿ ಹೂರಣ ಮಾಡಿ ಕೊಟ್ಟಿದ್ದಾರೆ ವೃತ್ತಿಯಿಂದ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಧ್ಯಾಪಕಿಯಾಗಿರುವ ಇವರು, ಪ್ರವೃತ್ತಿಯಿಂದ ಮನೋವೈದ್ಯೆಯಾಗಿಯೂ, ಅಂಕಣಕಾರ್ತಿ,  ಲೇಖಕಿ ಯಾಗಿ ಈ ಪುಸ್ತಕನ್ನು ಅತ್ಯಂತ ಆಸ್ಥೆಯಿಂದ ಬರೆದು, ಎಲ್ಲ ರೀತಿಯ ವಯಸ್ಸು ಮತ್ತು ಎಲ್ಲ ರೀತಿಯ ಜನರಿಗೆ ಸೂಕ್ತ ಎನಿಸುವ ಪುಸ್ತಕ ಇದು.   Read E-Paper click here
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ