Saturday, 30th November 2024

ಎರಡನೇ ಅಲೆ: ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು

ಆರೋಗ್ಯ ಮತ್ತು ಶಿಕ್ಷಣದ ನಡುವೆ ಯಾವುದನ್ನು ಆಯ್ಕೆ ಮಾಡಬೇಕೆಂಬ ಗೊಂದಲದಲ್ಲಿ ಪೋಷಕರು

ಕಿರಿಯ ತರಗತಿಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಹಿಂದೇಟು

ವಿಶೇಷ ವರದಿ: ಅಪರ್ಣಾ.ಎ.ಎಸ್.ಬೆಂಗಳೂರು

ರಾಜ್ಯದಲ್ಲಿ ಕರೋನಾ ಎರಡನೇ ಅಲೆಯ ಅಬ್ಬರ ಜೋರಾಗುತ್ತಿದ್ದಂತೆ, ಶಾಲೆಗಳತ್ತ ಮುಖಮಾಡಿದ್ದ ಅನೇಕರಿಗೆ ಆತಂಕ ಶುರು ವಾಗಿದ್ದು, ತಮ್ಮ ಮಕ್ಕಳನ್ನು ಶಾಲೆ ಕಳಿಸಬೇಕೇ ಬೇಡವೇ ಎನ್ನುವ ಆತಂಕದಲ್ಲಿದ್ದಾರೆ. ಈಗಾಗಲೇ ಶಾಲೆಗೆ ಸೇರ್ಪಡೆಗೊಂಡಿ ರುವ ಮಕ್ಕಳ ಪೋಷಕರು ಆಫ್ ಲೈನ್ ಬದಲು ಆನ್‌ಲೈನ್ ತರಗತಿಯಲ್ಲಿ ತಮ್ಮ ಮಕ್ಕಳು ಮುಂದುವರಿಯಲಿ ಎನ್ನುವ ಮಾತು ಗಳನ್ನು ಆಡುತ್ತಿದ್ದರೆ, ಶಾಲೆಗೆ ಸೇರಿಸದೇ ಇರುವ ಪೋಷಕರು ಈ ವರ್ಷ ಶಾಲೆಗೆ ಸೇರಿಸಬೇಕೇ? ಬೇಡವೇ ಎನ್ನುವ ಗೊಂದಲ ದಲ್ಲಿದ್ದಾರೆ.

ಇನ್ನು ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದರೂ ಶಾಲಾ ಕಾಲೇಜುಗಳಿಗೆ ರಜೆ ಇರುವುದಿಲ್ಲ,
ಪರೀಕ್ಷೆಗಳು ನಡೆಯುತ್ತವೆ ಎಂದು ತಿಳಿಸಿದ್ದು, ಆನ್‌ಲೈನ್ ಕ್ಲಾಸ್‌ಗಳು ಎಂದಿನಂತೆ ಮುಂದುವರಿಯಲಿದೆ ಎಂದು ಸಚಿವರು ತಿಳಿಸಿದ್ದು, ಈ ಕುರಿತು ಪೋಷಕರಲ್ಲಿ ಇನ್ನೂ ಗೊಂದಲಗಳಿವೆ. ಈಗಾಗಲೇ ಆಫ್ ಲೈನ್ ತರಗತಿಗಳು ಪ್ರಾರಂಭವಾಗಿದ್ದು, ಬಾಲವಾಡಿ, ಸೇರಿದಂತೆ ಎಲ್‌ಕೆಜಿಗೆ ತಮ್ಮ ಮಕ್ಕಳನ್ನು ದಾಖಲು ಮಾಡಲು ಪೋಷಕರು ಮಾನಸಿಕವಾಗಿ ಸಿದ್ಧರಾಗಿರುವಾಗಿ ದ್ದರು.

ಪ್ರಸ್ತುತ ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆೆ ಹೆಚ್ಚುತ್ತಿರುವುದರಿಂದ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಹೆಚ್ಚಿನೆಲ್ಲಾ ತರಗತಿಗಳು ಪ್ರಾರಂಭವಾಗಿದ್ದು, ಪ್ರಾಥಮಿಕ ಶಾಲೆಗಳ ಆರಂಭಕ್ಕೂ ಸಿದ್ಧತೆ ನಡೆದಿದ್ದು, ಸರಕಾರಿ, ಖಾಸಗಿ ಶಾಲಾ ಕಾಲೇಜುಗಳು ಈಗಾಗಲೇ ದಾಖಲಾತಿಯನ್ನು ಪ್ರಾರಂಭಿಸಿವೆ.

ಆದರೆ ಸಣ್ಣ ಮಕ್ಕಳನ್ನು ಶಾಲೆಗೆ ಸೇರಿಸುವುದರಿಂದ ಆರೋಗ್ಯ ಸಂಬಂಧಿ ತೊಂದರೆಗಳುಂಟಾದರೆ ಯಾರು ಹೊಣೆ? ತಿಳು ವಳಿಕೆಯೆರದ ಮಕ್ಕಳನ್ನು ಸಂಭಾಳಿಸುವುದೇ ಕಷ್ಟವಾಗಿರುವಾಗ ಶಾಲೆಗೆ ಸೇರಿಸಿದರೆ ಅವರನ್ನು ಸೋಂಕಿಗೆ ಒಳಗಾಗದಂತೆ
ನೋಡಿಕೊಳ್ಳುವವರು ಯಾರು? ಸಾಮಾಜಿಕ ಅಂತರ, ಮಾಸ್ಕ್‌, ಸ್ಯಾನಿಟೈಸರ್ ಎಂದರೆ ಮಕ್ಕಳ ಅರಿವಿಗೆ ಬರುತ್ತದೆಯೇ.ಈ ವರ್ಷ ಸ್ಕೂಲೂ ಬೇಡ, ಪರೀಕ್ಷೆಯೂ ಬೇಡ ಎಂಬುದು ಪೋಷಕರ ವಾದವಾಗಿದೆ.

ವಿಜ್ಞಾನ ವಿದ್ಯಾರ್ಥಿಗಳಿಗೆ ಆಫ್‌ಲೈನ್‌ಗೆ ಹಾಜರಾಗುವುದು ಅನಿವಾರ್ಯ: ಇನ್ನು ಕಲಾ ವಿಭಾಗ, ವಾಣಿಜ್ಯ ವಿಭಾಗ ದವರಾದರೂ ಆನ್‌ಲೈನ್ ತರಗತಿಗಳ ಮುಖಾಂತರ ತಮ್ಮ ತರಗತಿಗಳಿಗೆ ಹಾಜರಾದರೂ ವಿಜ್ಞಾನದ ವಿದ್ಯಾರ್ಥಿಗಳಿಗೆ ಆಫ್‌ಲೈನ್ ತರಗತಿಗಳಿಗೆ ಹಾಜರಾಗುವುದು ಅನಿವಾರ್ಯವಾಗಿರುತ್ತದೆ.

ಲ್ಯಾಬ್, ಪ್ರಾಕ್ಟಿಕಲ್ ತರಗತಿಗಳಿಗೆ ಖುದ್ದು ಹಾಜರಾಗಿ ಕಲಿಯುವುದೇ ಕಷ್ಟವಾರುವಾಗ ಆನ್‌ಲೈನ್ ತರಗತಿಗಳು ಎಷ್ಟು ಪರಿಣಾಮಕಾರಿ ಎಂಬುದೂ ಗಮನಿಸಬೇಕಾದ ಅಂಶವಾಗಿದೆ. ಹೀಗಾಗಿ ವಿಜ್ಞಾನ ವಿದ್ಯಾರ್ಥಿಗಳು ತರಗತಿಗೆ ಅನಿವಾರ್ಯವಾಗಿ
ಹಾಜಾರಾಗಬೇಕಾಗಿದ್ದು, ಇವರನ್ನು ಕಾಲೇಜಿಗೆ ಕಳುಹಿಸಲು ಪೋಷಕರು ಹಿಂಜರಿಯುತ್ತಿದ್ದಾರೆ.

ಆನ್‌ಲೈನ್ ತರಗತಿಯೇ ಉತ್ತಮ
ಕರೋನಾ ಅಧಿಕವಾಗುತ್ತಿದ್ದು, ಮಕ್ಕಳನ್ನು ಶಾಲೆಗೆ ಕರೆಸಿ,ಕರೋನಾ ಸೋಂಕಿಗೆ ಅವರೂ ಬಲಿಯಾಗುವಂತೆ  ಮಾಡಬೇಡಿ. ಇದರಿಂದ ಮತ್ತೆ ಕರೋನಾ ಸೋಂಕು ಹೆಚ್ಚಾಗುತ್ತದೆ. ಮಕ್ಕಳು ಗುಂಪು ಗುಂಪಾಗಿ ಸೇರಿಕೊಳ್ಳುವುದರಿಂದ ಅಪಾಯ ಇನ್ನೂ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. ತರಗತಿಗಳಂತೆ ಪರೀಕ್ಷೆಗಳನ್ನೂ ಆನ್ ಲೈನ್ ಮೂಲಕ ನಡೆಸಿ.ಇದರಿಂದ ಎಲ್ಲರಿಗೂ ತೊಂದರೆ
ತಪ್ಪುತ್ತದೆ ಎಂದು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

***

ಎಲ್‌ಕೆಜಿ, ಅಂಗನವಾಡಿ, ನರ್ಸರಿಗೆ ಮಕ್ಕಳ ದಾಖಲಾತಿ ಪ್ರಾರಂಭಗೊಂಡಿದೆ. ಜತೆಗೆ ಕರೋನಾ 2ನೇ ಅಲೆ ಪ್ರಮಾಣವೂ ಅಧಿಕವಾಗುತ್ತಿದೆ. ಹೀಗಿರುವಾಗ ಸಣ್ಣ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಅಪಾಯಕಾರಿ.ಇನ್ನು ಪುಟ್ಟ ಮಕ್ಕಳಿಗೆ ಇದರ ಅರಿವೂ ಇರುವುದಿಲ್ಲ. ಹೀಗಿರುವಾಗ ಶಾಲೆ, ಕಾಲೇಜುಗಳ ಆರಂಭ ಮಾಡುವುದು ಸೂಕ್ತವಲ್ಲ. ಆನ್‌ಲೈನ್ ತರಗತಿ ಗಳನ್ನು
ಮುಂದುವರಿಸುವುದೇ ಸೂಕ್ತ.

-ವಿದ್ಯಾ ಪೋಷಕರು