ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Narada Sanchara: ಛಲದೊಳ್ ಯತ್ನಾಳ್..!

ಬೇಕಿದ್ದರೆ ಮುರಿದು ಹೋದೇನು, ಆದರೆ ಬಾಗುವುದಿಲ್ಲ’ ಎಂಬ ಮಾತಿಗೆ ಪ್ರತ್ಯಕ್ಷ ಸಾಕ್ಷಿ ಬೇಕೆನ್ನು ವವರು, ನಮ್ಮ ಬಸನಗೌಡ ಪಾಟೀಲ್ ಯತ್ನಾಳರನ್ನು ಒಮ್ಮೆ ಕಣ್ತುಂಬಿಕೊಳ್ಳಬೇಕು. ತಮ್ಮದೇ ಪಕ್ಷದ ಕೆಲ ವೊಂದು ಚಟುವಟಿಕೆಗಳನ್ನು ಬಿಡುಬೀಸಾಗಿ ಖಂಡಿಸುವ ಗುಂಡಿಗೆ ತೋರಿದ್ದ ಯತ್ನಾಳರು, ಕಳೆದ ಕೆಲ ತಿಂಗಳಿಂದ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರರಿಗೆ ಬಿಸಿಮುಟ್ಟಿಸುತ್ತಾ ಬಂದಿರುವುದು ಜಗಜ್ಜಾಹೀರು

Narada Sanchara: ಛಲದೊಳ್ ಯತ್ನಾಳ್..!

Profile Ashok Nayak Jan 28, 2025 11:19 AM

ನಾರದ ಸಂಚಾರ

ಬೇಕಿದ್ದರೆ ಮುರಿದು ಹೋದೇನು, ಆದರೆ ಬಾಗುವುದಿಲ್ಲ’ ಎಂಬ ಮಾತಿಗೆ ಪ್ರತ್ಯಕ್ಷ ಸಾಕ್ಷಿ ಬೇಕೆನ್ನು ವವರು, ನಮ್ಮ ಬಸನಗೌಡ ಪಾಟೀಲ್ ಯತ್ನಾಳರನ್ನು ಒಮ್ಮೆ ಕಣ್ತುಂಬಿಕೊಳ್ಳಬೇಕು.

ಅಬ್ಬಾ! ಅದೆಂಥಾ ಕೆಚ್ಚು, ಅದೆಂಥಾ ಧೈರ್ಯ. “ಛೇ ಬಿಡ್ರೀ, ಯತ್ನಾಳರು ಅಂದ್ರೆ ಯತ್ನಾಳರೇ. ಅವರಿಗೆ ಪರ್ಯಾಯ ಇರಲಿಕ್ಕೆ ಸಾಧ್ಯವೇ ಇಲ್ಲ. ಹೇಳಿ-ಕೇಳಿ ಅವರು ಗಂಡುಮೆಟ್ಟಿದ ನಾಡಿನ ಭಾಗದವರಲ್ವೇನ್ರೀ? ಹೀಗಾಗೇ ಛಲ ಅನ್ನೋದು ಅವರಲ್ಲಿ ದಟ್ಟವಾಗಿ ಕೆನೆಗಟ್ಟಿದೆ.

‘ನಾಗರಹಾವು’ ಚಲನಚಿತ್ರದ ರಾಮಾಚಾರಿಯನ್ನೂ ಇವರ ಮುಂದೆ ನೀವಾಳಿಸಿ ಒಗೆಯಬೇಕು, ಆ ಮಟ್ಟದ ಛಲದ ಒಡೆಯರು ನಮ್ ಯತ್ನಾಳರು. ‘ಛಲದೊಳ್ ದುರ‍್ಯೋಧನಂ’ ಎಂಬ ಆದಿಕವಿ ಪಂಪನ ಮಾತನ್ನು ಆಧುನಿಕ ಕನ್ನಡಕ್ಕೆ ಬದಲಿಸಿ ‘ಛಲದೊಳ್ ಯತ್ನಾಳ್’ ಎಂದು ಹೇಳುವಷ್ಟರ ಮಟ್ಟಿಗಿನ ಛಲಗಾರರು ನಮ್ಮ ಯತ್ನಾಳರು" ಎಂದು ಅವರ ಅಭಿಮಾನಿಗಳು ಮೀಸೆಯನ್ನು ಹುರಿ ಮಾಡಿಕೊಳ್ಳುವುದು ಈ ಕಾರಣಕ್ಕೇ ಇರಬೇಕು!

ಇಂಥ ಮಾತುಗಳಿಗೆ ಮತ್ತು ಗ್ರಹಿಕೆಗಳಿಗೆ ಕಾಲಾನುಕಾಲಕ್ಕೆ ಗ್ರಾಸ ಒದಗಿಸಿಕೊಂಡು ಬಂದ ಹೆಗ್ಗಳಿಕೆ ಬಸನಗೌಡ ಪಾಟೀಲ ಯತ್ನಾಳರದ್ದು. “ಯತ್ನಾಳರಲ್ಲಿ ಎಲ್ಲಾ ‘ಖುಲ್ಲಂ ಖುಲ್ಲಾ’, ಹೀಗಾಗಿ ‘ಮುಗು ಮ್ಮಾಗಿ’ ಅನ್ನುವಂಥದ್ದು ಬಹುತೇಕ ಕಮ್ಮಿ. ‘ಎಂದು ಆದೇವು ನಾವು ಮುಕ್ತ... ಮುಕ್ತ... ಮುಕ್ತಾ...’ ಎಂಬ ಗುನುಗಿಗೆ ಅವಕಾಶವನ್ನೇ ನೀಡದೆ, ‘ಬಾಯಿ ಇರೋದೇ ಮಾತಾಡೋಕ್ಕಲ್ವೇ?’ ಎಂಬ ಗ್ರಹಿಕೆಯ ಮೂರ್ತರೂಪವೇ ಆದವರು ಯತ್ನಾಳರು" ಎಂಬುದಾಗಿ ಅವರ ರಾಜಕೀಯ ವಿರೋಧಿ ಗಳೂ ವಿಧಾನವೀಧಿಯಲ್ಲಿ ವಿಧಿವತ್ತಾಗಿ ಮಾತಾಡಿಕೊಳ್ಳುವಷ್ಟರ ಮಟ್ಟಿಗೆ ಯತ್ನಾಳರ ‘ಬಾಯಿ-ಬಲ’ -ಮಸ್ಸು!

ತಮ್ಮದೇ ಪಕ್ಷದ ಕೆಲವೊಂದು ಚಟುವಟಿಕೆಗಳನ್ನು ಬಿಡುಬೀಸಾಗಿ ಖಂಡಿಸುವ ಗುಂಡಿಗೆ ತೋರಿದ್ದ ಯತ್ನಾಳರು, ಕಳೆದ ಕೆಲ ತಿಂಗಳಿಂದ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರರಿಗೆ ಬಿಸಿಮುಟ್ಟಿಸುತ್ತಾ ಬಂದಿರುವುದು ಜಗಜ್ಜಾಹೀರು. ಅದರ ಮತ್ತೊಂದು ಅಧ್ಯಾಯವೆಂಬಂತೆ ಈಗ, “ಪಕ್ಷದ ರಾಜ್ಯಾ ಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಲು ನಾನು ಸಿದ್ಧ; ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಖಚಿತ" ಎಂದು ಘೋಷಿಸುವ ಮೂಲಕ ವಿಜಯೇಂದ್ರರ ಪಾಳಯಕ್ಕೆ ‘ರಣವೀಳ್ಯ’ ನೀಡಿದ್ದಾರೆ ಯತ್ನಾಳರು.

ಕರ್ನಾಟಕವನ್ನು ದಕ್ಷಿಣದಲ್ಲಿ ಬಿಜೆಪಿ ಪಾಳೇಪಟ್ಟಿನ ‘ಹೆಬ್ಬಾಗಿಲು’ ಮಾಡಿಕೊಂಡು, ಅದರ ಮೂ ಲಕ ಮಿಕ್ಕ ರಾಜ್ಯಗಳಲ್ಲೂ ತೂರಿಕೊಂಡು, ಸಾಮ್ರಾಜ್ಯವನ್ನು ವಿಸ್ತರಿಸಬೇಕು ಎಂಬುದು ಒಂದು ಕಾಲಕ್ಕೆ ಬಿಜೆಪಿಯ ಹೆಬ್ಬಯಕೆ ಆಗಿದ್ದೇನೋ ನಿಜ; ಆದರೆ ಕರ್ನಾಟಕದ ‘ದಿಡ್ಡಿಬಾಗಿಲೇ’ ಈಗ ದಿಕ್ಕೆಟ್ಟು ಗಾಳಿಗೆ ಸಿಕ್ಕ ಗಾಳಿಪಟದಂತೆ ಹೊಡೆದುಕೊಳ್ಳುತ್ತಿದೆ.

‘ಆಷಾಢದಲ್ಲಿ ಅಧಿಕಮಾಸ’ ಅನ್ನೋಹಾಗೆ, ರಾಜ್ಯ ಬಿಜೆಪಿಯಲ್ಲಿ ಒಂದು ಕಡೆ ‘ಯತ್ನಾಳ್-ವಿಜ ಯೇಂದ್ರ’ ಜೋಡಿ “ಸಿಗಿವೆಂ ಕ್ಷಣದಲಿ ನಿನ್ನ ನಾಂ, ಎಲ್ಲಿ ಹೋದರೇನು ನಿನ್ನ ಉಳಿಸೆನು.." ಎಂದು ಅಬ್ಬರಿಸುತ್ತಿದ್ದರೆ, ಮತ್ತೊಂದೆಡೆ ‘ರೆಡ್ಡಿ-ರಾಮುಲು’ ಜೋಡಿಯು ‘ಅರ್ಜುನ-ಬಭ್ರುವಾಹನ’ ಕಾಳ ಗದ ರೇಂಜಿನಲ್ಲಿ “ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ..." ಎಂದು ಬೊಬ್ಬಿರಿ ಯುತ್ತಿದೆ.

ಹೀಗಾಗಿ, ಈ ಜೋಡಿಗಳ ‘ಯುಗಳಗೀತೆ’ಯು ರಾಜ್ಯ ಬಿಜೆಪಿ ಎಂಬ ಭೀಷ್ಮನನ್ನು ‘ಶರಶಯ್ಯೆ’ಯಲ್ಲಿ ಮಲಗಿಸಿ ಹಾಡುವ ‘ಲಾಲಿಹಾಡು’ ಆಗದಿದ್ದರೆ ಸಾಕು ಎಂದು ‘ಕೇಶವಕೃಪಾ’ಪೋಷಿತರು ಇನ್ನಿಲ್ಲ ದಂತೆ ಹಂಬಲಿಸುತ್ತಿದ್ದಾರಂತೆ!

ನಾರಾಯಣ ನಾರಾಯಣ!

ವಾಯುಮಾಲಿನ್ಯ ತಗ್ಗಿಸುವುದಕ್ಕಾಗಿ ಥಾಯ್ಲೆಂಡ್ ಸರಕಾರವು ಒಂದು ವಾರ ಕಾಲ ಸಾರ್ವಜನಿಕರಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಡುತ್ತಿದೆಯಂತೆ. ಬ್ಯಾಂಕಾಕ್ ನಗರದಲ್ಲಿನ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳು, ಮೆಟ್ರೋಗಳು, ಸ್ಕೈ ರೈಲುಗಳಲ್ಲಿ ಒಂದು ವಾರದವರೆಗೆ ಜನರು ಪೂರ್ಣ ಉಚಿತ ವಾಗಿ ಸಂಚರಿಸಬಹುದಂತೆ ಎಂಬ ಸುದ್ದಿಯನ್ನು ಓದಿದ ಕರ್ನಾಟಕದ ಮಹಿಳಾಮಣಿಗಳು, “ಛೇ, ರಾಜ್ಯದಲ್ಲಿರುವ ಉಚಿತ ಪ್ರಯಾಣದ ಸೌಲಭ್ಯವನ್ನು (ಸಮುದ್ರ ಮಾರ್ಗದಲ್ಲಾದರೂ ಸರಿ) ಬ್ಯಾಂಕಾ ಕ್‌ವರೆಗೂ ವಿಸ್ತರಿಸಿದ್ರೆ ಚೆನ್ನಾಗಿರ‍್ತಿತ್ತು ಅಲ್ವೇನ್ರೀ?" ಎಂದು ಕೈ ಕೈ ಹಿಸುಕಿಕೊಂಡ್ರಂತೆ!!