Viral Video: ಮುಂಬೈ ಲೋಕಲ್ ರೈಲಿನಲ್ಲಿ ಸ್ಕಾಟಿಷ್ ಸಂಗೀತಗಾರ ಮಾಡಿದ್ದೇನು ಗೊತ್ತಾ? ಈ ವಿಡಿಯೊ ವೈರಲ್
ಮುಂಬೈ ಲೋಕಲ್ ರೈಲಿನಲ್ಲಿ ಸ್ಕಾಟಿಷ್ ಸಂಗೀತಗಾರನೊಬ್ಬ ಸ್ಕಾಟಿಷ್ ಬ್ಯಾಗ್‍ಪೈಪರ್ ಅನ್ನು ನುಡಿಸಿ ಸಂಗೀತದ ರಸಧಾರೆಯನ್ನು ಹರಿಸಿದ್ದಾನೆ. ಕಿಕ್ಕಿರಿದ ಜನರ ಮಧ್ಯದಲ್ಲಿ ಆತ ಸಂಗೀತ ನುಡಿಸಿದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ. ರೈಲಿನಲ್ಲಿದ್ದ ಜನರು ಇದರಿಂದ ಖುಷಿ ಪಟ್ಟು ಚಪ್ಪಾಳೆ ತಟ್ಟಿದ್ದಾರೆ.


ಮುಂಬೈ: ಮುಂಬೈ ಲೋಕಲ್ ರೈಲಿನಲ್ಲಿ ಪ್ರತಿದಿನ ಒಂದಲ್ಲ ಒಂದು ವಿಚಿತ್ರ ಘಟನೆಗಳು ನಡೆಯುತ್ತಿರುತ್ತದೆ. ಇವುಗಳ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿ ವೈರಲ್ ಆಗುತ್ತಿರುತ್ತದೆ. ಅದೇ ರೀತಿ ಇತ್ತೀಚೆಗೆ ಮುಂಬೈ ಲೋಕಲ್ ರೈಲಿನಲ್ಲಿ ಸ್ಕಾಟಿಷ್ ಸಂಗೀತಗಾರನೊಬ್ಬ ಸ್ಕಾಟಿಷ್ ಬ್ಯಾಗ್‍ಪೈಪರ್ ಅನ್ನು ನುಡಿಸಿದ್ದಾನೆ. ಕಿಕ್ಕಿರಿದ ಜನರ ಮಧ್ಯೆ ಆತ ಸಂಗೀತ ನುಡಿಸಿದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ. ರೈಲಿನಲ್ಲಿದ್ದ ಜನರು ಅವನ ಸಂಗೀತ ಮಾಧುರ್ಯಕ್ಕೆ ಮನಸೋತು ಖುಷಿ ಪಟ್ಟು ಚಪ್ಪಾಳೆ ತಟ್ಟಿದ್ದಾರೆ. ಈ ವರ್ಷದ ಜನವರಿಯಲ್ಲಿ ಮುಂಬೈಗೆ ಬಂದ ಸ್ಕಾಟಿಷ್ ಸಂಗೀತಗಾರ ರಾಬಿನ್ ಆಲ್ಡರ್‍ಸ್ಲೋವ್ ಮುಂಬೈ ನೋಡುವುದಕ್ಕಾಗಿ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾನೆ. ಈ ಸಮಯದಲ್ಲಿ ಪ್ರಯಾಣಿಕರನ್ನು ರಂಜಿಸಲು ಸಾಂಪ್ರದಾಯಕವಾದ ಸ್ಕಾಟಿಷ್ ಉಡುಪನ್ನು ಧರಿಸಿ ಬ್ಯಾಗ್‍ಪೈಪರ್‌ನಿಂದ ಸಂಗೀತ ನುಡಿಸಿ ಪ್ರಯಾಣಿಕರಿಗೆ ಖುಷಿ ನೀಡಿದ್ದಾನೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸ್ಕಾಟಿಷ್ ಸಂಗೀತಗಾರನ ವಿಡಿಯೊ ಇಲ್ಲಿದೆ ನೋಡಿ
ವೈರಲ್ ಆದ ವಿಡಿಯೊದಲ್ಲಿ ರಾಬಿನ್ ಹಸಿರು ಬ್ಲೇಜರ್, ಕಿಲ್ಟ್ ಮತ್ತು ಪ್ಲಾಯ್ಡ್ ಸ್ಯಾಶ್ ಧರಿಸಿ- ಜನದಟ್ಟಣೆಯಿಂದ ತುಂಬಿದ ಎರಡನೇ ದರ್ಜೆಯ ಕಂಪಾರ್ಟ್‌ಮೆಂಟ್ ಹತ್ತುವುದು ಸೆರೆಯಾಗಿತ್ತು. ರಾಬಿನ್ ಕಂಪಾರ್ಟ್‌ಮೆಂಟ್‌ನ ಮಧ್ಯದಲ್ಲಿ ನಿಂತು, ತನ್ನ ಬ್ಯಾಗ್ ಪೈಪರ್‌ನಿಂದ ಸಂಗೀತ ನುಡಿಸಿದ್ದಾನೆ. ಪ್ರಯಾಣಿಕರು ಕೂಡ ಇವನ ಸಂಗೀತದ ಸುಧೆಗೆ ಫಿದಾ ಆಗಿ ಚಪ್ಪಾಳೆ ತಟ್ಟಿದ್ದಾರೆ. ವಿಡಿಯೊದಲ್ಲಿ ರಾಬಿನ್ ಹಾಡುವಾಗ ಕೆಲವು ಪ್ರಯಾಣಿಕರು ಚಪ್ಪಾಳೆ ತಟ್ಟಿ ಸಂಗೀತ ಕಾರ್ಯಕ್ರಮವನ್ನು ಹುರಿದುಂಬಿಸುವ ಮೂಲಕ ಎಂಜಾಯ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಬೆಂಗಳೂರು ಮೇಟ್ರೋದಲ್ಲಿ ಸಂಗೀತ ಕಲರವ; ವಿಡಿಯೊ ವೈರಲ್
ಬೆಂಗಳೂರು ಮೆಟ್ರೋದಲ್ಲಿ ಎಡ್ ಶೀರನ್ ಅಭಿಮಾನಿಗಳು ಮೆಟ್ರೋದಲ್ಲಿ ಹಾಡಿದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಸಲೋನಿ ಎಂಬ ವ್ಯಕ್ತಿ ಸಂಗೀತದ ಈ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕ ಜನರ ಗಮನ ಸೆಳೆದಿದೆ."ಲವ್ ದಿ ವೈಬ್" ಎಂದು ಒಬ್ಬರು ವಿಡಿಯೊಗೆ ಕಾಮೆಂಟ್ ಮಾಡಿದರೆ, "ಬೆಲೆ ಏರಿಕೆಗೆ ಇದೇ ಕಾರಣ" ಎಂದು ಇನ್ನೊಬ್ಬರು ಬರೆದಿದ್ದಾರೆ. ಈ ಸಂಗೀತವು ನಮ್ಮ ಮೆಟ್ರೋದಲ್ಲಿ ಗರಿಷ್ಠ ಶುಲ್ಕವನ್ನು 60 ರೂ.ಗಳಿಂದ 90 ರೂ.ಗೆ ಹೆಚ್ಚಿಸಲು ಕಾರಣವಾಗಿದೆ ಎಂದು ಇನ್ನೊಬ್ಬರು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ವಿಮಾನದಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ವಿಮಾನದಲ್ಲಿ ಜೋರಾಗಿ ಅತ್ತ ಪುಟ್ಟ ಬಾಲಕಿಯನ್ನು ಸಮಾಧಾನಪಡಿಸಲು ಲೆಬನಾನ್ ಸಂಗೀತಗಾರ ಹಾಡು ಹಾಡಿದ್ದರು. ಮಕ್ಕಳು ಪ್ರಯಾಣ ಮಾಡುವ ಸಮಯದಲ್ಲಿ ಅಳುವುದು, ಹಠ ಮಾಡುವುದು ಸಾಮಾನ್ಯ. ಆದರೆ ಇದು ಸಹ ಪ್ರಯಾಣಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ವಿಮಾನದಲ್ಲಿ ಪ್ರಯಾಣಿಸುವಾಗ ಪುಟ್ಟ ಬಾಲಕಿಯೊಬ್ಬಳು ಜೋರಾಗಿ ಅತ್ತಿದ್ದು, ಆಕೆಯನ್ನು ಸಮಾಧಾನಪಡಿಸಲು ಸಂಗೀತಗಾರರೊಬ್ಬರು ವಿಮಾನದಲ್ಲಿ ಸಂಗೀತ ಕಛೇರಿ ನಡೆಸಿದ್ದಾರೆ. ಪುಟ್ಟ ಬಾಲಕಿಯನ್ನು ರಂಜಿಸುವ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಲೆಬನಾನ್ ಮೂಲದ ಕಲಾವಿದ ಮಿಡೋ ಬಿರ್ಜಾವಿ ದರ್ಬುಕಾ ಎಂಬ ಗೋಬ್ಲೆಟ್ ಆಕಾರದ ಸಂಗೀತ ವಾದ್ಯವನ್ನು ನುಡಿಸಿ ಪುಟ್ಟ ಬಾಲಕಿಯನ್ನು ಸಮಾಧಾನ ಮಾಡಿದ್ದಾರೆ.