ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಷ್ಟೇ ನನಗೆ ಗೊತ್ತಿರುವ ಕಾಯಕ : ಅಪಪ್ರಚಾರಕ್ಕೆ ಅಂಜುವುದಿಲ್ಲ : ಶಾಸಕ ಪುಟ್ಟಸ್ವಾಮಿಗೌಡ ಅಭಿಮತ
ಕೆಲವರಿಗೆ ನಮ್ಮ ಅಭಿವೃದ್ಧಿ ಕೆಲಸಗಳನ್ನು ಸಹಿಸಲು ಸಾಧ್ಯವಾಗದೆ ನಮ್ಮ ವಿರುದ್ದ ಅಪ ಪ್ರಚಾರ ದಲ್ಲಿ ತೊಡಗಿದ್ದಾರೆ. ಶತ್ರುವಿನ ಕೊನೆ ಅಸ್ತ್ರವೇ ಅಪ ಪ್ರಚಾರ ಎಂದು ತಮ್ಮ ರಾಜಕೀಯ ವಿರೋಧಿಗಳ ವಿರುದ್ದ ವಾಗ್ದಾಳಿ ನಡೆಸಿದ ಅವರು ನೆರೆಯ ಮಧುಗಿರಿಯಲ್ಲಿ ಸರ್ಕಾರಿ ಜಮೀನನ್ನು ಕಬಳಿಸಿರುವು ದಾಗಿ ನನ್ನ ಮೇಲೆ ಸುಳ್ಳಿನ ಸರಮಾಲೆಯನ್ನು ಸೃಷ್ಟಿಸಿ,ಟಿವಿ ಚಾನಲುಗಳ ಕಚೇರಿಗೆ ಅಲೆದು ಪ್ರಚಾರ ಮಾಡುತ್ತಿದ್ದಾರೆ.

ಗೌರಿಬಿದನೂರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಬೇಕಾದ ಅನುದಾನ ತಂದು ಮತದಾರರ ಋಣ ತೀರಿಸುವುದಷ್ಟೇ ನನಗೆ ಗೊತ್ತಿರುವ ಕಾಯಕವಾಗಿದೆ. ಅಭಿವೃದ್ದಿಯನ್ನು ಸಹಿಸದೆ ಅಪ್ರಪ್ರಚಾರದಲ್ಲಿ ತೊಡಗಿರುವವರಿಗೆ ದೇವರೇ ಬುದ್ದಿಕಲಿಸಲಿ ಎಂದು ಶಾಸಕ ಪುಟ್ಟಸ್ವಾಮಿಗೌಡ ತಿಳಿಸಿದರು.

ಗೌರಿಬಿದನೂರು : ಗೌರಿಬಿದನೂರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಬೇಕಾದ ಅನುದಾನ ತಂದು ಮತದಾರರ ಋಣ ತೀರಿಸುವುದಷ್ಟೇ ನನಗೆ ಗೊತ್ತಿರುವ ಕಾಯಕವಾಗಿದೆ. ಅಭಿವೃದ್ದಿಯನ್ನು ಸಹಿಸದೆ ಅಪ್ರಪ್ರಚಾರದಲ್ಲಿ ತೊಡಗಿರುವವರಿಗೆ ದೇವರೇ ಬುದ್ದಿಕಲಿಸಲಿ ಎಂದು ಶಾಸಕ ಪುಟ್ಟಸ್ವಾಮಿಗೌಡ ತಿಳಿಸಿದರು.
ತಾಲೂಕಿನ ಹೊಸೂರು ಗ್ರಾಮದಲ್ಲಿ ಶುದ್ಧ ನೀರಿನ ಘಟಕ, ವಾಲ್ಮೀಕಿ ಸಮುದಾಯ ಭವನ,ಸಿಸಿ ರಸ್ತೆ ಹಾಗೂ ಹೈಮಾಸ್ಕ್ ದೀಪವನ್ನು ಉದ್ಘಾಟನೆ ಮಾಡಿದ ನಂತರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಹೊಸೂರು ಗ್ರಾಮ ವಿಚಾರವಾದಿ ಹಾಗೂ ಖ್ಯಾತ ಶಿಕ್ಷಣ ತಜ್ಞ ಡಾ ಎಚ್.ನರಸಿಂಹಯ್ಯನವರಿಗೆ ಜನ್ಮ ನೀಡಿದ ಊರು. ಆದರೆ ಈ ಗ್ರಾಮ ಜನರ ನಿರೀಕ್ಷೆಯಂತೆ ಇದುವರೆಗೂ ಅಭಿವೃದ್ಧಿಯಾಗಿಲ್ಲ, ಈ ಕಾರಣಕ್ಕಾಗಿ ಹೊಸೂರು ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ನಾನು ಮುಂದಾಗಿದ್ದೇನೆ ಎಂದು ಶಾಸಕ ಕೆಎಚ್ ಪುಟ್ಟಸ್ವಾಮಿಗೌಡರು ತಿಳಿಸಿದರು.
ಇದನ್ನೂ ಓದಿ: Chikkaballapur News: ನವ ಓದುವಿನಂತೆ ಸಿಂಗಾರಗೊಂಡ ನಂದಿ ಗ್ರಾಮ, ಬೆಟ್ಟದ ಮೇಲೆ ಅಧಿಕಾರಿಗಳ ಕಲರವ
ಕೆಲವರಿಗೆ ನಮ್ಮ ಅಭಿವೃದ್ಧಿ ಕೆಲಸಗಳನ್ನು ಸಹಿಸಲು ಸಾಧ್ಯವಾಗದೆ ನಮ್ಮ ವಿರುದ್ದ ಅಪ ಪ್ರಚಾರ ದಲ್ಲಿ ತೊಡಗಿದ್ದಾರೆ. ಶತ್ರುವಿನ ಕೊನೆ ಅಸ್ತ್ರವೇ ಅಪ ಪ್ರಚಾರ ಎಂದು ತಮ್ಮ ರಾಜಕೀಯ ವಿರೋಧಿ ಗಳ ವಿರುದ್ದ ವಾಗ್ದಾಳಿ ನಡೆಸಿದ ಅವರು ನೆರೆಯ ಮಧುಗಿರಿಯಲ್ಲಿ ಸರ್ಕಾರಿ ಜಮೀನನ್ನು ಕಬಳಿಸಿ ರುವುದಾಗಿ ನನ್ನ ಮೇಲೆ ಸುಳ್ಳಿನ ಸರಮಾಲೆಯನ್ನು ಸೃಷ್ಟಿಸಿ,ಟಿವಿ ಚಾನಲುಗಳ ಕಚೇರಿಗೆ ಅಲೆದು ಪ್ರಚಾರ ಮಾಡುತ್ತಿದ್ದಾರೆ. ಕುತಂತ್ರವೇ ನನ್ನ ಮನೆ ದೇವರು ಎನ್ನುವಂತೆ ನನ್ನ ವಿರುದ್ಧ ರಾಜಕೀಯ ಚಿತಾವಣೆ ನಡೆಸುತ್ತಿರುವ ಇವರುಗಳ ಆಟ ನನ್ನ ಮುಂದೆ ನಡೆಯಲ್ಲ ಎಂದು ಗುಡುಗಿದ ಅವರು ಹೂಸೂರು ಗ್ರಾಮದ ಪೇಟೆ ಬೀದಿಯನ್ನು ಎಂಬತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಶ್ರೀಘ್ರವಾಗಿ ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಹಿಂದ ವರ್ಗದ ಮುಖಂಡ ಆರ್ ಅಶೋಕ್ ಕುಮಾರ್ ಮಾತನಾಡುತ್ತಾ ಕಳೆದು ಎರಡು ವರ್ಷದ ಅವಧಿಯಲ್ಲಿ ತಾಲೂಕಿನ ಸಮಸ್ಯೆಗಳನ್ನು ವಿಧಾನ ಸಭೆಯ ಅಧಿವೇಶನದಲ್ಲಿ ಧ್ವನಿ ಎತ್ತಿ,ಆ ಮೂಲಕ ತಾಲೂಕು ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆದು,ಸರ್ಕಾರದಿಂದ ನೂರಾರು ಕೋಟಿ ರೂಪಾಯಿಗಳ ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದ ಅವರು ಚುನಾವಣೆಯ ಸಂಧರ್ಭದಲ್ಲಿ ಶಾಸಕರು ಕ್ಷೇತ್ರದ ರೈತರಿಗೆ ನೀಡಿದ ಅಶ್ವಾಸನೆಯಂತೆ ರೈತರ ಕೊಳವೆ ಬಾವಿಗಳಿಗೆ ಟಿಸಿಗಳನ್ನು ಅಳವಡಿಸುವ ಕೆಲಸವನ್ನು ಮಾಡುತ್ತಿರುವ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಿ ಮಂತ್ರಿಗಳು ಕೂಡ ಆಗುತ್ತಾರೆ ಎಂದು ಭವಿಷ್ಯ ನುಡಿದರು.
ಕೋಚಿಮುಲ್ ನಿರ್ದೇಶಕ ಜೆ.ಕಾಂತರಾಜು ಅವರು ಮಾತನಾಡಿ ಶಾಸಕ ಪುಟ್ಟಸ್ವಾಮಿಗೌಡರು ಯಾವುದೇ ರೀತಿಯ ತಾರತಮ್ಯ ಮಾಡದೆ ಸರ್ವರಿಗೂ ಸಮಪಾಲು,ಸರ್ವರಿಗೂ ಸಮಪಾಲು ಎಂಬAತೆ ತಾಲೂಕನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಹೊಸೂರು ಗ್ರಾ.ಪಂ ಅಧ್ಯಕ್ಷೆ ಗೀತಾ, ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರಾಮ ರೆಡ್ಡಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ವಿಜಯರಾಘವ,ತರಿದಾಳು ಚಿಕ್ಕಣ್ಣ,ಕೃಷಿಕ ಸಮಾಜದ ಅಧ್ಯಕ್ಷ ಪ್ರಭಾಕರ್ ರೆಡ್ಡಿ, ಲಕ್ಷ್ಮಣ್ ರಾವ್,ತಾ.ಪಂ ಮಾಜಿ ಸದಸ್ಯ ನಾರಾಯಣಸ್ವಾಮಿ, ರಾಕೇಶ್, ಅಬ್ದುಲ್ಲಾ, ಕೀಮ್ಲಾ ನಾಯಕ್, ನಾಗರಾಜ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.