#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Union Budget 2025-26: ಇಂದು ಬಜೆಟ್‌ ಮಂಡನೆ; ಯಾರಿಗೆ ಸಿಹಿ, ಯಾರಿಗೆ ಕಹಿ?

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು (ಫೆ. 1) ಲೋಕಸಭೆಯಲ್ಲಿ ಬಜೆಟ್‌ ಮಂಡಿಸಲಿದ್ದಾರೆ. ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಮೂಲಕ ಸಂಸತ್ತಿನ ಬಜೆಟ್‌ ಅಧಿವೇಶನ ಅರಂಭವಾಗಿದೆ. ಬೆಳಗ್ಗೆ 11 ಗಂಟೆಗೆ ನಿರ್ಮಲಾ ಸೀತಾರಾಮನ್‌ ತಮ್ಮ 8ನೇ ಬಜೆಟ್‌ ಮಂಡಿಸಲಿದ್ದು, ಆ ಕುರಿತಾದ ವಿವರ ಇಲ್ಲಿದೆ.

ಇಂದು ಬಜೆಟ್‌ ಮಂಡನೆ; ಜನ ಸಾಮಾನ್ಯರಿಗೆ ಏನೆಲ್ಲ ಸಿಗಲಿದೆ?

ನಿರ್ಮಲಾ ಸೀತಾರಾಮನ್‌.

Profile Ramesh B Feb 1, 2025 7:07 AM

ನವದೆಹಲಿ: ಸತತ 3ನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ ಸರ್ಕಾರದ ಬಹು ನಿರೀಕ್ಷಿತ ಬಜೆಟ್‌ ಅನ್ನು ಇಂದು (ಫೆ. 1) ಕೇಂದ್ರ ಹಣಕಾಸು ಸಚಿವೆ (Finance Minister) ನಿರ್ಮಲಾ ಸೀತಾರಾಮನ್(Nirmala Sitharaman) ಅವರು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ (Union Budget 2025-26). ಮಧ್ಯಮ ವರ್ಗದವರ ಮೇಲಿರುವ ಅಪಾರ ತೆರಿಗೆ ಹೊರೆಯ ಭಾರ ಇಳಿಸುವ ನಿರೀಕ್ಷೆ ಇದೆ. ಇತ್ತ ಮೂಲಸೌಕರ್ಯಗಳ ಮೇಲೆ ಹೆಚ್ಚಿನ ಗಮನ ಹರಿಸಲೇಬೇಕಾದ ಒತ್ತಡವೂ ಇದೆ. ಹೀಗಾಗಿ ಈ ಬಾರಿಯ ಸಾಕಷ್ಟು ಕುತೂಹಲ ಕೆರಳಿಸಿದೆ. ಯಾವ ಕೇತ್ರಕ್ಕೆ ಎಷ್ಟು ಅನುದಾನ ಸಿಗಲಿದೆ, ಯಾವೆಲ್ಲ ಹೊಸ ಯೋಜನೆಗಳು ಘೋಷಣೆಯಾಗಲಿವೆ ಎನ್ನುವ ಪ್ರಶ್ನೆಗೆ ಇನ್ನೇನು ಕೆಲವೇ ಹೊತ್ತಲ್ಲಿ ಉತ್ತರ ಸಿಗಲಿದೆ.

ಬಜೆಟ್‌ ಮಂಡನೆ ಎಷ್ಟು ಗಂಟೆಗೆ?

ಶುಕ್ರವಾರ (ಜ. 31) ಸಂಸತ್‌ನ ಬಜೆಟ್ ಅಧಿವೇಶ ಆರಂಭವಾಗಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆಯಾಗಲಿದೆ. ವಿಶೇಷ ಎಂದರೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ 8ನೇ ಬಜೆಟ್ ಇದು. ಅವರು ಮಂಡಿಸಿದ ಬಜೆಟ್‌ನಲ್ಲಿ 6 ಪೂರ್ಣ ಮತ್ತು 2 ಮಧ್ಯಂತರ ಬಜೆಟ್‌ಗಳು ಸೇರಿವೆ. ಈ ಹಿಂದೆ ಮೊರಾರ್ಜಿ ದೇಸಾಯಿ ಅವರು ಸತತ 6 ಬಾರಿ ಬಜೆಟ್‌ ಮಂಡಿಸಿ ದಾಖಲೆ ಬರೆದಿದ್ದರು. ಅವರು ಒಟ್ಟು 10 ಬಜೆಟ್‌ ಮಂಡಿಸಿದ್ದಾರೆ.

ಬಜೆಟ್‌ ಲೈವ್‌ ವೀಕ್ಷಣೆ ಹೇಗೆ?

ಸರ್ಕಾರದ ಅಧಿಕೃತ ವಾಹಿನಿಗಳಾದ ದೂರದರ್ಶನ ಮತ್ತು ಸಂಸದ್ ಟಿವಿಗಳು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ನೇರ ಪ್ರಸಾರವನ್ನು ಪ್ರಸಾರ ಮಾಡಲಿವೆ. ಜತೆಗೆ ಸಂಸತ್ತಿನ ಸಂಸದ್ ಟಿವಿ ಮತ್ತು ದೂರದರ್ಶನ ಯುಟ್ಯೂಬ್ ಪ್ಲಾಟ್‌ಫಾರ್ಮ್‌ಗಳು ಕೇಂದ್ರ ಬಜೆಟ್ 2025-26ರ ಮಂಡನೆಯನ್ನು ಪ್ರಸಾರ ಮಾಡಲಿವೆ.

ಕೇಂದ್ರ ಬಜೆಟ್ 2025-26ರ ಪ್ರತಿ ಎಲ್ಲಿ ಸಿಗುತ್ತೆ?

ಕೇಂದ್ರ ಬಜೆಟ್ 2025-26ರ ಬಜೆಟ್ ಪ್ರತಿ ಕೇಂದ್ರ ಸರ್ಕಾರದ ಯೂನಿಯನ್ ಬಜೆಟ್‌ ಮೊಬೈಲ್ ಆ್ಯಪ್‌ನಲ್ಲಿ ಪಿಡಿಎಫ್‌ ಪ್ರತಿಯ ರೂಪದಲ್ಲಿ ಲಭ್ಯವಿದೆ ಅಥವಾ ಯೂನಿಯನ್ ಬಜೆಟ್ ವೆಬ್ ಪೋರ್ಟಲ್ (www.indiabudget.gov.in)ನಲ್ಲೂ ದೊರೆಯಲಿದೆ. ಇನ್ನು Android ಮತ್ತು iOS ಬಳಕೆದಾರರು ಯೂನಿಯನ್ ಬಜೆಟ್‌ನ ಬಹುಭಾಷಾ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಬಜೆಟ್‌ ಪ್ರತಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲಭ್ಯ.

ಈ ಸುದ್ದಿಯನ್ನೂ ಓದಿ: Union Budget 2025: ಜವಾಹರಲಾಲ್‌ ನೆಹರೂ, ಮನಮೋಹನ್‌ ಸಿಂಗ್‌...: ಕೇಂದ್ರ ಬಜೆಟ್‌ ಮಂಡಿಸಿದ ಪ್ರಧಾನಿಗಳಿವರು

ನಿರೀಕ್ಷೆಗಳೇನು?

  • ತೆರಿಗೆ ಕಡಿತ ಘೋಷಣೆ.
  • ಮೂಲ ಸೌಕರ್ಯ ಅಭಿವೃದ್ಧಿ, ಮೆಟ್ರೊ, ರೈಲ್ವೆ ನೆಟ್‌ವರ್ಕ್‌, ಮಲ್ಟಿ ಮಾಡೆಲ್‌ ಕಾರಿಡಾರ್‌ಗಳು ನಗರ ಮತ್ತು ನಗರಗಳು ಸುತ್ತುಮುತ್ತಲು ವಾಣಿಜ್ಯೋದ್ದೇಶದ ರಿಯಾಲ್ಟಿ ಚಟುವಟಿಕೆಗಳ ಉತ್ತೇಜನಕ್ಕೆ ನೆರವು.
  • ಸಿಮೆಂಟ್‌, ಉಕ್ಕಿನ ಜಿಎಸ್‌ಟಿ ಇಳಿಕೆ.
  • ಮಹಿಳೆಯರ ಸಬಲೀಕರಣ ದೃಷ್ಟಿಯಿಂದ ಹಲವು ಯೋಜನೆಗಳು.
  • ಉಚಿತ ಆಹಾರ ಧಾನ್ಯ ವಿತರಣೆ.
  • ಪಿಎಂಎವೈ ಸ್ಕೀಮ್‌ ಅಡಿಯಲ್ಲಿ ಅಫರ್ಡೆಬಲ್ ಮನೆಗಳ ನಿರ್ಮಾಣ‌.
  • ನರೇಗಾಕ್ಕೆ ಹೆಚ್ಚಿನ ಅನುದಾನ.
  • ಉದ್ಯೋಗ ಸೃಷ್ಟಿಗೆ ಆದ್ಯತೆ.