Stock Market: ಸೆನ್ಸೆಕ್ಸ್ 1400 ಅಂಕ ಕುಸಿತ; ನಿಫ್ಟಿ 22,150ಕ್ಕೆ ಪತನ ಕಾರಣವೇನು?
ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಚಿಪ್ ಉತ್ಪಾದಕ ಎನ್‌ವಿಡಿಯಾ ಷೇರು ದರ 4% ಇಳಿದ ಬೆನ್ನಲ್ಲೇ ಐಟಿ ಷೇರುಗಳ ದರ ಇಳಿಯಿತು. ಪರ್ಸಿಸ್ಟೆಂಟ್ ಸಿಸ್ಟಮ್ಸ್, ಟೆಕ್ ಮಹೀಂದ್ರಾ, ಎಂಫಸಿಸ್, ಇನ್ಫೋಸಿಸ್, ವಿಪ್ರೊ, ಟಿಸಿಎಸ್, ಎಚ್‌ಸಿಎಲ್ ಟೆಕ್ ಷೇರುಗಳು ಹೆಚ್ಚು ನಷ್ಟಕ್ಕೀಡಾಯಿತು.


ಮುಂಬಯಿ: ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರ 1400 ಅಂಕಗಳ ಭಾರಿ ನಷ್ಟಕ್ಕೀಡಾಗಿದೆ. ಮಧ್ಯಂತರ ವಹಿವಾಟಿನಲ್ಲಿ 1,400 ಅಂಕಗಳನ್ನು ಕಳೆದುಕೊಂಡು 73,194ಕ್ಕೆ ಇಳಿಯಿತು. ನಿಫ್ಟಿ 391 ಅಂಕ ನಷ್ಟದಲ್ಲಿ 22,154ಕ್ಕೆ ಕುಸಿಯಿತು. ಹೂಡಿಕೆದಾರರಿಗೆ ಇಂದು ಒಂದೇ ದಿನ 9 ಲಕ್ಷ ಕೋಟಿ ರುಪಾಯಿ ನಷ್ಟ ಉಂಟಾಗಿದೆ. ನಿಫ್ಟಿ ಐಟಿ ಇಂಡೆಕ್ಸ್ 4% ಇಳಿಯಿತು. ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಚಿಪ್ ಉತ್ಪಾದಕ ಎನ್‌ವಿಡಿಯಾ ಷೇರು ದರ 4% ಇಳಿದ ಬೆನ್ನಲ್ಲೇ ಐಟಿ ಷೇರುಗಳ ದರ ಇಳಿಯಿತು. ಪರ್ಸಿಸ್ಟೆಂಟ್ ಸಿಸ್ಟಮ್ಸ್, ಟೆಕ್ ಮಹೀಂದ್ರಾ, ಎಂಫಸಿಸ್, ಇನ್ಫೋಸಿಸ್, ವಿಪ್ರೊ, ಟಿಸಿಎಸ್, ಎಚ್‌ಸಿಎಲ್ ಟೆಕ್ ಷೇರುಗಳು ಹೆಚ್ಚು ನಷ್ಟಕ್ಕೀಡಾಯಿತು. ನಿಫ್ಟಿ ಬ್ಯಾಂಕ್, ಮೆಟಲ್, ಫಾರ್ಮಾ, ಕನ್‌ಸ್ಯೂಮರ್ ಡ್ಯೂರಬಲ್ಸ್, ಆಯಿಲ್ ಆಂಡ್ ಗ್ಯಾಸ್ ಇಂಡೆಕ್ಸ್ ಇಳಿಯಿತು.
ನಿಫ್ಟಿ 1996ರಿಂದೀಚೆಗಿನ ತನ್ನ ಇತಿಹಾಸದಲ್ಲಿಯೇ ಗರಿಷ್ಠ ನಷ್ಟನ್ನು ಕಾಣುತ್ತಿದೆ. ಸತತ ಐದು ತಿಂಗಳಿನಿಂದ ಕುಸಿಯುತ್ತಿದೆ. ಸೆಪ್ಟೆಂಬರ್‌ನಲ್ಲಿ ಇದು ದಾಖಲೆಯ ಎತ್ತರದಲ್ಲಿತ್ತು. ಅಲ್ಲಿಂದ ಬಳಿಕ ಹೂಡಿಕೆದಾರರ ಸಂಪತ್ತಿನಲ್ಲಿ 85 ಲಕ್ಷ ಕೋಟಿ ರುಪಾಯಿ ನಷ್ಟ ಸಂಭವಿಸಿದೆ. 1996ರಿಂದೀಚೆಗೆ ನಿಫ್ಟಿ 6 ಸಲ ಮಾತ್ರ 4 ಅಥವಾ ಹೆಚ್ಚು ತಿಂಗಳಿನ ಸತತ ಕುಸಿತಗಳನ್ನು ಕಂಡಿದೆ. ಅಮೆರಿಕದ ಆರ್ಥಿಕ ಬಿಕ್ಕಟ್ಟು ಮತ್ತು ಹಣದುಬ್ಬರ ಏರಿಕೆಯ ಸಮಸ್ಯೆಯ ಪರಿಣಾಮ ಭಾರತೀಯ ಐಟಿ ಕಂಪನಿಗಳ ಷೇರು ದರ ಶುಕ್ರವಾರ ಇಳಿಯಿತು. ನಿಫ್ಟಿ ಐಟಿ ಇಂಡೆಕ್ಸ್ 4% ಕುಸಿಯಿತು. ಅಮೆರಿಕದಲ್ಲಿ ಈ ವಾರದ ನಿರುದ್ಯೋಗ ಕುರಿತ ಅಂಕಿ ಅಂಶಗಳು ಏರಿಕೆಯನ್ನು ದಾಖಲಿಸಿದ್ದು, ಸ್ಟಾಕ್ ಮಾರ್ಕೆಟ್‌ನಲ್ಲಿ ತಲ್ಲಣ ಸೃಷ್ಟಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಡೆಸುತ್ತಿರುವ ಟ್ರೇಡ್ ವಾರ್, ಏಷ್ಯಾದ ದುರ್ಬಲ ಮಾರುಕಟ್ಟೆ ಪರಿಸ್ಥಿತಿ, ಎನ್‌ವಿಡಿಯಾದ ನಾಲ್ಕನೇ ತ್ರೈಮಾಸಿಕದ ದುರ್ಬಲ ಫಲಿತಾಂಶ, ಅಮೆರಿಕದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯೇ ಷೇರು ಮಾರುಕಟ್ಟೆ ಸೂಚ್ಯಂಕಗಳ ಕುಸಿತಕ್ಕೆ ಕಾರಣವಾಗಿದೆ.