ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral Video: ‘ಮೆನ್ ವಿಲ್ ಬಿ ಮೆನ್’ – ಸೀರೆ ಉಟ್ಟ ರೋಬೋ ಸುಂದರಿಯ ನಮಸ್ತೆಗೆ ಸುಸ್ತು ಬಿದ್ದ ಈತನ ರಿಯಾಕ್ಷನ್‌ ಹೇಗಿತ್ತು ನೋಡಿ

ನಮ್ಮಲ್ಲಿ ನಡೆಯುವ ವಿವಿಧ ಸಮಾರಂಭಗಳಲ್ಲಿ ಗಮ್ಮತ್ತಿನ ವಿಷಯಗಳು ನಡೆಯುತ್ತಲೇ ಇರುತ್ತೆ. ಅವುಗಳಲ್ಲಿ ಕೆಲವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಅಂತದ್ದೇ ಒಂದು ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೋಡುಗರಲ್ಲೂ ನಗೆಯುಕ್ಕಿಸುವಂತಿದೆ.

‘ನಮಸ್ತೇ.. ನಮಸ್ತೇ..’ ಎಷ್ಟು ಸಲ ಮಾಡ್ತಿಯಮ್ಮ..! ಫನ್ನಿ ವಿಡಿಯೊ ವೈರಲ್‌

Profile Sushmitha Jain Feb 28, 2025 5:17 PM

ಬೆಂಗಳೂರು: ಮದುವೆ ಮತ್ತು ಶುಭ ಸಮಾರಂಭಗಳಲ್ಲಿ ಹಲವಾರು ಗಮ್ಮತ್ತಿನ ವಿಷಯಗಳು ನಡೆಯುತ್ತಿರುತ್ತವೆ. ಮತ್ತು ಈ ರೀಲ್ ಯುಗದಲ್ಲಿ ಇಂತಹ ಗಮ್ಮತ್ತಿನ ವಿಷಯಗಳು ಸೊಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಅಂತಹದ್ದೇ ಒಂದು ಗಮ್ಮತ್ತಿನ ವಿಡಿಯೋ ಒಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಇದನ್ನು ನೋಡಿದವರು ಬಿದ್ದು ಬಿದ್ದು ನಗುವ ಪರಿಸ್ಥಿತಿ ಉಂಟಾಗಿದೆ. ಮದುವೆ ಮನೆಗಳಲ್ಲಿ ಸ್ವಾಗತಕಾರಿಣಿ ಗೊಂಬೆ ನಿಂತಿರುವುದನ್ನು ನೀವು ಗಮನಸಿಯೇ ಇರುತ್ತೀರಿ. ಆ ಗೊಂಬೆ ಆಟೋಮ್ಯಾಟಿಕ್ ಆಗಿ ನಮಸ್ಕಾರ ಮಾಡುತ್ತಲೇ ಇರುತ್ತದೆ, ಈ ಮೂಲಕ ಮದುವೆಗೆ ಬರುವವರನ್ನು ಅದು ನಿರಂತರವಾಗಿ ಸ್ವಾಗತಿಸುತ್ತಲೇ ಇರುತ್ತದೆ. ಆ ಗೊಂಬೆಗೆ ಪದೇ ಪದೇ ನಮಸ್ಕಾರ ಮಾಡುತ್ತಿರುವ ವ್ಯಕ್ತಿಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral Video) ಆಗಿದೆ.

ಸೀರೆಯಲ್ಲಿ ಕಂಗೊಳಿಸುತ್ತಿರುವ ಗೊಂಬೆಯೊಂದು ಯಾಂತ್ರಿಕವಾಗಿ ನಮಸ್ಕಾರ ಮಾಡುತ್ತಲೇ ಇರುತ್ತದೆ, ಆ ಸಂದರ್ಭದಲ್ಲಿ ಅಲ್ಲಿಗೆ ಪ್ರವೇಶಿಸುವ ವ್ಯಕ್ತಿಯೊಬ್ಬರು ಈ ಸ್ವಾಗತಕಾರಿಣಿ ಗೊಂಬೆಯನ್ನು ನೋಡಿ ಅದು ಮಾಡಿದ ನಮಸ್ಕಾರಕ್ಕೆ ಪ್ರತಿ ನಮಸ್ಕಾರ ಮಾಡುತ್ತಾರೆ, ಅದು ಮತ್ತೆ ನಮಸ್ಕಾರ ಮಾಡುತ್ತದೆ, ಈ ವ್ಯಕ್ತಿ ಮತ್ತೊಮ್ಮೆ ಅದಕ್ಕೆ ನಮಸ್ಕಾರ ಮಾಡುತ್ತಾರೆ, ಗೊಂಬೆ ನಮಸ್ಕಾರ ಮಾಡುತ್ತಲೇ ಇರುತ್ತದೆ, ಈಗ ಆ ವ್ಯಕ್ತಿ ಆ ಲೇಡಿ ಗೊಂಬೆಯನ್ನು ನೋಡುತ್ತಲೇ ನಿಲ್ಲುತ್ತಾರೆ. ಬಳಿಕ ಅಲ್ಲಿಗೆ ಬಂದವರೊಬ್ಬರು ಆ ವ್ಯಕ್ತಿಯನ್ನು ಕರೆದುಕೊಂಡು ಹೋಗುತ್ತಾರೆ, ಆ ವ್ಯಕ್ತಿಯೂ ಗೊಂಬೆಯನ್ನು ನೋಡಿ ಮದುವೆ ಹಾಲ್ ನೊಳಗೆ ನಡೆದುಕೊಂಡು ಹೋಗುತ್ತಾರೆ. ಇದಿಷ್ಟು ಆ ವಿಡಿಯೋದಲ್ಲಿ ದಾಖಲಾಗಿದೆ.

ಇದನ್ನೂ ಓದಿ: Viral Video: ಮಹಾಕುಂಭ ಖ್ಯಾತಿಯ ಸಾಧ್ವಿ ಹರ್ಷ ರಿಚಾರಿಯಾಗೆ ಏನಾಯ್ತು? ಆತ್ಮಹತ್ಯೆ ಬೆದರಿಕೆ ಹಾಕ್ತಿರೋದು ಯಾಕೆ?

ಈ ಗಮ್ಮತ್ತಿನ ವಿಡಿಯೋವನ್ನು ನೀವೊಮ್ಮೆ ನೋಡಿಬಿಡಿ:



ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇದಕ್ಕೆ ಫನ್ನಿ ಕಮೆಂಟ್ ಗಳ ಮಹಾಪೂರವೇ ಹರಿದುಬರುತ್ತಿದೆ. ಇದಕ್ಕೆ ಕೆಲವರು ಕಾಮಿಕಲ್ ಮ್ಯೂಸಿಕ್ ಗಳನ್ನು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಮತ್ತು ಈ ವಿಡಿಯೋಗೆ ಫನ್ನಿ ಕಮೆಂಟ್ ಗಳೂ ಸಹ ಬಂದಿವೆ. ‘ಪವರ್ ಆಫ್ 180 ಎಂ.ಎಲ್.’ ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ಮತ್ತೊಬ್ಬರು ‘ಎಐ ಎಐಯೇ’ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಜನಪ್ರಿಯ ಟ್ಯಾಗ್ ಲೈನ್ ಆಗಿರುವ ‘ಮೆನ್ ವಿಲ್ ಬಿ ಮೆನ್’ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವ್ಯಕ್ತಿಯ ವಿಚಿತ್ರ ವರ್ತನೆ ಇದಿಗ ಸೋಷಿಯಲ್ ಮೀಡಿಯಾದಲ್ಲಿ ಕಾಮಿಡಿ ಮಾಡುವವರಿಗೆ ಉತ್ತಮ ಆಹಾರವಾಗಿದೆ.