ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nitin Gadkari: ನಿತಿನ್‌ ಗಡ್ಕರಿ ಪ್ರಧಾನಿಯಾಗಲಿ ಎಂದ ಕರ್ನಾಟಕದ ಕಾಂಗ್ರೆಸ್‌ ಶಾಸಕ!

ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು 75 ವರ್ಷ ಆದ ಶಾಸಕರು, ಸಚಿವರಿಗೆ ಸ್ಥಾನ ಬಿಟ್ಟುಕೊಡಿ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೂ 75 ವರ್ಷ ಆಗಿದೆ. ಆದರೆ ಅವರ ಬಗ್ಗೆ ಚಕಾರ ಎತ್ತುತ್ತಿಲ್ಲ ಯಾಕೆ ಎಂದು ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದ್ದಾರೆ.

ನಿತಿನ್‌ ಗಡ್ಕರಿ ಪ್ರಧಾನಿಯಾಗಲಿ ಎಂದ ಕರ್ನಾಟಕದ ಕಾಂಗ್ರೆಸ್‌ ಶಾಸಕ!

ಬೇಳೂರು ಗೋಪಾಲಕೃಷ್ಣ, ನಿತಿನ್‌ ಗಡ್ಕರಿ

ಹರೀಶ್‌ ಕೇರ ಹರೀಶ್‌ ಕೇರ Jul 13, 2025 12:52 PM

ಶಿವಮೊಗ್ಗ: ಬಿಜೆಪಿ (BJP) ಹಿರಿಯ ನಾಯಕ, ಹಾಲಿ ಕೇಂದ್ರ ಸಚಿವ (Union Minister) ನಿತಿನ್ ಗಡ್ಕರಿ (Nitin Gadkari) ಅವರೇ ಮುಂದಿನ ಪ್ರಧಾನ ಮಂತ್ರಿ (Prime Minister) ಅಂತ ಕಾಂಗ್ರೆಸ್ ಶಾಸಕರೊಬ್ಬರು ಹಾಡಿ ಹೊಗಳಿರುವುದು ಇದೀಗ ಅಚ್ಚರಿ ಮೂಡಿಸಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ (Belur Gopalakrishna) ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಹೊಗಳಿದ್ದು, ಮುಂದಿನ ಪ್ರಧಾನಮಂತ್ರಿ ನಿತಿನ್ ಗಡ್ಕರಿ ಆಗಬೇಕು ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು 75 ವರ್ಷ ಆದ ಶಾಸಕರು, ಸಚಿವರಿಗೆ ಸ್ಥಾನ ಬಿಟ್ಟುಕೊಡಿ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೂ 75 ವರ್ಷ ಆಗಿದೆ. ಆದರೆ ಅವರ ಬಗ್ಗೆ ಚಕಾರ ಎತ್ತುತ್ತಿಲ್ಲ ಯಾಕೆ ಎಂದು ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದ್ದಾರೆ. ಮೋದಿ ಅವರನ್ನ ಅವರು ಇಳಿಸುತ್ತಾರೋ ಬಿಡುತ್ತಾರೋ ಅವರಿಗೆ ಬಿಟ್ಟಿದ್ದು. ಆದರೆ ಮೋದಿ ಅವರ ನಂತರ ಪ್ರಧಾನಿ ರೇಸ್‌ನಲ್ಲಿ ನಿತಿನ್ ಗಡ್ಕರಿ ಇದ್ದಾರೆ ಎಂದಿದ್ದಾರೆ.

ಸಿಗಂದೂರು ಸೇತುವೆ ಉದ್ಘಾಟನೆಗೆ ನನಗೆ ಆಹ್ವಾನ ಬಂದಿಲ್ಲ. ನನಗೂ ಆಹ್ವಾನ ಬಂದಿಲ್ಲ, ಸಿಗಂದೂರು ದೇವಸ್ಥಾನದ ಧರ್ಮದರ್ಶಿ ರಾಮಪ್ಪನವರಿಗೂ ಕರೆ ಬಂದಿಲ್ಲ. ಆದರೂ ನಾನು ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗಲಿದ್ದೇನೆ. ಕಳಸವಳ್ಳಿಯಲ್ಲಿ ಘರ್ ಘರ್ ಸೇತುವೆ ಎಂದು ಮನೆ ಮನೆಗೆ ಹೋಗಿ ಬಿಜೆಪಿಯವರು ಹೇಳುತ್ತಿರುವುದಾಗಿ ಸುದ್ದಿಯಿದೆ. ನನಗೆ ಅಭ್ಯಂತರವಿಲ್ಲ. ಯಡಿಯೂರಪ್ಪನವರ ಅಪೇಕ್ಷೆಯಂತೆ ನಿರ್ಮಾಣ ಮಾಡಲಾಗಿದೆ. ನಮಗೆ ರಾಜಕೀಯ ಬೇಡ, ಅವರಿಗೆ ಬೇಕಾದರೆ ಮಾಡಿಕೊಳ್ಳಲಿ ಎಂದು ಬೇಳೂರು ಹೇಳಿದ್ದಾರೆ.

ಸೇತುವೆ ನಾಮಕರಣದಲ್ಲೂ ರಾಜಕಾರಣ ನಡೆಯುತ್ತಿದೆ. ಸೇತುವೆಗೆ ಸಿಗಂದೂರು ಚೌಡೇಶ್ವರಿ ಹೆಸರು ಇಡಬೇಕು. ಸಿಗಂದೂರು ಹೆಸರು ಬಿಟ್ಟು ಬೇರೆ ಹೆಸರು ಇಡಲು ಬಿಡೋದಿಲ್ಲ ಎಂದು ಬೇಳೂರು ಗೋಪಾಲಕೃಷ್ಣ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Sigandur Bridge: ಸಿಗಂದೂರು ಸೇತುವೆಗೆ ಬಿ.ಎಸ್.ಯಡಿಯೂರಪ್ಪ ಹೆಸರಿಡಿ; ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ