ಐದನೇ ಪಂದ್ಯ ಸೋತರೂ ಇಂಗ್ಲೆಂಡ್ ನೆಲದಲ್ಲಿ ಐತಿಹಾಸಿಕ ಟಿ20ಐ ಸರಣಿ ಗೆದ್ದ ಭಾರತ ವನಿತೆಯರು!
ಶಫಾಲಿ ವರ್ಮಾ ಅರ್ಧಶತಕದ ಹೊರತಾಗಿಯೂ ಭಾರತ ಮಹಿಳಾ ತಂಡ, ಇಂಗ್ಲೆಂಡ್ ವಿರುದ್ಧ ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಆದರೂ ಆಂಗ್ಲರ ನಾಡಿನಲ್ಲಿ 3-2 ಅಂತರದಲ್ಲಿ ಟಿ20ಐ ಸರಣಿಯನ್ನು ಮುಡಿಗೇರಿಸಿಕೊಂಡಿತು.

ಇಂಗ್ಲೆಂಡ್‌ನಲ್ಲಿ ಚೊಚ್ಚಲ ಟಿ20ಐ ಸರಣಿ ಗೆದ್ದು ಸಂಭ್ರಮಿಸಿದ ಭಾರತ ಮಹಿಳಾ ತಂಡ.

ಬರ್ಮಿಂಗ್‌ಹ್ಯಾಮ್: ಶಫಾಲಿ ವರ್ಮಾ ಅರ್ಧಶತಕದ ಹೊರತಾಗಿಯೂ ಭಾರತ ಮಹಿಳಾ ತಂಡ (Indian women), ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ (INDW vs ENGW) ಇಂಗ್ಲೆಂಡ್ ವಿರುದ್ದ ಐದು ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಆದರೂ ಮೂರು ಪಂದ್ಯಗಳ ಗೆಲುವಿನ ಆಧಾರದ ಮೇಲೆ ಹರ್ಮನ್‌ಪ್ರೀತ್ ಕೌರ್ (Harmanpreet Kaur) ನಾಯಕತ್ವದ ಭಾರತ ತಂಡ, ಆಂಗ್ಲರ ನಾಡಿನಲ್ಲಿ 3-2 ಅಂತತದಲ್ಲಿ ಇದೇ ಮೊದಲ ಟಿ20ಐ ಸರಣಿಯನ್ನು ಗೆದ್ದುಕೊಂಡಿತು. ಆ ಮೂಲಕ ಐತಿಹಾಸಿಕ ಸಾಧನೆಗೆ ಭಾಜನವಾಯಿತು. ಈ ಪಂದ್ಯದಲ್ಲಿ 23 ರನ್‌ಗಳಿಗೆ 3 ವಿಕೆಟ್ ಕಿತ್ತ ಚಾರ್ಲೆಂಟ್ ಡೀನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇಲ್ಲಿನ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದಿದ್ದ ಐದನೇ ಟಿ20ಐ ಪಂದ್ಯದಲ್ಲಿ ಭಾರತ ನೀಡಿದ್ದ 168 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್ ತಂಡ, ಡೇನಿಯಲ್ ವ್ಯಾಟ್ (56 ರನ್) ಹಾಗೂ ಸೋಫಿಯಾ ಡಂಕ್ಲಿ (46) ಅವರ ಬ್ಯಾಟಿಂಗ್ ಬಲದಿಂದ ಕೊನೆಯ ಎಸೆತದಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವು ದಡ ಸೇರಿತು. ಭಾರತದ ಪರ ದೀಪ್ತಿ ಶರ್ಮಾ ಹಾಗೂ ಅದುಂಧತಿ ರೆಡ್ಡಿ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.
INDW vs ENGW: 334ನೇ ಪಂದ್ಯವನ್ನು ಆಡಿ ಮಿಥಾಲಿ ರಾಜ್ ದಾಖಲೆ ಮುರಿದ ಹರ್ಮನ್‌ಪ್ರೀತ್ ಕೌರ್!
ಗುರಿ ಹಿಂಬಾಲಿಸಿದ್ದ ಇಂಗ್ಲೆಂಡ್ ತಂಡದ ಪರ ಆರಂಭಿಕ ಆಟಗಾರ್ತಿಯರಾದ ಸೋಫಿಯಾ ಡಂಕ್ಲಿ ಹಾಗೂ ಡೇನಿಯಲ್ ವ್ಯಾಟ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಈ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 101 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಇಂಗ್ಲೆಂಡ್ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟಿತ್ತು. ಸ್ಪೋಟಕ ಬ್ಯಾಟ್ ಮಾಡಿದ್ದ ಸೋಫಿಯಾ ಡಂಕ್ಲಿ ಕೇವಲ 30 ಎಸೆತಗಳಲ್ಲಿ 46 ರನ್‌ಗಳನ್ನು ಸಿಡಿಸಿದ್ದರು. ಇವರ ಜೊತೆ ಶತಕದ ಜೊತೆಯಾಟವನ್ನು ಆಡಿದ್ದ ಡೇನಿಯಲ್ ವ್ಯಾಟ್ ಅವರು 37 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ 56 ರನ್‌ಗಳನ್ನು ಸಿಡಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಟಾಮಿ ಬಿಮೌಂಟ್ ಅವರು 20 ಎಸೆತಗಳಲ್ಲಿ 30 ರನ್‌ಗಳನ್ನು ಬಾರಿಸಿದ್ದರು.
𝗪𝗜𝗡𝗡𝗘𝗥𝗦! 🥳
— BCCI Women (@BCCIWomen) July 12, 2025
Congratulations to #TeamIndia on winning the #ENGvIND T20I series 3⃣-2⃣ 👏👏 pic.twitter.com/7gnbsn6F7H
167 ರನ್ ಕಲೆ ಹಾಕಿದ್ದ ಭಾರತ
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ, ಶಫಾಲಿ ವರ್ಮಾ (75 ರನ್) ಅವರ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 167 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಇಂಗ್ಲೆಂಡ್ ತಂಡಕ್ಕೆ 168 ರನ್‌ಗಳ ಗುರಿಯನ್ನು ನೀಡಿತ್ತು. ಭಾರತದ ಪರ ಶಫಾಲಿ ವರ್ಮಾ ಜೊತೆಗೆ ರಿಚಾ ಘೋಷ್ ಅವರು 24 ರನ್ ಗಳಿಸಿದ್ದು, ಬಿಟ್ಟರೆ ಇನ್ನುಳಿದವರು ವೈಯಕ್ತಿಕ ಎರಡಂಕಿಯನ್ನು ಕಲೆ ಹಾಕುವಲ್ಲಿ ವಿಫಲರಾದರು.
IND vs ENG: ಅರ್ಧಶತಕ ಸಿಡಿಸಿ ಎಂಎಸ್ ಧೋನಿ ದಾಖಲೆ ಸರಿಗಟ್ಟಿದ ರಿಷಭ್ ಪಂತ್!
ಶಫಾಲಿ ವರ್ಮಾ ಅರ್ಧಶತಕ
ಭಾರತ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. 19 ರನ್‌ಗಳಿಗೆ ಭಾರತ 2 ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಯಕಿ ಹರ್ಮನ್‌ಪ್ರೀತ್ ಕೌರ್ 15 ರನ್‌ಗಳನ್ನು ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ದೀರ್ಘಾವಧಿ ಬ್ಯಾಟ್ ಮಾಡಿದ್ದ ಶಫಾಲಿ ವರ್ಮಾ, 41 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 13 ಬೌಂಡರಿಗಳೊಂದಿಗೆ 75 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಭಾರತ ತಂಡ 150ಕ್ಕೂ ಅಧಿಕ ರನ್ ಗಳಿಸುವಲ್ಲಿ ನೆರವು ನೀಡಿದ್ದರು. ಇಂಗ್ಲೆಂಡ್ ಪರ ಚಾರ್ಲಿ ಡೀನ್ 3 ವಿಕೆಟ್ ಪಡೆದರೆ, ಸೋಫಿಯಾ ಎಕ್ಲೆಸ್ಟೋನ್ ಎರಡು ವಿಕೆಟ್ ಕಿತ್ತರು.