ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nimbiya Banada Myaga Movie: ‘ನಿಂಬಿಯಾ ಬನಾದ ಮ್ಯಾಗ’ ಚಿತ್ರಕ್ಕೆ ಶಿವಣ್ಣ ದಂಪತಿ ಮೆಚ್ಚುಗೆ

Nimbiya Banada Myaga Movie: ವರನಟ ಡಾ. ರಾಜಕುಮಾರ್ ಅವರ ಮೊಮ್ಮಗ ಷಣ್ಮುಖ ಗೋವಿಂದರಾಜ್ ನಾಯಕನಾಗಿ ಅಭಿನಯಿಸಿರುವ ʼನಿಂಬಿಯಾ ಬನಾದ ಮ್ಯಾಗʼ ಚಿತ್ರವು ಕಳೆದ ಶುಕ್ರವಾರ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಈ ಕುರಿತ ವಿವರ ಇಲ್ಲಿದೆ.

‘ನಿಂಬಿಯಾ ಬನಾದ ಮ್ಯಾಗ’ ಚಿತ್ರಕ್ಕೆ ಶಿವಣ್ಣ ದಂಪತಿ ಮೆಚ್ಚುಗೆ

Profile Siddalinga Swamy Apr 7, 2025 6:56 PM

ಬೆಂಗಳೂರು: ವರನಟ ಡಾ. ರಾಜಕುಮಾರ್ ಅವರ ಮೊಮ್ಮಗ ಷಣ್ಮುಖ ಗೋವಿಂದರಾಜ್ ನಾಯಕನಾಗಿ ಅಭಿನಯಿಸಿರುವ ʼನಿಂಬಿಯಾ ಬನಾದ ಮ್ಯಾಗʼ ಚಿತ್ರ (Nimbiya Banada Myaga Movie) ಕಳೆದ ಶುಕ್ರವಾರ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಮಲೆನಾಡಿನ ಸೊಬಗು, ತಾಯಿ ಮಗನ ಸಂಬಂಧದ ದೃಶ್ಯಕಾವ್ಯವನ್ನು ಕಣ್ತುಂಬಿಕೊಂಡ ಪ್ರೇಕ್ಷಕರು ಮನಸಾರೆ ಹೊಗಳುತ್ತಿದ್ದಾರೆ. ಇತ್ತೀಚೆಗೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ಅವರು ಸಹ ಈ ಚಿತ್ರವನ್ನು ನೋಡಿ ತುಂಬಾ ಇಷ್ಟಪಟ್ಟಿದ್ದಾರೆ. ಮಲೆನಾಡಲ್ಲಿ ತಾಯಿ ಮಗನ ಸುತ್ತ ನಡೆಯುವ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಷಣ್ಮುಖ ಜತೆ ನಾಯಕಿಯಾಗಿ ತನುಶ್ರೀ ಅಭಿನಯಿಸಿದ್ದಾರೆ. 25 ವರ್ಷಗಳ ನಂತರ ಮೇಘಮಾಲೆ ಖ್ಯಾತಿಯ ಸುನಾದ್‌ರಾಜ್ ಅವರು ನಾಯಕನ ತಂದೆಯಾಗಿ ಕಾಣಿಸಿಕೊಂಡಿದ್ದಾರೆ.

ನಟ ಶಿವರಾಜಕುಮಾರ್ ಮಾತನಾಡಿ, ʼಇದು ನಮ್ಮ ಚಿತ್ರ ಅಂತ ಹೇಳುತ್ತಿಲ್ಲ. ನಿಜಕ್ಕೂ ಒಂದು ಅದ್ಭುತ ದೃಶ್ಯಕಾವ್ಯವನ್ನು ನೋಡಿದ ಅನುಭವ ಆಯ್ತು, ಡಾ.ರಾಜಕುಮಾರ್ ಅವರ ಮೊಮ್ಮಗನ ಚಿತ್ರ ಅಂತ ತುಂಬಾ ಆಡಂಬರ ಮಾಡಿಲ್ಲ. ಚಿತ್ರವನ್ನು ಸಹಜವಾಗಿ ತೆರೆಗೆ ತಂದಿದ್ದಾರೆ. ನಾಯಕ ಷಣ್ಮುಖ, ನಾಯಕಿ ತನುಶ್ರೀ, ನಟ ಸುನಾದ್‌ ರಾಜ್ ಸೇರಿದಂತೆ ಎಲ್ಲಾ ಕಲಾವಿದರು ತುಂಬಾ ಚೆನ್ನಾಗಿ ನಟಿಸಿದ್ದಾರೆ. ಎಲ್ಲಾ ಪಾತ್ರಗಳು ಮನಸ್ಸಿನಲ್ಲೇ ಉಳಿಯುತ್ತದೆ. ಮಲೆನಾಡ ಸೊಬಗನ್ನು ಛಾಯಾಗ್ರಾಹಕರು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಇಂಥಹ ಚಿತ್ರಗಳನ್ನು ಪ್ರತಿಯೊಬ್ಬರೂ ನೋಡಿ. ಪ್ರೋತ್ಸಾಹ ನೀಡಿ ಎಂದು ಹೇಳಿದ್ದಾರೆ.

ಅಶೋಕ್ ಕಡಬ ಅವರ ನಿರ್ದೇಶನದ ಐದನೇ ಚಿತ್ರ ಇದಾಗಿದ್ದು, ವಿ. ಮಾದೇಶ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಮಲೆನಾಡ ಕಾಡಿನ ಮಧ್ಯೆ ಇರುವ ಹಳ್ಳಿಯೊಂದರಲ್ಲಿ ತಾಯಿ ಮಗನ ಸುತ್ತ ನಡೆಯುವ ಹೃದಯಸ್ಪರ್ಶಿ ಕಥಾಹಂದರ ಈ ಚಿತ್ರದಲ್ಲಿದೆ. 2-3 ವರ್ಷದವನಿದ್ದಾಗ ಕಳೆದುಹೋದ ಮಗ, 25 ವರ್ಷಗಳ ನಂತರ ಮರಳಿ ಮನೆಗೆ ಬಂದಾಗ ಆ ತಾಯಿಗಾಗುವ ಆನಂದ ಅಷ್ಟಿಷ್ಟಲ್ಲ, ಆನಂತರ ನಡೆಯುವ ಘಟನೆಗಳೇ ಈ ಚಿತ್ರದ ಕುತೂಹಲ. ನಿಂಬಿಯಾ ಬನಾದ ಮ್ಯಾಗ ಪೇಜ್ -1 ಹಾಗೂ ಪೇಜ್-2 ಎಂದು ಎರಡು ಭಾಗಗಳಲ್ಲಿ ಮೂಡಿಬರಲಿದೆ, ಚಿತ್ರದ ಕೊನೆಯಲ್ಲಿ ಎರಡನೇ ಭಾಗದ ಬಗ್ಗೆ ಕುತೂಹಲ ಹುಟ್ಟು ಹಾಕುತ್ತದೆ.

ಮಲೆನಾಡಲ್ಲಿ ತಾಯಿ ಮಗನ ಸುತ್ತ ನಡೆಯುವ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಷಣ್ಮುಖ ಜತೆ ನಾಯಕಿಯಾಗಿ ತನುಶ್ರೀ ಅಭಿನಯಿಸಿದ್ದಾರೆ. 25 ವರ್ಷಗಳ ನಂತರ ಮೇಘಮಾಲೆ ಖ್ಯಾತಿಯ ಸುನಾದ್‌ರಾಜ್ ಅವರು ನಾಯಕನ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ತ್ರಿಶಾ (ಚೆನ್ನೈ), ಪಂಕಜ್ ನಾರಾಯಣ್, ತಾಯಿಯಾಗಿ ಸಂಗೀತ, ಭವ್ಯ, ರಾಮಕೃಷ್ಣ, ಮೂಗು ಸುರೇಶ್, ಪದ್ಮಾ ವಾಸಂತಿ ʼನಿಂಬಿಯಾ ಬನಾದ ಮ್ಯಾಗʼ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ.

ಈ ಸುದ್ದಿಯನ್ನೂ ಓದಿ | Sheer Fashion: ಬೇಸಿಗೆಯಲ್ಲಿ ಶೀರ್‌ ಫ್ಯಾಷನ್‌ ವೇರ್ಸ್ ಹಂಗಾಮ

ಈ ಚಿತ್ರದ ಮೂರು ಹಾಡುಗಳಿಗೆ ಆರೋನ್ ಕಾರ್ತಿಕ್ ಅವರುವ ಸಂಗೀತ ಸಂಯೋಜನೆ ಮಾಡಿದ್ದು, ಪಳನಿ ಡಿ.ಸೇನಾಪತಿ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಸಿದ್ದು ಕಾಂಚನಹಳ್ಳಿ ಅವರ ಛಾಯಾಗ್ರಹಣ, ರವಿತೇಜ ಅವರ ಸಂಕಲನ ಹಾಗೂ ಮದನ್ ಹರಿಣಿ ಅವರ ನೃತ್ಯ ನಿರ್ದೇಶನ ʼನಿಂಬಿಯಾ ಬನಾದ ಮ್ಯಾಗʼ ಚಿತ್ರಕ್ಕಿದೆ.