ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News:,ಮನೋ ದೈಹಿಕಾರೋಗ್ಯಕ್ಕೆ ಕ್ರೀಡಾಕೂಟಗಳಲ್ಲಿ ಭಾಗಿಯಾಗುವುದು ಮುಖ್ಯ : ಸಬ್ ಇನ್ಸ್ಪೆಕ್ಟರ್ ಅಮರ್ ಅಭಿಮತ

ದೈಹಿಕ ಕಸರತ್ತು ಬೇಡುವ ಕೆಲಸಗಳಿಂದ ಕ್ರೀಡೆಗಳಿಂದ ದೂರವಾಗಿ ಸೋಶಿಯಲ್ ಮೀಡಿಯಾ ದಾಸರಾಗುತ್ತಿದ್ದಾರೆ. ಸಂಬಂಧಗಳಿಂದ ದೂರವಾಗಿ ನಾಲ್ಕುಗೋಡೆಗಳ ನಡುವೆ ಏಕಾಂಗಿಯಾಗಿತನ ಅನುಭವಿಸುತ್ತಾ ತಮ್ಮ ಭವಿಷ್ಯವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ವರ್ತನೆ ವೈಯಕ್ತಿಕವಾಗಿ ಅವರಿಗೆ ಮಾತ್ರವಲ್ಲದೆ ದೇಶದ ಮಾನವ ಸಂಪನ್ಮೂಲದ ನಾಶಕ್ಕೂ ಕಾರಣವಾಗಿದೆ.

ಮನೋ ದೈಹಿಕಾರೋಗ್ಯಕ್ಕೆ ಕ್ರೀಡಾಕೂಟಗಳಲ್ಲಿ ಭಾಗಿಯಾಗುವುದು ಮುಖ್ಯ

ಯುವ ಜನತೆ ದೈಹಿಕ ಮತ್ತು ಮಾನಸಿಕ ಅರೋಗ್ಯ ಕಾಪಾಡಿಕೊಳ್ಳಬೇಕಾದರೆ ಮೊಬೈಲ್ ಗೇಮ್ಸ್ ಬಿಟ್ಟು ಬೆವರು ಹರಿಸಿ ಆಡುವ ಭೌತಿಕ ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗುವುದು ಮುಖ್ಯ ಎಂದು  ನಗರಠಾಣೆ ಸಬ್‌ಇನ್ಸ್ಪೆಕ್ಟರ್ ಅಮರ್ ಮೋಗ್ಲಿ ಕರೆ ನೀಡಿದರು.

Profile Ashok Nayak Jul 13, 2025 12:06 AM

ಚಿಕ್ಕಬಳ್ಳಾಪುರ: ಯುವ ಜನತೆ ದೈಹಿಕ ಮತ್ತು ಮಾನಸಿಕ ಅರೋಗ್ಯ ಕಾಪಾಡಿಕೊಳ್ಳಬೇಕಾದರೆ ಮೊಬೈಲ್ ಗೇಮ್ಸ್ ಬಿಟ್ಟು ಬೆವರು ಹರಿಸಿ ಆಡುವ ಭೌತಿಕ ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗಿ ಯಾಗುವುದು ಮುಖ್ಯ ಎಂದು ನಗರ ಠಾಣೆ ಸಬ್‌ಇನ್ಸ್ಪೆಕ್ಟರ್ ಅಮರ್ ಮೋಗ್ಲಿ ಕರೆ ನೀಡಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗೋಲ್ಡನ್ ಗ್ಲೀಮ್ಸ್ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಕ್ರೀಡಾಕೂಟಕ್ಕೆ ಚಾಳನೆ ನೀಡಿ ಅವರು ಮಾತನಾಡಿದರು. ಕ್ರೀಡಾಕೂಟಗಳಲ್ಲಿ ಬಹುಮಾನಕ್ಕಿಂತಲೂ ಭಾಗವಹಿಸುವಿಕೆ ಮುಖ್ಯ.ಪ್ರತಿಯೊಬ್ಬ ಪೋಷಕರು ಕೂಡ ತಮ್ಮ ಮಕ್ಕಳನ್ನು ದಿನದಲ್ಲಿ ೨ ಗಂಟೆ ಕ್ರೀಡಾಂಗಣಗಳಿಗೆ ಕರೆ ತರುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದಾದಲ್ಲಿ ಮೊಬೈಲ್ ಗೀಳಿನಿಂದ ಹೊರಬಂದು ಓದಿನಲ್ಲಿ ಆಸಕ್ತಿ ಬೆಳೆಯಲಿದೆ ಎಂದರು.

ಸಮಾಜ ಸೇವಕ ಕೋಡೆಸ್ ಶ್ರೀನಿವಾಸ್ ಮಾತನಾಡಿ ಇಂದಿನ ಯುವಜನಾಂಗ ದಿಕ್ಕು ತಪ್ಪಿರುವ ಹೊತ್ತಿನಲ್ಲಿ ಗೋಲ್ಡನ್ ಗ್ಲೀಮ್ಸ್ ಕಾಲೇಜು ತಮ್ಮ ವಿದ್ಯಾರ್ಥಿಗಳಿಗಾಗಿ ಕ್ರೀಡಾಕೂಟ ಏರ್ಪಡಿಸಿರು ವುದು ಸಂತೋಷ ತಂದಿದೆ. ನಗರ ಪಟ್ಟಣ ಹಳ್ಳಿಗಳೆಂಬ ಬೇಧವಿಲ್ಲದೆ ಆಧುನಿಕತೆಯ ಜಂಜಾಟದ ನಡುವೆ ಇಂದಿನ ಯುವ ಜನಾಂಗ ದಿಕ್ಕುತಪ್ಪಿದ್ದಾರೆ ಎಂದು ಬೇಸರಿಸಿದರು.

ಇದನ್ನೂ ಓದಿ: Chirag Paswan: ಕೇಂದ್ರ ಸಚಿವ ಚಿರಾಗ್ ಪಾಸ್ವಾನ್‌ಗೆ ಕೊಲೆ ಬೆದರಿಕೆ: ದೂರು ದಾಖಲು

ದೈಹಿಕ ಕಸರತ್ತು ಬೇಡುವ ಕೆಲಸಗಳಿಂದ ಕ್ರೀಡೆಗಳಿಂದ ದೂರವಾಗಿ ಸೋಶಿಯಲ್ ಮೀಡಿಯಾ ದಾಸರಾಗುತ್ತಿದ್ದಾರೆ. ಸಂಬಂಧಗಳಿಂದ ದೂರವಾಗಿ ನಾಲ್ಕುಗೋಡೆಗಳ ನಡುವೆ ಏಕಾಂಗಿಯಾಗಿತನ ಅನುಭವಿಸುತ್ತಾ ತಮ್ಮ ಭವಿಷ್ಯವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ವರ್ತನೆ ವೈಯಕ್ತಿಕವಾಗಿ ಅವರಿಗೆ ಮಾತ್ರವಲ್ಲದೆ ದೇಶದ ಮಾನವ ಸಂಪನ್ಮೂಲದ ನಾಶಕ್ಕೂ ಕಾರಣವಾಗಿದೆ. ಆದ್ದರಿಂದ ಶಾಲಾ ಕಾಲೇಜು ಹಂತದಿದಲೇ ವಿದ್ಯಾಸಂಸ್ಥೆಗಳು ಕ್ರೀಡೆಗಳಿಗೆ ಒತ್ತು ನೀಡಿ ಅವರಲ್ಲಿ ಕಲಿಕಾಸಕ್ತಿ ಮೂಡಿಸುವತ್ತ ಚಿಂತಿಸಬೇಕಿದೆ ಎಂದು ಹೇಳಿದರು.

ಕಾಲೇಜು ಪ್ರಾಂಶುಪಾಲ ಎಸ್.ಎಂ.ಮುನಿಕೃಷ್ಣ ಮತನಾಡಿ ನಮ್ಮ ಕಾಲೇಜಿನಲ್ಲಿ ಪಠ್ಯಕ್ಕೆ ನೀಡುವ ಮಹತ್ವವನ್ನು ಪಠ್ಯೇತರ ಚಟವಟಿಕೆಗಳಾದ ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ನೀಡ ಲಾಗಿದೆ. ಎಲ್ಲಿ ಆರೋಗ್ಯವಂತೆ ದೇಹವಿರುತ್ತದೆಯೋ ಅಲ್ಲಿ ಆರೋಗ್ಯವಂತ ಮನಸ್ಸು ಇರಲಿದೆ. ಇದೇ ಕಾರಣಕ್ಕಾಗಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲಾ ಕಾರ್ಯ ಚಟು ವಟಿಕೆಗಳಿಗೂ ಸಮಾನ ಆದ್ಯತೆ ನೀಡುತ್ತಿದ್ದೇವೆ.ಗೋಲ್ಡನ್ ಗ್ಲೀಮ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.

ಈ ವೇಳೆ ವಕೀಲ ಮಂಜುನಾಥ್, ಉಪನ್ಯಾಸಕರಾದ ಮಂಜುನಾಥ್, ಪಾಟೀಲ್, ಶಿವು, ರಾಧ, ಮಂಜುಳ, ಅಶ್ವಿನಿ, ನಾಗಮಣಿ, ಲಾವಣ್ಯ ಕ್ರೀಡಾ ತರಬೇತುದಾರ ಲೋಕೇಶ್ ಮತ್ತಿತರರು ಇದ್ದರು.