ಆಯುರ್ವೇದ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದ ಅಪೋಲೊ ಆಯುರ್ ವೈದ್
ವಿವಿಧ ಆರೋಗ್ಯ ಸಮಸ್ಯೆ ಹೊಂದಿರುವ ರೋಗಿಗಳಿಗೆ ಸಮಗ್ರ ನಿಖರ ಆಯುರ್ವೇದ ಚಿಕಿತ್ಸೆ ಮತ್ತು ಸಂಯೋಜಿತ ಔಷಧಿಗಳನ್ನು ಒದಗಿಸುವ ಕಡೆಗೆ ಗಮನ ಕೇಂದ್ರೀಕರಿಸಿರುವ ಕಂಪನಿಯು ಪೂರ್ಣ-ಪ್ರಮಾಣದ ಆಯುರ್ವೇದ ಉದ್ಯಮವಾಗಿ ರೂಪು ಹೊಂದುವ ಗುರಿ ಇಟ್ಟುಕೊಂಡಿದೆ. ಶಾಸ್ತ್ರೀಯ ಆಯುರ್ವೇದ ಸೂತ್ರೀಕರಣಗಳು, ಓಟಿಸಿ ಉತ್ಪನ್ನಗಳು ಮತ್ತು ವೈದ್ಯಕೀಯ ಆಹಾರ ವಿಭಾಗಗಳಲ್ಲಿ 50 ಎಸ್ ಕೆ ಯುಗಳನ್ನು ಬಿಡುಗಡೆ ಮಾಡಿದೆ. ಮುಂದಿನ 5 ವರ್ಷಗಳಲ್ಲಿ ರಾಷ್ಟ್ರಾದ್ಯಂತ ಎಲ್ಲಾ ಕಡೆ ತಲುಪುವ ಮತ್ತು ಉತ್ಪನ್ನಗಳಿಂದ ₹500 ಕೋಟಿ ಆದಾಯವನ್ನು ಗಳಿಸುವ ಗುರಿ ಇಟ್ಟುಕೊಂಡಿದೆ


ಬೆಂಗಳೂರು: ಭಾರತದ ಪ್ರಮುಖ ಎನ್ ಎ ಬಿ ಎಚ್ ಮಾನ್ಯತೆ ಪಡೆದ ಪ್ರಿಸಿಷ್ ಆಯುರ್ವೇದ ಆಸ್ಪತ್ರೆ ಜಾಲವಾಗಿರುವ ಅಪೋಲೋ ಆಯುರ್‌ವೈದ್ ಸಂಸ್ಥೆಯು ಆಯುರ್ವೇದ ಉತ್ಪನ್ನಗಳ ವಿಭಾಗಕ್ಕೆ ಪ್ರವೇಶಿಸಿದ್ದು, ಈ ಮೂಲಕ ವೈದ್ಯಕೀಯ ಚಿಕಿತ್ಸೆ ಒದಗಿಸುವುದರ ಜೊತೆಗೆ ಉತ್ಪನ್ನ ವಿಭಾಗಕ್ಕೆ ವಿಸ್ತರಣೆ ಹೊಂದಿದೆ.
ಸಂಸ್ಥೆಯು ಶಾಸ್ತ್ರೀಯ ಸೂತ್ರೀಕರಣಗಳು, ಓಟಿಸಿ ಉತ್ಪನ್ನಗಳು ಮತ್ತು ವೈದ್ಯಕೀಯ ಆಹಾರ ವಿಭಾಗದಲ್ಲಿ ಹಲವಾರು ಉತ್ಪನ್ನಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಈ ಮೂಲಕ ಭಾರತದ ₹60,000 ಕೋಟಿ ಮೌಲ್ಯದ, ವಾರ್ಷಿಕವಾಗಿ ಶೇ.16 ಕ್ಕಿಂತ ಹೆಚ್ಚಿನ ದರದಲ್ಲಿ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಸುರಕ್ಷಿತ, ಕ್ಲಿನಿಕಲ್ ಆಗಿ ಮಾನ್ಯವಾದ ಆಯುರ್ವೇದ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಉದ್ದೇಶ ಹೊಂದಿದೆ.
ಉದ್ಯಮದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿರುವ ಅಪೋಲೋ ಆಯುರ್ವೈದ್ ನ ಉತ್ಪನ್ನ ಶ್ರೇಣಿಯು ಎನ್ ಎ ಬಿ ಎಲ್ ಮಾನ್ಯತೆ ಪಡೆದ ಪ್ರಯೋಗಾಲಯಗಳಿಂದ ಭಾರೀ ಲೋಹಗಳು, ಆಫ್ಲಾಟಾಕ್ಸಿನ್ ಗಳು, ಸೂಕ್ಷ್ಮಜೀವಿಗಳ ಅಂಶ ಇತ್ಯಾದಿ ವಿಚಾರದಲ್ಲಿ ಸುರಕ್ಷತೆಯನ್ನು ಪರೀಕ್ಷಿಸಿ ಪ್ರಮಾಣೀಕರಿಸಲಾದ, ಕ್ಲಿನಿಕಲ್ ಆಗಿ ಸಾಬೀತಾದ ಸೂತ್ರೀಕರಣಗಳನ್ನು (ಫಾರ್ಮುಲೇಷನ್ ಗಳನ್ನು) ಒಳಗೊಂಡಿದೆ. ಅಪೋಲೋ ಆಯುರ್ವೈದ್ ನ ಉತ್ಪನ್ನಗಳು ಆಯುರ್ವೇದ ಉತ್ಪನ್ನ ಮಾರುಕಟ್ಟೆಯಲ್ಲಿ ಗರಿಷ್ಠ, ಪುರಾವೆ- ಆಧಾರಿತ ಸುರಕ್ಷತಾ ಮಾನದಂಡವನ್ನು ಸ್ಥಾಪಿಸಿದ್ದು, ವಿಶೇಷ ವಾಗಿ ಗ್ರಾಹಕರು ತೆಗೆದುಕೊಳ್ಳುವ ಪ್ರತೀ ಉತ್ಪನ್ನದ ಪರೀಕ್ಷಾ ಫಲಿತಾಂಶಗಳನ್ನು (ಪ್ಯಾಕೇಜಿಂಗ್ ಮೇಲೆ ಇರುವ ಕ್ಯೂಆರ್ ಕೋಡ್ ಮುಖಾಂತರ) ಪರಿಶೀಲಿಸಬಹುದು. ಸಂಸ್ಥೆಯ ಈ ನಡವಳಿಕೆಯು ಆತ್ಮವಿಶ್ವಾಸದಿಂದ ನಂಬಬಹುದಾದ ಸುರಕ್ಷಿತ, ಪ್ರಮಾಣಿತ ಮತ್ತು ಪರಿಣಾಮಕಾರಿ ಆಯುರ್ವೇದ ಉತ್ಪನ್ನಗಳನ್ನು ಮಾರುಕಟ್ಟೆಗೆ ಒದಗಿಸುವ ಅಪೋಲೋ ಆಯುರ್ವೈದ್ ಸಂಸ್ಥೆಯ ಸಂಕಲ್ಪವನ್ನು ತೋರಿಸುತ್ತದೆ.
ಇದನ್ನೂ ಓದಿ:Dr Vijay Darda Column: ದೇಶವನ್ನು ಡ್ರಗ್ಸ್ ನಲ್ಲಿ ಮುಳುಗಿಸಲು ಭಯಾನಕ ಷಡ್ಯಂತ್ರ
ಈ ಕುರಿತು ಮಾತನಾಡಿರುವ ಅಪೋಲೋ ಆಸ್ಪತ್ರೆಗಳ ಕಾರ್ಯಕಾರಿ ಉಪಾಧ್ಯಕ್ಷೆ ಮತ್ತು ಅಪೋಲೋ ಆಯುರ್ವೈದ್ ನ ಚೇರ್ ಪರ್ಸನ್ ಡಾ. ಪ್ರೀತಾ ರೆಡ್ಡಿ ಅವರು, “ಪರೀಕ್ಷೆಗೊಳಪಟ್ಟಿ ರುವ ಸುರಕ್ಷಿತ ಆಯುರ್ವೇದ ಉತ್ಪನ್ನ ವಿಭಾಗಕ್ಕೆ ಅಪೋಲೋ ಆಯುರ್ವೈದ್ ನ ಪ್ರವೇಶ ಮಾಡಿರುವುದು ಸಾಂಪ್ರದಾಯಿಕ ಔಷಧದಲ್ಲಿ ಸುರಕ್ಷತೆ, ಪಾರದರ್ಶಕತೆ ಮತ್ತು ಪರಿಣಾಮ ಕಾರಿತ್ವದ ಮಾನದಂಡಗಳನ್ನು ಮರುರೂಪಿಸುವುದರಲ್ಲಿ ಒಂದು ಪ್ರಮುಖ ಮತ್ತು ಮಹತ್ವದ ಹೆಜ್ಜೆಯಾಗಿದೆ. ಸಂಸ್ಥೆಯ ಈ ವಿಸ್ತರಣೆಯು ವೈದ್ಯಕೀಯ ಚಿಕಿತ್ಸೆಯ ಬಲವಾದ ಅಡಿಪಾಯದ ಮೇಲೆ ನಿರ್ಮಿತವಾಗಿದೆ ಮತ್ತು ಪುರಾವೆ- ಆಧಾರಿತ, ಪ್ರಿಸಿಷನ್ ಆಯುರ್ವೇದದ ಮೇಲೆ ಸಂಸ್ಥೆಯು ಹೊಂದಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಆವಿಷ್ಕಾರವನ್ನು ಕಾಲಾನು ಕಾಲಕ್ಕೆ ತಕ್ಕ ಬುದ್ಧಿವಂತಿಕೆ ಜೊತೆಗೆ ಸಂಯೋಜಿಸುವ ಮೂಲಕ ಅಪೋಲೋ ಆಯುರ್‌ವೈದ್ ಸಂಸ್ಥೆಯು ಭಾರತ ಮತ್ತು ಅದರಾಚೆಗಿನ ಸಂಯೋಜಿತ ಔಷಧ ವಿಭಾಗದ ಭವಿಷ್ಯವನ್ನು ರೂಪಿಸುವ ದಾರಿಯಲ್ಲಿ ಮುನ್ನಡೆಯುತ್ತಿದೆ” ಎಂದು ಹೇಳಿದರು.
ಈ ಹೊಸ ಯೋಜನೆ ಕುರಿತು ಮಾತನಾಡಿರುವ ಅಪೋಲೋ ಆಯುರ್ವೈದ್ ನ ಸಂಸ್ಥಾಪಕ, ಎಂಡಿ ಮತ್ತು ಸಿಇಒ ಶ್ರೀ ರಾಜೀವ್ ವಾಸುದೇವನ್ ಅವರು, “ವೈದ್ಯಕೀಯ ಚಿಕಿತ್ಸಾ ವಿಭಾಗದಲ್ಲಿ ಎರಡು ದಶಕಗಳ ಕಾಲ ಶ್ರೇಷ್ಠತೆಯನ್ನು ಸಾಧಿಸಿರುವ ನಾವು ಪ್ರಿಸಿಷನ್ ಆಯುರ್ವೇದ ಕ್ಷೇತ್ರದ ಕುರಿತು ನಮಗಿರುವ ತಿಳುವಳಿಕೆ ಮತ್ತು ಅರಿವನ್ನು ನಮ್ಮ ಗ್ರಾಹಕ ಉತ್ಪನ್ನ ವಿಭಾಗಕ್ಕೆ ಹಂಚಿಕೊಳ್ಳು ತ್ತಿದ್ದೇವೆ ಮತ್ತು ಈ ಮೂಲಕ ಕಾರ್ಯನಿರ್ವಹಣೆ ವಿಸ್ತರಿಸುತ್ತಿದ್ದೇವೆ. ಈ ಹೊಸ ವಿಭಾಗವು ನಮ್ಮ ಒಳರೋಗಿ- ಹೊರರೋಗಿ ಚಿಕಿತ್ಸಾ ಮಾದರಿಗೆ ಪೂರಕವಾಗಿ ಮೂಡಿ ಬರಲಿದ್ದು, ಆದಾಯ ಗಳಿಕೆಯ ಹೊಸ ಅವಕಾಶಗಳನ್ನು ತೆರೆಯುತ್ತದೆ ಮತ್ತು ಪುರಾವೆ- ಆಧಾರಿತ ಆಯುರ್ವೇದ ಸೇವೆ ಗಳು ಮತ್ತು ಉತ್ಪನ್ನಗಳನ್ನು ವಿಶ್ವಾದ್ಯಂತ ಲಭ್ಯವಾಗುವಂತೆ ಮಾಡುವ ನಮ್ಮ ಉದ್ದೇಶವನ್ನು ಬಲಪಡಿಸುತ್ತದೆ. ಈ ಉತ್ಪನ್ನ ಸರಣಿಯು ಮುಂದಿನ 5 ವರ್ಷಗಳಲ್ಲಿ ₹500 ಕೋಟಿ ಆದಾಯ ಗಳಿಸುವ ನಿರೀಕ್ಷೆ ಹೊಂದಲಾಗಿದ್ದು, ನಮ್ಮ ಬೆಳವಣಿಗೆ ಪ್ರಮುಖ ಚಾಲಕ ಶಕ್ತಿಯಾಗಲಿದೆ ಎಂದು ನಾವು ಭರವಸೆ ಹೊಂದಿದ್ದೇವೆ” ಎಂದು ಹೇಳಿದರು.
ಆಯುರ್ವೇದ ಉತ್ಪನ್ನ ವಿಭಾಗವನ್ನು ಅಪೋಲೋ ಆಯುರ್ವೈದ್ ನ ವ್ಯವಹಾರ ಘಟಕವಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ವೈಯಕ್ತಿಕ, ಸುರಕ್ಷಿತ, ಕ್ಲಿನಿಕಲ್ ಫಲಿತಾಂಶ ಆಧರಿತ ವೈದ್ಯಕೀಯ ಸೇವೆಗೆ ಪ್ರಿಸಿಷನ್ ಆಯುರ್ವೇದ ಚಿಕಿತ್ಸೆ ಒದಗಿಸುವ ವಿಭಾಗಕ್ಕೆ ಪೂರಕವಾಗಿ ಈ ವಿಭಾಗ ಕಾರ್ಯನಿರ್ವಹಿಸಲಿದೆ. ವೈದ್ಯರ ಪ್ರಿಸ್ಕ್ರಿಷ್ಕನ್ ಇದ್ದರೆ ಮಾತ್ರ ಶಾಸ್ತ್ರೀಯ ಸೂತ್ರೀಕರಣಗಳು ಲಭ್ಯವಿದ್ದು, ಓಟಿಸಿ ಮತ್ತು ವೈದ್ಯಕೀಯ ಆಹಾರ ಸರಣಿಯ ಉತ್ಪನ್ನಗಳು ರಿಟೇಲ್ ಮತ್ತು ಡಿಜಿಟಲ್ ಪ್ಲಾಟ್ ಫಾರ್ಮ್ ಗಳ ವಿಶಾಲ ಜಾಲದ ಮೂಲಕ ಗ್ರಾಹಕರಿಗೆ ಲಭ್ಯವಿರುತ್ತವೆ.
ಓಟಿಸಿ ಶ್ರೇಣಿಯು ಕ್ರೀಮ್ ಗಳು, ಟ್ರಾನ್ಸ್ ಡರ್ಮಲ್ ಪ್ಯಾಡ್ ಗಳು, ಅಗತ್ಯ ವಸ್ತುಗಳು ಇತ್ಯಾದಿ ಗಳಂತಹ ನವೀನ ಔಷಧ ಸ್ವರೂಪಗಳನ್ನು ಒಳಗೊಂಡಿದ್ದು, ವಿಶೇಷ ಗ್ರಾಹಕ ವಿಭಾಗಗಳಿಗೆ (ಮಹಿಳೆಯರು, ಮಕ್ಕಳು, ವೃದ್ಧರು ಇತ್ಯಾದಿ) ಮತ್ತು ಸಮಸ್ಯೆಗಳಿಗೆ (ನೋವು, ನಿದ್ರೆ, ಒತ್ತಡ, ಚರ್ಮ ಇತ್ಯಾದಿ) ಉನ್ನತ ವೈದ್ಯಕೀಯ ಅಂಶವನ್ನು ಒಳಗೊಂಡಿರುವ ಅತ್ಯುತ್ತಮ ಕಾರ್ಯಕ್ಷಣತೆಯ ಉತ್ಪನ್ನಗಳನ್ನು ಒದಗಿಸಲಾಗುತ್ತದೆ.
ಅಪೋಲೋ ಆಯುರ್‌ವೈದ್ ಸಂಸ್ಥೆಯು ಇತ್ತೀಚೆಗೆ ಇಂಟಿಗ್ರೇಟೆಡ್ ಸಿಸ್ಟಮ್ಸ್ ಬಯಾಲಜಿ ಪ್ಲಾಟ್ ಫಾರ್ಮ್ ಕಂಪನಿಯಾದ ಅವೆಸ್ಥಾಗೆನ್ ಲಿಮಿಟೆಡ್ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಮೂಲಕ ವೈಜ್ಞಾನಿಕವಾಗಿ ಮಾನ್ಯವಾದ, ಸಸ್ಯ ಆಧಾರಿತ, ಸಕ್ಕರೆ ಮುಕ್ತ, ಕೃತಕ ಬಣ್ಣ ಮತ್ತು ಸುವಾಸನೆ ಮುಕ್ತ ಆಹಾರ ಪೂರಕಗಳನ್ನು (ಡಯಟರಿ ಸಪ್ಲಿಮೆಂಟ್) ಜಂಟಿಯಾಗಿ ಅಭಿವೃದ್ಧಿ ಪಡಿಸುವ ಮತ್ತು ಗ್ರಾಹಕರಿಗೆ ನೀಡುವ ಉದ್ದೇಶ ಹೊಂದಿದೆ. ಇದರ ನಂತರ ನಿರ್ದಿಷ್ಟ ವೈದ್ಯಕೀಯ ಅವಗಾಹನೆಯ ಬಳಿಕ ಆಯುರ್ವೇದ ಆಧಾರಿತ ವೈದ್ಯಕೀಯ ಆಹಾರ ಶ್ರೇಣಿಯನ್ನು ಒದಗಿಸಲಿದೆ.
ಶಾಸ್ತ್ರೀಯ ಮತ್ತು ಓಟಿಸಿ ಉತ್ಪನ್ನ ಶ್ರೇಣಿಗಳನ್ನು ‘ಆಯುರ್‌ವೈದ್’ ಎಂಬ ಬ್ರಾಂಡ್ ನಲ್ಲಿ ಒದಗಿಸ ಲಾಗುತ್ತಿದ್ದು, ಆಹಾರ ಪೂರಕಗಳನ್ನು ‘ಅವೆಸ್ಟಾಆಯುರ್‌ವೈದ್’ ಎಂಬ ಬ್ರಾಂಡ್ ಮೂಲಕ ಒದಗಿಸಲಾಗುವುದು. ಈ ಕಾರ್ಯತಂತ್ರದ ವಿಸ್ತರಣೆಯು ಪ್ರಿಸಿಷನ್ ಆಯುರ್ವೇದಕ್ಕಾಗಿ ವಿಶ್ವಾ ಸಾರ್ಹ, ವಿಜ್ಞಾನ ಆಧರಿತ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಮತ್ತು ಫುಲ್- ಸ್ಪೆಕ್ಟ್ರಮ್ ಆಯುರ್ವೇದ ಕಂಪನಿಯಾಗಿ ಬೆಳೆಯುವ ಅಪೋಲೋ ಆಯುರ್ವೈದ್ ನ ದೃಷ್ಟಿಕೋನವನ್ನು ಬಲಪಡಿಸುತ್ತದೆ.
ಈ ಕುರಿತು ಮಾತನಾಡಿರುವ ಶ್ರೀ ರಾಜೀವ್ ವಾಸುದೇವನ್ ಅವರು, “ನಾವು ಆಯುರ್ವೇದ ಉತ್ಪನ್ನ ಕ್ಷೇತ್ರಕ್ಕೆ ಪ್ರವೇಶಿಸುತ್ತಿರುವುದರ ಜೊತೆಗೆ ಅಪೋಲೋ ಆಯುರ್‌ವೈದ್ ಬ್ರಾಂಡ್ ಅನ್ನು ಭಾರತದ ಉದ್ದಗಲಕ್ಕೂ ತಲುಪಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ. ಈ ಆರ್ಥಿಕ ವರ್ಷದಲ್ಲಿ ನಾವು ಆಸ್ಪತ್ರೆ ಜಾಲವನ್ನು ಅಸೆಟ್ ಲೈಟ್ ವಿಧಾನದ ಮೂಲಕ ವಿಸ್ತರಿಸಲು ಯೋಜನೆ ಹಾಕಿಕೊಂಡಿದ್ದು, 9 ಹೊಸ ಕೇಂದ್ರಗಳನ್ನು ಸೇರಿಸಲಿದ್ದೇವೆ. ನಮ್ಮ ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯವನ್ನು 350ಕ್ಕೆ ಏರಿಸಿ, 50,000ಕ್ಕಿಂತ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡುವ ಗುರಿಯನ್ನು ಹೊಂದಿದ್ದೇವೆ. ಕಳೆದ 2-3 ವರ್ಷಗಳಲ್ಲಿ ಶೇ.75 ರಷ್ಟು ಸಿಎಜಿಆರ್ ಮೂಲಕ ಮುಂದಿನ ವರ್ಷದ ಮಧ್ಯಭಾಗದ ವೇಳೆಗೆ ವಾರ್ಷಿಕ ₹100 ಕೋಟಿ ಆದಾಯದ ಗುರಿಯನ್ನು ಮೀರಲು ನಾವು ಸಿದ್ಧರಾಗಿದ್ದೇವೆ. ಇದು ಆಯುರ್ವೇದ ಸೇವೆಗಳ ಕ್ಷೇತ್ರದಲ್ಲಿ ಇದುವರೆಗೆ ಸಾಧಿಸಲಾಗದ ಅಭೂತಪೂರ್ವ ಮೈಲಿಗಲ್ಲಾಗಲಿದೆ. ಇದು ಭಾರತದ ಅತ್ಯಂತ ವಿಶ್ವಾಸಾರ್ಹ, ಪ್ರಿಸಿಷನ್ ಆಯುರ್ವೇದ ಚಿಕಿತ್ಸೆಯನ್ನು ದೇಶದ ಪ್ರತಿಯೊಂದು ಮೂಲೆಗೂ ಮತ್ತು ವಿಶ್ವದಾದ್ಯಂತ ತಲುಪಿಸುವ ಅಪೋಲೋ ಆಯುರ್ವೈದ್ ಸಂಸ್ಥೆಯ ಪಯಣದ ಆರಂಭ ಮಾತ್ರ” ಎಂದು ಹೇಳಿದರು.
ಹೊಸ ಉತ್ಪನ್ನ ಸರಣಿಯ ವಿತರಣೆಯನ್ನು ಬಹು ಹಂತದ ಕಾರ್ಯತಂತ್ರದ ಮೂಲಕ ಮಾಡಲಾಗುತ್ತಿದ್ದು, ಈ ಉತ್ಪನ್ನಗಳು ಅಪೋಲೋ ಆಯುರ್ವೈದ್ ನ ಆಸ್ಪತ್ರೆಗಳು ಮತ್ತು ಕ್ಲಿನಿಕ್ ಗಳು, ಕಂಪನಿಯ ವೆಬ್ ಸೈಟ್, ಅಪೋಲೋ ಫಾರ್ಮಸಿಗಳು, ಅಪೋಲೋ 24|7 ಮತ್ತು ಪ್ರಮುಖ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಗಳ ಮೂಲಕ ಲಭ್ಯವಿರುತ್ತದೆ. ಈ ಸಂಯೋಜಿತ ಚಾನಲ್ ವಿಧಾನವನ್ನು ಉತ್ಪನ್ನಗಳನ್ನು ವಿವಿಧ ಪ್ರದೇಶಗಳ ಮತ್ತು ವಿಶಾಲ ಸಂಖ್ಯೆಯ ಗ್ರಾಹಕರಿಗೆ ತಲುಪಿಸುವುದಕ್ಕಾಗಿಯೇ ವಿನ್ಯಾಸಗೊಳಿಸಲಾಗಿದೆ.