Viral Video: ಮದ್ಯದ ಬಾಟಲಿ ಕದಿಯಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಕುಡುಕ; ವಿಡಿಯೊ ನೋಡಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು
ಕುಡುಕನೊಬ್ಬ ಮದ್ಯದ ಬಾಟಲಿಯನ್ನು ತೆಗೆದುಕೊಳ್ಳುವ ಗಡಿಬಿಡಿಯಲ್ಲಿ ಮದ್ಯದ ಅಂಗಡಿಯ ಕಬ್ಬಿಣದ ಗ್ರಿಲ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದು, ನಂತರ ಇತರ ಗ್ರಾಹಕರು ಕಷ್ಟಪಟ್ಟು ಅವನನ್ನು ಅದರಿಂದ ರಕ್ಷಿಸಿದ್ದಾರೆ. ಈ ಹಾಸ್ಯಾಸ್ಪದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರನ್ನು ನಗೆಯ ಕಡಲಿನಲ್ಲಿ ಮುಳುಗಿಸಿದೆ.


ಕುಡುಕನೊಬ್ಬ ಮದ್ಯದ ಬಾಟಲಿಯನ್ನು ತೆಗೆದುಕೊಳ್ಳುವುದಕ್ಕಾಗಿ ಮದ್ಯದ ಅಂಗಡಿಯ ಕಬ್ಬಿಣದ ಗ್ರಿಲ್‌ನಲ್ಲಿ ಸಿಕ್ಕಿಹಾಕಿಕೊಂಡ ಘಟನೆ ನಡೆದಿದ್ದು, ಈ ಹಾಸ್ಯಾಸ್ಪದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಂತರ ಇತರ ಗ್ರಾಹಕರು ಕಷ್ಟಪಟ್ಟು ಅವನನ್ನು ಅದರಿಂದ ರಕ್ಷಿಸಿದ್ದಾರೆ.ವೈರಲ್ ಆದ ವಿಡಿಯೊದಲ್ಲಿ ಕುಡಿದ ಮತ್ತಿನಲ್ಲಿದ್ದ ವೃದ್ಧನೊಬ್ಬ ಜನನಿಬಿಡ ಮದ್ಯದ ಅಂಗಡಿಯಲ್ಲಿ ಮದ್ಯದ ಬಾಟಲಿಯನ್ನು ಕಳ್ಳತನ ಮಾಡಲು ಹೋದಾಗ ಅಂಗಡಿಯ ಕಬ್ಬಿಣದ ಗ್ರಿಲ್‍ನಲ್ಲಿ ಸಿಲುಕಿಕೊಂಡಿರುವುದು ಸೆರೆಹಿಡಿಯಲಾಗಿದೆ.
ಆ ವ್ಯಕ್ತಿ ತನಗೆ ಬೇಕಾದ ಬಾಟಲಿಯನ್ನು ತೆಗೆದುಕೊಳ್ಳುವಾಗ ಅಂಗಡಿಯ ಕಬ್ಬಿಣದ ಗ್ರಿಲ್‌ನಲ್ಲಿ ಆತನ ತಲೆ ಸಿಲುಕಿಕೊಂಡಿದೆ. ಆಗ ಅವನು ಅದರಿಂದ ಬಿಡಿಸಿಕೊಳ್ಳಲು ಹಲವು ಕಸರತ್ತುಗಳನ್ನು ಮಾಡಿದ್ದಾನೆ. ಆದರೆ ಅವನಿಗೆ ಅದರಿಂದ ಹೊರಬರಲು ಆಗಲಿಲ್ಲ. ಆಗ ಅವನ ಸುತ್ತಲಿನ ಇತರ ಗ್ರಾಹಕರು ಅವನನ್ನು ರಕ್ಷಿಸಿದ್ದಾರೆ.ಕುತೂಹಲಕಾರಿ ಸಂಗತಿಯೆಂದರೆ, ಇಷ್ಟಾದರೂ ಸಿಕ್ಕಿಬಿದ್ದ ಕುಡುಕ ಮಾತ್ರ ಮದ್ಯದ ಬಾಟಲಿಯಿಂದ ಮಾತ್ರ ಕೈಬಿಡಲಿಲ್ಲ.
ವಿಡಿಯೊ ಇಲ್ಲಿದೆ ನೋಡಿ...
इस चक्कर में सब चकरा गए
— मनप्रीत कौर❤मन💕 (@mannkaurr1) July 8, 2025
😝😝😂😂🤣🤣 pic.twitter.com/bR1HeomdU7
ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ಇದು ಈಗಾಗಲೇ 134K ವ್ಯೂವ್ಸ್ ಗಳಿಸಿದೆ. ಇದಕ್ಕೆ ನೆಟ್ಟಿಗರು ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಒಬ್ಬರು "ಹೈ ಲೆವಲ್ ಕುಡುಕ" ಎಂದು ಬರೆದಿದ್ದಾರೆ. ಇನ್ನೊಬ್ಬರು, " ಜೀವ ಹೋದರೂ ಪರವಾಗಿಲ್ಲ ಆದರೆ ಮದ್ಯ ಹೋಗಬಾರದು" ಎಂದು ಬರೆದಿದ್ದಾರೆ. ಮತ್ತೊಬ್ಬರು, "ಅಂಕಲ್ ಒಂದೊಂದಾಗಿ ಉಚಿತ ಕೊಡುಗೆಯನ್ನು ಪಡೆಯಬೇಕು" ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಕಂತೆ ಕಂತೆ ನೋಟುಗಳು ತುಂಬಿರೋ ದೊಡ್ಡ ಬ್ಯಾಗ್...ಪಕ್ಕದಲ್ಲೇ ಕುಳಿತು ಸಿಗರೇಟ್ ಸೇದುತ್ತಿರುವ ಶಿವಸೇನೆ ನಾಯಕ- ವಿಡಿಯೊ ಫುಲ್ ವೈರಲ್
ಇದೇ ರೀತಿಯ ಘಟನೆ 2018 ರಲ್ಲಿ ನಡೆದಿತ್ತು. ಮಿನ್ನೇಸೋಟದ 19 ವರ್ಷದ ಯುವತಿಯೊಬ್ಬಳು ನಿಲ್ಲಿಸಿದ್ದ ಟ್ರಕ್‌ನ ದೊಡ್ಡ ಗಾತ್ರದ ಎಕ್ಸಾಸ್ಟ್ ಪೈಪ್‌ನಲ್ಲಿ ತನ್ನ ತಲೆಯನ್ನು ಇಡಲು ಪ್ರಯತ್ನಿಸಿದ್ದಳು. ಇದರಿಂದಾಗಿ ಅವಳ ತಲೆ 45 ನಿಮಿಷಗಳ ಕಾಲ ಆ ಪೈಪ್‍ನಲ್ಲಿ ಸಿಲುಕಿಕೊಂಡಿತ್ತು. ಮಿಚಿಗನ್‌ನ ವಿನ್‌ಸ್ಟೆಡ್‌ನಲ್ಲಿ ನಡೆದ ವಿನ್‌ಸ್ಟಾಕ್ ಕಂಟ್ರಿ ಮ್ಯೂಸಿಕ್ ಫೆಸ್ಟಿವಲ್‌ನಲ್ಲಿ ಭಾಗವಹಿಸುತ್ತಿದ್ದಾಗ ಈ ಘಟನೆ ನಡೆದಿತ್ತು.