ಚಿಂತಾಮಣಿ ಲೋಕ ಅದಾಲತ್; 12 ವರ್ಷಗಳ ಬಳಿಕ ಒಂದಾದ ಜೋಡಿ..!
ಪರಸ್ಪರ ಭಿನ್ನಾಭಿಪ್ರಾಯ ಮರೆತು ಜೋಡಿಗಳು ಲೋಕ ಅದಾಲತ್ ನಲ್ಲಿ ಒಂದಾಗಿದ್ದರಿಂದ ನ್ಯಾಯಾ ಧೀಶರು ಹಾಗೂ ವಕೀಲರು ಎರಡೂ ಜೋಡಿಗಳಿಗೆ ಹೂವಿನ ಮಾಲೆ ಹಾಕಿಸಿ,ಎರಡೂ ಜೋಡಿಗಳು ಪರಸ್ಪರ ಭಿನ್ನಾಭಿಪ್ರಾಯ ಮರೆತು ಒಂದಾಗಿ ಬಾಳುವೆ ಮಾಡುವುದಾಗಿ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಒಂದಾದರು.

ಚಿಂತಾಮಣಿ ತಾಲೂಕು ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ೧೨ ವರ್ಷಗಳ ಬಳಿಕ ಎಲ್ಲಾ ಭಿನ್ನಾಭಿಪ್ರಾಯ ಮರೆತು ಒಂದಾದ ಘಟನೆಗೆ ಸಾಕ್ಷಿಯಾಯಿತು.

ಚಿಂತಾಮಣಿ: ಸಿವಿಲ್ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಇಂದು ನಡೆಯಿತು. ಕಳೆದ ಹಲವು ವರ್ಷಗಳ ಹಿಂದೆ ಕೋರ್ಟ್ ಮೆಟ್ಟಿಲೇರಿದ್ದ ಹಲವು ಪ್ರಕರಣಗಳು ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಸಂಧಾನದ ಮೂಲಕ ಬಗೆಹರಿದವು. ಅದರಲ್ಲೂ ಕಳೆದ ಹಲವು ವರ್ಷ ಗಳಿಂದ ಉಂಟಾಗಿದ್ದ ಭಿನ್ನಾಭಿಪ್ರಾಯದಿಂದ ಮದುವೆ ನಂತರ ಬೇರೆ ಬೇರೆಯಾಗಿ ವಾಸಿಸು ತ್ತಿದ್ದ,ಕೋರ್ಟ್ ಮೆಟ್ಟಿಲೇರಿದ್ದ ಜೋಡಿಗಳು ಒಂದಾದ ಪ್ರಕರಣವೂ ನಡೆಯಿತು.
ಪರಸ್ಪರ ಭಿನ್ನಾಭಿಪ್ರಾಯ ಮರೆತು ಜೋಡಿಗಳು ಲೋಕ ಅದಾಲತ್ ನಲ್ಲಿ ಒಂದಾಗಿದ್ದರಿಂದ ನ್ಯಾಯಾಧೀಶರು ಹಾಗೂ ವಕೀಲರು ಎರಡೂ ಜೋಡಿಗಳಿಗೆ ಹೂವಿನ ಮಾಲೆ ಹಾಕಿಸಿ, ಎರಡೂ ಜೋಡಿಗಳು ಪರಸ್ಪರ ಭಿನ್ನಾಭಿಪ್ರಾಯ ಮರೆತು ಒಂದಾಗಿ ಬಾಳುವೆ ಮಾಡುವುದಾಗಿ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಒಂದಾದರು.
ಇದನ್ನೂ ಓದಿ: Chikkaballapur News: ಪ್ರಸವ ಪೂರ್ವ ಹಾಗೂ ಗರ್ಭಪೂರ್ವ ಲಿಂಗ ಪತ್ತೆ ತಂತ್ರಗಳ ತರಬೇತಿ ಕಾರ್ಯಾಗಾರ
ಚಿಂತಾಮಣಿ ನಗರದ ಚನ್ನಕೇಶವ ಹಾಗೂ ಶಿಡ್ಲಘಟ್ಟ ತಾಲೂಕಿನ ಚಿಕ್ಕದಾಸರಹಳ್ಳಿ ಗ್ರಾಮದ ಸುಮಿತ್ರ ಎಂಬವರಿಗೆ ೨೦ ವರ್ಷಗಳ ಹಿಂದೆ ಮದುವೆಯಾಗಿದ್ದು ಇಬ್ಬರು ಮಕ್ಕಳು ಸಹ ಇರುತ್ತಾರೆ. ಕೆಲ ಭಿನ್ನ ಅಭಿಪ್ರಾಯಗಳಿಂದ ಹನ್ನೆರಡು ವರ್ಷಗಳಿಂದ ಇವರಿಬ್ಬರು ದೂರವಾಗಿದ್ದರು ಇಂದು ಲೋಕದಲತ್ ನಲ್ಲಿ ಇವರಿಬ್ಬರು ಒಂದಾಗಿದ್ದಾರೆ.
ಈ ವೇಳೆ ಮಾತನಾಡಿದ ಎರಡನೇ ಅಪಾರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಎಂ. ರಾಜಶೇಖರ್ ಪ್ರತಿಯೊಬ್ಬರು ಜೀವನದಲ್ಲೂ ಭಿನ್ನಾಭಿಪ್ರಾಯಗಳು ಇರುತ್ತವೆ. ಅವುಗಳನ್ನು ದೊಡ್ಡದು ಮಾಡದೆ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸುವಂತೆ ಸಲಹೆ ನೀಡಿದರು.
ಈ ವೇಳೆ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ಹಾಗೂ ಅಧ್ಯಕ್ಷರು ತಾಲೂಕು ಸೇವಾ ಸಮಿತಿಯ ಗೀತಾಂಜಲಿ ಜಿ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶಕುಂತಲಾ ಆರ್, ಅಧಿಕ ಸಿವಿಲ್ ನ್ಯಾಯಾಧೀಶರು ಹರ್ಷಿತ,ಸೇರಿದಂತೆ ವಕೀಲರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯ ದರ್ಶಿ ಹಾಗೂ ವಕೀಲರು ಇದ್ದರು.