ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ananth Nag: ಪದ್ಮಭೂಷಣ ಪುರಸ್ಕೃತ ಹಿರಿಯ ನಟ ಡಾ.ಅನಂತನಾಗ್‌ಗೆ ಸನ್ಮಾನಿಸಿ, ಅಭಿನಂದಿಸಿದ ಪ್ರಲ್ಹಾದ್‌ ಜೋಶಿ

ಪದ್ಮಭೂಷಣ ಗೌರವ ಪುರಸ್ಕೃತರಾದ ಕನ್ನಡ ಚಿತ್ರರಂಗದ ಹಿರಿಯ ನಟ ಡಾ. ಅನಂತನಾಗ್ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಬೆಂಗಳೂರಿನಲ್ಲಿ ಇಂದು ಸನ್ಮಾನಿಸಿ, ಅಭಿನಂದಿಸಿದರು. ಇದೇ ವೇಳೆ ಕಲಾವಿದರಾದ ಅನಂತನಾಗ್ ಮತ್ತು ಗಾಯತ್ರಿ ಅವರ ಕುಶಲೋಪರಿ ವಿಚಾರಿಸಿದ ಸಚಿವರು, ಪರಸ್ಪರ ಹೋಳಿ ಹಬ್ಬದ ಶುಭಾಶಯ ಕೋರಿದರು. ಈ ಕುರಿತ ವಿವರ ಇಲ್ಲಿದೆ.

ಪದ್ಮಭೂಷಣ ಪುರಸ್ಕೃತ ಹಿರಿಯ ನಟ ಡಾ.ಅನಂತನಾಗ್‌ಗೆ ಸನ್ಮಾನಿಸಿದ ಜೋಶಿ

Profile Siddalinga Swamy Mar 14, 2025 9:21 PM

ಬೆಂಗಳೂರು: ಪದ್ಮಭೂಷಣ ಗೌರವ ಪುರಸ್ಕೃತರಾದ ಕನ್ನಡ ಚಿತ್ರರಂಗದ ಹಿರಿಯ ನಟ ಡಾ. ಅನಂತನಾಗ್ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಬೆಂಗಳೂರಿನಲ್ಲಿ ಇಂದು ಸನ್ಮಾನಿಸಿ, ಅಭಿನಂದಿಸಿದರು. ಇಂದು ಸಂಜೆ, ಅನಂತನಾಗ್ (Ananth Nag) ಅವರ ಮನೆಗೇ ತೆರಳಿದ ಸಚಿವ ಪ್ರಲ್ಹಾದ್‌ ಜೋಶಿ ಅವರು, ಸ್ಯಾಂಡಲ್‌ವುಡ್‌ ಹಿರಿಯ ನಟ ಡಾ. ಅನಂತನಾಗ್ ಮತ್ತು ಪತ್ನಿ ಗಾಯತ್ರಿ ಅನಂತನಾಗ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಭಾರತ ಸರ್ಕಾರದ ಹಸಿರು ಇಂಧನ ಕ್ರಾಂತಿಯ ಸಂಕೇತವಾಗಿ ಹಸಿರು ಗಿಡ ಸಹ ನೀಡಿದರು. ಇದೇ ವೇಳೆ ಕಲಾವಿದರಾದ ಅನಂತನಾಗ್ ಮತ್ತು ಗಾಯತ್ರಿ ಅವರ ಕುಶಲೋಪರಿ ವಿಚಾರಿಸಿದ ಸಚಿವರು, ಪರಸ್ಪರ ಹೋಳಿ ಹಬ್ಬದ ಶುಭಾಶಯ ಕೋರಿದರು. ಅಲ್ಲದೇ, ಅನಂತನಾಗ್ ಅವರ ಗೃಹದಲ್ಲಿ ನಿರ್ಮಿಸಿದ್ದ ಆರ್ಟ್ ಗ್ಯಾಲರಿಯನ್ನು ವೀಕ್ಷಿಸಿ ಸಂತಸಪಟ್ಟರು.

ಕಲಾವಿದರಿಗೆ ಪ್ರೋತ್ಸಾಹ- ಅನಂತನಾಗ್ ಸಂತಸ

ಭಾರತ ಸರ್ಕಾರ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ, ಉತ್ತೇಜನ ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಲಾ ಕ್ಷೇತ, ಸಂಗೀತ, ರಂಗಭೂಮಿ, ಸಾಹಿತ್ಯ, ಸಾಮಾಜಿಕ ಕಾರ್ಯ ಹೀಗೆ ಸರ್ವ ರಂಗದಲ್ಲೂ ತೊಡಗಿರುವಂಥ ಅಸಾಮಾನ್ಯರನ್ನು ಗುರುತಿಸಿ ಪದ್ಮಭೂಷಣದಂತಹ ಅತ್ಯುನ್ನತ ಗೌರವ ಪುರಸ್ಕಾರ ನೀಡುತ್ತಿದೆ ಎಂದು ನಟ ಅನಂತನಾಗ್ ಹೆಮ್ಮೆ ವ್ಯಕ್ತಪಡಿಸಿದರು.

ಹೆಸರಾಂತ ವಯೊಲಿನ್ ವಾದಕ ಲಕ್ಷ್ಮಿನಾರಾಯಣ ಸುಬ್ರಮಣಿಯಂ, ತೊಗಲು ಬೊಂಬೆಯಾಟದ ಹಿರಿಯ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ, ಪ್ರಸಿದ್ಧ ವೈದ್ಯೆ ವಿಜಯಲಕ್ಷ್ಮಿ ದೇಶಮಾನೆ ಹೀಗೆ ಅನೇಕ ಸಾಧಕರನ್ನು ಗುರುತಿಸಿ ಪದ್ಮಭೂಷಣ ಮತ್ತು ಅನೇಕರಿಗೆ ಪದ್ಮವಿಭೂಷಣ, ಪದ್ಮಶ್ರೀ ಪ್ರಶಸ್ತಿ ನೀಡಿ, ಸಾಧನೆಗೆ ಗೌರವ ತೋರಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಅವರು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಸಚಿವ ಪ್ರಲ್ಹಾದ್‌ ಜೋಶಿ ಮತ್ತು ಅನಂತನಾಗ್ ಅವರು ಕನ್ನಡ ಚಿತ್ರರಂಗ ಕುರಿತಂತೆ ಸಹಜ ಚರ್ಚೆ ನಡೆಸಿದರು. ನಮ್ಮ ಕಾಲದ ಸಿನಿ ರಂಗಕ್ಕೂ ಈಗಿನ ಚಿತ್ರೋದ್ಯಮಕ್ಕೂ ತುಂಬಾ ವ್ಯತ್ಯಾಸವಿದೆ. ಸರ್ವ ದಿಶೆಯಲ್ಲೂ ಸ್ಯಾಂಡಲ್‌ವುಡ್ ಬದಲಾವಣೆ ಕಂಡಿದೆ ಎಂದು ಅನಂತನಾಗ್ ಅನಿಸಿಕೆ ಹಂಚಿಕೊಂಡರು.

ಈ ಸುದ್ದಿಯನ್ನೂ ಓದಿ | BOB Recruitment 2025: ಬ್ಯಾಂಕ್‌ ಆಫ್‌ ಬರೋಡಾದ 518 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

ಈ ವೇಳೆ ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಉಪಸ್ಥಿತರಿದ್ದರು.