ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಠಿಣ ದಿನಗಳಲ್ಲಿ ವಿರಾಟ್‌ ಕೊಹ್ಲಿಗೆ ಭಾರತದಿಂದ ಬೆಂಬಲ ಸಿಕ್ಕಿದೆ, ಆದರೆ ಬಾಬರ್‌ ಆಝಮ್‌ಗೆ ಪಾಕಿಸ್ತಾನದಿಂದ ಸಿಗಲಿಲ್ಲ: ಸೈಯದ್‌ ಅಜ್ಮಲ್!

Saeed Ajmal on Babar Azam: ಭಾರತದಲ್ಲಿ ವಿರಾಟ್‌ ಕೊಹ್ಲಿಯನ್ನು ನಡೆಸಿಕೊಳ್ಳುವ ರೀತಿ ಹಾಗೂ ಪಾಕಿಸ್ತಾನದಲ್ಲಿ ಬಾಬರ್‌ ಆಝಮ್‌ ಅವರನ್ನು ನಡೆಸಿಕೊಳ್ಳುವ ಹಾದಿಯಲ್ಲಿ ತುಂಬಾ ವ್ಯತ್ಯಾಸವಿದೆ ಎಂದು ಪಾಕ್‌ ಮಾಜಿ ಸ್ಪಿನ್ನರ್‌ ಸೈಯದ್‌ ಅಜ್ಮಲ್‌ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಕಠಿಣ ದಿನಗಳಲ್ಲಿ ವಿರಾಟ್‌ ಕೊಹ್ಲಿಯನ್ನು ಭಾರತ ಬೆಂಬಲಿಸುತ್ತದೆ, ಆದರೆ ಪಾಕಿಸ್ತಾನದಲ್ಲಿ ಅದೇ ರೀತಿಯ ಬೆಂಬಲ ಬಾಬರ್‌ ಆಝಮ್‌ಗೆ ಸಿಗುವುದಿಲ್ಲ ಎಂದು ಅವರು ದೂರಿದ್ದಾರೆ.

ಕೊಹ್ಲಿಗೆ ಸಿಕ್ಕಷ್ಟು ಬೆಂಬಲ ಬಾಬರ್‌ಗೆ ಸಿಗಲಿಲ್ಲ: ಸೈಯದ್‌ ಅಜ್ಮಲ್‌!

ವಿರಾಟ್‌ ಕೊಹ್ಲಿ, ಬಾಬರ್‌ ಆಝಮ್‌

Profile Ramesh Kote Mar 14, 2025 10:58 PM

ನವದೆಹಲಿ: ಕಠಿಣ ದಿನಗಳ ಭಾರತ ವಿರಾಟ್‌ ಕೊಹ್ಲಿ(Virat Kohli) ಬೆಂಬಲಿಸುತ್ತದೆ, ಆದರೆ, ಬಾಬರ್‌ ಆಝಮ್‌ಗೆ (Babar Azam) ಪಾಕಿಸ್ತಾನದಲ್ಲಿ ಅದೇ ರೀತಿಯ ಬೆಂಬಲ ಸಿಗುವುದಿಲ್ಲ. ಭಾರತ ಹಾಗೂ ಪಾಕಿಸ್ತಾನ ಎರಡನ್ನೂ ಹೋಲಿಕೆ ಮಾಡಿದರೆ, ಆಟಗಾರರನ್ನು ನಡೆಸಿಕೊಳ್ಳುವ ಹಾದಿಯಲ್ಲಿ ಹಾಗೂ ಬೆಂಬಲಿಸುವ ವಿಷಯದಲ್ಲಿ ತುಂಬಾ ವ್ಯತ್ಯಾಸವಿದೆ ಎಂದು ಪಾಕಿಸ್ತಾನ ಮಾಜಿ ಸ್ಪಿನ್ನರ್‌ ಸೈಯದ್‌ ಅಜ್ಮಲ್‌ (Saeed Ajmal) ತಿಳಿಸಿದ್ದಾರೆ. ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಬಾಬರ್‌ ಆಝಮ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದರು. ಇದರ ಬೆನ್ನಲ್ಲೆ ನ್ಯೂಜಿಲೆಂಡ್‌ ವಿರುದ್ದದ ಟಿ20ಐ ಸರಣಿಯ ಪಾಕಿಸ್ತಾನ ತಂಡದಿಂದ ಕೈ ಬಿಡಲಾಗಿದೆ. ಆದರೆ, ವಿರಾಟ್‌ ಕೊಹ್ಲಿ ಸತತ ವೈಫಲ್ಯ ಅನುಭವಿಸಿದರೂ ಅವರನ್ನು ಭಾರತ ತಂಡದಿಂದ ಕೈ ಬಿಡುವುದಿಲ್ಲ ಎಂಬ ಅಂಶವನ್ನು ಮಾಜಿ ಸ್ಪಿನ್ನರ್‌ ಮನವರಿಕೆ ಮಾಡಿಸಿದ್ದಾರೆ.

ಬಾಬರ್‌ ಅಝಮ್‌ ಅವರು 2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಬಳಿಕ ಸತತ ವೈಫಲ್ಯ ಅನುಭವಿಸಿದ್ದಾರೆ. ಅವರು ಈ ಟೂರ್ನಿಯಲ್ಲಿ ಆಡಿದ್ದ 9 ಪಂದ್ಯಗಳಿಂದ ಗಳಿಸಿದ್ದು ಕೇವಲ 320 ರನ್‌ಗಳು ಮಾತ್ರ. ಆದರೆ, ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿಯೂ ವೈಫಲ್ಯ ಅನುಭವಿಸಿದ್ದರು. ಬಾಬರ್‌ ಆಝಮ್‌ ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಗ್ರೂಪ್‌ ಹಂತದಿಂದಲೇ ಹೊರ ನಡೆದಿತ್ತು. ಈ ಟೂರ್ನಿಯ ಬಳಿಕ ಅವರು ನಾಯಕತ್ವವನ್ನು ತೊರೆದಿದ್ದರು. ಟಿ20 ವಿಶ್ವಕಪ್‌ನಲ್ಲಿ ಅವರು ಗಳಿಸಿದ್ದು ಕೇವಲ 122 ರನ್‌ಗಳು ಮಾತ್ರ.

PAK vs NZ: ಪಾಕಿಸ್ತಾನ ಟಿ20ಐ ತಂಡದಿಂದ ಬಾಬರ್‌ ಆಝಮ್‌, ಮೊಹಮ್ಮದ್‌ ರಿಝ್ವಾನ್‌ ಔಟ್‌!

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿಯೂ ಅವರು ಕಳಪೆ ಪ್ರದರ್ಶನವನ್ನು ತೋರಿದ್ದರು. ಅವರು ಆಡಿದ ಮೂರು ಪಂದ್ಯಗಳಿಂದ ಗಳಿಸಿದ್ದು ಕೇವಲ 87 ರನ್‌ಗಳು ಮಾತ್ರ. 1996ರ ಬಳಿಕ ಐಸಿಸಿ ಟೂರ್ನಿಯನ್ನು ಆಯೋಜಿಸಿದ್ದ ಪಾಕಿಸ್ತಾನ ತಂಡ, ಗುಂಪು ಹಂತದಿಂದಲೇ ಹೊರ ನಡೆದಿತ್ತು. ಒಂದೇ ಒಂದು ಪಂದ್ಯವನ್ನೂ ಕೂಡ ಪಾಕಿಸ್ತಾನ ಗೆಲ್ಲಲಿಲ್ಲ.

ಬಾಬರ್‌ ಆಝಮ್‌ಗೆ ಪಾಕಿಸ್ತಾನದಿಂದ ಬೆಂಬಲ ಅಗತ್ಯ

"ಭಾರತ ವಿರಾಟ್ ಕೊಹ್ಲಿಯನ್ನು ಬೆಂಬಲಿಸಿದ ರೀತಿ ನೋಡಿ. ಅವರು ದೀರ್ಘಕಾಲ ಸತತ ವೈಫಲ್ಯವನ್ನು ಅನುಭವಿಸಿದ್ದರು. ಆದರೆ ಯಾರೂ ಅವರನ್ನು ತಂಡದಿಂದ ಹೊರಹೋಗುವಂತೆ ಒತ್ತಾಯಿಸಲಿಲ್ಲ ಮತ್ತು ಹೆಚ್ಚಿನವರು ಅವರನ್ನು ತಂಡದಿಂದ ಹೊರಹೋಗುವಂತೆ ಬಯಸಲಿಲ್ಲ. ಆದರೆ, ಪಾಕಿಸ್ತಾನ ಕ್ರಿಕೆಟ್‌ನ ಅತಿದೊಡ್ಡ ತಾರೆಗಳಲ್ಲಿ ಒಬ್ಬರಾಗಿರುವ ಬಾಬರ್ ಆಝಮ್‌ ನಿಸ್ಸಂದೇಹವಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ ಮತ್ತು ಎಲ್ಲರೂ ಅವರನ್ನು ಕೆಳಗಿಳಿಸುವಲ್ಲಿ ನಿರತರಾಗಿದ್ದಾರೆ," ಎಂದು ಸೈಯದ್‌ ಅಜ್ಮಲ್‌ ಸ್ಪೋರ್ಟ್‌ಸ್ಟಾರ್‌ಗೆ ತಿಳಿಸಿದ್ದಾರೆ.

"ನಿಮ್ಮಲ್ಲಿ ಕೇವಲ ಒಬ್ಬೇ ಒಬ್ಬರು ಸ್ಟಾರ್‌ ಇದ್ದಾರೆ. ನೀವು ಅವರನ್ನೂ ಕೀಳಾಗಿ ನೋಡಿದರೆ, ನಿಮ್ಮ ಕ್ರಿಕೆಟ್ ಹೇಗೆ ಉಳಿಯುತ್ತದೆ? ಇವು ದೊಡ್ಡ ಸಮಸ್ಯೆಗಳು. ನಮ್ಮ ಮಾಜಿ ಕ್ರಿಕೆಟಿಗರು ಬಾಯಿ ಮುಚ್ಚಿಕೊಳ್ಳಬೇಕು, " ಎಂದು ಅವರು ಆಗ್ರಹಿಸಿದ್ದಾರೆ.

ʻಜಿಂಬಾಬ್ವೆ ವಿರುದ್ಧ ಮಾತ್ರ ರನ್‌ ಗಳಿಸೋದುʼ: ಬಾಬರ್‌ ಆಝಮ್‌ ವಿರುದ್ಧ ದಾನಿಶ್‌ ಕನೇರಿಯಾ ಕಿಡಿ!

ಸಚಿನ್‌ ಕೂಡ ಕಠಿಣ ದಿನಗಳನ್ನು ಎದುರಿಸಿದ್ದಾರೆ: ಅಜ್ಮಲ್‌

"ಒಬ್ಬ ಕ್ರಿಕೆಟಿಗನಾಗಿ, ಕೆಟ್ಟ ದಿನಗಳು ಆಟಗಾರನ ವೃತ್ತಿಜೀವನದ ಒಂದು ಭಾಗ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನೀವು ನಿಮ್ಮ ಜೀವನದುದ್ದಕ್ಕೂ ಕ್ರಿಕೆಟ್ ಅನ್ನು ಒಂದೇ ರೀತಿ ಆಡಲು ಸಾಧ್ಯವಿಲ್ಲ. ಸಚಿನ್ ತೆಂಡೂಲ್ಕರ್ ಕೂಡ ಪ್ರತಿ ಪಂದ್ಯದಲ್ಲೂ 100 ರನ್ ಗಳಿಸಲು ಸಾಧ್ಯವಾಗಲಿಲ್ಲ - ಅವರು ಕೂಡ ಶೂನ್ಯಕ್ಕೆ ಔಟಾಗಿದ್ದಾರೆ. ಅವರು ವಿಶ್ವ ದರ್ಜೆಯ ಆಟಗಾರ, ಆದರೆ ಅವರೂ ಸಹ ಕಠಿಣ ದಿನಗಳನ್ನು ಅನುಭವಿಸಿದ್ದಾರೆ," ಎಂದು ಹೇಳಿದ್ದಾರೆ.

"ಆದ್ದರಿಂದ, ನೀವು ಸ್ವಲ್ಪ ತಾಳ್ಮೆ ತೋರಿಸಬೇಕು. ಕ್ರಿಕೆಟಿಗರು ಕ್ರೀಡೆಗೆ ಎಲ್ಲವನ್ನೂ ನೀಡುತ್ತಾರೆ ಮತ್ತು ಅವರು ಕುಸಿದಾಗ, ಅವರಿಗೆ ಆ ಬೆಂಬಲ ಬೇಕಾಗುತ್ತದೆ. ಅವರು ವಿಶ್ವದ ನಂ. 1 ಆಗಿರುವಾಗ, ಅವರಿಗೆ ಬೆಂಬಲದ ಅಗತ್ಯವಿಲ್ಲ - ಕಠಿಣ ಸಮಯದಲ್ಲಿ ಅವರಿಗೆ ಬೆಂಬಲ ಹೆಚ್ಚು ಬೇಕಾಗುತ್ತದೆ," ಎಂದು ಸೈಯದ್‌ ಅಜ್ಮಲ್‌ ಪಾಕಿಸ್ತಾನ ಕ್ರಿಕೆಟ್‌ ಬೋರ್ಟ್‌ಗೆ ಸಲಹೆ ನೀಡಿದ್ದಾರೆ.