ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಚೆನ್ನೈಗೆ ಮರಳಲು ಟಿಕೆಟ್‌ ಖರೀದಿಸಿದ್ದೆ....ಆದ್ರೆ!ʼ ಚಾಂಪಿಯನ್ಸ್‌ ಟ್ರೋಫಿ ಪಯಣವನ್ನು ಮೆಲುಕು ಹಾಕಿದ ವರುಣ್‌ ಚಕ್ರವರ್ತಿ!

varun chakravarthy on Champions Trophy Heroics: ಇಂಗ್ಲೆಂಡ್‌ ವಿರುದ್ದದ ಟಿ20ಐ ಸರಣಿಯ ಬಳಿಕ ಭಾರತ ಏಕದಿನ ತಂಂಡದಲ್ಲಿ ಆಡುತ್ತೇನೆಂಬ ಸುಳಿವು ನನಗೆ ಇರಲಿಲ್ಲ. ಆದರೆ, ಚೆನ್ನೈನಗೆ ಟಿಕೆಟ್‌ ತೆಗೆದುಕೊಂಡಿದ್ದ ನನ್ನನ್ನು ನಾಗ್ಪುರಕ್ಕೆ ಕರೆಸಿಕೊಂಡಿದ್ದರು ಹಾಗೂ ಚಾಂಪಿಯನ್ಸ್‌ ಟ್ರೋಫಿಗೂ ಆಯ್ಕೆ ಮಾಡಿದ್ದರು. ಅದಕ್ಕೆ ತಕ್ಕ ಪ್ರದರ್ಶನ ತೋರಿದ್ದು ಖುಷಿ ತಂದಿದೆ ಎಂದು ಭಾರತದ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಹೇಳಿದ್ದಾರೆ.

ಟಿ20ಐ ಸರಣಿ ಮುಗಿಸಿ ಬರಿಗೈಯಲ್ಲಿ ನಾಗ್ಪುರಕ್ಕೆ ತೆರಳಿದ್ದೆ: ಚಕ್ರವರ್ತಿ!

ವರುಣ್‌ ಚಕ್ರವರ್ತಿ

Profile Ramesh Kote Mar 14, 2025 10:02 PM

ವದೆಹಲಿ: ಇಂಗ್ಲೆಂಡ್‌ ವಿರುದ್ಧ ಟಿ20ಐ ಸರಣಿಯನ್ನು ಮುಗಿಸಿದ ಬಳಿಕ ಭಾರತ ಏಕದಿನ ತಂಡದಲ್ಲಿ ಆಡುತ್ತೇನೆಂದು ಗೊತ್ತಿರಲಿಲ್ಲ. ಏಕೆಂದರೆ, ಚೆನ್ನೈಗೆ ತೆರಳಲು ಟಿಕೆಟ್‌ ಖರೀದಿಸಿದ್ದೆ. ಆದರೆ, ನನ್ನನ್ನು ಇಂಗ್ಲೆಂಡ್‌ ವಿರುದ್ದದ ಏಕದಿನ ಸರಣಿಯಲ್ಲಿ ಆಡಿಸಲಾಗಿತ್ತು ಹಾಗೂ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ತಂಡದಲ್ಲಿಯೂ ಅವಕಾಶ ನೀಡಲಾಗಿತ್ತು. ಸಿಕ್ಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ತೋರಿರುವುದಕ್ಕೆ ತುಂಬಾ ಖುಷಿಯಾಗಿದೆ ಎಂದು ಟೀಮ್‌ ಇಂಡಿಯಾ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ತಿಳಿಸಿದ್ದಾರೆ. ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಿಂದ 5 ವಿಕೆಟ್‌ ಸಾಧನೆ ಸೇರಿದಂತೆ 9 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಭಾರತ ತಂಡ ಪ್ರಶಸ್ತಿ ಗೆಲುವಿನಲ್ಲಿ ಚೆನ್ನೈ ಸ್ಪಿನ್ನರ್‌ ಮಹತ್ವದ ಪಾತ್ರವನ್ನು ವಹಿಸಿದ್ದರು.

ತಮಿಳಿನ ಪ್ರಖ್ಯಾತ ನಿರೂಪಕ ಗೋಪಿನಾಥನ್‌ ಅವರ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ವರುಣ್‌ ಚಕ್ರವರ್ತಿ,"ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ನನಗೆ ದೊಡ್ಡ ವಿಶ್ವಾಸ ಮೂಡಿಬಂದಿತ್ತು, ಏಕೆಂದರೆ ನಾನು ಆಡಿದ್ದ ಕೇವಲ ನಾಲ್ಕು ಪಂದ್ಯಗಳು ಮಾತ್ರ. ಆ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಬಳಿಕ ನಾನು ತಂಡದ ಪ್ಲೇಯಿಂಗ್‌ XIನಲ್ಲಿ ಇರುತ್ತೇನೆಂಬ ವಿಶ್ವಾಸ ನನಗೆ ಮೂಡಿತ್ತು," ಎಂದು ಹೇಳಿದ್ದಾರೆ.

ʻ2021ರಲ್ಲಿ ಬೆದರಿಕೆ ಕರೆಗಳು ಬಂದಿದ್ದವುʼ: ಆಘಾತಕಾರಿ ಸಂಗತಿ ರಿವೀಲ್‌ ಮಾಡಿದ ವರುಣ್‌ ಚಕ್ರವರ್ತಿ!

"ಈ ರೀತಿ ಸಕ್ಸಸ್‌ ಸಿಗುತ್ತದೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಮುಂಬೈನಲ್ಲಿ ಟಿ20ಐ ಸರಣಿಯ ಫೈನಲ್‌ ಪಂದ್ಯವನ್ನು ಆಡಿದ ಬಳಿಕ, ಚೆನ್ನೈಗೆ ಮರಳಲು ತಯಾರಿ ನಡೆಸುತ್ತಿದ್ದೆ. ಅದರಂತೆ ಚೆನ್ನೈಗೆ ಟಿಕೆಟ್‌ ಕೂಡ ಖರೀದಿಸಿದ್ದೆ. ಆದರೆ, ಮುಂದಿನ ಬೆಳಗ್ಗೆ ನಾನು ಭಾರತ ಏಕದಿನ ತಂಡದಲ್ಲಿಯೂ ಇದ್ದೇನೆಂದು ನನಗೆ ಗೊತ್ತಾಯಿತು ಹಾಗೂ ನಾಗ್ಪುರಕ್ಕೆ ಬರಬೇಕೆಂಬ ಸೂಚನೆ ನನಗೆ ಸಿಕ್ಕಿತ್ತು,"ಎಂದರು.

ಚಾಂಪಿಯನ್ಸ್‌ ಟ್ರೋಫಿ ಆಡುತ್ತೇನೆಂಬ ನಿರೀಕ್ಷೆ ಇರಲಿಲ್ಲ

"ಇದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ನಾನು ಯಾವುದೇ ರೀತಿಯ ಬಟ್ಟೆ ಹಾಗೂ ಬೇರೆ ಯಾವುದೇ ವಸ್ತುಗಳನ್ನು ನಾನು ತೆಗೆದುಕೊಂಡು ಹೋಗಿರಲಿಲ್ಲ. ನಾಗ್ಪರಕ್ಕೆ ನನ್ನ ಬಟ್ಟೆಗಳು ಸೇರಿದಂತೆ ನನಗೆ ಬೇಕಾದ ವಸ್ತುಗಳನ್ನು ನಾಗ್ಪುರಕ್ಕೆ ಕಳುಹಿಸಿಕೊಡಿ ಎಂದು ನಮ್ಮ ಮನೆಗೆ ತಿಳಿಸಿದ್ದೆ. ಎರಡನೇ ಪಂದ್ಯದಲ್ಲಿ ನಾನು ಒಡಿಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದೆ. ಅಹಮದಾಬಾದ್‌ನಲ್ಲಿ ಮೂರನೇ ಏಕದಿನ ಪಂದ್ಯದ ಬಳಿಕ ನಾನು ಚೆನ್ನೈಗೆ ಮರಳಲು ಟಿಕೆಟ್‌ ಖರೀದಿದ್ದೆ. ಈ ವೇಳೆ ಅವರು ನನಗೆ, ʻಚಾಂಪಿಯನ್ಸ್‌ ಟ್ರೋಫಿ ಆಡಲು ನೀವು ದುಬೈಗೆ ಬರಬೇಕೆಂದು ಹೇಳಿದ್ದರು.ʼ ಇದನ್ನು ನಂಬಲು ಅಸಾಧ್ಯವಾಗಿತ್ತು," ಎಂದು ವರುಣ್‌ ಚಕ್ರವರ್ತಿ ಹೇಳಿಕೊಂಡಿದ್ದಾರೆ.

"ದುಬೈನಲ್ಲಿ ನಾನು ಆರಂಭಿಕ ಎರಡು ಪಂದ್ಯಗಳನ್ನು ಆಡಿರಲಿಲ್ಲ. ಬಹುಶಃ ಆಟಗಾರರಿಗೆ ನೀರನ್ನು ನೀಡಲು ನನ್ನನ್ನು ಇಲ್ಲಿಗೆ ಆಯ್ಕೆ ಮಾಡಲಾಗಿದೆ ಎಂದು ಭಾವಿಸಿದ್ದೆ. ಆದರೆ, ಮೂರನೇ ಪಂದ್ಯದಲ್ಲಿ ನಾನು ಆಡಿದ್ದೆ, ತದನಂತರ ನನ್ನ ಮನಸ್ಥಿತಿ ಸಂಪೂರ್ಣವಾಗಿ ಬದಲಾಯಿತು,"ಎಂದು ಕೆಕೆಆರ್‌ ಸ್ಪಿನ್ನರ್‌ ತಿಳಿಸಿದ್ದಾರೆ.

ಮೂರನೇ ಪಂದ್ಯದಲ್ಲಿ ಅವಕಾಶ ಸಿಕ್ಕಿತ್ತು

"ಆರಂಭಿಕ ಎರಡು ಪಂದ್ಯಗಳಲ್ಲಿ ನಾನು ಬೆಂಚ್‌ ಕಾಯುತ್ತಿದ್ದ ಸಂದರ್ಭದಲ್ಲಿಯೂ ಅಭ್ಯಾಸ ನಡೆಸುತ್ತಿದ್ದೆ. ಸಬ್‌ಸ್ಟಿಟ್ಯೂಟ್‌ ಫೀಲ್ಡರ್‌ನಲ್ಲಾದರೂ ಸರಿ ನನಗೆ ಅವಕಾಶ ಬೇಕೆಂದು ಅನಿಸಿತ್ತು. ಈ ಮನಸ್ಥಿತಿ ನಾನಿದ್ದೆ. ಎರಡನೇ ಪಂದ್ಯದ ಬಳಿಕ ಗೌತಮ್‌ ಗಂಭೀರ್‌ ನನ್ನ ಬಳಿ ಮಾತನಾಡಿದರು. ನ್ಯೂಜಿಲೆಂಡ್‌ ವಿರುದ್ಧದ ಪಂದ್ಯಕ್ಕೆ ನೀವು ತಯಾರಿಯಾಗಿ, ಆದರೆ ನಿಮಗೆ ಅವಕಾಶ ಸಿಗುವ ಬಗ್ಗೆ ನಾನು ಖಚಿತವಾಗಿ ಹೇಳುವುದಿಲ್ಲ ಎಂದಿದ್ದರು. ಅದರಂತೆ ನಾನು ತಯಾರಿ ನಡೆಸಿದೆ, ಪಂದ್ಯದ ದಿನ ಬೆಳಗ್ಗೆ ನಾನು ಆಡುತ್ತಿದ್ದೇನೆಂದು ತಿಳಿಯಿತು," ಎಂದು ವರುಣ್‌ ಚಕ್ರವರ್ತಿ ಹೇಳಿದ್ದಾರೆ.

Champions Trophy: ಟೂರ್ನಿ ಶ್ರೇಷ್ಠ ಪ್ರಶಸ್ತಿ ವರುಣ್‌ ಚಕ್ರವರ್ತಿಗೆ ಸಿಗಬೇಕಿತ್ತೆಂದ ಆರ್‌ ಅಶ್ವಿನ್‌!

ಕಿವೀಸ್‌ ವಿರುದ್ಧ 5 ವಿಕೆಟ್‌ ಸಾಧನೆ

ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ವರುಣ್‌ ಚಕ್ರವರ್ತಿ 5 ವಿಕೆಟ್‌ ಸಾಧನೆ ಮಾಡಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ವಿಯನ್ನು ಸ್ವೀಕರಿಸಿದರು. ಇದಾದ ಬಳಿಕ ಅವರು ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್‌ ಪಂದ್ಯದಲ್ಲಿಯೂ ಆಡಿದ್ದರು ಹಾಗೂ ಅಪಾಯಕಾರಿ ಟ್ರಾವಿಡ್‌ ಹೆಡ್‌ ಅವರನ್ನು ಔಟ್‌ ಮಾಡಿದ್ದರು. ನಂತರ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಹಣಾಹಣಿಯಲ್ಲಿ ನ್ಯೂಜಿಲೆಂಡ್‌ ವಿರುದ್ದ ಎರಡು ವಿಕೆಟ್‌ ಕಿತ್ತಿದ್ದರು. ಆ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಸಾಲಿನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದರು.