Viral Video: ವೀಲ್‍ಚೇರ್‌ನಲ್ಲಿ ಕುಳಿತು ಈ ವ್ಯಕ್ತಿ ಮಾಡಿದ ಸಾಧನೆ ನೋಡಿದ್ರೆ ಶಾಕ್ ಆಗ್ತೀರಿ!
ಸೆರೆಬ್ರಲ್ ಪಾಲ್ಸಿಯಂತಹ ಗಂಭೀರ ಕಾಯಿಲೆಯ ವಿರುದ್ಧ ಹೋರಾಡುತ್ತಿದ್ದರೂ, "ವೈಕಿಂಗ್ ವೀಲ್ಸ್" ಎಂದು ಕರೆಯಲ್ಪಡುವ ನಾರ್ವೆ ಮೂಲದ ಹರಾಲ್ಡ್ ವೀಲ್‍ಚೇರ್‌ನಲ್ಲಿ ಕುಳಿತು 60 ಸೆಕೆಂಡುಗಳಲ್ಲಿ 25 ಪುಲ್-ಅಪ್‍ಗಳನ್ನು ಪೂರ್ಣಗೊಳಿಸುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾನೆ. ಆತನ ಸಾಹಸದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.


ಒಬ್ಬ ವ್ಯಕ್ತಿಗೆ ಸಾಧಿಸಬೇಕು ಎಂಬ ಛಲ ಇದ್ದರೆ ಆತ ಎಂತಹ ಕಠಿಣ ಪರಿಸ್ಥಿತಿ ಇದ್ದರೂ ಕೂಡ ಅದನ್ನು ಸಾಧಿಸಿ ತೋರಿಸುತ್ತಾನೆ ಎಂದು ಹೇಳುತ್ತಾರೆ. ಈ ಮಾತನ್ನು ಇಂಟರ್ನೆಟ್ ಜಗತ್ತಿನಲ್ಲಿ "ವೈಕಿಂಗ್ ವೀಲ್ಸ್" ಎಂದು ಕರೆಯಲ್ಪಡುವ ನಾರ್ವೆ ಮೂಲದ ಹರಾಲ್ಡ್ ಸಾಬೀತುಪಡಿಸಿದ್ದಾನೆ. ಸೆರೆಬ್ರಲ್ ಪಾಲ್ಸಿಯಂತಹ ಗಂಭೀರ ಕಾಯಿಲೆಯ ವಿರುದ್ಧ ಹೋರಾಡುತ್ತಿದ್ದರೂ, ಹರಾಲ್ಡ್ ವೀಲ್‍ಚೇರ್‌ನಲ್ಲಿ ಕುಳಿತು 60 ಸೆಕೆಂಡುಗಳಲ್ಲಿ 25 ಪುಲ್-ಅಪ್‍ಗಳನ್ನು ಕಂಪ್ಲಿಟ್ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾನೆ. ಅವನ ಈ ಅದ್ಭುತ ಸಾಧನೆಯು ಒಂದು ನಿಮಿಷದಲ್ಲಿ ವೀಲ್‍ಚೇರ್‌ನಲ್ಲಿ ಅತಿ ಹೆಚ್ಚು ಪುಲ್-ಅಪ್ ಮಾಡಿದ ಗಿನ್ನೆಸ್ ವಿಶ್ವ ದಾಖಲೆಯ ಪ್ರಶಸ್ತಿಯನ್ನು ಗಳಿಸಿತು. ಅವನ ಸಾಹಸದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಹರಾಲ್ಡ್ ಆಗಾಗ್ಗೆ ತನ್ನ ಫಿಟ್ನೆಸ್ ಮತ್ತು ಜೀವನದ ಪ್ರಯಾಣದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾನೆ. ಹರಾಲ್ಡ್ ಅವನ ಇತ್ತೀಚಿನ ವಿಡಿಯೊಗಳು ಮತ್ತು ಪೋಟೊಗಳಲ್ಲಿ ಅವನು ತನ್ನ ಅಥ್ಲೆಟಿಕ್ ಶಕ್ತಿಯಿಂದ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆಯುವುದನ್ನು ಹಂಚಿಕೊಂಡಿದ್ದಾನೆ.
ಹರಾಲ್ಡ್ ಹಂಚಿಕೊಂಡ ಈ ವಿಡಿಯೊದಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (ಜಿಡಬ್ಲ್ಯೂಆರ್) ಅಧಿಕಾರಿಗಳು ಅವನ ಪ್ರತಿಯೊಂದು ಚಲನವಲನಗಳನ್ನು ಮೇಲ್ವಿಚಾರಣೆ ಮಾಡುವುದನ್ನು ರೆಕಾರ್ಡ್ ಮಾಡಲಾಗಿದೆ. ಹರಾಲ್ಡ್ 25 ಪುಲ್-ಅಪ್‍ಗಳನ್ನು ಕಂಪ್ಲೀಟ್ ಮಾಡಿದ್ದಾನೆ. ಅದೂ ಅಲ್ಲದೇ ಆತ ತನ್ನ ವೀಲ್‍ಚೇರ್ ಅನ್ನು ಕೂಡ ಎತ್ತಿದ್ದಾನೆ. ಆತನ ಈ ಶಕ್ತಿ ಪ್ರದರ್ಶನವು ಲಕ್ಷಾಂತರ ಜನರನ್ನು ಆಶ್ಚರ್ಯಗೊಳಿಸಿದೆ ಮತ್ತು ಅನೇಕ ಫಿಟ್ನೆಸ್ ಉತ್ಸಾಹಿಗಳಿಗೆ ಸ್ಫೂರ್ತಿ ನೀಡಿದೆ ಎನ್ನಲಾಗಿದೆ.
ಹರಾಲ್ಡ್‌ನ ಈ ಸಾಧನೆ ಕಾಕತಾಳೀಯವೇನಲ್ಲ. ಅದಕ್ಕಾಗಿ ಅವನು ಸಾಕಷ್ಟು ಕಠಿಣ ಪರಿಶ್ರಮ ಮತ್ತು ತರಬೇತಿಯನ್ನು ಪಡೆದುಕೊಂಡಿದ್ದಾನೆ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಚಾರವೇನೆಂದರೆ ಹರಾಲ್ಡ್ ಆರೋಗ್ಯ ಸ್ಥಿತಿಯು ಅವನ ಕನಸುಗಳನ್ನು ನನಸಾಗಿಸಲು ಎಂದೂ ಅಡ್ಡವಾಗಿಲ್ಲ. ಕುತೂಹಲಕಾರಿ ಸಂಗತಿಯೆಂದರೆ, ಅವನು ವಿಶಿಷ್ಟವಾದದ್ದನ್ನು ಮಾಡುವ ಮೂಲಕ ಜಗತ್ತನ್ನು ಬೆಚ್ಚಿಬೀಳಿಸುವುದು ಇದೇ ಮೊದಲಲ್ಲ. ಈ ದಾಖಲೆಯನ್ನು ಮೀರಿ, ಹರಾಲ್ಡ್ ಹಾರುವ ಹೆಲಿಕಾಪ್ಟರ್ ಅಡಿಯಲ್ಲಿ ಪುಲ್-ಅಪ್‍ಗಳನ್ನು ಮಾಡಿದ್ದಾನೆ, ವೇಗವಾಗಿ ಚಲಿಸುತ್ತಿರುವ ಟ್ರಕ್‍ನ ಮೇಲೆ ವ್ಯಾಯಾಮ ಮಾಡಿದ್ದಾನೆ ಮತ್ತು ತನ್ನ ವೀಲ್‍ಚೇರ್‌ನಲ್ಲಿ ಪರ್ವತಗಳನ್ನು ಏರಿದ್ದಾನೆ. ಈ ಮೂಲಕ ಆತ ಇತರರಿಗೆ ಸ್ಫೂರ್ತಿದಾಯಕನಾಗಿದ್ದಾನೆ.
ಈ ಸುದ್ದಿಯನ್ನೂ ಓದಿ: Viral Video: ಗಿನ್ನೆಸ್ ದಾಖಲೆ ಬರೆದ ಯುವಕ; ಈತನ ಸಾಧನೆ ಏನು ಗೊತ್ತೆ? ಈ ವಿಡಿಯೊ ನೋಡಿ
ನೆಟ್ಟಿಗರನ್ನು ವಿಸ್ಮಯಗೊಳಿಸಿದ ಅವನ ಇತ್ತೀಚಿನ ಪೋಸ್ಟ್‌ಗೆ ನೆಟ್ಟಿಗರು ಫಿದಾ ಆಗಿ ಹರಾಲ್ಡ್ ಮತ್ತು ಅವನ ಸಾಧನೆಗಳನ್ನು ಮೆಚ್ಚಿಕೊಂಡಿದ್ದಾರೆ. "ವಾಹ್! ನಿಮ್ಮ ದೇಹ ತೂಕವನ್ನು ಮಾತ್ರವಲ್ಲ, ನಿಮ್ಮ ವೀಲ್‍ಚೇರ್ ಅನ್ನು ಎಳೆದಿದ್ದೀರಿ. ನಿಮಗೆ ಅಭಿನಂದನೆಗಳು, ಹರಾಲ್ಡ್!" ಎಂದು ಒಬ್ಬ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಇದು ಚಾಂಪಿಯನ್‍ಗೆ ದೊಡ್ಡ ಗೌರವ" ಎಂದು ಹೊಗಳಿದರೆ, ಇತರರು ಪೋಸ್ಟ್‌ಗೆ ಫೈರ್’ ಇಮೋಜಿಗಳನ್ನು ಹಂಚಿಕೊಂಡಿದ್ದಾರೆ. ಒಟ್ಟಾರೆ ಇಚ್ಛಾಶಕ್ತಿ ಬಲವಾಗಿದ್ದರೆ, ಯಾವುದೇ ಗುರಿ ಅಸಾಧ್ಯವಲ್ಲ ಎಂಬುದನ್ನು ಹರಾಲ್ಡ್ ಮತ್ತೊಮ್ಮೆ ಸಾಬೀತುಪಡಿಸಿದ್ದಾನೆ.