ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಕಠಿಣ ಅಭ್ಯಾಸ ಆರಂಭಿಸಿದ ಆರ್‌ಸಿಬಿ ಆಟಗಾರರು

RCB's pre-season camp: ತಂಡದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ, ವಿದೇಶಿ ಆಟಗಾರರಾದ ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್ ಅವರಿನ್ನೂ ತಂಡ ಸೇರಿಕೊಳ್ಳಬೇಕಿದೆ. ಸೋಮವಾರ ನಡೆಯುವ ಆರ್‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮದ ವೇಳೆ ಈ ಆಟಗಾರರು ತಂಡ ಸೇರುವ ನಿರೀಕ್ಷೆ ಇದೆ.

ಕಠಿಣ ಅಭ್ಯಾಸ ಆರಂಭಿಸಿದ ಆರ್‌ಸಿಬಿ ಆಟಗಾರರು

Profile Abhilash BC Mar 14, 2025 9:14 AM

ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್(IPL 2025) ರಂಗೇರಲು ದಿನಗಣನೆ ಶುರುವಾಗಿದೆ. ಟೂರ್ನಿ ಆರಂಭವಾಗಲು ಇನ್ನೂ ಎಂಟು ದಿನ ಬಾಕಿ ಇದೆ. ಮಾರ್ಚ್‌ 22 ರಂದು ನಡೆಯುವ ಉದ್ಘಾಟನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಮತ್ತು ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡಗಳು ಸೆಣಸಾಡಲಿದೆ. ಈ ಪಂದ್ಯಕ್ಕೆ ಆರ್‌ಸಿಬಿ ಈಗಾಗಲೇ ಅಭ್ಯಾಸ ಆರಂಭಿಸಿದೆ(rcb practice session). ದೇವದತ್ತ ಪಡಿಕ್ಕಲ್‌, ನೂತನ ನಾಯಕ ರಜತ್‌ ಪಾಟಿದಾರ್‌, ಭುವನೇಶ್ವರ್ ಕುಮಾರ್, ಸ್ಪಿನ್ ಆಲ್‌ರೌಂಡರ್ ಕೃಣಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ವೇಗಿ ಯಶ್ ದಯಾಳ್ ಸೇರಿ ಹಲವು ಆಟಗಾರರು ಗುರುವಾರ ಅಭ್ಯಾಸ ನಡೆಸಿದರು.

ನೂತನ ಬ್ಯಾಟಿಂಗ್ ಸಲಹೆಗಾರನಾಗಿರುವ ಆರ್‌ಸಿಬಿ ಮಾಜಿ ಆಟಗಾರ ದಿನೇಶ್‌ ಕಾರ್ತಿಕ್‌ ಮತ್ತು ಮುಖ್ಯ ಕೋಚ್‌ ಆ್ಯಂಡಿ ಫ್ಲವರ್‌ ಮಾರ್ಗದರ್ಶನದಲ್ಲಿ ಆಟಗಾರರು ಗುರುವಾರ ನೆಟ್ಸ್‌ನಲ್ಲಿ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಅಭ್ಯಾಸ ನಡೆಸಿದರು. ಆಟಗಾರರು ಅಭ್ಯಾಸ ನಡೆಸುತ್ತಿರುವ ಫೋಟೊ ಮತ್ತು ವಿಡಿಯೊಗಳನ್ನು ಫ್ರಾಂಚೈಸಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ IPL 2025: ಐಪಿಎಲ್‌ ಟೂರ್ನಿಯಿಂದ ಹ್ಯಾರಿ ಬ್ರೂಕ್‌ ಎರಡು ವರ್ಷ ನಿಷೇಧ! ಕಾರಣವೇನು?

ತಂಡದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ, ವಿದೇಶಿ ಆಟಗಾರರಾದ ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್ ಅವರಿನ್ನೂ ತಂಡ ಸೇರಿಕೊಳ್ಳಬೇಕಿದೆ. ಸೋಮವಾರ ನಡೆಯುವ ಆರ್‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮದ ವೇಳೆ ಈ ಆಟಗಾರರು ತಂಡ ಸೇರುವ ನಿರೀಕ್ಷೆ ಇದೆ.



ಆರ್‌ಸಿಬಿ ತಂಡ

ವಿರಾಟ್‌ ಕೊಹ್ಲಿ,ರಜತ್‌ ಪಾಟೀದಾರ್‌, ಯಶ್‌ ದಯಾಳ್‌,ಜೋಶ್​ ಹ್ಯಾಸಲ್​ವುಡ್,​ ಫಿಲ್​ ಸಾಲ್ಟ್​, ಜಿತೇಶ್​ ಶರ್ಮ, ಲಿಯಾಮ್​ ಲಿವಿಂಗ್​ಸ್ಟೋನ್​, ರಸಿಕ್​ ಸಲಾಂ, ಸುಯಶ್​ ಶರ್ಮ, ಭುವನೇಶ್ವರ್​ ಕುಮಾರ್,ಕೃನಾಲ್​ ಪಾಂಡ್ಯ, ಟಿಮ್​ ಡೇವಿಡ್, ಜೇಕಬ್​ ಬೆಥೆಲ್, ದೇವದತ್​ ಪಡಿಕ್ಕಲ್​, ನುವಾನ್​ ತುಷಾರ, ರೊಮಾರಿಯೊ ಶೆರ್ಡ್​, ಸ್ವಪ್ನಿಲ್​ ಸಿಂಗ್​, ಮನೋಜ್​ ಭಾಂಡಗೆ, ಸ್ವಸ್ತಿಕ್​ ಚಿಕರ, ಮೋಹಿತ್​ ರಾಥೀ, ಅಭಿನಂದನ್​ ಸಿಂಗ್​, ಲುಂಗಿ ಎನ್​ಗಿಡಿ.